ಇತರೆ

ಉಡುಪಿ: ನಾಯಿ ಅಡ್ಡ ಬಂದು ಕಲ್ಲು ಕಂಬಕ್ಕೆ ಬೈಕ್ ಢಿಕ್ಕಿ:ಸಹ ಸವಾರ ಬಾಲಕ ಸಾವು 

Views: 93

ಕನ್ನಡ ಕರಾವಳಿ ಸುದ್ದಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಬೈಕ್‍ನಲ್ಲಿ ಪ್ರಯಾಣಿಸುತಿದ್ದ ವೇಳೆ ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಕಲ್ಲು ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟ  ಬಾಲಕ ಶೇಖ್ ಅಬ್ದುಲ್ ಸೈಫಾನ್ (14)

ಈತ ತನ್ನ ತಂದೆ ಅಬ್ದುಲ್ ಅಝೀಝ್ ಇವರೊಂದಿಗೆ ಬೈಕ್‍ನಲ್ಲಿ ಪಡುಬಿದ್ರಿ ಕಡೆಯಿಂದ ಉಚ್ಚಿಲ ಕಡೆಗೆ ಸಂಚರಿಸುತಿದ್ದ ವೇಳೆ ತೆಂಕ ಗ್ರಾಮದ ಎರ್ಮಾಳು ಗರಡಿಯ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಕಪ್ಪು ಕಲ್ಲು ಕಂಬಕ್ಕೆ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ಪರಿಣಾಮ ಬೈಕ್‍ಗೆ ಬೆಂಕಿ ಹತ್ತಿ ಭಾಗಶಃ ಸುಟ್ಟು ಹೋಗಿದೆ.

ಅಬ್ದುಲ್ ಅಝೀಝ್ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಹಸವಾರ ಶೇಖ್ ಅಬ್ದುಲ್ ಸೈಫಾನ್ ಗಂಭೀರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸಗೆ ಸ್ಪಂದಿಸದೆ ರಾತ್ರಿ ವೇಳೆಗೆ ಸೈಫಾನ್ ಮೃತಪಟ್ಟಿದ್ದಾನೆ.

ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button