ಆಸ್ಟ್ರೇಲಿಯಾದ ಕಸದ ಬುಟ್ಟಿಯಲ್ಲಿ ಶವ ಪತ್ತೆ; ಭಾರತಕ್ಕೆ ಓಡಿ ಬಂದು ತಲೆ ಮರೆಸಿಕೊಂಡ ಗಂಡನ ಮೇಲೆ ಸಂಶಯ..?

Views: 173
ಆಸ್ಟ್ರೇಲಿಯಾದ ಕುಸದ ಬುಟ್ಟಿಯಲ್ಲಿ ಮಹಿಳೆಯ ಶವ ಪತ್ತೆ ಯಾಗಿದ್ದು, ಸಾವಿನ ಸುತ್ತಾ ಅನುಮಾನದ ಹುತ್ತವೇ ಬೆಳೆದಿದೆ.
ಆಂಧ್ರಪ್ರದೇಶದ ಹೈದ್ರಾಬಾದ್ನ ಶ್ವೇತಾ ಎ.ಎಸ್ರಾವ್ ನಗರದ ನಿವಾಸಿ. ಮದುವೆಯಾದ ಬಳಿಕ ಗಂಡ ಅಶೋಕ್ ಜೊತೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ಕ್ ಎಂಬಲ್ಲಿ ನೆಲೆಸಿದ್ರು. ಇವರಿಬ್ಬರ ಸಂಸಾರದ ಸಾಕ್ಷಿಯಾಗಿ ಒಂದು ಮುದ್ದಾದ ಗಂಡು ಮಗು ಇದೆ.
ಆಸ್ಟ್ರೇಲಿಯಾದಲ್ಲಿ ಪಾಯಿಂಟ್ ಕುಕ್ಕ್ ಎಂಬ ಪ್ರದೇಶದಲ್ಲಿದ್ದ ಕಸದ ಬುಟ್ಟಿಯಲ್ಲಿ ಶ್ವೇತಾಳ ಮೃತದೇಹ ಪತ್ತೆಯಾಗಿದೆ.. ಇದೀಗ ಅಲ್ಲಿನ ಪೊಲೀಸರು ಆಕೆಯ ಮೃತದೇಹವನ್ನ ಪತ್ತೆ ಹಚ್ಚಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಶ್ವೇತಾಳ ಗಂಡ ಅಶೋಕನೇ ಕೊಲೆ ಮಾಡಿರಬಹುದು ಎನ್ನಲಾಗ್ತಿದೆ.. ಆತ ಪತ್ನಿಯನ್ನು ಮನೆಯಲ್ಲಿ ಕೊಲೆ ಮಾಡಿ, ಕಸದ ಬುಟ್ಟಿಯಲ್ಲಿ ಹಾಕಿ, ಬಳಿಕ ಯಾರಿಗೂ ಅನುಮಾನ ಬರದ ರೀತಿ ಮಗು ಜೊತೆ ಭಾರತಕ್ಕೆ ಓಡಿ ಬಂದು ತಲೆ ಮರೆಸಿಕೊಂಡಿದ್ದಾನೆ. ಅತ್ತ, ಮಗಳ ಸಾವಿನ ವಿಷಯ ತಿಳಿದು ಶ್ವೇತಾ ಕುಟುಂಬಸ್ಥರು ಆಘಾತಕ್ಕೀಡಾಗಿದ್ದಾರೆ.. ಅದಲ್ಲದೇ, ಗಂಡ ಅಶೋಕನ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿದ್ದಾರೆ.
ಸುಂದರ ಬದುಕು ಕಾಣಲಿ ಅಂತಾ ಹೆತ್ತ ಮಗಳನ್ನು ವಿದೇಶಕ್ಕೆ ಕಳುಹಿಸಿಕೊಟ್ರೆ, ಆಕೆ ಈ ರೀತಿ ಸಾವಿಗೀಡಾಗಿದ್ದು ಮಾತ್ರ ನಿಜಕ್ಕೂ ದುರಂತವಲ್ಲದೇ ಮತ್ತೇನು.. ಅತ್ತ ಹೆತ್ತಮ್ಮನನ್ನು ಕಳೆದುಕೊಂಡ ಮಗು ಅನಾಥವಾಗಿದ್ದು ವಿಪರ್ಯಾಸವೇ ಸರಿ