3 ಮಕ್ಕಳ ತಾಯಿಗೆ, 2 ಮಕ್ಕಳ ತಂದೆ ಜೊತೆ ಪ್ರೀತಿ.. ಗಂಡ ಸ್ವತಃ ತಾನೇ ಮುಂದೆ ನಿಂತು ಮದುವೆ!
Views: 131
ಕನ್ನಡ ಕರಾವಳಿ ಸುದ್ದಿ:ಮೂರು ಮಕ್ಕಳ ತಾಯಿಯೊಬ್ಬಳಿಗೆ, ಇಬ್ಬರು ಮಕ್ಕಳ ತಂದೆಯೊಂದಿಗೆ ಇರುವ ಅಫೇರ್ ಬಗ್ಗೆ ತಿಳಿದ ಮಹಿಳೆಯ ಗಂಡ ಸ್ವತಃ ತಾನೇ ಮುಂದೆ ನಿಂತು ಮದುವೆ ಮಾಡಿಸಿದ ಕುತೂಹಲ ಘಟನೆ ಬಿಹಾರದಲ್ಲಿ ನಡೆದಿದೆ.
ಕಳೆದ 12 ವರ್ಷದ ಹಿಂದೆ ಮಹಿಳೆ ಹಾಗೂ ಅವಳ ಮೊದಲ ಪತಿ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಇದೀಗ ಆಕೆ ಇನ್ನೊಬ್ಬ ವ್ಯಕ್ತಿಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದು, ಆಕೆಯ ಸಂತೋಷಕ್ಕೆ ಅಡ್ಡಿಪಡಿಸಬಾರದು ಎಂದು ಗಂಡ ತನ್ನ ಹೆಂಡತಿಗೆ ಪ್ರೇಮಿಯೊಂದಿಗೆ ಅದ್ದೂರಿ ಮದುವೆ ಮಾಡಿಸಿದ್ದಾನೆ.
ಅನೈತಿಕ ಸಂಬಂಧ ಎನ್ನುವುದು ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಸಂಸಾರಗಳನ್ನು ಹಾಳು ಮಾಡಿದೆ. ಗಂಡನಿಗೆ ಇನ್ನೊಬ್ಬಳ ಜೊತೆ ಸಂಬಂಧವಿರುವುದು ಹೆಂಡ್ತಿಗೆ ಗೊತ್ತಾದರೆ ಅಥವಾ ಪತ್ನಿಗೆ ಬೇರೊಬ್ಬನ ಜೊತೆ ಸಂಬಂಧ ಇದೆಯೆಂದು ಪತಿಗೆ ಗೊತ್ತಾದರೆ ಆ ಕ್ಷಣ ದೊಡ್ಡ ರಂಪಾಟವೇ ನಡೆದು ಬಿಡುತ್ತದೆ. ಆದರೆ ಎಲ್ಲರಿಗೂ ಅಚ್ಚರಿಯೆನಿಸುವಂತೆ ಅದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದ್ದು, ಹೆಂಡತಿ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಸ್ವತಃ ಆಕೆಯ ಗಂಡನೇ ಆಕೆಗೆ ಪ್ರೀತಿಸಿದಾತನೊಂದಿಗೆ ಮದುವೆ ಮಾಡಿಸಿದ್ದಾನೆ.