# KannadaKaravali > Jana Mana Prakashitha ## Posts - [ಕಾರ್ಕಳ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಜನಾರ್ದನ ಶೆಟ್ಟಿಗಾ‌ರ್ ನಿಧನ](https://kannadakaravali.com/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%b6%e0%b3%8d%e0%b2%b0%e0%b3%80-%e0%b2%86%e0%b2%a6%e0%b2%bf%e0%b2%b6%e0%b2%95%e0%b3%8d%e0%b2%a4%e0%b2%bf-%e0%b2%b5%e0%b3%80%e0%b2%b0): ಕನ್ನಡ ಕರಾವಳಿ ಸುದ್ದಿ: ಮಿಯಾರು ಜೋಡುಕಟ್ಟೆ ಬಲಿಪರ ನಿವಾಸಿ ಕಾರ್ಕಳ ಗಾಂಧಿ ಮೈದಾನದ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕೇಸರರಾದ ಜನಾರ್ದನ ಶೆಟ್ಟಿಗಾ‌ರ್ (81) ಅವರು ಜ. 18ರಂದು ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ. ಅವರು 35 ವರ್ಷಗಳಿಂದ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. - [ಕುಂದಾಪುರ:ರಾಮಪತ್ರೆ ಕೊಯ್ಯುತ್ತಿದ್ದ ವೇಳೆ ಆಯತಪ್ಪಿ ಮರದಿಂದ ಬಿದ್ದು ಸಾವು ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0%e0%b2%b0%e0%b2%be%e0%b2%ae%e0%b2%aa%e0%b2%a4%e0%b3%8d%e0%b2%b0%e0%b3%86-%e0%b2%95%e0%b3%8a%e0%b2%af%e0%b3%8d%e0%b2%af%e0%b2%a4): ಕನ್ನಡ ಕರಾವಳಿ ಸುದ್ದಿ: ರಾಮಪತ್ರೆ ಕೊಯ್ಯುತ್ತಿದ್ದ ಹೆಂಗವಳ್ಳಿ ಗ್ರಾಮದ ಕೀಳುಮನೆಯ ಸುದೀಪ್ ಹೆಗ್ಡೆ (45) ಅವರು ಆಯತಪ್ಪಿ ಮರದಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಸುದೀಪ್ ಹೆಗ್ಡೆ ಅವರು ಶೇಖರ ಪೂಜಾರಿ ಜತೆಯಲ್ಲಿ ರಾಮಪತ್ರೆ ಕೊಯ್ಯಲು ತೆರಳಿದ್ದರು. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು. ಮೃತರು ಪತ್ನಿ ಹಾಗೂ ಒಂದೂವರೆ ವರ್ಷದ ಗಂಡು ಮಗುವನ್ನು ಅಗಲಿದ್ದಾರೆ. ಸುದೀಪ್ ಅವರ ಪತ್ನಿಯ ಸಹೋದರ ಅಮಾಸೆಬೈಲು ಗ್ರಾಮದ ಬಳ್ಳನೆ ಗಳಿಗೆಬೈಲು ಶಿವರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಪತ್ನಿಯನ್ನು ಸಹೋದರಿ ಎಂದು ಯುವತಿಗೆ ಪರಿಚಯಿಸಿ ಕೋಟ್ಯಂತರ ರೂ. ವಂಚನೆ](https://kannadakaravali.com/%e0%b2%aa%e0%b2%a4%e0%b3%8d%e0%b2%a8%e0%b2%bf%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%bf-%e0%b2%8e%e0%b2%82%e0%b2%a6%e0%b3%81-%e0%b2%af): ಕನ್ನಡ ಕರಾವಳಿ ಸುದ್ದಿ: ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ವ್ಯಕ್ತಿ ಸಾಫ್ಟ್‌ವೇರ್ ಎಂಜಿನಿಯರ್‌ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ನಗರದಲ್ಲಿ ದೂರು ದಾಖಲಾಗಿದೆ. ವಿಜಯ್ ರಾಜ್ ಗೌಡ ಎಂಬಾತ 1.53 ಕೋಟಿ ವಂಚಿಸಿರುವುದಾಗಿ ಆರೋಪಿಸಿ 29 ವರ್ಷದ ಯುವತಿ ನೀಡಿರುವ ದೂರಿನನ್ವಯ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಾಹಿತನಾಗಿದ್ದರೂ ಸಹ ಪತ್ನಿಯನ್ನು ಸಹೋದರಿ ಎಂದು ಪರಿಚಯಿಸಿ ವಂಚಿಸಲಾಗಿದೆ ಎಂದು ನೊಂದ ಯುವತಿ ಆರೋಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವೈಟ್‌ಫೀಲ್ಡ್ ವ್ಯಾಪ್ತಿಯಲ್ಲಿ ವಾಸವಿದ್ದ ಯುವತಿಗೆ 2024ರ ಮಾರ್ಚ್‌ನಲ್ಲಿ ಮ್ಯಾಟ್ರಿಮೋನಿ ಮೂಲಕ ವಿಜಯ್ ರಾಜ್ ಗೌಡನ ಪರಿಚಯವಾಗಿತ್ತು. ‘ತಾನು ಓರ್ವ ಉದ್ಯಮಿ 715 ಕೋಟಿ ರೂ. ಮೌಲ್ಯದ ಆಸ್ತಿಯಿದೆ’. ಜಾರಿ ನಿರ್ದೇಶನಾಲಯ (ಇ.ಡಿ)ದಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನು ದೊರೆತಿದೆ ಎಂದು ಹೇಳಿಕೊಂಡಿದ್ದ. ಬಳಿಕ ಯುವತಿಯ ಮನೆಯವರನ್ನೂ ಭೇಟಿಯಾಗಿದ್ದ ಆರೋಪಿ ಸೌಮ್ಯ ಎಂಬಾಕೆಯನ್ನು ತನ್ನ ಸಹೋದರಿ ಹಾಗೂ ತಂದೆ ಬೊರೇಗೌಡ ನಿವೃತ್ತ ತಹಶಿಲ್ದಾರ್ ಎಂದು … - [ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ  ನೀರಿಗಿಳಿದ ಇಬ್ಬರು ಯುವಕರ ದುರ್ಮರಣ](https://kannadakaravali.com/%e0%b2%95%e0%b3%81%e0%b2%95%e0%b3%8d%e0%b2%95%e0%b3%86-%e0%b2%b8%e0%b3%81%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%a3%e0%b3%8d%e0%b2%af-%e0%b2%95%e0%b3%81%e0%b2%ae%e0%b2%be%e0%b2%b0): ಕನ್ನಡ ಕರಾವಳಿ ಸುದ್ದಿ: ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ಮೃತಪಟ್ಟವರನ್ನು ಸುಳ್ಯ ತಾಲೂಕಿನ ಕೊಲ್ಲಮೊಗ್ರು ನಿವಾಸಿಗಳಾದ ಹರಿಪ್ರಸಾದ್ (40) ಮತ್ತು ಸುಜೀತ್ ಗೋಳಿಯಾಡಿ (26) ಎಂದು ಗುರುತಿಸಲಾಗಿದೆ. ಇಬ್ಬರೂ ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. ಹರಿಪ್ರಸಾದ್ ಅವರು ಸುಬ್ರಹ್ಮಣ್ಯದಲ್ಲಿ ‘ಅನುಗ್ರಹ ಎಂಟರ್‌ಪ್ರೈಸಸ್’ ಎಂಬ ಹಾರ್ಡ್‌ವೇ‌ರ್ ಅಂಗಡಿಯ ಮಾಲೀಕರಾಗಿದ್ದರು, ಸುಜೀತ್ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ರವಿವಾರ ಮಧ್ಯಾಹ್ನ ಹರಿಪ್ರಸಾದ್ ಮತ್ತು ಸುಜೀತ್ ಅವರು ತಮ್ಮ ಪರಿಚಿತರಾದ ಸುಮಾರು 10 ಜನರ ತಂಡದೊಂದಿಗೆ ಕಾಲೋನಿ ಕೊನೆಯಲ್ಲಿರುವ ಕುಮಾರಧಾರ ನದಿಯ ಬಳಿ ವನಭೋಜನಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕುಲ್ಕುಂದ ಬಳಿ ನದಿಯಲ್ಲಿ ಸ್ನಾನ ಮಾಡಲು ನೀರಿಗಿಳಿದಾಗ ಇಬ್ಬರೂ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಜೊತೆಯಲ್ಲಿದ್ದವರು ತಕ್ಷಣವೇ ಗಮನಿಸಿದರೂ ಫಲಕಾರಿಯಾಗಲಿಲ್ಲ ಎಂದು ಹೇಳಲಾಗುತ್ತಿದೆ. ಬಳಿಕ ನೀರಿನಲ್ಲಿ ಮುಳುಗಿದ್ದ ಇಬ್ಬರ ಮೃತದೇಹಗಳನ್ನು ಮೇಲೆತ್ತಲಾಗಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ … - [ಕಾಲೇಜಿನ ಕಟ್ಟಡದ ಮೇಲೆ ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ವಿದ್ಯಾರ್ಥಿ ಸಾವು](https://kannadakaravali.com/%e0%b2%95%e0%b2%be%e0%b2%b2%e0%b3%87%e0%b2%9c%e0%b2%bf%e0%b2%a8-%e0%b2%95%e0%b2%9f%e0%b3%8d%e0%b2%9f%e0%b2%a1%e0%b2%a6-%e0%b2%ae%e0%b3%87%e0%b2%b2%e0%b3%86-%e0%b2%b9%e0%b2%be%e0%b2%b0%e0%b2%bf): ಕನ್ನಡ ಕರಾವಳಿ ಸುದ್ದಿ: ಹಾರಿಸಿದ್ದ ಗಾಳಿಪಟ ಹಿಡಿಯಲು ಹೋಗಿ ಕಟ್ಟಡದ ಮೇಲಿಂದ ಬಿದ್ದು ಯುವಕ ಮೃತಪಟ್ಟಿರುವ ಘಟನೆ ಬೀದ‌ರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ವಾಂಜರಿ ಬಡಾವಣೆಯಲ್ಲಿ ನಡೆದಿದೆ. 19 ವರ್ಷದ ಶಶಿಕುಮಾರ್ ಶಿವಾನಂದ ಮೃತ ಯುವಕ. ಶಶಿ ಕುಮಾ‌ರ್ ಖಾಸಗಿ ಕಾಲೇಜಿನ ಕಟ್ಟಡದ ಮೇಲೆ ಗಾಳಿಪಟ ಹಾರಿಸಲು ಹೋಗಿದ್ದ. ಗಾಳಿಪಟ ಹಾರಿಸುವಾಗ ದಾರ ತುಂಡಾಗಿದ್ದು. ಈ ವೇಳೆ ಹಾರಿ ಹೋಗುತ್ತಿದ್ದ ಗಾಳಿಪಟ ಹಿಡಿಯಲು ಹೋಗಿ, ಕಟ್ಟಡದ ಮೇಲಿಂದ ಬಿದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಮ್ನಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಜ.25 ರಂದು ಆನೆಗುಡ್ಡೆ ಶ್ರೀ ವಿನಾಯಕ ದೇವರ ಸನ್ನಿಧಿಯಲ್ಲಿ ವಕ್ವಾಡಿ ಗ್ರಾಮಸ್ಥರಿಂದ "1008 ತೆಂಗಿನಕಾಯಿ ಸಾಮೂಹಿಕ ಮೂಡು ಗಣಪತಿ ಸೇವೆ"](https://kannadakaravali.com/%e0%b2%9c-25-%e0%b2%b0%e0%b2%82%e0%b2%a6%e0%b3%81-%e0%b2%86%e0%b2%a8%e0%b3%86%e0%b2%97%e0%b3%81%e0%b2%a1%e0%b3%8d%e0%b2%a1%e0%b3%86-%e0%b2%b6%e0%b3%8d%e0%b2%b0%e0%b3%80-%e0%b2%b5%e0%b2%bf%e0%b2%a8): ಭಕ್ತಾಭಿಮಾನಿಗಳೇ,  ವಕ್ವಾಡಿಯ ಸಮಸ್ತ ಗ್ರಾಮಸ್ಥರಿಂದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಊರಿನ ಜನರ ಸುಕ್ಷೇಮಕ್ಕಾಗಿ “ಸಾಮೂಹಿಕ 1008 ತೆಂಗಿನಕಾಯಿ ಮೂಡುಗಣಪತಿ ಮತ್ತು ಮುಡಿ ಅಕ್ಕಿ ಕಡಬಿನ ಸೇವೆ” ಜನವರಿ 25ರಂದು ಅಪರಾಹ್ನ 4 ಗಂಟೆಗೆ ನಡೆಯಲಿದೆ.  ಊರಿನ ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯಲ್ಲಿ ಪಾಲ್ಗೊಂಡು ಶ್ರೀ ವಿನಾಯಕ ದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತಿದ್ದೇವೆ. ವಿಶೇಷ ಸೂಚನೆ: ಶ್ರೀ ಕ್ಷೇತ್ರದಲ್ಲಿ ನಡೆಯುವ ಮೂಡು ಗಣಪತಿ ಸೇವೆಗೆ ತೆಂಗಿನಕಾಯಿ, ಹೂವು, ಬಾಳೆಹಣ್ಣು, ಸೇವಾ ಕಾಣಿಕೆ ನೀಡುವವರು ವಕ್ವಾಡಿ ಶ್ರೀ ಮಹಾಲಿಂಗೇಶ್ವರ ಸಭಾಗ್ರಹ ಮತ್ತು ವಕ್ವಾಡಿ ಜನರಲ್ ಮರ್ಚೆಂಟ್ ಜಯರಾಮ್ ಶೆಟ್ಟಿ ಅವರ ಅಂಗಡಿಯಲ್ಲಿ ಜನವರಿ 24ರ ಸಂಜೆ 6 ಗಂಟೆಯೊಳಗೆ ನೀಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ.  ಹೆಚ್ಚಿನ ಮಾಹಿತಿಗಾಗಿ; ಗಿರೀಶ್ ಐತಾಳ್ ವಕ್ವಾಡಿ: 9449555633 ಸುಧಾಕರ ಶೆಟ್ಟಿಗಾರ್ ವಕ್ವಾಡಿ: 9900476322 ——— ವಕ್ವಾಡಿಯ ಸಮಸ್ತ ಭಕ್ತಾಭಿಮಾನಿಗಳು  - [ಭಟ್ಕಳ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರ ದುರ್ಮರಣ](https://kannadakaravali.com/%e0%b2%ad%e0%b2%9f%e0%b3%8d%e0%b2%95%e0%b2%b3-%e0%b2%b5%e0%b2%bf%e0%b2%a6%e0%b3%8d%e0%b2%af%e0%b3%81%e0%b2%a4%e0%b3%8d-%e0%b2%95%e0%b2%82%e0%b2%ac%e0%b2%95%e0%b3%8d%e0%b2%95%e0%b3%86-%e0%b2%95): ಕನ್ನಡ ಕರಾವಳಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಭಟ್ಕಳದ ವೆಂಕಟಾಪುರದ ಬಳಿ ನಡೆದಿದೆ. ಭಟ್ಕಳದ ಆಜಾದ್ ನಗರ ನಿವಾಸಿ ಮೊಹಮ್ಮದ್ ಅಶ್ರಫ್ ರುಕ್ನುದ್ದೀನ್ ಶಿಪಾಯಿಯವರ ಪುತ್ರ ಬಿಲಾಲ್ (15) ಹಾಗೂ ಆಯಾನ್ (20) ಮೃತರು. ಅಪಘಾತದ ವೇಳೆ ಬಿಲಾಲ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲನೆ ಮಾಡುತ್ತಿದ್ದ ಆಯಾನ್ ಗಾಯಗೊಂಡಿದ್ದ. ಆತನನ್ನು ಉಡುಪಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ.‌ ಶಿರಾಲಿಯಿಂದ ಭಟ್ಕಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ಈ ಅಪಘಾತ ನಡೆದಿದೆ. ಈ ಸಂಬಂಧ ಭಟ್ಕಳ ಶಹರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [5ನೇ ತರಗತಿ ವಿದ್ಯಾರ್ಥಿಯನ್ನು ಪುಸಲಾಯಿಸಿ ಪರಾರಿಯಾದ 21 ವರ್ಷದ ಶಿಕ್ಷಕಿ! ](https://kannadakaravali.com/5%e0%b2%a8%e0%b3%87-%e0%b2%a4%e0%b2%b0%e0%b2%97%e0%b2%a4%e0%b2%bf-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%af%e0%b2%a8%e0%b3%8d%e0%b2%a8): ಕನ್ನಡ ಕರಾವಳಿ ಸುದ್ದಿ: 23 ವರ್ಷದ ಶಿಕ್ಷಕಿ 13 ವರ್ಷದ ವಿದ್ಯಾರ್ಥಿಯನ್ನು ಕಟ್ಟಿಕೊಂಡು ಹೋದ ಪ್ರಕರಣ ಗುಜರಾತ್ ನ ಸೂರತ್‌ನಲ್ಲಿ ದಾಖಲಾಗಿದೆ. ಇನ್ನೊಂದು ಆಘಾತಕಾರಿ ವಿಚಾರ ಅಂದ್ರೆ ಇದೀಗ ಆ ಶಿಕ್ಷಕಿ ಗರ್ಭಿಣಿ ಆಗಿದ್ದಾಳೆ ಎಂದು ತಿಳಿದು ಬಂದಿದೆ. ಏನಿದು ಪ್ರಕರಣ..? ಮಾನ್ಸಿ ಎಂಬ ಮಹಿಳೆ ಗುಜರಾತ್‌ನ ಸೂರತ್‌ನಲ್ಲಿ ಶಿಕ್ಷಕಿ. ಆಕೆಗೆ 23 ವರ್ಷ. ಅವಳು ತನ್ನ ಶಾಲೆಯಲ್ಲಿ 5ನೇ ತರಗತಿ ಓದುತ್ತಿರುವ 13 ವರ್ಷದ ಹುಡುಗನನ್ನು ಪ್ರೀತಿಸುತ್ತಿದ್ದಳು. ಆತನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ ಆಕೆ, ಆತನನ್ನು ಪುಸಲಾಯಿಸಿ ಕಟ್ಟಿಕೊಂಡು ಹೋಗಿದ್ದಾಳೆ. ಮಗ ನಾಪತ್ತೆ ಸಂಬಂಧ ಹುಡುಗನ ಅಪ್ಪ ಪೊಲೀಸರಿಗೆ ದೂರು ನೀಡಿದ್ದರು. ಪೋಷಕರ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿದಿದ್ದರು. ನಾಪತ್ತೆಯಾದ ಐದು ದಿನಗಳ ನಂತರ ರಾಜಸ್ಥಾನದ ಗಡಿಯಲ್ಲಿ ಈ ಜೋಡಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಬಂಧನ ಬೆನ್ನಲ್ಲೇ ತಾನು 20 ವಾರಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ ನನ್ನ ಮಗುವಿಗೆ ಆ ಬಾಲಕ ತಂದೆ ಆಗುತ್ತಿದ್ದಾನೆ ಎಂದು … - [ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಸಂಪನ್ನಗೊಂಡ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ](https://kannadakaravali.com/%e0%b2%9c%e0%b2%a8%e0%b2%a4%e0%b2%be-%e0%b2%a8%e0%b3%8d%e0%b2%af%e0%b3%82-%e0%b2%87%e0%b2%82%e0%b2%97%e0%b3%8d%e0%b2%b2%e0%b2%bf%e0%b2%b7%e0%b3%8d-%e0%b2%ae%e0%b3%80%e0%b2%a1%e0%b2%bf%e0%b2%af-7): ಕನ್ನಡ ಕರಾವಳಿ ಸುದ್ದಿ: ಬೈಂದೂರು ವಲಯದ ಸ್ಕೌಟ್ಸ್ ಮತ್ತು ಗೈಡ್ಸ್ ರ‍್ಯಾಲಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಜನವರಿ 17ರಂದು ಬಹಳ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೈಂದೂರು ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನರಸಿಂಹ ದೇವಾಡಿಗ ಅವರು ವಹಿಸಿಕೊಂಡಿದ್ದು ನಾಯಕತ್ವ ಪ್ರತಿಭೆ ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಾದರಿಯಾಗಿದೆ ಜೊತೆಗೆ ಉತ್ತಮ ನಾಗರೀಕರನ್ನಾಗಿ ವಿದ್ಯಾರ್ಥಿಗಳನ್ನು ತಯಾರುಗೊಳಿಸುತ್ತದೆ ಎಂದು ಹೇಳಿದವರು. ಕಾರ್ಯಕ್ರಮದಲ್ಲಿ ತಾಲೂಕು ಸರಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ  ಶೇಖರ್ ಪೂಜಾರಿಯವರು ಉಪಸ್ಥಿತರಿದ್ದು ಜೀವನದಲ್ಲಿ ಕೌಶಲ್ಯ, ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಸ್ಕೌಟ್ಸ್ ಗೈಡ್ಸ್ ಕಲಿಸುತ್ತದೆ ಎಂದು ಹೇಳಿದರು. ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದಂತಹ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಾವಲಂಬನೆಯನ್ನು ಬೆಳೆಸುತ್ತದೆ ಎಂದು ಹೇಳಿದರು. ರ‍್ಯಾಲಿ ಪಕ್ಷಿ ನೋಟವನ್ನು ಸ್ಥಳೀಯ ಸಂಸ್ಥೆಯ ಕೋಶಾಧಿಕಾರಿ ಮಂಜುನಾಥ್ ಹೆಗಡೆಯವರು ಪ್ರಸ್ತುತಪಡಿಸಿದರು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಆನಂದ … - [ರಾಷ್ಟ್ರೀಯ ಹೆದ್ದಾರಿ 66ರ ಸಂಚಾರ ದಟ್ಟಣೆಗೆ ಪರ್ಯಾಯವಾಗಿ ಮಂಗಳೂರು-- ಮರವಂತೆ ವರೆಗೆ ಸಮುದ್ರಯಾನ 'ಫೆರ್ರಿ' ಯೋಜನೆ](https://kannadakaravali.com/%e0%b2%b0%e0%b2%be%e0%b2%b7%e0%b3%8d%e0%b2%9f%e0%b3%8d%e0%b2%b0%e0%b3%80%e0%b2%af-%e0%b2%b9%e0%b3%86%e0%b2%a6%e0%b3%8d%e0%b2%a6%e0%b2%be%e0%b2%b0%e0%b2%bf-66%e0%b2%b0-%e0%b2%b8%e0%b2%82%e0%b2%9a): ಕನ್ನಡ ಕರಾವಳಿ ಸುದ್ದಿ: ಕರಾವಳಿಯ ಸಾರಿಗೆ ಸಂಪರ್ಕ ಹಾಗೂ ಪ್ರವಾಸೋದ್ಯಮಕ್ಕೆ ಹೊಸ ವೇಗ ನೀಡಲು ಕರ್ನಾಟಕ ಕರಾವಳಿ ಜಲಸಾರಿಗೆ ಮಂಡಳಿ (ಮರಿಟೈಮ್ ಬೋರ್ಡ್) ಎರಡು ಬೃಹತ್ ಯೋಜನೆಗಳನ್ನು ಘೋಷಿಸಿದೆ. ಮಂಗಳೂರು – ಮರವಂತೆ ಕರಾವಳಿ ಫೆರ್ರಿ ಸೇವೆ ಮಂಗಳೂರಿನಿಂದ ಕುಂದಾಪುರ ತಾಲೂಕಿನ ಮರವಂತೆಯ ವರೆಗೆ ಸುಮಾರು 110 ಕಿ.ಮೀ ಉದ್ದದ ಜಲಮಾರ್ಗವನ್ನು ಅಭಿವೃದ್ಧಿಪಡಿಸುತ್ತಿದೆ. ಫೆರ್ರಿ ಸೇವೆಯು ಹಳೆ ಮಂಗಳೂರು ಬಂದರು, ಹೆಜಮಾಡಿ, ಮಲ್ಪೆ ಕೋಟ ಮತ್ತು ಮರವಂತೆ ಹೀಗೆ ಒಟ್ಟು ಐದು ಕಡೆಗಳಲ್ಲಿ ನಿಲುಗಡೆ ಹೊಂದಿರಲಿದೆ. ಅಂದಾಜು 37.8 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸಲಾಗುವುದು. ಆಯ್ಕೆಯಾದ ಸಂಸ್ಥೆಗೆ 20 ವರ್ಷಗಳ ಕಾಲ ನಿರ್ವಹಣೆಯ ಜವಾಬ್ದಾರಿ ನೀಡಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿಲುಗಡೆ ಇರುವ ಐದೂ ಸ್ಥಳಗಳಲ್ಲಿ ಅತ್ಯಾಧುನಿಕ ಜೆಟ್ಟಿಗಳನ್ನು (ದೋಣಿ ನಿಲ್ದಾಣ) ನಿರ್ಮಿಸಲು ಉದ್ದೇಶಿಸಲಾಗಿದೆ. ಮಂಗಳೂರಿಗೆ ಜಲ ಮೆಟ್ರೋ ಯೋಜನೆ ಇದೇ ವೇಳೆ, ಮಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸುಮಾರು 180 ಕೋಟಿ … - [ಕಾಲೇಜು ಮುಗಿಸಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲು](https://kannadakaravali.com/%e0%b2%95%e0%b2%be%e0%b2%b2%e0%b3%87%e0%b2%9c%e0%b3%81-%e0%b2%ae%e0%b3%81%e0%b2%97%e0%b2%bf%e0%b2%b8%e0%b2%bf-%e0%b2%88%e0%b2%9c%e0%b2%b2%e0%b3%81-%e0%b2%a4%e0%b3%86%e0%b2%b0%e0%b2%b3%e0%b2%bf): ಕನ್ನಡ ಕರಾವಳಿ ಸುದ್ದಿ: ಮಾದಾಪುರ ಹೊಳೆಯಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರಥಮ ಪಿಯುಸಿ ವಿದ್ಯಾರ್ಥಿಗಳು ನೀರಿನ ಸುಳಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಘಟನೆ ಶನಿವಾರ ಮಧ್ಯಾಹ್ನ ಮಾದಾಪುರ ಸಮೀಪದ ಗರಗಂದೂರು ಮಲಿಕಾರ್ಜುನ ಕಾಲೋನಿ ಬಳಿ ಸಂಭವಿಸಿದೆ ಮೃತ ಬಾಲಕರನ್ನು ಸುಂಟಿಕೊಪ್ಪದ ಪಂಪ್‌ಹೌಸ್ ನಿವಾಸಿಗಳಾದ ಶರೀಫ್ ಅವರ ಪುತ್ರ ಮಹಮದ್ ರಾಯಿಜ್ (16) ಮತ್ತು ಸರದಾರ್ ಅವರ ಪುತ್ರ ಮಹಮ್ಮದ್ ನಿಹಾಲ್ (16) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಮಾದಾಪುರದ ಚೆನ್ನಮ್ಮ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳು. ಶನಿವಾರ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕಾಲೇಜು ಮುಗಿಸಿ ಮನೆಗೆ ತೆರಳುವ ಬದಲು, ಈಜಾಡುವ ಆಸೆಯಿಂದ ಮಲಿಕಾರ್ಜುನ ಕಾಲೋನಿ ಬಳಿಯ ಹೊಳೆಗೆ ಇಳಿದಿದ್ದರು. ಈ ವೇಳೆ ನೀರಿನ ಸುಳಿಗೆ ಸಿಲುಕಿದ ಬಾಲಕರು ಮೇಲೆ ಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಗಳ ತಂದೆಯರು ಸುಂಟಿಕೊಪ್ಪದ ಆಟೋಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಸುಂಟಿಕೊಪ್ಪ ಪೊಲೀಸ್‌ ಠಾಣಾಧಿಕಾರಿ … - [ಡಿಕೆಶಿ ವಿದೇಶ ಪ್ರವಾಸ ರದ್ದು ತೀವ್ರ ಕುತೂಹಲ! ಈ ಬಾರಿ ದೆಹಲಿ ಬೇಟಿ ಸ್ಪಷ್ಟನೆ ಪಡೆದೇ ಮರಳಲು ತೀರ್ಮಾನ](https://kannadakaravali.com/%e0%b2%a1%e0%b2%bf%e0%b2%95%e0%b3%86%e0%b2%b6%e0%b2%bf-%e0%b2%b5%e0%b2%bf%e0%b2%a6%e0%b3%87%e0%b2%b6-%e0%b2%aa%e0%b3%8d%e0%b2%b0%e0%b2%b5%e0%b2%be%e0%b2%b8-%e0%b2%b0%e0%b2%a6%e0%b3%8d%e0%b2%a6): ಕನ್ನಡ ಕರಾವಳಿ ಸುದ್ದಿ: ರಾಜ್ಯ ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡವಾಗಿರುವ ನಾಯಕತ್ವ ಬದಲಾವಣೆಯ ಗೊಂದಲ ನಡುವೆಯೇ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿದೇಶ ಪ್ರವಾಸ ರದ್ದಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಅವರು ಭಾನುವಾರ ದಾವೋಸ್‌ಗೆ ತೆರಳಬೇಕಿತ್ತು. ದಾವೋಸ್‌ನಲ್ಲಿ ನಡೆಯುತ್ತಿರುವ ಎಕನಾ ಮಿಕ್ ಫೋರಂನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಧಿಕೃತ ಪ್ರವಾಸ ನಿಗದಿಯಾಗಿತ್ತು. ಆದರೆ ಇದೀಗ ನರೇಗಾ ಸಭೆ ಹಾಗೂ ಜಂಟಿ ಅಧಿವೇಶನದ ಕಾರಣ ನೀಡಿ ವಿದೇಶ ಪ್ರವಾಸ ರದ್ದುಪಡಿಸಿರುವುದು ಕಾಂಗ್ರೆಸ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಸ್ಪಷ್ಟನೆ ಪಡೆದೇ ಮರಳಲು ತೀರ್ಮಾನ: ಡಿಕೆಶಿ ಈ ಬಾರಿಯ ದೆಹಲಿ ಭೇಟಿಯಲ್ಲಿ ಸ್ಪಷ್ಟನೆ ಪಡೆಯಲೇಬೇಕು ಎಂದು ತೀರ್ಮಾನಿಸಿದ್ದಾರೆ. ನಾಯಕತ್ವ ಬದಲಾವಣೆ ಇದೆಯೇ? ಇಲ್ಲವೇ? ಇದ್ದರೂ ಯಾವಾಗ ಬದಲಾವಣೆಯಾಗಲಿದೆ? ಪಕ್ಷದ ಕಷ್ಟದ ಸಮಯದಲ್ಲಿ ತಾವು ಎಲ್ಲ ರೀತಿಯ ನೆರವು ನೀಡಿದ್ದು, ತಾವು ರಾಜ್ಯಾಧ್ಯಕ್ಷರಾಗಿದ್ದ ಸಮಯದಲ್ಲಿಯೇ ಐತಿಹಾಸಿಕ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ಬಂದಿದೆ. ಹೀಗಿರುವಾಗ, ನನ್ನ ಬೇಡಿಕೆಯನ್ನು ಹೈಕಮಾಂಡ್ ಈಡೇರಿಸುವುದೋ ಇಲ್ಲವೇ ಎಂದು ಸ್ಪಷ್ಟನೆ ಕೊಡಿಸಿ ಎಂದು ಖರ್ಗೆ ಅವರಿಗೆ ಆಗ್ರಹಪೂರ್ವಕ … - [ಕೇಂದ್ರ ಸಹಾಯಕ ಸಚಿವ ಶ್ರೀ ಸುರೇಶಗೋಪಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ](https://kannadakaravali.com/%e0%b2%95%e0%b3%87%e0%b2%82%e0%b2%a6%e0%b3%8d%e0%b2%b0-%e0%b2%b8%e0%b2%b9%e0%b2%be%e0%b2%af%e0%b2%95-%e0%b2%b8%e0%b2%9a%e0%b2%bf%e0%b2%b5-%e0%b2%b6%e0%b3%8d%e0%b2%b0%e0%b3%80-%e0%b2%b8%e0%b3%81): ಕನ್ನಡ ಕರಾವಳಿ ಸುದ್ದಿ: ಕೇಂದ್ರ ಸರ್ಕಾರದ ಸಹಾಯಕ ಸಚಿವ ಶ್ರೀ ಸುರೇಶಗೋಪಿ ಕುಟುಂಬರೊಂದಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು. ಸಚಿವರನ್ನು ವಾದ್ಯ ಗೋಷ್ಠಿಗಳೊಂದಿಗೆ ಆಡಳಿತ ಮೊಕ್ತೇಸರರಾದ ಶ್ರೀರಮಣ ಉಪಾಧ್ಯಾಯರು ಹಾಗು ಪರ್ಯಾಯ ಅರ್ಚಕರಾದ ಶ್ರೀ ವ್ಯಾಸ ಉಪಾಧ್ಯಾಯ ಸಹೋದರರು ಆದರದಿಂದ ಬರಮಾಡಿಕೊಂಡು ವಿಶೇಷ ಗೌರವ ಪ್ರಸಾದವನ್ನು ನೀಡಿದರು. ವಿಶ್ರಾಂತ ಆಡಳಿತ ಮೊಕ್ತೇಸರರಾದ ಶ್ರೀ ಸೂರ್ಯನಾರಾಯಣುಪಾಧ್ಯಾಯರು, ಆಡಳಿತ ಮಂಡಳಿ ಸದಸ್ಯರು, ಅರ್ಚಕ ಸಿಬ್ಬಂದಿ, ಭಕ್ತಾದಿಗಳು ಉಪಸ್ಥಿತರಿದ್ದರು. . - [ಸರ್ಕಾರಿ ಪ್ರೌಢಶಾಲೆ ವಕ್ವಾಡಿ: ಇಳಾ ಪರಿಸರ ಸಂಘದ ವಿದ್ಯಾರ್ಥಿಗಳಿಂದ ಕ್ಷೇತ್ರಾಧ್ಯಯನ ](https://kannadakaravali.com/%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%aa%e0%b3%8d%e0%b2%b0%e0%b3%8c%e0%b2%a2%e0%b2%b6%e0%b2%be%e0%b2%b2%e0%b3%86-%e0%b2%b5%e0%b2%95%e0%b3%8d%e0%b2%b5%e0%b2%be-2): ಕನ್ನಡ ಕರಾವಳಿ ಸುದ್ದಿ : ಕುಂದಾಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ ವಕ್ವಾಡಿಯ ವಿದ್ಯಾರ್ಥಿಗಳು “ಇಳಾ ಪರಿಸರ ಸಂಘ”ದ ವತಿಯಿಂದ ಕ್ಷೇತ್ರಾಧ್ಯಯನ ಪ್ರವಾಸದ ಅಡಿ ಹತ್ತಿರದ ಅಸೋಡಿನ ಹಣ್ಣಿನ ತೋಟ, ಕಾಮಧೇನು ಗೋಶಾಲೆ ಹಾಗೂ ವಾದಿರಾಜ ಮಠಕ್ಕೆ ಭೇಟಿ ನೀಡಿದರು. 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಶಾಲೆಯಿಂದ  ಅಸೋಡಿನ ಹಣ್ಣಿನ ತೋಟದ ಸುತ್ತಲಿನ ಪರಿಸರ, ಮರ-ಗಿಡಗಳು, ಬೆಳೆಗಳ ಬಗ್ಗೆ ಪರಿಚಯಿಸಿಕೊಳ್ಳುತ್ತಾ ಅಲ್ಲಿ ನೀಡಿದ ನೀರು ಮತ್ತು ತಂಪು ಪಾನೀಯ ಸವಿದು ಊರವರ ನಗುಮುಖದ ಸ್ವಾಗತವನ್ನು ಸ್ವೀಕರಿಸುತ್ತಾ, ಪ್ರಕೃತಿಯ ಮಡಿಲಲ್ಲಿ ಅರ್ಧ ದಿನ ಕಳೆಯುವ ಉಲ್ಲಾಸದಲ್ಲೇ ಸಾಗಿದರು.  ಪವಾಡ ಪುರುಷರು ವಾದಿರಾಜರು ನಡೆದ ಪುಣ್ಯಭೂಮಿ,   ವಾದಿರಾಜರು ಹುಟ್ಟಿದ ಗೌರಿ ಗೆದ್ದೆ ಹೂವಿನ ಕೆರೆ, ಮಠದವರು ಸುಮಾರು 30 ಎಕರೆ ಜಾಗದಲ್ಲಿ ನಡೆಸುತ್ತಿರುವ ಗೋಶಾಲೆಗೆ ತಲುಪಿದ ವಿದ್ಯಾರ್ಥಿಗಳು ಗೋಶಾಲೆಯ ಕಾರ್ಯವೈಖರಿ ಪರಿಚಯಿಸಿಕೊಂಡರು. ಅಲ್ಲಿನ ವಿವಿಧ ರಾಜ್ಯಗಳ ಹಸುಗಳು, ಎತ್ತುಗಳು, ಎಮ್ಮೆ, ಕೋಣಗಳ ಪರಿಚಯ ಮಾಡಿಕೊಳ್ಳುವುದರ ಜೊತೆಗೆ ಅವುಗಳು ಗೋಶಾಲೆಗೆ ಬಂದ ಬಗೆಯನ್ನು ಗೋಶಾಲೆಯ … - [ಪರ್ಯಾಯ ಪೀಠ ಏರಲಿರುವ ಶೀರೂರು ಮಠದ ಯತಿಗಳಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸ್ವಾಗತ](https://kannadakaravali.com/%e0%b2%aa%e0%b2%b0%e0%b3%8d%e0%b2%af%e0%b2%be%e0%b2%af-%e0%b2%aa%e0%b3%80%e0%b2%a0-%e0%b2%8f%e0%b2%b0%e0%b2%b2%e0%b2%bf%e0%b2%b0%e0%b3%81%e0%b2%b5-%e0%b2%b6%e0%b3%80%e0%b2%b0%e0%b3%82%e0%b2%b0): ಕನ್ನಡ ಕರಾವಳಿ ಸುದ್ದಿ: ಪ್ರಥಮ ಬಾರಿಗೆ ಪರ್ಯಾಯ ಪೀಠವನ್ನು ಏರಲಿರುವ ಶ್ರೀ ಶೀರೂರು ಮಠದ ಯತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದಂಗಳವರು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಜನವರಿ 16ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶ್ರೀಪಾದಂಗಳವರಿಗೆ ಬಿಕ್ಷಾ ಕಾರ್ಯಕ್ರಮವನ್ನು ಶ್ರೀದೇವಳದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಶ್ರೀ ಪಾದಂಗಳವರನ್ನು ಪೂರ್ಣಕುಂಭ ಹಾಗೂ ವಾದ್ಯಗೋಷ್ಠಿಗಳೊಂದಿಗೆ ಸ್ವಾಗತಿಸಲಾಯಿತು. ಶ್ರೀ ಶ್ರೀ ಪಾದಂಗಳವರು ಪಟ್ಟದ ದೇವರ ಪೂಜೆಯನ್ನು ನೆರವೇರಿಸಿ, ವಿಶೇಷ ಪ್ರವಚನವನ್ನು ನೀಡಿ ಭಿಕ್ಷೆಯನ್ನು ಸ್ವೀಕರಿಸಿ ಮುಂದೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ವಿಶೇಷ ಆಹ್ವಾನದ ರಾಯಸವನ್ನು ನೀಡಿದರು . ಆಡಳಿತ ಧರ್ಮದರ್ಶಿಗಳಾದ ಕೆ. ಶ್ರೀ ರಮಣ ಉಪಾಧ್ಯಾಯ ದಂಪತಿಗಳು ಶ್ರೀಗಳನ್ನು ಸ್ವಾಗತಿಸಿ ಪಾದಪ್ರಕ್ಷಾಲನ ಮಾಡಿ ಮಾಲಿಕೆ ಮಂಗಳಾರತಿಯೊಂದಿಗೆ ಫಲ ಕಾಣಿಕೆಯನ್ನು ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದರು. ವಿಶ್ರಾಂತ ಧರ್ಮದರ್ಶಿಗಳಾದ ಕೆ ಸೂರ್ಯನಾರಾಯಣ ಉಪಾಧ್ಯಾಯರು ಪರ್ಯಾಯ ಅರ್ಚಕರಾದ ಕೆ ವ್ಯಾಸ ಉಪಾಧ್ಯಾಯ ಹಾಗೂ ಸಹೋದರರು ಆನೆಗುಡ್ಡೆ ಉಪಾಧ್ಯಾಯ ಕುಟುಂಬ ಸದಸ್ಯರು ದೇವಳದ ಆಡಳಿತ ಹಾಗೂ ಅರ್ಚಕ ಸಿಬ್ಬಂದಿಗಳು … - [ಸಾಲಿಗ್ರಾಮ ಜಾತ್ರೆ ಮುಗಿಸಿ ಮನೆಗೆ ಹೋಗುವಾಗ ಅಪರಿಚಿತ ವಾಹನ ಡಿಕ್ಕಿ: ವ್ಯಕ್ತಿ ಸಾವು, ಇನ್ನೋರ್ವ ಗಂಭೀರ ಗಾಯ](https://kannadakaravali.com/%e0%b2%b8%e0%b2%be%e0%b2%b2%e0%b2%bf%e0%b2%97%e0%b3%8d%e0%b2%b0%e0%b2%be%e0%b2%ae-%e0%b2%9c%e0%b2%be%e0%b2%a4%e0%b3%8d%e0%b2%b0%e0%b3%86-%e0%b2%ae%e0%b3%81%e0%b2%97%e0%b2%bf%e0%b2%b8%e0%b2%bf): ಕನ್ನಡ ಕರಾವಳಿ ಸುದ್ದಿ:ಸಾಲಿಗ್ರಾಮ ಜಾತ್ರೆ ಮುಗಿಸಿ ಮನೆಗೆ ಹೋಗುತ್ತಿರುವಾಗ ಅಪರಿಚಿತ ಕಾರು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟು ಇನ್ನೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮದ ರಶಿ ಆಟೋ ವೆಲ್ಡಿಂಗ್ ವರ್ಕ್ಸ್ ಅಂಗಡಿಯ ಬಳಿ ಸಂಭವಿಸಿದ ಅಪಘಾತದಲ್ಲಿ ಆರೂರು ಗ್ರಾಮದ ಕುಂಜಾಲು ಪ್ರದೀಪ್ ಆಚಾರ್ಯ (40) ಮೃತಪಟ್ಟವರು. ಶಶಿ (25) ಗಂಭೀರ ಗಾಯಗೊಂಡವರು ಎಂದು ತಿಳಿದುಬಂದಿದೆ. ಪ್ರದೀಪ್ ಆಚಾರ್ಯ ಮತ್ತು ಶಶಿ ಅವರು ಕುಂಜಾಲಿನಿಂದ ಜ.16 ರಂದು ಸಾಲಿಗ್ರಾಮ ಜಾತ್ರೆ ಪ್ರಯುಕ್ತ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಕಾರಿನಲ್ಲಿ ಬಂದು ಕಾರನ್ನು ಕಾರ್ಕಡ ಸರಕಾರಿ ಪ್ರಾಥಮಿಕ ಶಾಲೆಯ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಗುರುನರಸಿಂಹ ದೇವಸ್ಥಾನದ ಜಾತ್ರೆಗೆ ಹೋಗಿ ರಾತ್ರಿಯವರೆಗೆ ಹಬ್ಬದಲ್ಲಿ ತಿರುಗಾಡಿಕೊಂಡು ವಾಪಸು ಮನೆಗೆ ಹೋಗಲೆಂದು ರಾತ್ರಿ 10:30 ರ ಸುಮಾರಿಗೆ ಪ್ರದೀಪ್ ಆಚಾರ್ಯ ಮತ್ತು ಶಶಿ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಸಾಲಿಗ್ರಾಮದ ರಶಿ … - [ಮೂರು ಮಕ್ಕಳ ತಾಯಿ ಯುವಕನೊಂದಿಗೆ ಪ್ರೇಮ ಪ್ರಣಯ: ಹೆಂಡತಿಯೊಂದಿಗಿನ ಜಗಳ ಕೊಲೆಯಲ್ಲಿ ಅಂತ್ಯ!](https://kannadakaravali.com/%e0%b2%ae%e0%b3%82%e0%b2%b0%e0%b3%81-%e0%b2%ae%e0%b2%95%e0%b3%8d%e0%b2%95%e0%b2%b3-%e0%b2%a4%e0%b2%be%e0%b2%af%e0%b2%bf-%e0%b2%af%e0%b3%81%e0%b2%b5%e0%b2%95%e0%b2%a8%e0%b3%8a%e0%b2%82%e0%b2%a6): ಕನ್ನಡ ಕರಾವಳಿ ಸುದ್ದಿ: ಗಂಡನಿಂದ ದೂರವಾಗಿದ್ದ ಉಮಾ ತಮ್ಮ ತವರೂರು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಚಾಪಲಗಡ್ಡದಲ್ಲಿ ವಾಸವಾಗಿದ್ದರು. ಮೂರು ಮಕ್ಕಳನ್ನು ಕಟ್ಟಿಕೊಂಡು ಜೀವನ ನಡೆಸುವುದು ಉಮಾಗೆ ಕಷ್ಟವಾಗಿತ್ತು. ಹೀಗಾಗಿ ಹೊಸಪೇಟೆ ನಗರದ ರೈಲ್ವೆ ಸ್ಟೇಷನ್‌ನಲ್ಲಿ ಸ್ಟಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದರು. ಇನ್ನು ಉಮಾಗೆ ಮೂವರು ಗಂಡು ಮಕ್ಕಳು. ಅದರಲ್ಲಿ ಹಿರಿಯ ಮಗ ತನ್ನ ತಂದೆಯೊಂದಿಗೆ ವಾಸವಿದ್ದರೆ, ಇಬ್ಬರನ್ನು ಉಮಾ ಅವರೇ ನೋಡಿಕೊಳ್ಳುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ತಂದೆ-ತಾಯಿಯನ್ನು  ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ನಿತ್ಯ ಕೆಲಸಕ್ಕೆ ಹೋಗುತ್ತಿದ್ದ ಉಮಾರಿಗೆ ಅಂದು ವಸ್ತುಪ್ರದರ್ಶನದಲ್ಲಿ ಕೆಲಸ ಮಾಡುತ್ತಿದ್ದ ಖಾಜಾ ಎಂಬ ಯುವಕನ ಪರಿಚಯವಾಗಿದೆ. ಪರಿಚಯದ ನಂತರ ಆತ ದಿನವು ರೈಲ್ವೆ ಸ್ಟೇಷನ್‌ಗೆ ಬರೋದು, ಉಮಾ ಕೆಲಸ ಮಾಡುತ್ತಿದ್ದ ಸ್ಟಾಲ್ ಹತ್ತಿರ ನಿಲ್ಲುವುದು, ಅವರನ್ನು ಮಾತನಾಡಿಸು ಪ್ರಯತ್ನ ಮಾಡುವುದು ಹೀಗೆ ಕೆಲ ತಿಂಗಳು ನಡೆದಿದೆ. ಆದಾದ ಬಳಿಕ ಇಬ್ಬರು ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ. ನಂಬರ್ಪೋನ್ ನಂಬರ್ ಎಕ್ಸ್ಚೇಂಜ್ ಆಗುತ್ತಿದ್ದಂತೆ ಇಬ್ಬರು ವಾಟ್ಸಾಪ್ … - [ಟೀಂ ಇಂಡಿಯಾದ ನಾಯಕ ಸೂರ್ಯ ಕುಮಾರ್ ಯಾದವ್ ಬಾಲಿವುಡ್ ನಟಿ ಖುಷಿ ಮುಖರ್ಜಿ ವಿರುದ್ಧ 100 ಕೋಟಿ.ರೂ  ಮಾನನಷ್ಟ ಮೊಕದ್ದಮೆ](https://kannadakaravali.com/%e0%b2%9f%e0%b3%80%e0%b2%82-%e0%b2%87%e0%b2%82%e0%b2%a1%e0%b2%bf%e0%b2%af%e0%b2%be%e0%b2%a6-%e0%b2%a8%e0%b2%be%e0%b2%af%e0%b2%95-%e0%b2%b8%e0%b3%82%e0%b2%b0%e0%b3%8d%e0%b2%af-%e0%b2%95%e0%b3%81): ಕನ್ನಡ ಕರಾವಳಿ ಸುದ್ದಿ:  ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಕುರಿತು ಬಾಲಿವುಡ್ ನಟಿ ಖುಷಿ ಮುಖರ್ಜಿ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಟಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ಜ. 13 ರಂದು ಖುಷಿ ಮುಖರ್ಜಿ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮುಂಬೈ ಮೂಲದ ಅನ್ಸಾರಿ ಅವರು ಘಾಜಿಪುರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಕೂಡಲೇ ನಟಿ ವಿರುದ್ಧ ಎಫ್‌ಐಆ‌ರ್ ದಾಖಲಿಸುವಂತೆ ಮನವಿ ಮಾಡಿದ್ದಾರೆ. ಖುಷಿ ಮುಖರ್ಜಿ ಅವರ ಹೇಳಿಕೆಗಳು ಸೂರ್ಯಕುಮಾರ್ ಯಾದವ್ ಅವರ ಘನತೆಗೆ ಧಕ್ಕೆ ತರುವಂತಿವೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಖುಷಿ ಮುಖರ್ಜಿ ನೀಡಿದ ಹೇಳಿಕೆಗಳು ಕೇವಲ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರ. ಇದರಿಂದ ಅಂತಾರಾಷ್ಟ್ರೀಯ ಕ್ರಿಕೆಟಿಗರ ಘನತೆಗೆ ಧಕ್ಕೆಯಾಗಬಹುದು. ಹಾಗಾಗಿ, ನಟಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸುಳ್ಳು ಹೇಳಿಕೆಗಳಿಗೆ ಗಂಭೀರ ಆರೋಪ ಹೊರಿಸಿ ಕನಿಷ್ಠ 7 … - [ಕುಂದಾಪುರ: ಕಂದಾಯ ಇಲಾಖೆ ಎಡಿಷನಲ್ ಕಮೀಷನರ್ ಬಿ.ಉದಯ ಕುಮಾರ ಶೆಟ್ಟಿ ಅವರಿಗೆ ಸನ್ಮಾನ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%95%e0%b2%82%e0%b2%a6%e0%b2%be%e0%b2%af-%e0%b2%87%e0%b2%b2%e0%b2%be%e0%b2%96%e0%b3%86-%e0%b2%8e%e0%b2%a1%e0%b2%bf): ಕನ್ನಡ ಕರಾವಳಿ ಸುದ್ದಿ: ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹೊಂಬಾಡಿ -ಮಂಡಾಡಿ (ಸುಣ್ಣಾರಿ) ಇದರ ವಿವೇಕೋತ್ಸವದ ಕಾರ್ಯಕ್ರಮದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಎಡಿಷನಲ್ ಕಮೀಷನರ್ ಬಿ. ಉದಯ ಕುಮಾರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕುಂದಾಪುರದ ಶಾಸಕರಾದ ಕಿರಣ ಕುಮಾರ ಕೊಡ್ಗಿ ಉದಯ ಕುಮಾರ ಶೆಟ್ಟರನ್ನು ಸನ್ಮಾನಿಸಿ, ಪ್ರಾಮಾಣಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಅಪರೂಪದ ವ್ಯಕ್ತಿತ್ವ ಉದಯ ಕುಮಾರ ಶೆಟ್ಟರದು ನಿಗರ್ವಿಯಾಗಿ ಯಾವುದೇ ಕೆಲಸವಿದ್ದರು ಅದನ್ನು ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಮನೋಭಾವ ಹೊಂದಿದವರು ಎಂದು ಶ್ಲಾಘಿಸಿದರು. ಶಾಲಾ ಸಂಚಾಲಕರಾದ ಎಸ್. ಕಿಶೋರ ಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯರಾದ ಹಳೆ ವಿದ್ಯಾರ್ಥಿ ರಂಜನ ಕುಮಾರ ಶೆಟ್ಟಿ, ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ವಿ. ಚಂದ್ರಶೇಖರ ಹೆಗ್ಡೆ, ಅಧ್ಯಕ್ಷರಾದ ಎಸ್. ಪ್ರಸನ್ನ ಶೆಟ್ಟಿ ಕಾರ್ಯದರ್ಶಿ ರವಿ ಪೂಜಾರಿ ದಬ್ಬೆಕಟ್ಟೆ, ಆಡಳಿತ ಮಂಡಳಿ ಸದಸ್ಯರಾದ ಡಾ. ಉತ್ತಮ ಕುಮಾರ ಶೆಟ್ಟಿ, ಮಂಡಾಡಿ ಲಕ್ಷ್ಮಣ … - [ಪ್ರಯಾಗ್‌ರಾಜ್‌ ಮೇಳದಲ್ಲಿ ಭಕ್ತರ, ಪ್ರವಾಸಿಗರ ಗಮನ ಸೆಳೆಯುವ 5 ಕೋಟಿ ರುಪಾಯಿ ಆಭರಣಧಾರಿ 'ಗೋಲ್ಡನ್ ಬಾಬಾ'](https://kannadakaravali.com/%e0%b2%aa%e0%b3%8d%e0%b2%b0%e0%b2%af%e0%b2%be%e0%b2%97%e0%b3%8d%e0%b2%b0%e0%b2%be%e0%b2%9c%e0%b3%8d-%e0%b2%ae%e0%b3%87%e0%b2%b3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%ad): ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾಘ ಮೇಳ ಜನವರಿ-ಫೆಬ್ರವರಿಯಲ್ಲಿ ನಡೆಯುವ ಈ ಮೇಳದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಜನ ಸಾಮಾನ್ಯರ ಜತೆ ಸಾವಿರಾರು ತಪಸ್ವಿಗಳು, ಸಾಧುಗಳು ಭಾಗವಹಿಸಿದ್ದಾರೆ. ಇವರೆಲ್ಲದರ ಮಧ್ಯೆ ಈ ಮೇಳದಲ್ಲಿ ತಪಸ್ವಿಯೊಬ್ಬರು ಗಮನ ಸೆಳೆದಿದ್ದಾರೆ. ಲಕ್ಷಾಂತರ ಸಾಧುಗಳ ನಡುವೆ ‘ಗೋಲ್ಡನ್ ಬಾಬಾ’ ಎಂದು ಖ್ಯಾತ ಪಡೆದಿರುವ ಇವರು ಭಕ್ತರ ಮತ್ತು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದು ಎನಿಸಿಕೊಂಡಿದ್ದಾರೆ. ಸದ್ಯ ಅವರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ‘ ಗೋಲ್ಡನ್ ಬಾಬಾ’ ಎಂದು ಕರೆಯಲ್ಪಡುವ ಕಾನ್ಪುರದ ತಪಸ್ವಿ ಇವರಾಗಿದ್ದು, ತಮ್ಮ ದೇಹದ ಮೇಲೆ ಸುಮಾರು 5 ಕೋಟಿ ರುಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸಿದ್ದಾರೆ. ಇವರು ತಲೆಯಿಂದ ಕಾಲಿನವರೆಗೆ ಚಿನ್ನದ ಆಭರಣಗಳಲ್ಲಿ ಮುಳುಗಿ ಹೋಗಿದ್ದಾರೆ. ಬೆಳ್ಳಿ ಪಾತ್ರೆಗಳಿಂದ ಊಟ ಮಾಡುವುದು ಮತ್ತು ಹೋದಲ್ಲೆಲ್ಲ ಲಡ್ಡು ಗೋಪಾಲನ ಚಿನ್ನದ ವಿಗ್ರಹವನ್ನು ಒಯ್ಯುವುದು ಮುಂತಾದವುಗಳಿಂದ ಗಮನ ಸೆಳೆಯುತ್ತಿದ್ದಾರೆ. ಅಪಾರ ಪ್ರಮಾಣದ ಚಿನ್ನ ಧರಿಸುವುದರಿಂದ ಸೋಶಿಯಲ್ … - [ಮಸ್ಕತ್ ತಲುಪಿದ ಭಾರತದ ಹೆಮ್ಮೆಯ INSV ಕೌಂಡಿನ್ಯಾ ನೌಕೆ](https://kannadakaravali.com/%e0%b2%ae%e0%b2%b8%e0%b3%8d%e0%b2%95%e0%b2%a4%e0%b3%8d-%e0%b2%a4%e0%b2%b2%e0%b3%81%e0%b2%aa%e0%b2%bf%e0%b2%a6-%e0%b2%ad%e0%b2%be%e0%b2%b0%e0%b2%a4%e0%b2%a6-%e0%b2%b9%e0%b3%86%e0%b2%ae%e0%b3%8d): ಕನ್ನಡ ಕರಾವಳಿ ಸುದ್ದಿ: ಕೊನೆಗೂ ನಮ್ಮ ಭಾರತದ ಐಎನ್‌ಎಸ್‌ವಿ ಕೌಂಡಿನ್ಯಾ ಹಡಗು ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ಅನ್ನು ದಿನಾಂಕ 14, ಜನವರಿ 2026 ರಂದು ತಲುಪಿದೆ. ಭಾರತದ ಪ್ರಾಚೀನ ಶಿಲ್ಪತಂತ್ರಗಳೊಂದಿಗೆ ನಿರ್ಮಿಸಲ್ಪಟ್ಟ ಹಡಗು ಇದಾಗಿದೆ. ಈ ಹಡಗಿಗೆ ಯಾವುದೇ ಎಂಜಿನ್ ಇಲ್ಲದೆ, ಲೋಹದ ಮೊಳೆಗಳನ್ನು ಬಳಸದೆ ತಯಾರಿಸಲಾಗಿರುವುದು ಇದರ ವಿಶೇಷ, ಡಿಸೆಂಬರ್ 29, 2025 ರಂದು ಗುಜರಾತಿನ ಪೋರಬಂದರ್‌ನಿಂದ ಒಮಾನ್ನ ಮಸ್ಕತ್‌ವರೆಗೆ ಐತಿಹಾಸಿಕ ಸಮುದ್ರಯಾನ ಕೈಗೊಂಡಿದ್ದ INSV ಕೌಂಡಿನ್ಯ, ಗಾಳಿಯ ಪರಿಸ್ಥಿತಿಯನ್ನು ಅವಲಂಬಿಸಿ ಸುಮಾರು 15 ದಿನಗಳು ಅಥವಾ ‘ಸುಮಾರು ಎರಡು ವಾರಗಳಲ್ಲಿ’ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು ಆರಂಭಿಕ ಅಂದಾಜಿಗಿಂತ ಸುಮಾರು ಮೂರು ದಿನ ತಡವಾಗಿ 18 ದಿನಗಳ ಪ್ರಯಾಣದ ನಂತರ ಜನವರಿ 14, 2026 ರಂದು ಮಸ್ಕತ್ ತಲುಪಿತು. ಯಾವುದೇ ಇಂಜಿನ್ ಬಳಸದೆ ಕೇವಲ ಗಾಳಿ ಮತ್ತು ನೌಕಾಯಾನದ ಪರದೆಗಳ (Sails) ಸಹಾಯದಿಂದ ಸಾಗಿದ ಈ ನೌಕೆಯು, “ವಿರುದ್ಧ ದಿಕ್ಕಿನ ಗಾಳಿ, ಗಾಳಿಯಿಲ್ಲದ ಶಾಂತ ಸ್ಥಿತಿ (Dead calms), … - [ನನ್ನ ಹೆಸರಲ್ಲಿ ದುಡ್ಡು ಮಾಡ್ತೀರಿ, ನನಗೂ ಪಾಲು ಕೊಡಿ ಎಂದ ಜೇವರ್ಗಿ ತಹಸೀಲ್ದಾರ್ !](https://kannadakaravali.com/%e0%b2%a8%e0%b2%a8%e0%b3%8d%e0%b2%a8-%e0%b2%b9%e0%b3%86%e0%b2%b8%e0%b2%b0%e0%b2%b2%e0%b3%8d%e0%b2%b2%e0%b2%bf-%e0%b2%a6%e0%b3%81%e0%b2%a1%e0%b3%8d%e0%b2%a1%e0%b3%81-%e0%b2%ae%e0%b2%be%e0%b2%a1): ಕನ್ನಡ ಕರಾವಳಿ ಸುದ್ದಿ:ನನ್ನ ಹೆಸರಿನಲ್ಲಿ ನೀವೆಲ್ಲಾ ದುಡ್ಡು ಮಾಡುತ್ತೀರಿ, ನನಗೂ ಪಾಲು ಕೊಡಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ತನಿಖೆ ಮಾಡಿಸುತ್ತೇನೆ” ಎಂದು ಅಧೀನ ಸಿಬ್ಬಂದಿಗೆ ತಹಸೀಲ್ದಾರ್ ಬೆದರಿಕೆ ಹಾಕಿದ್ದಾರೆ. ಸರ್ಕಾರಿ ನೌಕರರಿಂದಲೇ ಹಫ್ತಾ ವಸೂಲಿ ಮಾಡುತ್ತಿರುವ ಗಂಭೀರ ಆರೋಪ ಜಿಲ್ಲೆಯ ಜೇವರ್ಗಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಅವರ ಕಿರುಕುಳ ತಾಳಲಾರದೆ ಸಿಬ್ಬಂದಿ ಇದೀಗ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸರ್ಕಾರಿ ಕಚೇರಿಯಲ್ಲೇ ಬಹಿರಂಗವಾಗಿ ಹಫ್ತಾ ವಸೂಲಿಗೆ ಇಳಿದಿರುವ ತಹಸೀಲ್ದಾರ್, ಸಭೆಯಲ್ಲೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಸರ್ಕಾರಿ ಜಯಂತಿಗಳು ಬರುತ್ತವೆ, ಶಾಸಕರು ಕೆಲಸ ಹೇಳುತ್ತಾರೆ. ಅದಕ್ಕೆಲ್ಲಾ ನಾನು ಎಲ್ಲಿಂದ ಹಣ ತರಲಿ? ನೀವು ಪ್ರತಿ ತಿಂಗಳು 5 ರಿಂದ 10 ಸಾವಿರ ರೂಪಾಯಿ ಕೊಡಬೇಕು. ಎಲ್ಲಾ ಇಲಾಖೆಯವರು ಹಣ ಹಾಕುತ್ತಾರೆ, ನೀವು ಕೂಡ ಸಮಾನವಾಗಿ ಷೇರ್ ಹಾಕಬೇಕು ಎಂದು ಸಿಬ್ಬಂದಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಹಸೀಲ್ದಾರರ ಈ ವಸೂಲಿ ಕಾಟಕ್ಕೆ ಬೇಸತ್ತ ಕಂದಾಯ … - [ಬೈಂದೂರು: ಹೇರೂರಿನ ಚಿಕ್ಕಾಡಿಯಲ್ಲಿ ಬೋನಿನಲ್ಲಿ ಸೆರೆಯಾದ ಚಿರತೆ](https://kannadakaravali.com/%e0%b2%ac%e0%b3%88%e0%b2%82%e0%b2%a6%e0%b3%82%e0%b2%b0%e0%b3%81-%e0%b2%b9%e0%b3%87%e0%b2%b0%e0%b3%82%e0%b2%b0%e0%b2%bf%e0%b2%a8-%e0%b2%9a%e0%b2%bf%e0%b2%95%e0%b3%8d%e0%b2%95%e0%b2%be%e0%b2%a1): ಕನ್ನಡ ಕರಾವಳಿ ಸುದ್ದಿ: ಬೈಂದೂರು ಹೇರೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕಳೆದ ಹಲವಾರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟ ಬೋನಿನಲ್ಲಿ ಸೆರೆಯಾಗಿದೆ. ಹಲವು ದಿನಗಳಿಂದ ಪರಿಸರದಲ್ಲಿ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೆರೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿತ್ತು. ಅದರಂತೆ ಹೇರೂರು ಗ್ರಾಮದ ಚಿಕ್ಕಾಡಿ ಎಂಬಲ್ಲಿರುವ ಖಾಸಗಿ ತೋಟದಲ್ಲಿ ಅರಣ್ಯ ಅಧಿಕಾರಿಗಳು ಗುರುವಾರ ಬೋನು ಇರಿಸಿದ್ದರು. ಶುಕ್ರವಾರ ಮುಂಜಾನೆ ಆಹಾರ ಅರಸಿ ಬಂದ ಮೂರು ವರ್ಷದ ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಬೈಂದೂರು ವಲಯ ಅರಣ್ಯಾಧಿಕಾರಿ ಜ್ಯೋತಿ ಸಂದೇಶ್ ಕುಮಾ‌ರ್, ಉಪವಲಯ ಅರಣ್ಯಾಧಿಕಾರಿ ಕೆ.ಸದಾಶಿವ, ಗಸ್ತು ಅರಣ್ಯ ಪಾಲಕ ಶೃತಿ ಗೌಡ, ಅರಣ್ಯ ವೀಕ್ಷಕ ಸುರೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿದ್ದು ಸೆರೆ ಹಿಡಿದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. - [ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನ ಬರ್ಬರ ಹತ್ಯೆ](https://kannadakaravali.com/%e0%b2%a8%e0%b2%be%e0%b2%b2%e0%b3%8d%e0%b2%95%e0%b3%81-%e0%b2%a6%e0%b2%bf%e0%b2%a8%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b9%e0%b2%b8%e0%b3%86%e0%b2%ae%e0%b2%a3%e0%b3%86-%e0%b2%8f): ಕನ್ನಡ ಕರಾವಳಿ ಸುದ್ದಿ: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಮಂಡ್ಯ ಜಿಲ್ಲೆಯ ಮಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಸ್ತಿ ವಿಚಾರಕ್ಕೆ ಅಣ್ಣ ಮತ್ತು ಆತನ ಮಕ್ಕಳೇ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯೋಗೇಶ್ (35) ಕೊಲೆಯಾದ ವ್ಯಕ್ತಿ. ಈತನ ಮದುವೆ ನಿಶ್ಚಯವಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಹೊಸ ಜೀವನ ಆರಂಭಿಸಲಿದ್ದ. ಆದರೀಗ ಆಸ್ತಿಗಾಗಿ ಈತನ ಪ್ರಾಣವನ್ನೇ ತೆಗೆದಿದ್ದಾರೆ. ಆಸ್ತಿಗಾಗಿ ಸ್ವಂತ ಅಣ್ಣ ಮತ್ತು ಆತನ ಮಕ್ಕಳು ಸೇರಿಕೊಂಡು ತಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಅಣ್ಣ ಲಿಂಗರಾಜ್ (ನಿಂಗರಾಜು), ಅಣ್ಣನ ಮಕ್ಕಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಮನೆಯ ಕೊಟ್ಟಿಗೆಯಲ್ಲಿ ಇದ್ದಾಗ ಅಣ್ಣ ಮತ್ತು ಅಣ್ಣನ ಮಕ್ಕಳು ಹರಿತವಾದ ಆಯುಧಗಳೊಂದಿಗೆ ಬಂದು ಬರ್ಬರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೊಲೆ ಬಳಿಕ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ … - [ಮನೆ ಕಳ್ಳತನದ ಆರೋಪಿಗಳ ಬಂಧನ; ಅವರು ಹುಡುಗರಂತೆ ಕಾಣುವ ಹುಡುಗಿಯರು!!](https://kannadakaravali.com/%e0%b2%ae%e0%b2%a8%e0%b3%86-%e0%b2%95%e0%b2%b3%e0%b3%8d%e0%b2%b3%e0%b2%a4%e0%b2%a8%e0%b2%a6-%e0%b2%86%e0%b2%b0%e0%b3%8b%e0%b2%aa%e0%b2%bf%e0%b2%97%e0%b2%b3-%e0%b2%ac%e0%b2%82%e0%b2%a7%e0%b2%a8): ಕನ್ನಡ ಕರಾವಳಿ ಸುದ್ದಿ:  ಸಂಪಿಗೆಹಳ್ಳಿಯ ಮನೆಯಲ್ಲಿ ಕಳ್ಳತನ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ದೃಶ್ಯಗಳಲ್ಲಿ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿರುವಂತೆ ಕಾಣಿಸಿಕೊಂಡಿದ್ದು, ಅದೇ ಸುಳಿವಿನ ಆಧಾರದಲ್ಲಿ ಶೋಧ ಕಾರ್ಯ ನಡೆಸಲಾಯಿತು. ಆದರೆ ಆರೋಪಿಗಳನ್ನು ವಶಕ್ಕೆ ಪಡೆದಾಗ, ಅವರು ಹುಡುಗರಲ್ಲ ಹುಡುಗಿಯರು ಎಂಬ ಸತ್ಯ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳನ್ನು ಶಾಲು ಮತ್ತು ನೀಲು ಎಂದು ಗುರುತಿಸಲಾಗಿದ್ದು, ಇಬ್ಬರೂ ಟ್ಯಾನರಿ ರಸ್ತೆಯ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಯಾಂಟ್, ಶರ್ಟ್, ಟೋಪಿ ಧರಿಸಿ ಹುಡುಗರಂತೆ ಕಾಣುವಂತೆ ವೇಷಭೂಷಣ ಮಾಡಿಕೊಂಡು, ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಇವರು, ಹಗಲಿನ ಹೊತ್ತಲ್ಲೇ ಜನಸಂಚಾರ ಕಡಿಮೆ ಇರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಮನೆಗಳ್ಳತನ ಮಾಡುತ್ತಿದ್ದರು. ಪೊಲೀಸರ ಪ್ರಕಾರ, ಈ ಇಬ್ಬರು ಹಲವು ಕಡೆಗಳಲ್ಲಿ ಇದೇ ರೀತಿಯ ಕೃತ್ಯ ಎಸಗಿರುವ ಶಂಕೆ ಇದೆ. ಸದ್ಯ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಮತ್ತಷ್ಟು ಪ್ರಕರಣಗಳಲ್ಲಿ ಅವರ ಪಾತ್ರವಿದೆಯೇ ಎಂಬ ಕುರಿತು ಪೊಲೀಸರು … - [ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್‌ ಪಲ್ಟಿ; ಎಣ್ಣೆಗಾಗಿ ಮುಗಿಬಿದ್ದ ಜನ](https://kannadakaravali.com/%e0%b2%aa%e0%b2%be%e0%b2%ae%e0%b3%8d-%e0%b2%86%e0%b2%af%e0%b2%bf%e0%b2%b2%e0%b3%8d-%e0%b2%b8%e0%b2%be%e0%b2%97%e0%b2%bf%e0%b2%b8%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6): ಕನ್ನಡ ಕರಾವಳಿ ಸುದ್ದಿ:  ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಸಮೀಪ ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್‌ ಒಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿ, ಎಣ್ಣೆ ರಸ್ತೆಯ ಮೇಲೆ ಸೋರಿಕೆಯಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಬಕೆಟ್‌, ಕ್ಯಾನ್‌ಗಳು ಮತ್ತು ವಿವಿಧ ಪಾತ್ರೆಗಳನ್ನು ಹಿಡಿದುಕೊಂಡು ಸ್ಥಳಕ್ಕೆ ಧಾವಿಸಿದ್ದು, ರಸ್ತೆಯ ಮೇಲೆ ಹರಿದಾಡುತ್ತಿದ್ದ ಪಾಮ್ ಆಯಿಲ್‌ ಅನ್ನು ಸಂಗ್ರಹಿಸುವಲ್ಲಿ ತೊಡಗಿದ್ದಾರೆ. ಟ್ಯಾಂಕರ್ ಪಲ್ಟಿಯಾದ ವೇಳೆ ಲಾರಿಯ ಚಾಲಕ ಮತ್ತು ಕ್ಲೀನರ್ ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.     - [ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಕೈಗಾರಿಕಾ ಕೇಂದ್ರಕ್ಕೆ ಭೇಟಿ](https://kannadakaravali.com/%e0%b2%95%e0%b3%8b%e0%b2%9f%e0%b3%87%e0%b2%b6%e0%b3%8d%e0%b2%b5%e0%b2%b0-%e0%b2%b8%e0%b2%b0%e0%b3%8d%e0%b2%95%e0%b2%be%e0%b2%b0%e0%b2%bf-%e0%b2%aa%e0%b3%8d%e0%b2%b0%e0%b2%a5%e0%b2%ae-%e0%b2%a6-4): ಕನ್ನಡ ಕರಾವಳಿ ಸುದ್ದಿ:  ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಕೋಟೇಶ್ವರದ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಅಂತಿಮ ಬಿ.ಕಾಂ 50 ವಿದ್ಯಾರ್ಥಿಗಳಿಗೆ ವಿವಿಧ ಕೈಗಾರಿಕಾ ಕೇಂದ್ರಗಳಿಗೆ ಭೇಟಿ ನೀಡಿ ಅದರ ಸೂಕ್ಷ್ಮ ಅಧ್ಯಯನವನ್ನು ಮಾಡಲಾಯಿತು. ಮಣಿಪಾಲದ ಉದಯವಾಣಿ ಮುದ್ರಣಾಲಯ ಮುಖ್ಯಸ್ಥರು ವಿದ್ಯಾರ್ಥಿಗಳ ಈ ಭೇಟಿಯಿಂದ ನೈಜ ಅಧ್ಯಯನ ಹಾಗೂ ಸಮಾಜಮುಖಿಗಳಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಉದಯ ಅಲ್ಯುಮೀನಿಯಂ ಘಟಕ ಮಣಿಪಾಲದ ವ್ಯವಸ್ಥಾಪಕರಾದ ಹೇಮಂತ್ ಕುಮಾರ್ ರವರು ಅಲ್ಯುಮೀನಿಯಂ ಹಾಗೂ ಸ್ಟೀಲ್‌ನ ವಿವಿಧ ಪರಿಕರಗಳ ಉತ್ಪಾದನಾ ಹಂತಗಳನ್ನು ಸ್ಥೂಲವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಉಪ್ಪೂರಿನಲ್ಲಿರುವ ಕೆ.ಎಂ.ಎಫ್.ನ ಹಾಲಿನ ಸಂಸ್ಕರಣ ಘಟಕದಲ್ಲಿ ಅಲ್ಲಿಯ ಸಿಬ್ಬಂದಿಯವರು ಹಾಲು ಹಾಗೂ ಅದರ ಸಹ – ಉತ್ಪನ್ನಗಳ ಸಂಸ್ಕರಣೆಯ ವಿವಿಧ ಮಜಲುಗಳನ್ನು ವಿವರವಾಗಿ ತಿಳಿಸಿದರು. ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಶೇಖರ ಬಿ. ಹಾಗೂ ಉಪನ್ಯಾಸಕರಾದ ಶೃತಿ ಆಚಾರ್ಯ ಎನ್. ಹಾಗೂ ಚೈತ್ರಾ ಹೆಚ್. ಇವರು ಈ ಭೇಟಿಯ ನೇತೃತ್ವ … - [ತುಪ್ಪಕ್ಕಾಗಿ ಅತ್ತೆ ಸೊಸೆ ಜಗಳ:ಕೋಪಗೊಂಡ ಸೊಸೆ ವಿಷ ಸೇವಿಸಿ ಆತ್ಮಹತ್ಯೆ](https://kannadakaravali.com/%e0%b2%a4%e0%b3%81%e0%b2%aa%e0%b3%8d%e0%b2%aa%e0%b2%95%e0%b3%8d%e0%b2%95%e0%b2%be%e0%b2%97%e0%b2%bf-%e0%b2%85%e0%b2%a4%e0%b3%8d%e0%b2%a4%e0%b3%86-%e0%b2%b8%e0%b3%8a%e0%b2%b8%e0%b3%86-%e0%b2%9c): ಕನ್ನಡ ಕರಾವಳಿ ಸುದ್ದಿ:  ಮಹಿಳೆಯೊಬ್ಬರು ತುಪ್ಪದ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳವಾಡಿದ್ದು, ಬಳಿಕ ಪತಿ ಅವರ ತಾಯಿಗೆ ಸ್ವಲ್ಪ ಹೆಚ್ಚು ತುಪ್ಪ ನೀಡಿದ್ದಕ್ಕೆ ಕೋಪಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ವರದಿಯಾಗಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಇಮ್ಲೌಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೋನಮ್ ಜಾತವ್ ಮೃತ ಸೊಸೆ. ತಮ್ಮ ಇಚ್ಚೆಗೆ ವಿರುದ್ಧ ಪತಿ ತಾಯಿ ಹೆಚ್ಚು ತುಪ್ಪ ನೀಡಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪತಿ ಧನಪಾಲ್ ದೂರಿನ ಪ್ರಕಾರ, 2017ರಲ್ಲಿ ಸೋನಮ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಚಿಕ್ಕಮಕ್ಕಳಿದ್ದಾರೆ. ಅವಿಭಕ್ತ ಕುಟುಂಬದಲ್ಲಿನ ಸಮಸ್ಯೆಗಳಿಂದಾಗಿ ಸೋನಮ್ ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದರು. ಗುರುವಾರ ಬೆಳಿಗ್ಗೆ ಧನಪಾಲ್ ಅವರ ತಾಯಿ ಸೋನಮ್ ಅವರನ್ನು ಸ್ವಲ್ಪ ತುಪ್ಪ ಕೇಳಿದ್ದಾರೆ. ಆದರೆ ಆರಂಭದಲ್ಲಿ ಸೋನಮ್ ತುಪ್ಪ ಕೊಡಲು ನಿರಾಕರಿಸಿದ್ದಾರೆ. ಆದರೆ ಪತಿಯ ಒತ್ತಾಯದ ಮೇರೆಗೆ 100 ಗ್ರಾಂ ತುಪ್ಪವನ್ನು ನೀಡಿದ್ದಾರೆ. ಬಳಿಕ ಪತಿ ಮತ್ತಷ್ಟು ಹೆಚ್ಚುವರಿಯಾಗಿ ತಾಯಿ ತುಪ್ಪ ನೀಡಿದ್ದಾರೆ. ತನ್ನ ಇಚ್ಚೆಗೆ ವಿರುದ್ಧ ಪತಿ ಹೆಚ್ಚು ತುಪ್ಪ … - [ಆಸ್ತಿಗಾಗಿ ಅಣ್ಣ, ಅಣ್ಣನ ಮಕ್ಕಳು ಸೇರಿ ಮದುವೆ ಫಿಕ್ಸ್ ಆಗಿದ್ದ ತಮ್ಮನ ಭೀಕರ ಹತ್ಯೆ ](https://kannadakaravali.com/%e0%b2%86%e0%b2%b8%e0%b3%8d%e0%b2%a4%e0%b2%bf%e0%b2%97%e0%b2%be%e0%b2%97%e0%b2%bf-%e0%b2%85%e0%b2%a3%e0%b3%8d%e0%b2%a3-%e0%b2%85%e0%b2%a3%e0%b3%8d%e0%b2%a3%e0%b2%a8-%e0%b2%ae%e0%b2%95%e0%b3%8d): ಕನ್ನಡ ಕರಾವಳಿ ಸುದ್ದಿ: ಆಸ್ತಿಗಾಗಿ ಅಣ್ಣ, ಅಣ್ಣನ ಮಕ್ಕಳು ಸೇರಿ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಯೋಗೇಶ್ (35) ಎಂದು ಗುರುತಿಸಲಾಗಿದೆ. ಯೋಗೇಶನ ಅಣ್ಣ ಲಿಂಗರಾಜ, ಅಣ್ಣನ ಮಕ್ಕಳಾದ ಭರತ್, ದರ್ಶನ್ ಸೇರಿಕೊಂಡು ಹತ್ಯೆ ಮಾಡಿದ್ದಾರೆ. ಮೃತ ಯೋಗೇಶ್ ಮದುವೆ ಫಿಕ್ಸ್ ಆಗಿತ್ತು. ಬೆಳಿಗ್ಗೆ ಮನೆಯ ಕೊಟ್ಟಿಗೆಯಲ್ಲೇ ಹರಿತವಾದ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಆಸ್ತಿಗಾಗಿ ಸಹೋದರರ ನಡುವೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಇಂದು ಜಗಳ ವಿಕೋಪಕ್ಕೆ ತಿರುಗಿ ಹತ್ಯೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದುಬಂದಿದೆ. ಕೊಲೆ ಬಳಿಕ ಮೂವರು ಆರೋಪಿಗಳು ಪರಾರಿ ಆಗಿದ್ದಾರೆ. ಕೆರಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. - [ದೇವಸ್ಥಾನಕ್ಕೆಂದು ಹೊರಟ ಬಾಲಕನ ಸಾವಿನ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿರುವುದೇನು?](https://kannadakaravali.com/46487-2): ಕನ್ನಡ ಕರಾವಳಿ ಸುದ್ದಿ: ದೇವಸ್ಥಾನಕ್ಕೆಂದು ಹೊರಟು ಅಸಹಜವಾಗಿ ಸಾವನ್ನಪ್ಪಿದ ಓಡಿಲ್ನಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ (15)ನ ಮೃತದೇಹದ ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿ ಬಂದಿದ್ದು, ಪೊಲೀಸ್ ಆ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಆ ಪ್ರಕಾರ” ದಿನಾಂಕ 14-01-2026 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಓಡಿಲ್ನಾಳ ಗ್ರಾಮದ ಸಂಬೋಳ್ಯದ ಪ್ರಕರಣದಲ್ಲಿ ಮೃತ ಸುಮಂತ್ ಶವಪರೀಕ್ಷೆಯ ನಂತರ ಬಂದ ಪ್ರಾಥಮಿಕ ವರದಿಯ ಪ್ರಕಾರ, ಹುಡುಗನು ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದನು ಮತ್ತು ತಕ್ಷಣದ ಸಾವಿನ ಕಾರಣ ಮುಳುಗು ಸಾವಾಗಿರುತ್ತದೆ ಎಂದು ತಿಳಿಸಿದೆ. ಈ ವೇಳೆ ಬಾಲಕನ ತಲೆಗೆ ಮೂರು ಬಲವಾದ ಪೆಟ್ಟು ಬಿದ್ದಿರುವ ಗುರುತು ಕಂಡುಬಂದಿರುವುದಾಗಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣದ ಸಮಗ್ರ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯ ಕುರಿತ ಮಾಹಿತಿಗಳು ಲಭ್ಯವಾಗುತ್ತಿದ್ದು, ಬಾಲಕನ ತಲೆಗೆ ಕತ್ತಿ ಅಥವಾ ಇನ್ಯಾವುದೋ ಆಯುಧದಿಂದ ಬಲವಾದ ಮೂರು ಹೊಡೆತಗಳು ಬಿದ್ದಿವೆ. ಅರೆಪ್ರಜ್ಞಾವಸ್ಥೆಯಲ್ಲಿ ಆತ ಕೆರೆಗೆ ಬಿದ್ದಿರುವ ಸಾಧ್ಯತೆಯಿದೆ … - [ವೇಗವಾಗಿ ಹಣ ಸಂಪಾದಿಸುವ ಭರದಲ್ಲಿ ಅರ್ಧಕ್ಕೆ ಕಾಲೇಜು ಬಿಟ್ಟು ತಾಯಿ ಜತೆ ಆನ್‌ಲೈನ್ ವಂಚನೆಗಿಳಿದ ಯುವಕ](https://kannadakaravali.com/%e0%b2%b5%e0%b3%87%e0%b2%97%e0%b2%b5%e0%b2%be%e0%b2%97%e0%b2%bf-%e0%b2%b9%e0%b2%a3-%e0%b2%b8%e0%b2%82%e0%b2%aa%e0%b2%be%e0%b2%a6%e0%b2%bf%e0%b2%b8%e0%b3%81%e0%b2%b5-%e0%b2%ad%e0%b2%b0%e0%b2%a6): ಕನ್ನಡ ಕರಾವಳಿ ಸುದ್ದಿ: ಸೈಬರ್ ಅಪರಾಧಗಳು ಹೆಚ್ಚಾಗುತ್ತಿದೆ. ಜನರನ್ನು ತಮ್ಮ ಮೋಸದ ಬಲೆಗೆ ಬೀಳಿಸಿಕೊಂಡು ಕೋಟಿ ಕೋಟಿ ಹಣ ದೋಚುತ್ತಿದ್ದಾರೆ. ಇಂತಹ ಕೃತ್ಯದಲ್ಲಿ ಯುವಕರೇ ಹೆಚ್ಚು ಭಾಗಿಯಾಗುತ್ತಿದ್ದಾರೆ. ಅದರಲ್ಲೂ ಕಾಲೇಜು ಅರ್ಧದಲ್ಲಿ ಬಿಟ್ಟು, ಇಂತಹ ಕೃತ್ಯದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದೀಗ ವೇಗವಾಗಿ ಹಣ ಸಂಪಾದಿಸುವ ಭರದಲ್ಲಿ 22 ವರ್ಷದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ಪೊಲೀಸರು ನಡೆಸಿದ ಬೃಹತ್ ಸೈಬರ್ ಅಪರಾಧ ಕಾರ್ಯಾಚರಣೆ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಆನ್‌ಲೈನ್ ವಂಚನೆಗಳ ಮೂಲಕ ಕದ್ದ ಹಣವನ್ನು ಸ್ಥಳಾಂತರಿಸಲು ಬಳಸುತ್ತಿದ್ದ ಸಾವಿರಾರು ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಮೊಹಮ್ಮದ್ ಉಜೈಫ್ ಮತ್ತು ಅವನ ತಾಯಿ ಸಬಾನಾ ಅಬ್ದುಲ್ ಬಂಧಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಬಿಕಾಂ ಕೋರ್ಸ್ ಅರ್ಧಕ್ಕೆ ಬಿಟ್ಟ ಉಜೈಫ್, ಹಣ ಸಾಗಿಸುವ ದಲ್ಲಾಳಿಯಾಗಿ ಈ ವಂಚನೆ ಜಾಲದಲ್ಲಿ ಸೇರಿಕೊಳ್ಳುತ್ತಾನೆ. ತನ್ನ ತಾಯಿ ಸಹಾಯದಿಂದ, ಅವನು ಸುಮಾರು 4,200 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಇನ್ನು ಇವನ ಜತೆಗಿದ್ದ ಗುಂಪುಗಳು 9,000 ಅಂತಹದೇ … - [ಕಾರ್ಕಳ: ಬಾವಿಗೆ ಬಿದ್ದು ಸುರಂಗಕ್ಕೆ ಜಾರಿದ್ದ ವ್ಯಕ್ತಿಯ ರಕ್ಷಣೆ](https://kannadakaravali.com/%e0%b2%95%e0%b2%be%e0%b2%b0%e0%b3%8d%e0%b2%95%e0%b2%b3-%e0%b2%ac%e0%b2%be%e0%b2%b5%e0%b2%bf%e0%b2%97%e0%b3%86-%e0%b2%ac%e0%b2%bf%e0%b2%a6%e0%b3%8d%e0%b2%a6%e0%b3%81-%e0%b2%b8%e0%b3%81%e0%b2%b0): ಕನ್ನಡ ಕರಾವಳಿ ಸುದ್ದಿ: 50 ಅಡಿ ಬಾವಿಗೆ ಬಿದ್ದು ಸುರಂಗಕ್ಕೆ ಜಾರಿದ್ದ ವ್ಯಕ್ತಿಯನ್ನು ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಜ. 15ರಂದು ನಡೆದಿದೆ. ಮೂಡುಬಿದಿರೆ ತಾಲೂಕಿನ ಕಾರ್ಕಳ ಗಡಿಭಾಗದ ಪುತ್ತಿಗೆ ಪದವಿನ ಬಂಗ್ಲೆ ನಿವಾಸಿ ರಾಧಾಕೃಷ್ಣ ಬಾವಿಗೆ ಬಿದ್ದವರು. ಅವರು ರಾತ್ರಿ ಮನೆಗೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ 30 ಅಡಿಯ ಬಾವಿಗೆ ಬಿದ್ದಿರುತ್ತಾರೆ. ಈ ವೇಳೆ ಕತ್ತಲು ಆವರಿಸಿದ್ದ ಬಾವಿಯಲ್ಲಿ ಸಿಕ್ಕ ದಾರಿಯಲ್ಲಿ ಮೇಲೆ ಬರುತ್ತಿದ್ದೇನೆಂದು ಸಾಗಿದ ಅವರು ಸುಮಾರು 20 ಅಡಿಯ ಸುರಂಗದೊಳಗೆ ಒಳಗೆ ಹೋಗಿ ಅಲ್ಲಿನ ಗುಂಡಿಗೆ ಬಿದ್ದಿರುತ್ತಾರೆ. ಅದೃಷ್ಟವಶಾತ್ ಅಲ್ಲಿ ಮುಳುಗುವಷ್ಟು ನೀರಿರದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಿಗ್ಗೆ ಆ ದಾರಿಯಲ್ಲಿ ಸಾಗುತ್ತಿದ್ದವರಿಗೆ ಬಾವಿಯಲ್ಲಿ ಶಬ್ದ ಕೇಳಿ ಬರುತ್ತಿದ್ದು, ನಂತರ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿರುತ್ತಾರೆ. ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಅಗ್ನಿಶಾಮಕ ಸಿಬ್ಬಂದಿ ವ್ಯಕ್ತಿಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಸಿಬ್ಬಂದಿಯವರಾದ ಜಯಮೂಲ್ಯ ಮತ್ತು ರೂಪೇಶ್ ಇಡೂರಕರ್ ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಸುರಂಗದೊಳಗೆ … - [ಮನೆ ಪಾಯ ತೋಡುವಾಗ ಭಾರೀ ನಿಧಿ ಪತ್ತೆ ಬೆನ್ನಲ್ಲೇ ನಾಳೆಯಿಂದ ಪುರಾತತ್ವ ಉತ್ಖನನಕ್ಕೆ ಚಾಲನೆ](https://kannadakaravali.com/%e0%b2%ae%e0%b2%a8%e0%b3%86-%e0%b2%aa%e0%b2%be%e0%b2%af-%e0%b2%a4%e0%b3%8b%e0%b2%a1%e0%b3%81%e0%b2%b5%e0%b2%be%e0%b2%97-%e0%b2%ad%e0%b2%be%e0%b2%b0%e0%b3%80-%e0%b2%a8%e0%b2%bf%e0%b2%a7%e0%b2%bf): ಕನ್ನಡ ಕರಾವಳಿ ಸುದ್ದಿ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಇತ್ತೀಚೆಗೆ ಚಿನ್ನದ ನಿಧಿ ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ಕೇಂದ್ರ ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ಮತ್ತೊಂದು ಉತ್ಖನನ ಕಾರ್ಯ ಆರಂಭವಾಗಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತಿರುವ ಈ ಉತ್ಖನನವು ಶುಕ್ರವಾರ (ಜನವರಿ 16) ಬೆಳಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಅವರು ನೀಡಿರುವ ಮಾಹಿತಿಯಂತೆ, ಕೇಂದ್ರ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿ ಟಿ. ಎಂ. ಕೇಶವ್ ಅವರ ನೇತೃತ್ವದಲ್ಲಿ ಈ ಉತ್ಖನನ ನಡೆಯಲಿದೆ. ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸಹ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಗದಗ ಜಿಲ್ಲಾಡಳಿತವು ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಉತ್ಖನನವು ಸುಮಾರು 10 ಅಡಿ ಆಳದವರೆಗೆ ನಡೆಯಲಿದ್ದು, ದೇವಸ್ಥಾನದ ಮುಂದಿನ ಸಿದ್ಧರ ಬಾವಿಗೂ ಸಂಬಂಧಿಸಿದ ದಾಖಲೆಗಳಿವೆ ಎಂಬ ಮಾಹಿತಿ ಇದೆ. ಈ ಹಿಂದೆ ಸಿಂಧೂರ ಲಕ್ಷ್ಮಣ ನಾಟಕದ ಸಂದರ್ಭದಲ್ಲಿ ಗುಂಡಿ ಅಗೆದಾಗ ದೇವಸ್ಥಾನದ ಅವಶೇಷಗಳು ಪತ್ತೆಯಾಗಿದ್ದ … - [ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಸಾವು ](https://kannadakaravali.com/%e0%b2%88%e0%b2%9c%e0%b2%b2%e0%b3%81-%e0%b2%a4%e0%b3%86%e0%b2%b0%e0%b2%b3%e0%b2%bf%e0%b2%a6%e0%b3%8d%e0%b2%a6-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf): ಕನ್ನಡ ಕರಾವಳಿ ಸುದ್ದಿ: ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕನಕಪುರ ತಾಲೂಕಿನ ಕಬ್ಬಾಳು ಕೆರೆಯಲ್ಲಿ ನಡೆದಿದೆ. ಬನಶಂಕರಿ ಕಾಲೇಜಿನ ವಿದ್ಯಾರ್ಥಿಗಳಾದ ತನುಷ್ (18), ಸಂತೋಷ್ (19) ಮೃತಪಟ್ಟವರು. ಕಬ್ಬಾಳು ದೇವಾಲಯಕ್ಕೆ ಬನಶಂಕರಿ ಕಾಲೇಜಿನ 11 ವಿದ್ಯಾರ್ಥಿಗಳು ಬಂದು ದೇವಿ ದರ್ಶನದ ಬಳಿಕ ಕಬ್ಬಾಳು ಕೆರೆಯಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದು, ಆತನನ್ನ ರಕ್ಷಣೆ ಮಾಡಲು ಹೋದ ಮತ್ತೋರ್ವ ವಿದ್ಯಾರ್ಥಿ ಕೂಡಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಸಾತನೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರ್ಯಾಚರಣೆ ಬಳಿಕ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕನಕಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಮಾಜಿ ಪ್ರಿಯತಮೆಗೆ ಪ್ರೀತಿಸುವಂತೆ ಪೀಡನೆ:ಕೀ ಬಂಚ್ ಚಾಕುವಿನಿಂದ ಇರಿದು ಕೊಂದ ಪ್ರಿಯತಮ](https://kannadakaravali.com/%e0%b2%ae%e0%b2%be%e0%b2%9c%e0%b2%bf-%e0%b2%aa%e0%b3%8d%e0%b2%b0%e0%b2%bf%e0%b2%af%e0%b2%a4%e0%b2%ae%e0%b3%86%e0%b2%97%e0%b3%86-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%b8%e0%b3%81): ಕನ್ನಡ ಕರಾವಳಿ ಸುದ್ದಿ: ಸಾಲ ವಸೂಲಾತಿ ನೆಪದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ, ಮಹಿಳೆಯೊಂದಿಗೆ ಜಗಳವಾಡಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ರಸ್ತೆಯಲ್ಲಿ ಈ ಘಟನೆ ನಡೆದಿದೆ. 27 ವರ್ಷದ ಸುಜಾತ ಹತ್ಯೆಯಾದ ಮಹಿಳೆ. ಚಿರಂಜೀವಿ ಎಂಬಾತ ಈ ಕೊಲೆ ಮಾಡಿದ್ದಾನೆ. ಚಿರಂಜೀವಿ ಈ ಹಿಂದೆ ಸುಜಾತಳನ್ನು ಪ್ರೀತಿಸುತ್ತಿದ್ದ. ಆದರೆ ಸುಜಾತಾ ಆತನ ಪ್ರೀತಿ ನಿರಾಕರಿಸಿದ್ದಳು. ಬೇರೊಂದು ಮದುವೆಯಾಗಿ ಚನ್ನಾಗಿದ್ದಳು. ಈಕೆ ನರಸಾಪುರ ಕೈಗಾರಿಕಾ ಪ್ರದೇಶದ ‘ಬೆಲ್ರೈಸ್’ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿ ಕಳೆದ ಮೂರು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಯಳಬುರ್ಗಿ ಗ್ರಾಮದ ಹೊಸಕೋಟೆಯ ಖಾಸಗಿ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಚಿರಂಜೀವಿ ಬ್ಯಾಂಕ್ ವೊಂದರಲ್ಲಿ ಸಾಲ ವಸೂಲಾತಿ ಮಾಡುವ ಕೆಲಸ ಮಾಡುತ್ತಿದ್ದ. ಸಾಲ ವಸೂಲಾತಿ ನೆಪದಲ್ಲಿ ಮನೆಗೆ ಬಂದಿದ್ದಾಗ ಅದು ಸುಜಾತಾಳ ಮನೆ ಎಂದು ಗೊತಾಗಿದೆ. ಹೀಗೆ ಸುಜಾತಾಳ ಜೊತೆ ಮತ್ತೆ ಮಾತುಕತೆ ಆರಂಭವಾಗುತ್ತಿದ್ದಂತೆ ಮತ್ತೆ ಸುಜಾತಾಳಿಗೆ ತನ್ನನ್ನು ಪ್ರೀತಿಸುವಂತೆ ಪೀಡಿಸಲಾರಂಭಿಸಿದ್ದಾನೆ. ಸಾಲ ವಸೂಲಿ ಹೆಸರಲ್ಲಿ … - [ಮನೋಹರ್ ಉಪ್ಪುಂದ ಅವರಿಗೆ ಪಿಎಚ್‌ಡಿ ಪ್ರದಾನ](https://kannadakaravali.com/46460-2): ಕನ್ನಡ ಕರಾವಳಿ ಸುದ್ದಿ:  ಕೋಟೇಶ್ವರ–ಕುಂದಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಮನೋಹರ್ ಉಪ್ಪುಂದ ಅವರು ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಸಿ. ಕುಸುಮಾಕರ ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “Merger and Acquisition of Commercial Banks: A Study with Special Reference to the Merger of SBI and its Associates” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಶ್ರೀ ಮನೋಹರ್ ಉಪ್ಪುಂದ ಅವರು ಉಪ್ಪುಂದದ ಮತ್ಸ್ಯೋದ್ಯಮಿ ಶ್ರೀ ಈಶ್ವರ ಬಬ್ರಿ ಹಾಗೂ ಶ್ರೀಮತಿ ಧರ್ಮಾವತಿ ದಂಪತಿಗಳ ಪುತ್ರರಾಗಿದ್ದು, ಹಲವು ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ರ‍್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಶೈಕ್ಷಣಿಕ ಸಾಧನೆಯ ಜೊತೆಗೆ ಅವರು ಉತ್ತಮ ಕ್ರೀಡಾಪಟುವಾಗಿಯೂ ಗುರುತಿಸಿಕೊಂಡಿದ್ದಾರೆ. - [ನಟಿ ಕಾರುಣ್ಯ ರಾಮ್ ಸಹೋದರಿ ಸಮೃದ್ಧಿ ರಾಮ್ ವಿರುದ್ಧ 25 ಲಕ್ಷ ವಂಚನೆ ಪ್ರಕರಣ ದಾಖಲು ](https://kannadakaravali.com/%e0%b2%a8%e0%b2%9f%e0%b2%bf-%e0%b2%95%e0%b2%be%e0%b2%b0%e0%b3%81%e0%b2%a3%e0%b3%8d%e0%b2%af-%e0%b2%b0%e0%b2%be%e0%b2%ae%e0%b3%8d-%e0%b2%b8%e0%b2%b9%e0%b3%8b%e0%b2%a6%e0%b2%b0%e0%b2%bf-%e0%b2%b8): ಕನ್ನಡ ಕರಾವಳಿ ಸುದ್ದಿ: ಕನ್ನಡದ ಖ್ಯಾತ ನಟಿ ಕಾರುಣ್ಯ ರಾಮ್ ತನ್ನ ತಂಗಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ಕಾರುಣ್ಯ ರಾಮ್ ಸಹೋದರಿ ಸಮೃದ್ಧಿ ರಾಮ್ ವಿರುದ್ಧ 25 ಲಕ್ಷ ವಂಚನೆ ಪ್ರಕರಣ ದಾಖಲಿಸಿದ್ದಾರೆ. ತಂಗಿ ಸಮೃದ್ಧಿ ರಾಮ್, ಪ್ರತಿಭಾ, ಕಪಿಲ್, ಪ್ರಜ್ವಲ್, ರಕ್ಷಿತ್ ಹಾಗೂ ಸಾಗರ್ ಎಂಬುವವರ ವಿರುದ್ಧ ಕಾರುಣ್ಯ ರಾಮ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರಿ ಸಮೃದ್ಧಿ ರಾಮ್, ಮೇಕಪ್ ಆರ್ಟಿಸ್ಟ್ ಆಗಿದ್ದು, ಬೆಟ್ಟಿಂಗ್ ನಲ್ಲಿ 25 ಲಕ್ಷ ಹಣ ಕಳೆದುಕೊಂಡಿದ್ದಾಳೆ. ಸಾಲ ಮಾಡಿಕೊಂಡಿದ್ದು, ವ್ಯವಹಾರದಲ್ಲಿಯೂ ಅಪಾರ ನ್ಬಷ್ಟ ಅನುಭವಿಸಿದ್ದಾಳೆ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದುಕೊಂಡಿದ್ದರಿಂದ ಸಾಲಗಾರರು ಮನೆ ಬಳಿ ಬಂದು ಕಾಟಕೊಡುತ್ತಿದ್ದಾರೆ. ಅಲ್ಲದೇ ಸಾಲ ತೀರಿಸಲು ಮನೆಯಲ್ಲಿದ್ದ ಹಣ, ಚಿನ್ನವನ್ನು ಬಳಸಿಕೊಂಡು ವಂಚಿಸಿದ್ದಾಳೆ. ನನ್ನ ಹಣವನ್ನು ಬಳಸಿಕೊಂಡಿದ್ದಕ್ಕೆ ಪ್ರಶ್ನೆ ಮಾಡಿದ್ದಕ್ಕೆ ಸಮೃದ್ಧಿ, ನನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ. ವಾಟ್ಸಪ್ ನಲ್ಲಿ ಅಶ್ಲೀಲ ಸಂದೇಶ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿ ನಿಂದಿಸುವುದು … - [ಪೊಲೀಸ್ ಪೇದೆಯ ಕೊಂದು ಅನುಕಂಪದ ನೌಕರಿ ಪಡೆಯೊದಕ್ಕೆ ಊಟಕ್ಕೆ ವಿಷ ಬೆರೆಸಿ ಪತಿ ಕೊಲ್ಲಲು ಪತ್ನಿ ಪ್ಲಾನ್ !](https://kannadakaravali.com/%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%aa%e0%b3%87%e0%b2%a6%e0%b3%86%e0%b2%af-%e0%b2%95%e0%b3%8a%e0%b2%82%e0%b2%a6%e0%b3%81-%e0%b2%85%e0%b2%a8%e0%b3%81%e0%b2%95%e0%b2%82): ಕನ್ನಡ ಕರಾವಳಿ ಸುದ್ದಿ:  ಬೀದರ್ ಜಿಲ್ಲೆಯಲ್ಲಿ ಪೊಲೀಸ್ ಕಾನ್ಸಟೇಬಲ್ ವಿರುದ್ಧ ಆತನ ಪತ್ನಿಯೇ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಳು. ಈಗ ಈ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ವಿರುದ್ಧ ಆತನ ಪತ್ನಿ ಮಾಡಿದ್ದ ಆರೋಪ ಸುಳ್ಳೆಂದು ಮಚೇಂದ್ರ ಹೇಳಿದ್ದಾರೆ. ಅನುಕಂಪದ ನೌಕರಿ ಪಡೆಯೊದಕ್ಕೆ ಊಟಕ್ಕೆ ವಿಷ ಬೆರೆಸಿ ಪತಿ ಕೊಲ್ಲಲು ಪತ್ನಿ ಪ್ಲಾನ್ ಮಾಡಿದ್ದಳು ಎಂದು ಪೊಲೀಸ್ ಕಾನ್ಸಟೇಬಲ್ ಮಚೇಂದ್ರ ಆರೋಪಿಸಿದ್ದಾರೆ. ಪತ್ನಿ ಸೀನಾ ವಿರುದ್ಧ ಪೊಲೀಸ್ ಕಾನ್ಸ್‌ಟೇಬಲ್ ಮಚೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಪತಿ ಕೊಂದು, ಅನುಕಂಪದ ನೌಕರಿ ಪಡೆಯಬೇಕೆಂಬ ದುರುದ್ದೇಶದಿಂದ ನಾಟಕ ಮಾಡ್ತಿದ್ದಾಳೆಂದು ಆರೋಪ ಮಾಡಿದ್ದಾರೆ. ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಾ ಇದ್ದರೂ, ಕೇರ್ ಮಾಡಿಲ್ಲ ಎಂದು ಪತ್ನಿ ವಿರುದ್ದ ಮಚೇಂದ್ರ ಆರೋಪಿಸಿದ್ದಾರೆ. ಸೆಟಲ್‌ಮೆಂಟ್ ಅಂತಾ ಕರೆದು ಹಲ್ಲೆ‌ ಮಾಡಿದ್ದಾರೆಂದು ಪತ್ನಿ ಕುಟುಂಬಸ್ಥರ ವಿರುದ್ದ ಪತಿ ಮಚೇಂದ್ರ ಆರೋಪಿಸಿದ್ದಾರೆ. ಹುಮನಾಬಾದ್ ತಾಲೂಕಾ ಪಂಚಾಯತ್ ಕಚೇರಿ ಹತ್ತಿರ ಹಲ್ಲೆ ಮಾಡಿದ್ರು ಎಂದು ಪತಿ ಮಚೇಂದ್ರ ಆರೋಪಿಸಿದ್ದಾರೆ. … - [ದೇವಸ್ಥಾನಕ್ಕೆ ಹೋದ ಬಾಲಕನ ಶವ ಪತ್ತೆ, ತಲೆಗೆ ಏಟು, ಕೊಲೆ ಶಂಕೆ!](https://kannadakaravali.com/%e0%b2%a6%e0%b3%87%e0%b2%b5%e0%b2%b8%e0%b3%8d%e0%b2%a5%e0%b2%be%e0%b2%a8%e0%b2%95%e0%b3%8d%e0%b2%95%e0%b3%86-%e0%b2%b9%e0%b3%8b%e0%b2%a6-%e0%b2%ac%e0%b2%be%e0%b2%b2%e0%b2%95%e0%b2%a8-%e0%b2%b6): ಕನ್ನಡ ಕರಾವಳಿ ಸುದ್ದಿ :ದಕ್ಷಿಣ ಕನ್ನಡದಲ್ಲಿ ಘೋರ ದುರಂತ ನಡೆದಿದ್ದು, ದೇವಸ್ಥಾನಕ್ಕೆಂದು ಹೋಗಿದ್ದ ಬಾಲಕನ ಶವ ಸಂಶಯಾಸ್ಪದ ರೀತಿಯಲ್ಲಿ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಸಂಬೋಳ್ಯ ಎಂಬಲ್ಲಿ ನಡೆದಿದೆ. ಸಂಬೋಳ್ಯ ಎಂಬಲ್ಲಿಯ ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲಾ ಒಂಬತ್ತನೇ ತರಗತಿ ವಿದ್ಯಾರ್ಥಿ ಸುಮಂತ್ (15) ಎಂದಿನಂತೆ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಧನು ಪೂಜೆಗಾಗಿ ಬೆಳಗ್ಗೆ 5ರ ಸುಮಾರಿಗೆ ಮನೆಯಿಂದ ತೆರಳಿದ್ದಾನೆ. ಆದರೆ ಅತ್ತ ದೇವಸ್ಥಾನಕ್ಕೂ ಹೋಗದೆ, ಮನೆಗೂ ಹಿಂದಿರುಗದೇ ಇದ್ದಾಗ ಮನೆಯವರು ಗಾಬರಿಗೊಂಡು ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬಾಲಕ ಹೋಗಿದ್ದ ದಾರಿಯಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಚಿರತೆ ಕೊಂಡೊಯ್ದಿರಬಹುದು ಎಂಬ ಸಂಶಯ ಸ್ಥಳೀಯರಲ್ಲಿ ಮೂಡಿತ್ತು. ತಕ್ಷಣ ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ತಲೆಯ ಹಿಂಭಾಗ ಗಂಭೀರ ರೀತಿಯಲ್ಲಿ ಎರಡು ಗಾಯ … - [ಟೆಕ್ಕಿ ಶರ್ಮಿಳಾ ಸಾವಿಗೆ ಸ್ಪೋಟಕ ಟ್ವಿಸ್ಟ್..! ಒನ್ ಸೈಡ್ ಲವ್ ಹೊಂದಿದ್ದ ವಿದ್ಯಾರ್ಥಿ ಅರೆಸ್ಟ್!](https://kannadakaravali.com/%e0%b2%9f%e0%b3%86%e0%b2%95%e0%b3%8d%e0%b2%95%e0%b2%bf-%e0%b2%b6%e0%b2%b0%e0%b3%8d%e0%b2%ae%e0%b2%bf%e0%b2%b3%e0%b2%be-%e0%b2%b8%e0%b2%be%e0%b2%b5%e0%b2%bf%e0%b2%97%e0%b3%86-%e0%b2%b8%e0%b3%8d): ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ನಗರದ ರಾಮಮೂರ್ತಿ ನಗರದಲ್ಲಿ ನಡೆದ ಟೆಕ್ಕಿ ಶರ್ಮಿಳಾ ಕೊಲೆ ಪ್ರಕರಣದಲ್ಲಿ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಆದರೆ ತನಿಖೆ ವೇಳೆ ಈತ ನೀಡಿರುವ ಹಲವು ಹೇಳಿಕೆಗಳು ಪೊಲೀಸರನ್ನೇ ಬೆಚ್ಚಿಬೀಳಿಸುವಂತಿವೆ. ಆರೋಪಿಯು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಅಂಕ ಗಳಿಸಿದ್ದ ಪ್ರತಿಭಾವಂತ ಎಂಬ ಅಂಶವೂ ಇದೀಗ ಬೆಳಕಿಗೆ ಬಂದಿದೆ. ಆರೋಪಿ ಕಳೆದ ಎರಡು ತಿಂಗಳಿನಿಂದ ಯುವತಿಯ ಚಲನವಲನವನ್ನು ನಿತ್ಯ ಗಮನಿಸುತ್ತಿದ್ದ. ಓದುವ ನೆಪದಲ್ಲಿ ಹಾಗೂ ಬಟ್ಟೆ ತೊಳೆಯುವ ನೆಪದಲ್ಲಿ ಟೆರೇಸ್‌ಗೆ ಹೋಗುತ್ತಿದ್ದ ಆತ, ಯುವತಿಯ ಮನೆ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದ. ಆರೋಪಿ ಮತ್ತು ಯುವತಿ ನಡುವೆ ಈ ಹಿಂದೆ ಯಾವುದೇ ಪರಿಚಯವೂ ಇರಲಿಲ್ಲ. ಇದೇ ಮೊದಲ ಬಾರಿಗೆ ಆತ ಶರ್ಮಿಳಾ ಮನೆಗೆ ಪ್ರವೇಶಿಸಿದ್ದ. ಮನೆಯ ಬಾಲ್ಕನಿಯ ಸ್ಲೈಡಿಂಗ್ ಕಿಟಕಿ ಮೂಲಕ ಆತ ಒಳನುಗ್ಗಿರುವುದು ಗೊತ್ತಾಗಿದೆ. ಆರೋಪಿ ಕರ್ನಲ್ ಕುರೈ ತುಂಬಾ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.97 ಪರ್ಸೆಂಟ್ ಅಂಕ ಪಡೆದಿದ್ದು, ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಿದ್ದ. ಆರೋಪಿ ಕರ್ನಲ್ ಹಾಗೂ ಆತನ … - [ಬ್ರಹ್ಮಾವರ ಸೀತಾ ನದಿಯ ಅಣೆಕಟ್ಟಿನ ನೀರಿನಲ್ಲಿ  ಮುಳುಗಿ ಸಾವು](https://kannadakaravali.com/%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%be%e0%b2%b5%e0%b2%b0-%e0%b2%b8%e0%b3%80%e0%b2%a4%e0%b2%be-%e0%b2%a8%e0%b2%a6%e0%b2%bf%e0%b2%af-%e0%b2%85%e0%b2%a3%e0%b3%86%e0%b2%95): ಕನ್ನಡ ಕರಾವಳಿ ಸುದ್ದಿ: ನಡೂರು ಅಲೆಯ ಬಳಿ ಸೀತಾ ನದಿಯ ಅಣೆಕಟ್ಟಿನ ನೀರಿನಲ್ಲಿ ಮುಳುಗಿ ಸ್ಥಳೀಯ ನಿವಾಸಿ ದೇವರಾಜ (35) ಅವರು ಮೃತಪಟ್ಟಿದ್ದಾರೆ. ಅವರು ಮಂಗಳವಾರ ಸ್ನಾನ ಮಾಡುವಾಗ ಮುಳುಗಿದ್ದು, ಬುಧವಾರ ಮೃತದೇಹ ದೊರೆತಿದೆ. ಅವರು ಅವಿವಾಹಿತರಾಗಿದ್ದು, ಕೂಲಿ ಕೆಲಸಕ್ಕೆ ಮಾಡುತ್ತಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಕುತ್ತಿಗೆಗೆ ಗಾಳಿಪಟ ದಾರ ಸಿಲುಕಿ ವ್ಯಕ್ತಿ ಸಾವು ](https://kannadakaravali.com/%e0%b2%95%e0%b3%81%e0%b2%a4%e0%b3%8d%e0%b2%a4%e0%b2%bf%e0%b2%97%e0%b3%86%e0%b2%97%e0%b3%86-%e0%b2%97%e0%b2%be%e0%b2%b3%e0%b2%bf%e0%b2%aa%e0%b2%9f-%e0%b2%a6%e0%b2%be%e0%b2%b0-%e0%b2%b8%e0%b2%bf): ಕನ್ನಡ ಕರಾವಳಿ ಸುದ್ದಿ: ಸಂಕ್ರಾಂತಿ ಹಬ್ಬಕ್ಕೆ ಮಗಳನ್ನು ಕರೆಯಲು ಬೈಕ್ ನಲ್ಲಿ ಹೋಗುತ್ತಿದ್ದಾಗ ಗಾಳಿಪಟದ ದಾರ ಕುತ್ತಿಗೆ ಸೀಳಿದ್ದರಿಂದ ವ್ಯಕ್ತಿ ಮೃತಪಟ್ಟ ದಾರುಣ ಘಟನೆ ಬೀದರ್ ನಲ್ಲಿ ಸಂಭವಿಸಿದೆ. ಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ ಹೊಸಮನಿ (48) ಗಾಳಿಪಟ್ಟ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟವರು, ಪತ್ನಿ,ಪುತ್ರ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಹುಮನಾಬಾದ್‌ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕೊಯ್ದಿದೆ. ಕುತ್ತಿಗೆ ಸೀಳಿ ರಕ್ತ ಹರಿಯುತ್ತಿದ್ದು, ಕೂಡಲೇ ಗುಂಡಪ್ಪ ಮಗಳಿಗೆ ಕರೆ ಮಾಡಿ ಸಹಾಯ ಪಡೆಯಲು ಯತ್ನಿಸಿದ್ದಾರೆ. ಆದರೆ ಗಾಳಿಪಟ ದಾರ ಕುತ್ತಿಗೆ ಆಳಕ್ಕೆ ಕೊಯ್ದಿದ್ದರಿಂದ ಅತೀವ ರಕ್ತಸ್ರಾವಕ್ಕೆ ಒಳಗಾಗಿದ್ದಾರೆ. ಈ ವೇಳೆ ಇದೇ ದಾರಿಯಲ್ಲಿ ಬಂದ ವ್ಯಕ್ತಿಯೊಬ್ಬರು ಕುತ್ತಿಗೆಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಯತ್ನಿಸಿದ್ದು, ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಆಂಬುಲೆನ್ಸ್ ತಡವಾಗಿ ಬಂದಿದ್ದರಿಂದ ಗುಂಡಪ್ಪ ಸ್ಥಳದಲ್ಲೇ ಅಸುನೀಗಿದ್ದಾರೆ. … - [ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ಕಾಟ, ನಾಯಿ ಕಡಿತದಿಂದ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ:ಸುಪ್ರೀಂ ಕೋರ್ಟ್](https://kannadakaravali.com/%e0%b2%a6%e0%b2%bf%e0%b2%a8%e0%b3%87-%e0%b2%a6%e0%b2%bf%e0%b2%a8%e0%b3%87-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81%e0%b2%a4%e0%b3%8d%e0%b2%a4%e0%b2%bf%e0%b2%b0%e0%b3%81%e0%b2%b5): ಕನ್ನಡ ಕರಾವಳಿ ಸುದ್ದಿ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯಿಂದ ಸಂಭವಿಸುತ್ತಿರುವ ಸಾವುಗಳ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಅತ್ಯಂತ ಕಠಿಣ ನಿಲುವು ತೆಗೆದುಕೊಂಡಿದ್ದು, ನಾಯಿ ಕಡಿತದಿಂದ ಉಂಟಾಗುವ ಪ್ರತಿಯೊಂದು ಸಾವಿಗೂ ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಾ, ಯಾರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೋ, ಆ ನಾಯಿಗಳು ಯಾರನ್ನಾದರೂ ಕಚ್ಚಿದರೆ, ಆ ಘಟನೆಗೆ ಆಹಾರ ನೀಡುವವರೇ ನೇರ ಹೊಣೆಯಾಗುತ್ತಾರೆ ಎಂದು ತಿಳಿಸಿದೆ. ಎಬಿಸಿ ನಿಯಮಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಈ ವಿಚಾರದ ಕುರಿತು ನಾವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳಲಿದ್ದೇವೆ. ಈ ವಿಷಯವು ಶಾಶ್ವತವಾಗಿ ಮುಂದುವರೆದಿದ್ದು, 1950 ರ ದಶಕದಿಂದಲೂ ಸಂಸತ್ತು ಈ ವಿಚಾರದ ಬಗ್ಗೆ ಉಲ್ಲೇಖಿಸುತ್ತಿದೆ. ಆದರೂ, ಕೇಂದ್ರ ಮತ್ತು ರಾಜ್ಯ … - [ಕೊರಳಿನಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿ ಮಹಿಳೆ ದಾರುಣ ಸಾವು ](https://kannadakaravali.com/%e0%b2%95%e0%b3%8a%e0%b2%b0%e0%b2%b3%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf%e0%b2%a6%e0%b3%8d%e0%b2%a6-%e0%b2%b6%e0%b2%be%e0%b2%b2%e0%b3%81-%e0%b2%97%e0%b3%8d%e0%b2%b0%e0%b3%88%e0%b2%82): ಕನ್ನಡ ಕರಾವಳಿ ಸುದ್ದಿ: ಗೃಹಿಣಿಯ ಕೊರಳಿನಲ್ಲಿದ್ದ ಶಾಲು  ಗ್ರೈಂಡರ್‌ಗೆ ಸಿಲುಕಿ ಮಹಿಳೆಯೋರ್ವರು ದಾರುಣವಾಗಿ ಮೃತಪಟ್ಟ ಘಟನೆ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ವರ್ಕಾಡಿ ಪಂಚಾಯತಿನ ಕಲ್ಮಂಜ ಗ್ರಾಮದ ಅಬ್ದುಲ್ಲ ಖಾದ‌ರ್ ಅವರ ಪತ್ನಿ ಮೈಮೂನ ( 40) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮೈಮೂನ ಅವರು ಗ್ರೈಂಡರ್‌ ನಲ್ಲಿ ಮೆಣಸು ಕಡೆಯುವಾಗ ಈ ಅನಾಹುತ ಸಂಭವಿಸಿದೆ. ಅಪಾಯಕ್ಕೆ ಸಿಲುಕಿದ್ದ ಅವರನ್ನು ಕೂಡಲೇ ಕೋಣಾಜೆ ಬಳಿಯ ಕಣಚೂರು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಮೃತಪಟ್ಟಿದ್ದರು. ಈ ಸಂಬಂಧ ಮಂಜೇಶ್ವರ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿದ್ದಾರೆ. - [ಧನುಪೂಜೆಗಾಗಿ ಹೊರಟಿದ್ದ ವಿದ್ಯಾರ್ಥಿ ನಿಗೂಢ ನಾಪತ್ತೆ: ಬಾವಿಯಲ್ಲಿ ಬಾಲಕನ ಶವ ಪತ್ತೆ!](https://kannadakaravali.com/%e0%b2%a7%e0%b2%a8%e0%b3%81%e0%b2%aa%e0%b3%82%e0%b2%9c%e0%b3%86%e0%b2%97%e0%b2%be%e0%b2%97%e0%b2%bf-%e0%b2%b9%e0%b3%8a%e0%b2%b0%e0%b2%9f%e0%b2%bf%e0%b2%a6%e0%b3%8d%e0%b2%a6-%e0%b2%b5%e0%b2%bf%e0%b2%a6): ಕನ್ನಡ ಕರಾವಳಿ ಸುದ್ದಿ: ಧನುಪೂಜೆಗಾಗಿ ಮುಂಜಾನೆ ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದ 15 ವರ್ಷದ ಬಾಲಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿ, ಬಳಿಕ ತೋಟದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ. ಓಡಿಲ್ನಾಳ ಗ್ರಾಮದ ಸಂಬೋಳ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15) ಮೃತಪಟ್ಟ ದುರ್ದೈವಿ. ಸುಮಂತ್ ಬುಧವಾರ ಮುಂಜಾನೆ ನಾಳ ದೇವಸ್ಥಾನದಲ್ಲಿ ನಡೆಯುವ ಧನುಪೂಜೆಯಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಟಿದ್ದನು. ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕ ಬರುತ್ತಿದ್ದ ದಾರಿಯ ಮಧ್ಯೆ ಇರುವ ಕೆರೆಯೊಂದರ ಬಳಿ ರಕ್ತದ ಕಲೆಗಳು ಕಂಡುಬಂದಿದ್ದು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ತಂಡೋಪತಂಡವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದರು.ಅಂತಿಮವಾಗಿ ಸಮೀಪದ ತೋಟವೊಂದರ ಬಾವಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ:ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (BEO) … - [ಬಸ್‌ ಮತ್ತು ಕಾರಿನ ನಡುವೆ ಭೀಕರ ಅಪಘಾತ:ಮೂವರು ಸಾವು ](https://kannadakaravali.com/%e0%b2%ac%e0%b2%b8%e0%b3%8d-%e0%b2%ae%e0%b2%a4%e0%b3%8d%e0%b2%a4%e0%b3%81-%e0%b2%95%e0%b2%be%e0%b2%b0%e0%b2%bf%e0%b2%a8-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%ad%e0%b3%80): ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗದ ತೀರ್ಥಹಳ್ಳಿಯ ಭಾರತಿಪುರ ಕ್ರಾಸ್‌ ಬಳಿ KSRTC ಬಸ್‌ ಮತ್ತು ಕಾರಿನ ನಡುವೆ ಭೀಕರ ಅಪಘಾತ ಆಗಿ ಮೂವರು ಮೃತಪಟ್ಟಿದ್ದಾರೆ. ರಿಯಾಜ್ ಅಹಮದ್ ಹಾಗೂ ಫಾತಿಮಾ ಮೃತರು. ಮಗು, ಕಾರಿನ ಚಾಲಕ ಮತ್ತು ಪಕ್ಕದ ಸೀಟಿನಲ್ಲಿದ್ದ ಮಹಿಳೆ ಮೃತಪಟ್ಟಿದ್ದು ಕಾರಿನಲ್ಲಿದ್ದ ಉಳಿದ ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರೆಲ್ಲರೂ ಚನ್ನಗಿರಿಯಲ್ಲಿ ಮದುವೆ ಕಾರ್ಯಕ್ರಮ ಮುಗಿಸಿ, ವಾಪಸ್‌ ಕಿಗ್ಗಾಕ್ಕೆ ಹೋಗುತ್ತಿದ್ದರು. ಮಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುತ್ತಿದ್ದ ಬಸ್‌ ಡಿಕ್ಕಿಯಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕೇಸ್‌ ದಾಖಲಿಸಿಕೊಂಡಿದ್ದಾರೆ. ಚೆನ್ನಗಿರಿಯಿಂದ ಶೃಂಗೇರಿ ಕಡೆಗೆ ಸ್ವಿಫ್ಟ್ ಕಾರಿನಲ್ಲಿ 6 ಜನರು ತೆರಳುತ್ತಿದ್ದರೆ ಮಂಗಳೂರಿನಿಂದ ರಾಯಚೂರು ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುತ್ತಿತ್ತು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದರೆ ಬಸ್ಸಿನ ಮುಂಭಾಗಕ್ಕೆ ಹಾನಿಯಾಗಿದೆ. - [ಬೀದಿನಾಯಿ ದಾಳಿಗೆ ಗಂಭೀರ ಗಾಯಗೊಂಡ 10 ವರ್ಷದ ಬಾಲಕಿ ಸಾವು ](https://kannadakaravali.com/%e0%b2%ac%e0%b3%80%e0%b2%a6%e0%b2%bf%e0%b2%a8%e0%b2%be%e0%b2%af%e0%b2%bf-%e0%b2%a6%e0%b2%be%e0%b2%b3%e0%b2%bf%e0%b2%97%e0%b3%86-%e0%b2%97%e0%b2%82%e0%b2%ad%e0%b3%80%e0%b2%b0-%e0%b2%97%e0%b2%be): ಕನ್ನಡ ಕರಾವಳಿ ಸುದ್ದಿ: ಬೀದಿನಾಯಿ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 10 ವರ್ಷದ ಅಲೈನಾ ಲೋಕಾಪುರ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಬಾಲಕಿ. ಬಾಗಲಕೋಟೆ ಜಿಲ್ಲೆಯ ನವನಗರದ ಸೆಕ್ಟರ್ ನಂ.15ರಲ್ಲಿ ಬಾಲಕಿ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಬಾಲಕಿಯ ಕಣ್ಣು, ಮೂಗು, ಮುಖದ ಮೇಲೆ ಗಂಭೀರ ಗಾಯಗಳಾಗಿದ್ದವು. ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ಸ್ಥಳಾಂತರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಬಾಲಕಿ ಸಾವನ್ನಪ್ಪಿದ್ದಾಳೆ. - [ಕುಕ್ಕೆ ಸುಬ್ರಹ್ಮಣ್ಯ, ಕಡಬ, ಸುಳ್ಯ ಸುತ್ತಮುತ್ತ ಗುಡುಗು–ಮಿಂಚು ಸಹಿತ ಭಾರಿ ಅಕಾಲಿಕ ಮಳೆ](https://kannadakaravali.com/%e0%b2%95%e0%b3%81%e0%b2%95%e0%b3%8d%e0%b2%95%e0%b3%86-%e0%b2%b8%e0%b3%81%e0%b2%ac%e0%b3%8d%e0%b2%b0%e0%b2%b9%e0%b3%8d%e0%b2%ae%e0%b2%a3%e0%b3%8d%e0%b2%af-%e0%b2%95%e0%b2%a1%e0%b2%ac-%e0%b2%b8): ಕನ್ನಡ ಕರಾವಳಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ, ಕಡಬ, ಸುಳ್ಯ ಸುತ್ತಮುತ್ತ ಇಂದು ಅಕಾಲಿಕ ಮಳೆ ಸುರಿದಿದ್ದು, ಸಂಕ್ರಾಂತಿ ಸಂಭ್ರಮಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಕುಕ್ಕೆ ಸುಬ್ರಹ್ಮಣ್ಯ, ಕಡಬ(ದಕ್ಷಿಣ ಕನ್ನಡ): ವಾಯುಭಾರ ಕುಸಿತದ ಪರಿಣಾಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸುತ್ತಮುತ್ತ  ಮಂಗಳವಾರ ಸಂಜೆ ಗುಡುಗು–ಮಿಂಚು ಸಹಿತ ಭಾರಿ ಅಕಾಲಿಕ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು. ಮಕರ ಸಂಕ್ರಾಂತಿ ಹಬ್ಬದ ಮುನ್ನಾದಿನವೇ ಸುರಿದ ಈ ಮಳೆ ಕುಕ್ಕೆಗೆ ಆಗಮಿಸಿದ ಭಕ್ತರು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ತೀವ್ರ ಅಸೌಕರ್ಯ ಉಂಟುಮಾಡಿತು. ಕುಮಾರ ಪರ್ವತದ ತಪ್ಪಲಿನ ಪ್ರದೇಶಗಳನ್ನು ಒಳಗೊಂಡಂತೆ ಕಡಬ, ನೆಟ್ಟಣ, ಕುಕ್ಕೆ ಸುಬ್ರಹ್ಮಣ್ಯ, ಕೋಡಿಂಬಾಳ, ಪಂಜ ಸೇರಿದಂತೆ ಸುಳ್ಯ ತಾಲೂಕಿನ ಹಲವೆಡೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡವು. ಸಂಜೆ ವೇಳೆ ದಿಢೀರನೆ ಅಬ್ಬರಿಸಿದ ಮಳೆರಾಯನಿಂದಾಗಿ ಕಚೇರಿಯಿಂದ ಮನೆಗೆ ಮರಳುತ್ತಿದ್ದವರು ಹಾಗೂ ವಾಹನ ಸವಾರರು ಪರದಾಡುವಂತಾಯಿತು. 2026ರ ಹೊಸ … - [ತಾಳಮದ್ದಳೆ ಕಲಾವಿದರ ಅವಹೇಳನ: ಕ್ಷಮೆಯಾಚನೆಗೆ ಆಗ್ರಹ](https://kannadakaravali.com/%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6%e0%b2%b3%e0%b3%86-%e0%b2%95%e0%b2%b2%e0%b2%be%e0%b2%b5%e0%b2%bf%e0%b2%a6%e0%b2%b0-%e0%b2%85%e0%b2%b5%e0%b2%b9%e0%b3%87%e0%b2%b3%e0%b2%a8): ಕನ್ನಡ ಕರಾವಳಿ ಸುದ್ದಿ: ನಾಡಿನ ಶ್ರೇಷ್ಠ ಕಲೆಯಾಗಿರುವ ತಾಳ ಮದ್ದಳೆ ಹಾಗೂ ಅರ್ಥಧಾರಿಗಳ ಬಗ್ಗೆ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿರುವ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ತಾಳ ಮದ್ದಳೆ ಕಲಾವಿದರು ಆಗ್ರಹಿಸಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತಾಳಮದ್ದಳೆ ಕಲಾವಿದರು, ವಿಶ್ವೇಶ್ವರ ಭಟ್ ಅವರು ತಮ್ಮ ಪತ್ರಿಕೆಯ ‘ಭಟ್ಟರ್ ಸ್ಕಾಚ್’ ಪ್ರಶೋತ್ತರ ಅಂಕಣದಲ್ಲಿ ಯಕ್ಷಗಾನ ವಿದ್ವಾಂಸ, ಖ್ಯಾತ ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ವಿರುದ್ದ ತಾಳಮದ್ದಳೆ ಅರ್ಥಧಾರಿಗಳ ಕುರಿತು ನಿರಂತರವಾಗಿ ಅಸಂಬದ್ಧ, ಅವಮಾನಕಾರಿ ಬರಹಗಳನ್ನು ಬರೆಯುತ್ತಿದ್ದಾರೆ ಎಂದವರು ಅಸಮಾಧಾನ ಹೊರ ಹಾಕಿದರು. ನಾವು ಅರ್ಥಧಾರಿಗಳೆಂಬ ಕಾರಣಕ್ಕೆ ನಮ್ಮ ಬಗ್ಗೆ ಏನು ಹೇಳಿದರೂ ಅದು ವಿಮರ್ಶೆ ಎಂಬ ಹೆಸರಿನಲ್ಲಿ ಸಹಿಸಲೇಬೇಕು ಎಂಬ ತಾತ್ಸಾರ ಧೋರಣೆ ಸಮಾಜದಲ್ಲಿ ಮೂಡಬಾರದು. ಪತ್ರಕರ್ತರಾದ ವಿಶ್ವೇಶ್ವರ ಭಟ್ಟರು ಪತ್ರಿಕಾ ಧರ್ಮವನ್ನು ಮೀರಿದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ, ಕಲೆ ಮತ್ತು … - [ನಾಯಕತ್ವ ಬದಲಾವಣೆ; ಜ.19ಕ್ಕೆ ಡಿಕೆಶಿ, ಜ.21ಕ್ಕೆ ಸಿದ್ದರಾಮಯ್ಯ ಮತ್ತೆ ದೆಹಲಿಯಾತ್ರೆ](https://kannadakaravali.com/46402-2): ಕನ್ನಡ ಕರಾವಳಿ ಸುದ್ದಿ: ನಾಯಕತ್ವಗೊಂದಲ, ಸಚಿವ ಸಂಪುಟ ಪುನಾರಚನೆ ನಾಯಕತ್ವ ಗೊಂದಲದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಿನ ವಾರ ದೆಹಲಿಗೆ ತೆರಳುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರೂ ಬೇರೆ ಬೇರೆ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದರೂ ಇಬ್ಬರೂ ಹೈಕಮಾಂಡ್ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸುವ ಇರಾದೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರು ಬಜೆಟ್‌ ಗೂ ಮೊದಲೇ ಸಚಿವ ಸಂಪುಟವನ್ನು ಪುನಾರಚನೆ ಮಾಡಿ ಕೊಳ್ಳುವ ಲೆಕ್ಕಾಚಾರದಲ್ಲಿದ್ದರೆ, ಡಿ.ಕೆ. ಶಿವಕುಮಾರ್ ‘ಸೂತ್ರ’ವನ್ನು ಪ್ರಕಟಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ತಮ್ಮ ಪ್ರಯತ್ನ ಮುಂದುವರಿಸಲು ದೆಹಲಿಗೆ ತೆರಳಲಿದ್ದಾರೆ. ಮೂಲಗಳ ಪ್ರಕಾರ, ಅಸ್ಸಾಂ ವಿಧಾನಸಭಾ ಚುನಾವಣೆ ಸಭೆಯಲ್ಲಿ ಭಾಗವಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜ.19ಕ್ಕೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯ ಅವರು 20, 21ರಂದು ನಡೆಯಲಿರುವ ನರೇಗಾ ಬಚಾವ್‌ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಸಹ ಭಾಗವಹಿಸಲಿದ್ದಾರೆ. ಆದ್ದರಿಂದ ಜ.20, 21ರಂದು ನರೇಗಾ ಹೋರಾಟಕ್ಕೆ ಸಂಬಂಧಿಸಿದಂತೆ ಸಭೆ ಪೂರ್ಣಗೊಂಡ … - [ಉಡುಪಿ:ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳತನ, ಆರೋಪಿಗಳ ಬಂಧನ](https://kannadakaravali.com/%e0%b2%89%e0%b2%a1%e0%b3%81%e0%b2%aa%e0%b2%bf%e0%b2%85%e0%b2%82%e0%b2%a4%e0%b2%be%e0%b2%b0%e0%b2%be%e0%b2%9c%e0%b3%8d%e0%b2%af-%e0%b2%a6%e0%b3%8d%e0%b2%b5%e0%b2%bf%e0%b2%9a%e0%b2%95%e0%b3%8d%e0%b2%b0): ಕನ್ನಡ ಕರಾವಳಿ ಸುದ್ದಿ: ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳತನ ಜಾಲದ ಆರೋಪಿಗಳಾದ ಕೇರಳದ ಆಶಿಕ್ ಅನ್ಸಾರ್ (19) ಹಾಗೂ ಮಹಮ್ಮದ್ ಅಲ್ತಫ್ (23) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡಿ. 28ರಂದು ಉಡುಪಿಯ ಮೂಡನಿಡಂಬೂರಿನ ನಾಗಚಂದ್ರ ಅವರು ಕರಾವಳಿ ಬೈಪಾಸ್ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು. ಆರೋಪಿಯ ಪತ್ತೆಗಾಗಿ ಡಿವೈಎಸ್‌ಪಿ ಡಿ.ಟಿ. ಪ್ರಭು ಮಾರ್ಗದರ್ಶನದಲ್ಲಿ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ ಪ್ರಸಾದ್ ಪಿ. ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕ ಭರತೇಶ ಕಂಕಣವಾಡಿ, ಗೋಪಾಲಕೃಷ್ಣ ಜೋಗಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಯಿತು. ಸಿಬಂದಿಗಳಾದ ಪ್ರಸನ್ನ ಸಿ., ಸಂತೋಷ್ ರಾಥೋಡ್, ಮಲ್ಲಯ್ಯ ಹಿರೇಮಠ, ಶಿವಕುಮಾರ್ ಅವರನ್ನೊಳಗೊಂಡ ತಂಡವು ಆರೋಪಿಗಳನ್ನು ಕೇರಳ ರಾಜ್ಯದ ಮುಕ್ಕಂ ಎಂಬಲ್ಲಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಳಿ ಇದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆಶಿಕ್ ಅನ್ಸಾರ್ ವಿರುದ್ಧ ಕೇರಳ ರಾಜ್ಯದಲ್ಲಿ 2 ಪ್ರಕರಣ ದಾಖಲಾಗಿದೆ. ಅದರಲ್ಲಿ 1 ಮನೆ ಕಳ್ಳತನ ಪ್ರಕರಣ, ಇನ್ನೊಂದು … - [ಕಡಲ ಕಿನಾರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನು:ಮೀನು ಪ್ರಿಯರಿಗೆ ಸಂಭ್ರಮ](https://kannadakaravali.com/%e0%b2%95%e0%b2%a1%e0%b2%b2-%e0%b2%95%e0%b2%bf%e0%b2%a8%e0%b2%be%e0%b2%b0%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%be%e0%b2%b6%e0%b2%bf-%e0%b2%b0%e0%b2%be%e0%b2%b6): ಕನ್ನಡ ಕರಾವಳಿ ಸುದ್ದಿ: ಹೆಜಮಾಡಿಯ ಕಡಲ ಕಿನಾರೆಗೆ ಬಂದು ದಡ ಸೇರಿದ ರಾಶಿ ರಾಶಿ ಬೂತಾಯಿ ಮೀನುಗಳಿಂದಾಗಿ ಸ್ಥಳೀಯರಿಗೆ ಮೀನಿನ ಸುಗ್ಗಿ ಸಂಭ್ರಮವಾಗಿತ್ತು. ಕೆಲ ಮಂದಿ ಗೋಣಿ ಚೀಲಗಳಲ್ಲಿ ತುಂಬಿಸಿಕೊಂಡು ಮೀನು ಕೊಂಡೊಯ್ದರೆ ಕೆಲ ಮಂದಿ ಸ್ಥಳೀಯವಾಗಿಯೇ ಮೀನು ಪ್ರಿಯರಿಗೆ ವ್ಯಾಪಾರ ಮಾಡಿ ಹಣವನ್ನು ಜೇಬಿಗಿಳಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೆಜಮಾಡಿ ಅಮಾವಾಸ್ಯೆ ಕರಿಯ ಪ್ರದೇಶದ ಕಡಲಿನಲ್ಲಿ ತೇಲಿ ಬಂದ ಟನ್ ಗಟ್ಟಲೆ ಬೂತಾಯಿ ಮೀನು ರಾಶಿಯು ಮೀನು ಪ್ರಿಯರಿಗೆ ಸಂಭ್ರಮ – ಸಡಗರವನ್ನು ನೀಡಿದೆ. ಸೋಮವಾರ ಹೆಜಮಾಡಿ ಅಮಾವಾಸ್ಯೆಕರಿಯ ಭಾಗದಲ್ಲಿನ ಕಡಲಿನಲ್ಲಿ ಎರ್ಮಾಳು ತೆಂಕದ ವೀರಾಂಜನೇಯ ಕೈರಂಪಣಿ ಫಂಡ್ ಇದರ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದರು. ಇವರು ಮೀನು ಹಿಡಿಯಲು ಬೀಸಿದ್ದ ಬಲೆಗೆ ಬಂಪರ್ ಮೀನು ಲಭಿಸಿದ್ದು, ಸುಮಾರು 30 ಟನ್ ಗೂ ಅಧಿಕ ಮೀನು ಬಿದ್ದಿರುತ್ತದೆ.ಬಲೆಯನ್ನು ದಡಕ್ಕೆ ಎಳೆಯುವ ವೇಳೆಯಲ್ಲಿ ಅಧಿಕ ಸಂಖ್ಯೆಯ ಭೂತಾಯಿ ಮೀನು ಬಲೆಯನ್ನು ಹೊರತು ಪಡಿಸಿ ಸಮುದ್ರದ ಅಲೆಗಳ ಹೊಡೆತಕ್ಕೆ ಹೆಚ್ಚುವರಿಯಾಗಿ ದಡವನ್ನು ಸೇರಿತ್ತು. ಹಾಗಾಗಿ ಈ ವಿಷಯ … - [ಸುಜ್ಞಾನ ಎಜುಕೇಶನಲ್ ಟ್ರಸ್ಟ್‌: ವಿವೇಕಾನಂದ ಜಯಂತಿ ಆಚರಣೆ](https://kannadakaravali.com/%e0%b2%b8%e0%b3%81%e0%b2%9c%e0%b3%8d%e0%b2%9e%e0%b2%be%e0%b2%a8-%e0%b2%8e%e0%b2%9c%e0%b3%81%e0%b2%95%e0%b3%87%e0%b2%b6%e0%b2%a8%e0%b2%b2%e0%b3%8d-%e0%b2%9f%e0%b3%8d%e0%b2%b0%e0%b2%b8%e0%b3%8d-4): ಕನ್ನಡ ಕರಾವಳಿ ಸುದ್ದಿ”ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಲು ಧನಾತ್ಮಕ ಮನೋಭಾವ, ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ. ಪ್ರತಿಯೊಬ್ಬರೂ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅವುಗಳನ್ನು ನನಸಾಗಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಚರಿತ್ರೆಯಲ್ಲಿ ನೂರಕ್ಕೆ ನೂರು ಶೇಖಡಾ ಸಾಧನೆಗಳು ಸಾಧ್ಯವಾದದ್ದು ಪ್ರೇರಣೆ ಹಾಗೂ ಪ್ರೋತ್ಸಾಹದಿಂದ” ಎಂದು ರಾಷ್ಟ್ರ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರ ರಾಜೇಂದ್ರ ಭಟ್ ಹೇಳಿದರು. ಯಡಾಡಿ ಮತ್ಯಾಡಿಯ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿರುವ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯ ಪ್ರಯುಕ್ತ ಜ. 12 ರಂದು ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್‌ ಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ ಹದಿಹರೆಯದವರ ಮನಸ್ಸುಗಳ ಸಬಲೀಕರಣ (ಎಂಪವರಿಂಗ್ ಯಂಗ್ ಮೈಂಡ್ಸ್) ಎಂಬ ವಿಶೇಷ ಕಾರ್ಯಾಗಾರದಲ್ಲಿ ಮಾತನಾಡಿದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಶಿಕ್ಷಣ ನೀಡಿದರೆ ಸಾಲದು. ಆಧುನಿಕ ಜೀವನದ ಸವಾಲುಗಳನ್ನು ಎದುರಿಸಲು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಇಂತಹ ಕಾರ್ಯಾಗಾರಗಳ … - [ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಜೊತೆ ಸೋಫಿ ಶೈನ್ ನಿಶ್ಚಿತಾರ್ಥ](https://kannadakaravali.com/%e0%b2%9f%e0%b3%80%e0%b2%ae%e0%b3%8d-%e0%b2%87%e0%b2%82%e0%b2%a1%e0%b2%bf%e0%b2%af%e0%b2%be%e0%b2%a6-%e0%b2%ae%e0%b2%be%e0%b2%9c%e0%b2%bf-%e0%b2%86%e0%b2%9f%e0%b2%97%e0%b2%be%e0%b2%b0-%e0%b2%b6): ಕನ್ನಡ ಕರಾವಳಿ ಸುದ್ದಿ: ಟೀಮ್ ಇಂಡಿಯಾದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಗೆಳತಿ ಸೋಫಿ ಶೈನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಧವನ್ ಸೋಮವಾರ ತಮ್ಮ ವಿದೇಶಿ ಗೆಳತಿ ಮತ್ತು ಐರಿಶ್ ನಟಿ ಸೋಫಿ ಶೈನ್ ಜೊತೆ ನಿಶ್ಚಿತಾರ್ಥ ಮಾಡಕೊಂಡಿದ್ದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ಉಂಗುರ ವಿನಿಮಯ ಮಾಡಿಕೊಳ್ಳುವ ಮೂಲಕ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಧವನ್ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ನಿಶ್ಚಿತಾರ್ಥದ ಉಂಗುರಗಳ ಫೋಟೋವನ್ನು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ನಾವು ನಿಮ್ಮೊಂದಿಗೆ ಹಂಚಿಕೊಂಡ ಖುಷಿಯ ವಿಷಯಗಳಿಂದ ಹಿಡಿದು ಮುಂದೆ ಹಂಚಿಕೊಳ್ಳಲಿರುವ ಭವಿಷ್ಯದ ಕನಸುಗಳವರೆಗೆ ಎಂದು ಶಿರ್ಷಿಕೆ ನೀಡಿ, ನಮ್ಮ ನಿಶ್ಚಿತಾರ್ಥದ ಈ ಶುಭ ಸಂದರ್ಭದಲ್ಲಿ, ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ಮತ್ತು ಶುಭಾಶಯಗಳಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ” ಎಂದು ಧವನ್ ತಿಳಿಸಿದ್ದಾರೆ. ಕ್ರಿಕೆಟಿಗರು, ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. - [ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಹೆಣ್ಣಿನ ವೇಷ ಧರಿಸಿ ಓಡಾಡುತ್ತಿದ್ದ ಆರೋಪಿ ಬಂಧನ ](https://kannadakaravali.com/%e0%b2%85%e0%b2%aa%e0%b3%8d%e0%b2%b0%e0%b2%be%e0%b2%aa%e0%b3%8d%e0%b2%a4-%e0%b2%ac%e0%b2%be%e0%b2%b2%e0%b2%95%e0%b2%bf%e0%b2%af-%e0%b2%ae%e0%b3%87%e0%b2%b2%e0%b3%86-%e0%b2%85%e0%b2%a4%e0%b3%8d-2): ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ವಿಚಿತ್ರ ವೇಷ ಧರಿಸಿದ್ದ ಆರೋಪಿಯೊಬ್ಬನನ್ನು ಮಥುರಾ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. 50 ವರ್ಷ ವಯಸ್ಸಿನ ರಾಜೇಂದ್ರ ಸಿಸೋಡಿಯಾ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ರಾಜೇಂದ್ರ ಸಿಸೋಡಿಯಾ, ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಪೊಲೀಸರು ತನ್ನನ್ನು ಗುರುತಿಸಬಾರದು ಎಂಬ ಕಾರಣಕ್ಕೆ ಈತ ಅತ್ಯಂತ ಚಾಣಾಕ್ಷತನದಿಂದ ಹೆಣ್ಣಿನ ವೇಷ ಧರಿಸುತ್ತಿದ್ದ. ಬುರ್ಖಾ ತೊಟ್ಟು, ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಂಡು ಮಹಿಳೆಯಂತೆ ಓಡಾಡುತ್ತಾ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ. ಆರೋಪಿ ಎಷ್ಟೇ ಜಾಣೆ ಪ್ರದರ್ಶಿಸಿದರೂ ಮಥುರಾ ಪೊಲೀಸರ ತನಿಖಾ ಕೌಶಲದ ಮುಂದೆ ಆತನ ಆಟ ನಡೆಯಲಿಲ್ಲ. ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಈತನ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು, ಆತ ವೇಷ ಮರೆಸಿಕೊಂಡಿದ್ದ ರಾಜೇಂದ್ರ ಸಿಸೋಡಿಯಾ ಎಂಬುದನ್ನು ಖಚಿತಪಡಿಸಿಕೊಂಡು ದಾಳಿ ನಡೆಸಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. - [ಮಹಿಳೆಯನ್ನು ಬೆನ್ನಟ್ಟಿ ತುಳಿದು  ಸಾಯಿಸಿದ ಕಾಡಾನೆ ](https://kannadakaravali.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%ac%e0%b3%86%e0%b2%a8%e0%b3%8d%e0%b2%a8%e0%b2%9f%e0%b3%8d%e0%b2%9f%e0%b2%bf-%e0%b2%a4%e0%b3%81%e0%b2%b3): ಕನ್ನಡ ಕರಾವಳಿ ಸುದ್ದಿ: ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮುಗುಲಿ ಗ್ರಾಮದಲ್ಲಿ ನಡೆದಿದೆ. ಶೋಭಾ (40) ಮೃತಪಟ್ಟ ಮಹಿಳೆ. ಮಂಗಳವಾರ ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸಕ್ಕೆ ಹೋಗಿದ್ದಾಗ ಕಾಡಾನೆ ದಾಳಿ ಮಾಡಿದೆ. ಶೋಭಾ ಅವರನ್ನು ಬೆನ್ನಟ್ಟಿ ತುಳಿದು ಸಾಯಿಸಿದೆ. ಸ್ಥಳಕ್ಕೆ ಡಿಎಫ್‌ಒ ಸೌರಭ್ ಕುಮಾರ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆನೆಯು ಇತ್ತೀಚೆಗೆ ಕೊಡಗಿನಿಂದ ಹಾಸನದತ್ತ ಬಂದಿತ್ತು ಎನ್ನಲಾಗುತ್ತಿದೆ. ಮೃತ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು, ಅವರ ತಾಯಿ ರಾಜಮ್ಮ ಕೂಡ ಜತೆಯಲ್ಲಿ ಹೋಗಿದ್ದರು. ಇಬ್ಬರೂ ನಡೆದುಕೊಂಡು ಹೋಗುತ್ತಿದ್ದ ವೇಳೆ ಆನೆ ದಾಳಿ ಮಾಡಿದೆ. ರಾಜಮ್ಮ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಆನೆಯು ಶೋಭಾ ಅವರನ್ನು ಕಾಲು ಕೆಳಗೆ ಹಾಕಿ ತುಳಿದಿದ್ದರಿಂದ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಕಾಡಾನೆಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. - [ಗಂಡ ಬೇರೊಂದು ಹುಡುಗಿ ಜೊತೆ ಅಕ್ರಮ ಸಂಬಂಧ: ಸಿಕ್ಕಿಬಿದ್ದ ಪತಿರಾಯನ ವಿರುದ್ಧ ಕೇಸ್](https://kannadakaravali.com/%e0%b2%97%e0%b2%82%e0%b2%a1-%e0%b2%ac%e0%b3%87%e0%b2%b0%e0%b3%8a%e0%b2%82%e0%b2%a6%e0%b3%81-%e0%b2%b9%e0%b3%81%e0%b2%a1%e0%b3%81%e0%b2%97%e0%b2%bf-%e0%b2%9c%e0%b3%8a%e0%b2%a4%e0%b3%86-%e0%b2%85): ಕನ್ನಡ ಕರಾವಳಿ ಸುದ್ದಿ: ಜಾಕೂಬ್ ಆರೂಪ್, ಬೆಂಗಳೂರಿನ ಟೆಕ್ಕಿ. ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಪಶ್ಚಿಮ ವಿಭಾಗ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಜೊತೆ ವಾಸವಿದ್ದ. ಈತನ ಪತ್ನಿ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ಆರೋಪಿಗೆ ಕೆಲಸ ಇರಲಿಲ್ಲ. ಹೀಗಾಗಿ ಪತ್ನಿ, ತನ್ನ ಕೆಲಸವನ್ನೇ ಪತಿಗೆ ಕೊಡಿಸಿದ್ದಳು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ತನ್ನ ಕೆಲಸವನ್ನ ಪತಿಗೆ ಕೊಡಿಸಿದ್ದಳು ಎನ್ನಲಾಗಿದೆ. ಇಬ್ಬರ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಮಗು ಇದೆ. ಮಗು ಬಳಿಕ ಆರೋಪಿ ತನ್ನ ಅಸಲಿ ಮುಖವಾಡವನ್ನು ಪತ್ನಿಗೆ ತೋರಿಸಿದ್ದಾನಂತೆ. ಮತ್ತೊಮ್ಮೆ ಆಕೆ ಗರ್ಭ ಧರಿಸಿದ್ದಳು. ಈ ವೇಳೆ ಆಕೆಯ ಜಾತಿಯನ್ನು ನಿಂದಿಸಿ, ಹಲ್ಲೆ ಮಾಡಿ ಗರ್ಭಪಾತ ಆಗುವಂತೆ ಮಾಡಿದ್ದ ಎಂಬ ಆರೋಪ ಇದೆ. ಈ ನಡುವೆ ಪತ್ನಿಗೆ ಮೋಸ ಮಾಡಿ ಪರಸ್ತ್ರಿ ಜೊತೆ ಸಂಘ ಬೆಳೆಸಿದ್ದ. ಈ ಎಲ್ಲ ಬೆಳವಣಿಗೆಯಿಂದ ನೊಂದಿದ್ದ ಸಂತ್ರಸ್ತೆ ಆಂಧ್ರಕ್ಕೆ ಹೋಗಿದ್ದಳು. ನಿನ್ನೆ ಬೆಂಗಳೂರಿಗೆ ದಿಢೀರ್ ಬಂದು, ಗಂಡ ಪರಸ್ತ್ರಿ ಜೊತೆ ಚಕ್ಕಂದ ಆಡ್ತಿದ್ದಾಗ … - [ಗುರುಕುಲ ಪಬ್ಲಿಕ್ ಸ್ಕೂಲ್: ಸಂಕ್ರಾಂತಿ ಹಬ್ಬ ಮತ್ತು ಸಂಸ್ಥಾಪನಾ ದಿನಾಚರಣೆ](https://kannadakaravali.com/%e0%b2%97%e0%b3%81%e0%b2%b0%e0%b3%81%e0%b2%95%e0%b3%81%e0%b2%b2-%e0%b2%aa%e0%b2%ac%e0%b3%8d%e0%b2%b2%e0%b2%bf%e0%b2%95%e0%b3%8d-%e0%b2%b8%e0%b3%8d%e0%b2%95%e0%b3%82%e0%b2%b2%e0%b3%8d-%e0%b2%b8): ಕನ್ನಡ ಕರಾವಳಿ ಸುದ್ದಿ:  ವಕ್ವಾಡಿಯ ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ಸಂಸ್ಥಾಪನಾ ದಿನಾಚರಣೆ ಹಾಗೂ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಶ್ರೀಮತಿ ಅನುಪಮಾ ಎಸ್, ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮೀ ಸಂಸ್ಥೆಯು ಗ್ರಾಮೀಣ ಪರಿಸರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಉತ್ತಮ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಿಕೊಂಡು ಬಂದಿದೆ. ದೇಸಿ ಸಂಸ್ಕೃತಿಯನ್ನು ಪೋಷಿಸುವುದರೊಂದಿಗೆ ವರ್ತಮಾನಕ್ಕೆ ಬೇಕಾದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದನ್ನು ಬದ್ಧತೆಯಿಂದ ಕಾಯ್ದುಕೊಂಡು ಬಂದಿದ್ದೇವೆ. ಬದುಕಿನ ಕಹಿಗಳೆಲ್ಲಾ ಸಹಿಯಾಗಿ ಯಶಸ್ಸು ನಿಮ್ಮಪಾಲಿಗಿರಲಿ ಎಂದು ಸಂಕ್ರಾಂತಿ ಹಬ್ಬಕ್ಕೆ ಶುಭ ಹಾರೈಸಿದರು. ಪ್ರಾಂಶುಪಾಲರಾದ ಡಾ.ರೂಪ ಶಣೈರವರು ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ತಿಳಿಸಿ ಸರ್ವರಿಗೂ ಶುಭ ಕೋರಿದರು. ಶಿಕ್ಷಕಿ ಸುಲಕ್ಷಣ ರವರು ಸಂಸ್ಥಾಪನಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿ ಅವನಿ ಸಂಕ್ರಾಂತಿ ಹಬ್ಬದ ಕುರಿತು ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಹಿಮಾಂಷು ಕಾರ್ಯಕ್ರಮವನ್ನು ನಿರೂಪಿಸಿ ಅಂತಿಮವಾಗಿ ವಂದಿಸಿದರು. - [ಶಾಲೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಕಿಡ್ನಾಪ್: ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದು ಹೇಗೆ?](https://kannadakaravali.com/%e0%b2%b6%e0%b2%be%e0%b2%b2%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%86%e0%b2%9f%e0%b2%b5%e0%b2%be%e0%b2%a1%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6): ಕನ್ನಡ ಕರಾವಳಿ ಸುದ್ದಿ: ಧಾರವಾಡ ನಗರದ ಕಮಲಾಪುರದ 4ನೇ ನಂಬರ್‌ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಇಬ್ಬರು ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಅಪಹರಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ 3ನೇ ತರಗತಿಯ ವಿದ್ಯಾರ್ಥಿಗಳಾದ ಲಕ್ಷ್ಮಿಕರಿಯಪ್ಪನವರ ಮತ್ತು ತಸ್ವೀ‌ರ್ ದೊಡ್ಡಮನಿ ಎಂಬುವವರನ್ನು ಅಬ್ದುಲ್ ಕರಿಮ್ ಮೇಸ್ತ್ರಿ ಎಂಬ ವ್ಯಕ್ತಿ ಬೈಕ್‌ನಲ್ಲಿ ಅಪಹರಿಸಿಕೊಂಡು ಪರಾರಿಯಾಗಿದ್ದನು. ಈ ದೃಶ್ಯವು ಶಾಲೆಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮಕ್ಕಳನ್ನು ಹೊತ್ತು ಜೋಯ್ದಾದ ಕಡೆಗೆ ವೇಗವಾಗಿ ತೆರಳುತ್ತಿದ್ದ ಆರೋಪಿಯ ಬೈಕ್ ಮಾರ್ಗಮಧ್ಯೆ ಅಪಘಾತಕ್ಕೀಡಾಗಿದೆ. ಗಾಯಗೊಂಡಿದ್ದ ಮಕ್ಕಳನ್ನು ಕಂಡು ಸಂಶಯಗೊಂಡ ಸ್ಥಳೀಯರು ವಿಚಾರಿಸಿದಾಗ, ತಾವು ಧಾರವಾಡದವರು ಎಂಬ ವಿಷಯವನ್ನು ಮಕ್ಕಳು ತಿಳಿಸಿದ್ದಾರೆ. ಕೂಡಲೇ ಎಚ್ಚೆತ್ತ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಧಾರವಾಡ ಉಪನಗರ ಮತ್ತು ಜೋಯ್ದಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆರೋಪಿ ಅಬ್ದುಲ್ ಕರಿಮ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಪಘಾತದಲ್ಲಿ ಗಾಯಗೊಂಡ ಮಕ್ಕಳಿಗೆ ಪ್ರಥಮ ಚಿಕಿತ್ಸೆ … - [ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಪ್ರಾಂಶುಪಾಲರು ಸೇರಿ 7 ಮಂದಿ ವಿರುದ್ಧ ಎಫ್ಐಆರ್!](https://kannadakaravali.com/%e0%b2%a1%e0%b3%86%e0%b2%82%e0%b2%9f%e0%b2%b2%e0%b3%8d-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%a8%e0%b2%bf-%e0%b2%86%e0%b2%a4%e0%b3%8d-2): ಕನ್ನಡ ಕರಾವಳಿ ಸುದ್ದಿ: ಇಲ್ಲಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕಾಲೇಜು ಪ್ರಾಂಶುಪಾಲ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತಳನ್ನು ಪರಿಮಳ-ಭೋದೆವಯ್ಯ ದಂಪತಿಯ ಮಗಳು ಯಶಸ್ವಿನಿ(23) ಎಂದು ಗುರುತಿಸಲಾಗಿದ್ದು, ಬೊಮ್ಮನಹಳ್ಳಿ ಖಾಸಗಿ ಕಾಲೇಜಿನ ಓರಲ್ ಮೆಡಿಸಿನ್ ಮತ್ತು ರೆಡಿಯಾಲಜಿ ವಿಭಾಗದಲ್ಲಿ 3ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ. ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಮೃತಳ ತಾಯಿ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಯಶಸ್ವಿನಿ ಸಾವಿಗೆ ಕಾಲೇಜು ಉಪನ್ಯಾಸಕರ ನೀಡುತ್ತಿದ್ದ ಕಾರಣ, ಅಲ್ಲದೇ ಕ್ಲಾಸಿನಲ್ಲಿ ಯಶಸ್ವಿನಿ ಬಣ್ಣದ ಬಗ್ಗೆ ಮಾತನಾಡಿ ಟೀಕಿಸಿದ್ದಾರೆ. ಸೆಮಿನಾರ್ ಅಟೆಂಡ್ ಮಾಡಲು ಸಹ ಅವಕಾಶ ನೀಡಿಲ್ಲ, ಕಣ್ಣು ನೋವು ಎಂದಾಗ ಅವಮಾನಿಸಿ ಕಿರುಕುಳ ನೀಡಿದ್ದಾರೆ. ಹೀಗಾಗಿ ಉಪನ್ಯಾಸಕರ ವಿರುದ್ಧ ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿದ್ದಾರೆ.   - [ಕುಂದಾಪುರ ಇಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%87%e0%b2%82%e0%b2%a6%e0%b3%81-%e0%b2%88-%e0%b2%aa%e0%b3%8d%e0%b2%b0%e0%b2%a6%e0%b3%87%e0%b2%b6%e0%b2%a6%e0%b2%b2): ಕನ್ನಡ ಕರಾವಳಿ ಸುದ್ದಿ: ನಾವುಂದ ವಿದ್ಯುತ್ ಉಪ ಕೇಂದ್ರದಿಂದ ಹೊರಡುವ 33 ಕೆ.ವಿ. ಬೈಂದೂರು ಮತ್ತು 33 ಕೆ.ವಿ. ಕೊಲ್ಲೂರು ಮಾರ್ಗದಲ್ಲಿ ಜ. 13ರಂದು ಬೆಳಿಗ್ಗೆ 9.30 ರಿಂದ ಸಂಜೆ 5ರ ವರೆಗೆ ತುರ್ತು ಕಾಮಗಾರಿ ನಿರ್ವಹಣಾ ಹಮ್ಮಿಕೊಳ್ಳಲಾಗಿದೆ. 33/11 ಕೆ.ವಿ ಬೈಂದೂರು ಮತ್ತು ಕೊಲ್ಲೂರು ಉಪ ಕೇಂದ್ರದಿಂದ ಹೊರಡುವ 11ಕೆ.ವಿ ಫೀಡರುಗಳಾದ ಬೈಂದೂರು, ಉಪ್ಪುಂದ, ತಗ್ಗರ್ಸೆ, ಶಿರೂರು, ತೂದಳ್ಳಿ ಗಂಗನಾಡು, ಯಳಜಿತ್, ಕೊಲ್ಲೂರು ಮತ್ತು ಮುದೂರು ಹಾಗೂ 110 ಕೆ.ವಿ. ನಾವುಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಹೇರೂರು, ಕಿರಿಮಂಜೇಶ್ವರ,ಮರವಂತೆ ಕಂಬದಕೋಣೆ ಫೀಡರ್‌ಗಳಲ್ಲಿ ಶಿರೂರು, ತೂದಳ್ಳಿ, ಹೇರೂರು, ಉಪ್ಪುಂದ, ಬಿಜೂರು, ಕೊಲ್ಲೂರು, ತಗ್ಗರ್ಸೆ, ಕರ್ಕುಂಜೆ, ಬೈಂದೂರು, ಗೋಳಿಹೊಳೆ, ಯಳಜಿತ್, ಗಂಗನಾಡು, ನಾಯ್ಕನಕಟ್ಟೆ, ಹೊಸೂರು, ಯಡ್ತರೆ, ಕಂಬದಕೋಣೆ, ಕಿರಿಮಂಜೇಶ್ವರ, ಕಾಲ್ಲೋಡು, ಹೇರಂಜಾಲು, ಬವಳಾಡಿ, ಮತ್ತು ನಾಗೂರು, ಉಳ್ಳೂರು, ವರ್ಸೆ, ಪಡುವರಿ, ಕೆರ್ಗಾಲ್, ನಂದನವನ, ಜಡ್ಕಲ್, ಇಡೂರು-ಕುಂಜ್ಞಾಡಿ, ಅರೆಶಿರೂರು, ಗೋಳಿಹೊಳೆ, ಮರವಂತೆ, ಎಲ್ಲೂರು, ಬಾಳ್ಕೊಡ್ಡು, ಹಾಲ್ಕಲ್, ದೋಣಿಗದ್ದೆ, ದಳಿ, ಮಾವಿನಕಾರು, ಬಾವಡಿ, … - [ಉಡುಪಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಬಾಲಕಿಯ ರಕ್ಷಣೆ ](https://kannadakaravali.com/%e0%b2%89%e0%b2%a1%e0%b3%81%e0%b2%aa%e0%b2%bf-%e0%b2%85%e0%b2%b8%e0%b2%b9%e0%b2%be%e0%b2%af%e0%b2%95-%e0%b2%b8%e0%b3%8d%e0%b2%a5%e0%b2%bf%e0%b2%a4%e0%b2%bf%e0%b2%af%e0%b2%b2%e0%b3%8d%e0%b2%b2): ಕನ್ನಡ ಕರಾವಳಿ ಸುದ್ದಿ: ಅಸಹಾಯಕ ಸ್ಥಿತಿಯಲ್ಲಿದ್ದ ಅಪ್ರಾಪ್ತ ಪ್ರಾಯದ ಬಾಲಕಿಯನ್ನು ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ರಕ್ಷಿಸಲಾಗಿದೆ. ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಾರ್ಥಿಯಾಗಿ ತೆರಳಿದ್ದ, ಆದಿ ಉಡುಪಿಯ ಪ್ರೇಮ ರಾಮಚಂದ್ರ ಎನ್ನುವರಿಗೆ ಬಾಲಕಿ ಕಂಡುಬಂದಿದ್ದಾಳೆ. ಅವರು ಬಾಲಕಿಯ ಚಲನ ವಲನದಲ್ಲಿ ಸಂಶಯಗೊಂಡು ವಿಚಾರಿಸಿದಾಗ, ಬಾಲಕಿ ಮನನೊಂದು ಮನೆ ಬಿಟ್ಟು ಬಂದಿರುವುದಾಗಿ‌ ತಿಳಿದುಬಂದಿದೆ. ತಕ್ಷಣ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡುವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ನೆರವಿಗೆ ಬಂದ ಒಳಕಾಡುವರು ನಗರ ಪೋಲಿಸ್ ಠಾಣೆಗೆ ಮಾಹಿತಿ ನೀಡಿ, ಬಾಲಕಿಗೆ ದೊಡ್ಡಣಗುಡ್ಡೆಯ ಬಾಲಕೀಯರ ಬಾಲ ಮಂದಿರದಲ್ಲಿ ಪುರ್ನವಸತಿ ಕಲ್ಪಿಸಿದರು. ಕಾರ್ಯಚರಣೆಗೆ ಹರೀಶ್ ಪೂಜಾರಿ ಉದ್ಯಾವರ ಸಹಕರಿಸಿದರು. ಬಾಲಕಿ ನಾಪತ್ತೆಯಾದ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಳೇಬೀಡು ಪೋಲಿಸರು ಬಾಲಕಿ ಉಡುಪಿಯಲ್ಲಿ‌ ಪತ್ತೆಯಾಗಿರುವ ಮಾಹಿತಿ ತಿಳಿದು ಬಾಲಕಿಯ ತಾಯಿ‌ಯೊಂದಿಗೆ ಬಂದಿದ್ದರು.‌ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಳೇಬೀಡಿನ ಪೋಲಿಸರಿಗೆ ಒಪ್ಪಿಸಿದರು. ತಾಯಿಯೊಂದಿಗೆ ತೆರಳಲು ಒಪ್ಪದ ಕಾರಣದಿಂದ ಬಾಲಕಿಗೆ ಚಿಕ್ಕಮಗಳೂರು ಬಾಲಕೀಯರ ಬಾಲ ಮಂದಿರದಲ್ಲಿ ಪುರ್ನವಸತಿ … - [ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್: ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಯುವ ದಿನಾಚರಣೆ](https://kannadakaravali.com/%e0%b2%b5%e0%b2%95%e0%b3%8d%e0%b2%b5%e0%b2%be%e0%b2%a1%e0%b2%bf-%e0%b2%97%e0%b3%81%e0%b2%b0%e0%b3%81%e0%b2%95%e0%b3%81%e0%b2%b2-%e0%b2%aa%e0%b2%ac%e0%b3%8d%e0%b2%b2%e0%b2%bf%e0%b2%95%e0%b3%8d-15): ಕನ್ನಡ ಕರಾವಳಿ ಸುದ್ದಿ: ಗುರುಕುಲದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಜ.12 ರಂದು ರಂದು ವಕ್ವಾಡಿಯ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಜಂಟಿಯಾಗಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಿದರು. ಭಾರತೀಯರ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಸ್ವಾಮಿ ವಿವೇಕಾನಂದರವರ ಉದಾತ್ತ ಮನೋಭಾವ ಮತ್ತು ದೇಶ ಕಟ್ಟುವುದಕ್ಕೆ ಯುವ ಶಕ್ತಿಯ ದೃಢ ಸಂಕಲ್ಪದಅಗತ್ಯತೆಯನ್ನು ಜನತೆ ಸಾರಿದ ಬಗೆಯನ್ನು ಪ್ರಾಂಶುಪಾಲರಾದ ಡಾ. ರೂಪ ಶಣೈ ರವರು ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ವಿದ್ಯಾರ್ಥಿಗಳಾದ ಸುಶ್ಮಿತಾ, ಕೋಟೇಶ್, ಕೃತಿಕಾ, ಕುಶಿ, ಅಕ್ಷರಾ, ಅನ್ವಯ್, ದೀಕ್ಷಿತ್ ಹಾಗೂ ಜೀವನ್ ಸ್ವಾಮಿ ವಿವೇಕಾನಂದರ ಕುರಿತಾಗಿ ಮಾತಾಡಿದರು. ವಿದ್ಯಾರ್ಥಿ ಪ್ರೀತಮ್ ಮಯ್ಯ ಸ್ವಾಮಿ ವಿವೇಕಾನಂದರ ವೇಷ ಭೂಷಣ ತೊಟ್ಟು ಚೀಕಾಗೋ ಭಾಷಣದ ಸಂದೇಶ ತಿಳಿದರು. ವಿದ್ಯಾರ್ಥಿ ಪ್ರಥಮ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. - [ಕುಂದಾಪುರ: ಪರಿಸರ ಪ್ರೇಮಿ, ಕೃಷಿಕ ಕಿಶನ್ ಕುಮಾರ್ ಕೆಂಚನೂರು ಹೃದಯಾಘಾತದಿಂದ ಸಾವು](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%aa%e0%b2%b0%e0%b2%bf%e0%b2%b8%e0%b2%b0-%e0%b2%aa%e0%b3%8d%e0%b2%b0%e0%b3%87%e0%b2%ae%e0%b2%bf-%e0%b2%95%e0%b3%83): ಕನ್ನಡ ಕರಾವಳಿ ಸುದ್ದಿ :ಪರಿಸರ ಪ್ರೇಮಿ, ಸ್ವಯಂ ಕೃಷಿಕ ಬಸ್ರೂರು ಮನೆ ಕಿಶನ್ ಕುಮಾರ್ ಕೆಂಚನೂರು (65) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಿಶನ್ ಅವರು ಭಾನುವಾರ ರಾತ್ರಿ ಕುಂದಾಪುರದಲ್ಲಿ ನಡೆದ ಇನಿದನಿ ಕಾರ್ಯಕ್ರಮ ವೀಕ್ಷಿಸಿ ಮನೆಗೆ ತೆರಳಿದ್ದರು. ನಸುಕಿನ ಜಾವ ಹೃದಯಾಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಿಶನ್ ಕೆಂಚನೂರು ಅವರು ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಗೇರು ಕೃಷಿಯ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದ ಅವರು ಗೇರು, ಭತ್ತ ಮತ್ತು ಅಡಿಕೆ ಕೃಷಿಗಳ ಬಗ್ಗೆ ಸಾಕಷ್ಟು ಕಾರ್ಯಾಗಾರಗಳನ್ನು ನಡೆಸಿದ್ದರು. ವಿವಿಧ ಭತ್ತದ ತಳಿಗಳನ್ನು ಬೆಳೆದು ಭತ್ತದ ಕೃಷಿಕರಿಗೆ ಮಾರ್ಗದರ್ಶನ ನೀಡಿದ್ದರು. ಪರಿಸರ ನಾಶದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದ ಕಿಶನ್ ಕೆಂಚನೂರು, ಕಸ್ತೂರಿರಂಗನ್ ವರದಿಯ ಅಮೂಲಾಗ್ರ ಅಧ್ಯಯನ ನಡೆಸಿ ಅದರ ಸಾಧಕ ಬಾಧಕಗಳ ಬಗ್ಗೆ ಹಲವಾರು ಸೆಮಿನಾರುಗಳನ್ನು ನಡೆಸಿದ್ದರು. ಟಿವಿ ಚಾನೆಲ್ಲುಗಳಲ್ಲಿಯೂ ಹಲವಾರು ಸಂಸದರ್ಶನಗಳನ್ನು ನೀಡಿದ್ದ … - [ಕಾರವಾರ: ಪ್ರೀತಿಸುವಂತೆ ಜೆಡಿಎಸ್‌ ನಾಯಕಿಯ ಪುತ್ರನ ಕಿರುಕುಳ, ಯುವತಿ ಆತ್ಮಹತ್ಯೆ](https://kannadakaravali.com/%e0%b2%95%e0%b2%be%e0%b2%b0%e0%b2%b5%e0%b2%be%e0%b2%b0-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%b8%e0%b3%81%e0%b2%b5%e0%b2%82%e0%b2%a4%e0%b3%86-%e0%b2%9c%e0%b3%86%e0%b2%a1): ಕನ್ನಡ ಕರಾವಳಿ ಸುದ್ದಿ: ಜೆಡಿಎಸ್‌ ಸ್ಥಳೀಯ ನಾಯಕಿಯ ಪುತ್ರನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕದ್ರಾ ಗ್ರಾಮದಲ್ಲಿ ನಡೆದಿದೆ. ರಿಶೆಲ್‌ ಡಿಸೋಜಾ‌ (20) ಆತ್ಮಹತ್ಯೆ ಮಾಡಿಕೊಂಡ ಯುವತಿ. ಚೈತ್ರಾ ಕೋಠಾರಕರ ಪುತ್ರ ಚಿರಾಗ್ ಪ್ರೀತಿಸುವಂತೆ ಯುವತಿಗೆ ಪೀಡಿಸುತ್ತಿದ್ದ. ಇದರಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೈತ್ರಾ ಕೋಠಾರಕರ ಪುತ್ರ ಚಿರಾಗ್, ಕದ್ರಾ ಗ್ರಾಮದ ಕೆಪಿಸಿಎಲ್ ಕಾಲೋನಿ ನಿವಾಸಿ ರಿಶೆಲ್ ಡಿಸೋಜಾ‌ಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಕಳೆದ ಕೆಲ ದಿನಗಳಿಂದ ಯುವತಿ ಮನೆ ಬಳಿ ಬಂದು ಹೋಗುತ್ತಿದ್ದ. ಪ್ರೀತಿ ಮಾಡಲು ಯುವತಿ ನಿರಾಕರಿಸಿದ್ದಕ್ಕೆ ಬೇಗ ಸತ್ತು ಹೋಗು ಎಂದು ಚಿರಾಗ್‌ ಹೇಳಿದ್ದ. ಇದರಿಂದ ನೊಂದ ರಿಶಾಲ್‌ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ರಿಶಾಲ್‌ ತಂದೆ ಕ್ರಿಸ್ತೋದ್ ಫ್ರಾನ್ಸಿಸ್ ದೂರಿನ ಮೇರೆಗೆ ಚಿರಾಗ್ ವಿರುದ್ಧ ಕದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. - [ಕಾರ್ಕಳ: ಬೈಲೂರು ಪರಶುರಾಮ್ ಥೀಮ್ ಪಾರ್ಕ್ ತಾಮ್ರದ ಹೊದಿಕೆ ಕಳವು, ಇಬ್ಬರು ಆರೋಪಿಗಳ ಬಂಧನ](https://kannadakaravali.com/46338-2): ಕನ್ನಡ ಕರಾವಳಿ ಸುದ್ದಿ: ಕಾರ್ಕಳ ಬೈಲೂರು ಪರಶುರಾಮ್ ಥೀಮ್ ಪಾರ್ಕ್ ನ ಕಟ್ಟಡದ ಮೇಲ್ಟಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾರ್ಕಳ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಗಳೂರು ಕಳವಾರು ಚರ್ಚ್ ಗುಡ್ಡೆಯ ಆರೀಫ್ ಯಾನೆ ಮುನ್ನ(37) ಹಾಗೂ ಮಂಗಳೂರು ಕಾವೂರಿನ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಜ.3ರಂದು ಪಾರ್ಕ್‌ ಕಟ್ಟಡದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿ ಕಟ್ಟಡದ ಮೇಲ್ಬಾವಣಿಗೆ ಅಳವಡಿಸಿದ ತಾಮ್ರದ ಹೊದಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಅರಿತ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಮ್ ಶಂಕರ ಆರೋಪಿಗಳ ಪತ್ತೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿದ್ದು ವಿಶೇಷ ಪೊಲೀಸ್ ತಂಡವು ಉಡುಪಿ, ದ.ಕ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ ಹುಡುಕಾಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಳವು ಮಾಡಿದ 45,000 ರೂ. ಮೌಲ್ಯದ 51 … - [10 ತಿಂಗಳ ಮಗನಿಗೆ ವಿಷಪ್ರಾಶನ ಮಾಡಿ ಕೊಂದು, ತಾಯಿ ಆತ್ಮಹತ್ಯೆ ](https://kannadakaravali.com/10-%e0%b2%a4%e0%b2%bf%e0%b2%82%e0%b2%97%e0%b2%b3-%e0%b2%ae%e0%b2%97%e0%b2%a8%e0%b2%bf%e0%b2%97%e0%b3%86-%e0%b2%b5%e0%b2%bf%e0%b2%b7%e0%b2%aa%e0%b3%8d%e0%b2%b0%e0%b2%be%e0%b2%b6%e0%b2%a8-%e0%b2%ae): ಕನ್ನಡ ಕರಾವಳಿ ಸುದ್ದಿ: ತೆಲಂಗಾಣದ ಹೈದರಾಬಾದ್‌ ಮೀರ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 27 ವರ್ಷದ ಮಹಿಳೆಯೊಬ್ಬರು ತನ್ನ 10 ತಿಂಗಳ ಮಗನಿಗೆ ವಿಷಪ್ರಾಶನ ಮಾಡಿ ಕೊಂದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಸುಷ್ಮಾ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಯಶವಂತ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ 10 ತಿಂಗಳ ಮಗ ಯಶವರ್ಧನ್ ರೆಡ್ಡಿ ಇದ್ದ. ಕುಟುಂಬ ಸದಸ್ಯರ ಪ್ರಕಾರ, ಕಳೆದ ಕೆಲವು ದಿನಗಳಿಂದ ಪತಿ ಮತ್ತು ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಸಮಾರಂಭವೊಂದಕ್ಕೆ ಶಾಪಿಂಗ್ ಮಾಡುವ ನೆಪದಲ್ಲಿ, ಸುಷ್ಮಾ ತನ್ನ ತಾಯಿ ಲಲಿತಾ ಅವರ ಮನೆಗೆ ಹೋಗಿದ್ದರು. ಅಲ್ಲಿದ್ದಾಗ, ಅವರು ಮತ್ತೊಂದು ಕೋಣೆಗೆ ಹೋಗಿ, ತನ್ನ ಶಿಶುವಿಗೆ ವಿಷಪ್ರಾಶನ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ರಾತ್ರಿ 9:30 ರ ಸುಮಾರಿಗೆ, ಯಶವಂತ್ ರೆಡ್ಡಿ ತನ್ನ ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗಿದಾಗ ಮಲಗುವ ಕೋಣೆಯ ಬಾಗಿಲು ಒಳಗಿನಿಂದ ಲಾಕ್ … - ['ಪ್ಲೆಸೆಂಟ್' 23ನೇ ವಾರ್ಷಿಕೋತ್ಸವ ಸಂಭ್ರಮ, ಜ.11ರಿಂದ ಜ.31ರ ವರೆಗೆ ವಿಶೇಷ ದರ ಕಡಿತದ ಮಾರಾಟ](https://kannadakaravali.com/%e0%b2%aa%e0%b3%8d%e0%b2%b0%e0%b3%86%e0%b2%b8%e0%b3%86%e0%b2%82%e0%b2%9f%e0%b3%8d-23%e0%b2%a8%e0%b3%87-%e0%b2%b5%e0%b2%be%e0%b2%b0%e0%b3%8d%e0%b2%b7%e0%b2%bf%e0%b2%95%e0%b3%8b%e0%b2%a4%e0%b3%8d): ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಮತ್ತು ಬ್ರಹ್ಮಾವರದಲ್ಲಿ  ವಿಶಾಲವಾದ ಪೀಠೋಪಕರಣಗಳ ಬೃಹತ್ ಮಳಿಗೆಯನ್ನು ಹೊಂದಿರುವ ‘ಪ್ಲೆಸೆಂಟ್’ 22 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ 23ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಶುಭಾವಸರದಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪ್ರತಿವರ್ಷದಂತೆ ವಿಶೇಷ ದರ ಕಡಿತದ ಮಾರಾಟ ಜ.11ರಿಂದ ಜ.31ರ ವರೆಗೆ ಹಮ್ಮಿಕೊಂಡಿದೆ. ವಿಶಾಲ, ವಿಶಿಷ್ಟ, ವಿಪುಲ ಸಂಗ್ರಹವನ್ನೊಳಗೊಂಡ ಪ್ಲೆಸೆಂಟ್ ಶೋರೂಂ ಅಂತಾರಾಷ್ಟ್ರೀಯ ಗುಣಮಟ್ಟದ ಬ್ರ್ಯಾಂಡ್‌ಗಳಾದ ಕುರ್ಲಾನ್, ಜುವಾರಿ, ಡ್ಯುರೋ ಪ್ಲೆಕ್ಸ್ ಸ್ಲಿಪ್ ವೆಲ್, ಗೋದ್ರೆಜ್, ಸ್ಟ್ಯಾಷ್, ವೇಲ್ಸ್, ಬೊಂಬೆ ಡೈಯಿಂಗ್, ನೀಲ್‌ಕಮಲ್, ಸೆಲ್ಲೊ ಸುಪ್ರೀಮ್ ಇನ್ನಿತರ ಬ್ರ್ಯಾಂಡ್‌ಗಳ ವಿಶೇಷ ಸಂಗ್ರಹವನ್ನು ಹೊಂದಿರುವ ಏಕೈಕ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೀಠೋಪಕರಣಗಳು, ಪರದೆಗಳು, ಒಳಾಂಗಣಾಲಂಕಾರಗಳ ಬೃಹತ್ ದಾಸ್ತಾನನ್ನು ಹೊಂದಿದೆ. ಗುಣಮಟ್ಟದ ಸೇವೆಗೆ ಹೆಸರಾದ ಸಂಸ್ಥೆ ವಾರ್ಷಿಕೋತ್ಸವದ ಅಂಗವಾಗಿ ಗ್ರಾಹಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದ್ದು, ಬುಕ್ಕಿಂಗ್ ವ್ಯವಸ್ಥೆ ಉಚಿತ ಸಾಗಾಟ ನೀಡುವುದರ ಜತೆಗೆ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ. ಗ್ರಾಹಕರು ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪಾಲುದಾರರಾದ ಇಬ್ರಾಹಿಂ … - [ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್..! ಡೆತ್‌ನೋಟ್‌ನಲ್ಲಿ ಏನಿದೆ?](https://kannadakaravali.com/%e0%b2%a1%e0%b3%86%e0%b2%82%e0%b2%9f%e0%b2%b2%e0%b3%8d-%e0%b2%b5%e0%b2%bf%e0%b2%a6%e0%b3%8d%e0%b2%af%e0%b2%be%e0%b2%b0%e0%b3%8d%e0%b2%a5%e0%b2%bf%e0%b2%a8%e0%b2%bf-%e0%b2%86%e0%b2%a4%e0%b3%8d%e0%b2%ae): ಕನ್ನಡ ಕರಾವಳಿ ಸುದ್ದಿ:  ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಬರೆದಿಟ್ಟಿದ್ದ ಡೆತ್‌ ನೋಟ್ ಇದೀಗ ಪತ್ತೆಯಾಗಿದೆ. ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿ ದ್ದಳು. ಈ ಕುರಿತು ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ತರಗತಿಯಲ್ಲಿ ಅವಮಾನಿಸಿದ್ದಾರೆ ಹಾಗೂ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಆದರೆ ಇದೀಗ ಡೆತ್‌ನೋಟ್ ಸಿಕ್ಕಿದೆ. ಮೃತ ಯಶಸ್ವಿನಿ ಡೆತ್‌ನೋಟ್‌ನಲ್ಲಿ ನಾನು ಬದುಕಲಿಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ ಥ್ಯಾಂಕ್ ಯು ಸೋ ಮಚ್ ಎಂದು ಬರೆದಿದ್ದಾಳೆ. ಹೌದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಯಶಸ್ವಿನಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ.ಪರೀಕ್ಷೆಯ ವೇಳೆ ಓಎಂಆರ್ ಶೀಟ್ ಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.   - [ಚಾರ್ಮಾಡಿ ಘಾಟಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಲಾರಿ ಭಸ್ಮ: ಮೂವರು ಪಾರು ](https://kannadakaravali.com/%e0%b2%9a%e0%b2%be%e0%b2%b0%e0%b3%8d%e0%b2%ae%e0%b2%be%e0%b2%a1%e0%b2%bf-%e0%b2%98%e0%b2%be%e0%b2%9f%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%86%e0%b2%95%e0%b2%b8%e0%b3%8d%e0%b2%ae): ಕನ್ನಡ ಕರಾವಳಿ ಸುದ್ದಿ:ಮೆಕ್ಕೆಜೋಳ ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋದ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ. ಚಿಕ್ಕಮಗಳೂರಿನಿಂದ ಮೂಡಬಿದಿರೆ ಕಡೆಗೆ ಮೆಕ್ಕೆಜೋಳದ ಲೋಡು ತೆಗೆದುಕೊಂಡು ಹೋಗುತ್ತಿದ್ದ ಲಾರಿ ಜ.9 ರಂದು ಮಧ್ಯರಾತ್ರಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆ ವೇಳೆ ಲಾರಿಯಲ್ಲಿದ್ದ ಚಾಲಕ ಸೇರಿ ಮೂವರು ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೆಕ್ಕೆಜೋಳ ಬೆಂಕಿಗಾಹುತಿಯಾಗಿದೆ. ಲಾರಿಯ ಟಯರ್ ಭಾಗದಿಂದ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಲಾರಿಗೆ ವ್ಯಾಪಿಸಿದ್ದು, ಲಾರಿಯಲ್ಲಿದ್ದ ಮೆಕ್ಕೆಜೋಳ ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ. ಲಾರಿಯೂ ಸಹ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ತೀವ್ರತೆಯಿಂದ ಚಾರ್ಮಾಡಿ ಘಾಟ್‌ನ ಅರಣ್ಯ ಪ್ರದೇಶಕ್ಕೂ ಅಗ್ನಿ ವ್ಯಾಪಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳೀಯ ಯವಕರು ಬೆಳ್ತಂಗಡಿ ಅಗ್ನಿಶಾಮಕ ದಳ ಮತ್ತು ಬೆಳ್ತಂಗಡಿ … - [ಮನೆ ಅಡಿಪಾಯ ತೆಗೆಯುತ್ತಿದ್ದ ವೇಳೆ ತಂಬಿಗೆಯಲ್ಲಿ ಅಪಾರ ಪ್ರಮಾಣದ ನಿಧಿ ಪತ್ತೆ](https://kannadakaravali.com/%e0%b2%ae%e0%b2%a8%e0%b3%86-%e0%b2%85%e0%b2%a1%e0%b2%bf%e0%b2%aa%e0%b2%be%e0%b2%af-%e0%b2%a4%e0%b3%86%e0%b2%97%e0%b3%86%e0%b2%af%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6): ಕನ್ನಡ ಕರಾವಳಿ ಸುದ್ದಿ: ಮನೆ ಕಟ್ಟಲು ಅಡಿಪಾಯ ತೆಗೆಯುತ್ತಿದ್ದಾಗ ಅಪಾರ ಪ್ರಮಾಣದ ನಿಧಿ ಪತ್ತೆಯಾಗಿರುವ ಘಟನೆ ನಡೆದಿದೆ. ನಿಧಿ ನೋಡಲು ಗ್ರಾಮಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ರಾಜ ಮಹಾರಾಜರು ವಾಸವಾಗಿದ್ದರು ಎನ್ನಲಾದ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ್ ರಿತ್ತಿ ಎಂಬುವವರ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಪಾಯ ತೆಗೆಯುತ್ತಿದ್ದಾಗ ಮಣ್ಣಿನಡಿಯಲ್ಲಿ ತಂಬಿಗೆಯೊಂದರಲ್ಲಿ ನಿಧಿ ಪತ್ತೆಯಾಗಿದೆ. ಪುರಾತನ ಕಾಲದ ಹಾರ ಹಾಗೂ ಕೆಲ ವಸ್ತುಗಳು ಸಿಕಿದ್ದು, ಅಂದಾಜು ಒಂದು ಕೆಜಿಯಷ್ಟು ನಿಧಿ ಸಿಕ್ಕಿದೆ ಎಂದು ತಿಳಿದುಬಂದಿದೆ. ನಿಧಿ ಸಿಕ್ಕ ಬಗ್ಗೆ ಮನೆಯವರು ತಹಶಿಲ್ದಾರ್ ಹಾಗೂ ಪೊಲೀಸರಿಗೆ ತಿಳಿಸಿದ್ದು, ಲಕ್ಕುಂಡಿ ಗ್ರಾಮಕ್ಕೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಕುಟುಂಬದವರು ಸಿಕ್ಕ ನಿಧಿಯನ್ನು ಗ್ರಾಮದ ಗಣೇಶ ದೇವಾಲಯದಲ್ಲಿ ಇಟ್ಟಿದ್ದಾರೆ. ದೇವಾಲಯಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. - [ವಿಚ್ಛೇದಿತ ಮಹಿಳೆಗೆ ಬಾಳು ಕೊಡೋದಾಗಿ 36 ಲಕ್ಷ ಪಡೆದು ಪರಾರಿ, ಮತ್ತೊಂದು ಮದುವೆಗೆ ಸಜ್ಜು!](https://kannadakaravali.com/%e0%b2%b5%e0%b2%bf%e0%b2%9a%e0%b3%8d%e0%b2%9b%e0%b3%87%e0%b2%a6%e0%b2%bf%e0%b2%a4-%e0%b2%ae%e0%b2%b9%e0%b2%bf%e0%b2%b3%e0%b3%86%e0%b2%97%e0%b3%86-%e0%b2%ac%e0%b2%be%e0%b2%b3%e0%b3%81-%e0%b2%95): ಕನ್ನಡ ಕರಾವಳಿ ಸುದ್ದಿ: ವಿಚ್ಛೇದಿತ ಮಹಿಳೆಗೆ ಬಾಳು ಕೊಡೋದಾಗಿ ಮದುವೆ, ಬಳಿಕ ಕೈಗೊಂದು ಮಗುವನ್ನು ಕೊಟ್ಟು ಆಕೆಯಿಂದ 36 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿದ್ದಾನೆ. ಇದೀಗ ಮತ್ತೊಂದು ಮದುವೆಗೆ ಸಜ್ಜಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿಚ್ಚೇದಿತ ಮಹಿಳೆಗೆ ಬಾಳು ಕೊಡುತ್ತೇನೆ, ನಿನ್ನೊಂದಿಗೆ ನನ್ನ ಸುಂದರ ಜೀವನ ಎಂದೆಲ್ಲಾ ಮರುಳು ಮಾಡಿ ಮದುವೆಯಾದ ಅಸಾಮಿ, ಬಳಿಕ ಒಂದೇ ವರ್ಷದಲ್ಲಿ ಮಗು ಕೈಗೆ ನೀಡಿ ಆಕೆಯ ಬಳಿ ಇದ್ದ ನಗದು, ಚಿನ್ನಾಭರಣ ಸೇರಿ ಬರೋಬ್ಬರಿ 36 ಲಕ್ಷ ರೂಪಾಯಿ ಪಡೆದು ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ ಬೆಂಗಳೂರಿನ ಬನಶಂಕರಿಯ ಕಿರಾತಕ ಮೋಹನ್ ರಾಜ್ ಈ ಅಸಾಮಿ. ಮೋಹನ್ ರಾಜ್ ವಿರುದ್ದ ಮಹಿಳೆ ಗಂಭೀರ ಆರೋಪ ಮಾಡಿ ದೂರು ನೀಡಿದ್ದಾಳೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ ಪೊಲೀಸರು ಮೇಲೂ ಮಹಿಳೆ ನಿರ್ಲಕ್ಷ್ಯದ ಆರೋಪ ಮಾಡಿದ್ದಾಳೆ. ಪೊಲೀಸರು ತನಗೆ ನ್ಯಾಯ ಕೊಡಿಸುತ್ತಿಲ್ಲ ಎಂದು ಆರೋಪಿಸಿದ್ದಾಳೆ. ತನಗೆ ಕಳೆದ 10 … - [2,000 ರೂ.ಗಾಗಿ ಗಂಡ-ಹೆಂಡತಿ ನಡುವೆ ಜಗಳ: ಮನನೊಂದ ಪತ್ನಿ ನೇಣಿಗೆ ಶರಣು! ](https://kannadakaravali.com/2000-%e0%b2%b0%e0%b3%82-%e0%b2%97%e0%b2%be%e0%b2%97%e0%b2%bf-%e0%b2%97%e0%b2%82%e0%b2%a1-%e0%b2%b9%e0%b3%86%e0%b2%82%e0%b2%a1%e0%b2%a4%e0%b2%bf-%e0%b2%a8%e0%b2%a1%e0%b3%81%e0%b2%b5%e0%b3%86-%e0%b2%9c): ಕನ್ನಡ ಕರಾವಳಿ ಸುದ್ದಿ: 2000 ರೂಪಾಯಿ ಹಣಕ್ಕಾಗಿ ಗಂಡ-ಹೆಂಡತಿ ನಡುವೆ ಜಗಳ ಆರಂಭವಾಗಿ ಮನನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸುಮಾ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಎಂಟು ವರ್ಷಗಳ ಹಿಂದೆ ಚಂದ್ರಶೇಖರ್ ಜೊತೆ ಸುಮಾ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಸ್ವಸಹಾಯ ಸಂಘದ ಕಂತು ಕಟ್ಟಲೆಂದು ಸುಮಾ 2000 ಹಣವನ್ನು ಮನೆಯಲ್ಲಿ ಎತ್ತಿಟ್ಟಿದ್ದರು. ಈ ಹಣವನ್ನು ಪತಿ ಚಂದ್ರಶೇಖರ್ ಯಾವುದೋ ಸಬೂಬು ಹೇಳಿ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಕಂತು ಕಟ್ಟಲೆಂದು ಇಟ್ಟಿದ್ದ ಹಣವನ್ನೂ ಪತಿ ಬಳಸಿಕೊಂಡಿದ್ದಕ್ಕೆ ಪತ್ನಿ ಸುಮಾ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರವಾಗಿ ಗಂಡ-ಹೆಂಡತಿ ನಡುವೆ ಗಲಾಟೆಯಾಗಿದೆ. ಜಗಳವಾಡಿ ಪತಿ ತನ್ನಪಾಡಿಗೆ ತಾನು ಕೆಲಸಕ್ಕೆ ಹೋಗಿದ್ದಾನೆ. ಪತಿಯ ಬೈಗುಳ, ಗಲಾಟೆಗೆ ತೀವ್ರವಾಗಿ ಮನನೊಂದ ಸುಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲಸದಿಂದ ಮನೆಗೆ ಬಂದು ನೋಡಿದ ಪತಿ ಶಾಕ್ ಆಗಿದ್ದಾನೆ. ಪತ್ನಿ ನೇಣಿಗೆ ಕೊರಳೊಡ್ಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ. … - [ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ, ಮಹಿಳೆ ಸಾವು](https://kannadakaravali.com/%e0%b2%89%e0%b2%a1%e0%b3%81%e0%b2%aa%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%a6%e0%b2%be%e0%b2%9f%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a6%e0%b3%8d%e0%b2%a6): ಕನ್ನಡ ಕರಾವಳಿ ಸುದ್ದಿ:ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೇರು ಬೀಜ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ ವೇಳೆ  ಬೈಕ್ ಡಿಕ್ಕಿಯಾಗಿ ಮಹಿಳೆ ಸಾವನಪ್ಪಿದ ಘಟನೆ ಜ.9 ರಂದು ನಡೆದಿದೆ ಉದ್ಯಾವರ ಗ್ರಾಮದ ನಿವಾಸಿ  ಜಲಜಾಕ್ಷಿ(65) ಮೃತಪಟ್ಟವರು. ಗೇರು ಬೀಜ ಪ್ಯಾಕ್ಟರಿಗೆ ಕೆಲಸಕ್ಕೆ ಹೋಗಿ ಮನೆಗೆ ಬರುವಾಗ ಸಮಯ ಸುಮಾರು 6:30 ಗಂಟೆಗೆ ಉದ್ಯಾವರ ಗ್ರಾಮದ ಬೋಳ್ಜೆ ಗರಡಿ ಕ್ರಾಸ್ ಬಳಿ ಶಕ್ತಿ ಗ್ರಾನೆಟ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಬದಿಯ ಮಂಗಳೂರು- ಉಡುಪಿ ರಸ್ತೆಯನ್ನು ದಾಟಿ, ಉಡುಪಿ- ಮಂಗಳೂರು ರಸ್ತೆಯನ್ನು ದಾಟುತ್ತಿದ್ದ ಸಮಯ ಉಡುಪಿ ಕಡೆಯಿಂದ ಓರ್ವ ಬೈಕನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಜಲಜಾಕ್ಷಿರವರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಜಲಜಾಕ್ಷಿರವರು ರಸ್ತೆಗೆ ಬಿದ್ದು ಅವರ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿರುತ್ತದೆ. ಕೂಡಲೇ ಅವರನ್ನು ಕಿಶೋರ್ ರವರು ತಮ್ಮ ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ … - [ಕುಂದಾಪುರ: ಸೌಡ ಬಳಿ ಆಟೋ ಮಗುಚಿ ಬಿದ್ದು, ಬಾಲಕ ಗಂಭೀರ ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%b8%e0%b3%8c%e0%b2%a1-%e0%b2%ac%e0%b2%b3%e0%b2%bf-%e0%b2%86%e0%b2%9f%e0%b3%8b-%e0%b2%ae%e0%b2%97%e0%b3%81%e0%b2%9a): ಕನ್ನಡ ಕರಾವಳಿ ಸುದ್ದಿ: ಯಕ್ಷಗಾನ ತರಬೇತಿ ತರಗತಿ ಮುಗಿಸಿಕೊಂಡು ಆಟೋ ರಿಕ್ಷಾದಲ್ಲಿ ಧ್ರುವರಾಜ್ (11) ಮನೆಗೆ ವಾಪಾಸಾಗುತ್ತಿರುವಾಗ, ಸೌಡ ಬಳಿ ಆಟೋ ಚಾಲಕ ಅತೀ ವೇಗವಾಗಿ ಆಟೋ ಚಲಾಯಿಸಿದ್ದರ ಪರಿಣಾಮ ಆಟೋ ಮಗುಚಿ ಬಿದ್ದ ಘಟನೆ ನಡೆದಿದೆ. ಆಟೋದಲ್ಲಿದ್ದ ಧ್ರುವರಾಜ್ ಗಂಭೀರವಾಗಿ ಗಾಯಗೊಂಡ ಪರಿಣಾಮ, ಅವನನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆಟೋ ಚಾಲಕ ಬಾಲಕನ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದ್ದ. ಇಲ್ಲಿಯ ತನಕ ಚಿಕಿತ್ಸೆಗೆ ಹಣ ನೀಡದೆ ಇರುವುದರಿಂದ ಧ್ರುವರಾಜ್ ತಾಯಿ ಸೌಡ ನಾಗರತ್ನ ಎನ್.ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಜಾಲತಾಣದಲ್ಲಿ ಅವಹೇಳನಕಾರಿ ವಿಡಿಯೋ ಪೋಸ್ಟ್: ಶ್ರೀನಾಥ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು](https://kannadakaravali.com/%e0%b2%9c%e0%b2%be%e0%b2%b2%e0%b2%a4%e0%b2%be%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b6%e0%b3%8d%e0%b2%b0%e0%b3%80-%e0%b2%95%e0%b3%8d%e0%b2%b7%e0%b3%87%e0%b2%a4%e0%b3%8d%e0%b2%b0): ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಮತ್ತು ಅವರ ಕುಟುಂಬದವರ ಬಗ್ಗೆ ಅಶ್ಲೀಲ ಪದಗಳನ್ನು ಉಪಯೋಗಿಸಿ ಅವಹೇಳನಕಾರಿ ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿರುವ ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಮುಂಬಯಿಯಲ್ಲಿರುವ ಅಣ್ಣ ಬಾಂಡ್ ಶ್ರೀನಾಥ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳದ ಪವನ್ ಕುಮಾರ್ ಎಂಬವರ ದೂರಿನ ಮೇರೆ ಜ.8ರಂದು BNS 296 ಅಡಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಣ್ಣ ಬಾಂಡ್ ಶ್ರೀನಾಥ್ ಶೆಟ್ಟಿ ವಿರುದ್ಧ ಈ ಹಿಂದೆ ಹಲವು ಪ್ರಕರಣ ದಾಖಲಾಗಿದೆ. - [ಚಿನ್ನ ಕಳವು ಪ್ರಕರಣ: ಶಬರಿಮಲೆ ಪ್ರಧಾನ ಅರ್ಚಕ ಬಂಧನ](https://kannadakaravali.com/%e0%b2%9a%e0%b2%bf%e0%b2%a8%e0%b3%8d%e0%b2%a8-%e0%b2%95%e0%b2%b3%e0%b2%b5%e0%b3%81-%e0%b2%aa%e0%b3%8d%e0%b2%b0%e0%b2%95%e0%b2%b0%e0%b2%a3-%e0%b2%b6%e0%b2%ac%e0%b2%b0%e0%b2%bf%e0%b2%ae%e0%b2%b2): ಕನ್ನಡ ಕರಾವಳಿ ಸುದ್ದಿ: ಶಬರಿಮಲೆ ಚಿನ್ನಾಭರಣ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಶುಕ್ರವಾರ ಇಲ್ಲಿನ ಅಯ್ಯಪ್ಪ ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವ್ ಅವರನ್ನು ಬಂಧಿಸಿದೆ. ಅವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೊಳಪಡಿಸಿ, ನಂತರ ಮಧ್ಯಾಹ್ನ ಎಸ್‌ಐಟಿ ಕಚೇರಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅಧಿಕೃತವಾಗಿ ಬಂಧಿಸಲಾಯಿತು ಎಂದು ಮೂಲಗಳು ಹೇಳಿವೆ. ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪಾಟಿ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಎ ಪದ್ಮಕುಮಾ‌ರ್ ನೀಡಿದ ಹೇಳಿಕೆಗಳನ್ನು ಆಧರಿಸಿ ಪ್ರಧಾನ ಅರ್ಚಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೀವರು ಪಾಟಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಮತ್ತು ದ್ವಾರಪಾಲಕರ ವಿಗ್ರಹಗಳ ಚಿನ್ನದ ಲೇಪನ ಬದಲಾಯಿಸಲು ಶಿಫಾರಸು ಮಾಡಿದ್ದಾರೆ ಎಂದು ಎಸ್‌ಐಟಿ ತನಿಖೆ ವೇಳೆ ತಿಳಿದುಬಂದಿದೆ. ಕೆಲವು ದಿನಗಳ ಹಿಂದೆ, ದೇವಾಲಯದ ಒಳಗಿನಿಂದ ಚಿನ್ನ ಕಳವು ಮಾಡಲಾಗಿದೆ ಎಂದು ಬೆಳಕಿಗೆ ಬಂದಿತ್ತು. ಶಬರಿಮಲೆ ಚಿನ್ನದ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಇನ್ನಷ್ಟು ಸಂವೇದನಾಶೀಲ ಸಂಗತಿಗಳನ್ನು ಬಹಿರಂಗಪಡಿಸಿದೆ. … - [ಹೆಮ್ಮಾಡಿ: ಕಾರು -ಬೈಕ್‌ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕ ಸಾವು](https://kannadakaravali.com/%e0%b2%b9%e0%b3%86%e0%b2%ae%e0%b3%8d%e0%b2%ae%e0%b2%be%e0%b2%a1%e0%b2%bf-%e0%b2%95%e0%b2%be%e0%b2%b0%e0%b3%81-%e0%b2%ac%e0%b3%88%e0%b2%95%e0%b3%8d-%e0%b2%85%e0%b2%aa%e0%b2%98%e0%b2%be): ಕನ್ನಡ ಕರಾವಳಿ ಸುದ್ದಿ: ಹೆಮ್ಮಾಡಿ ರಸ್ತೆಯ ಬಾಳಿಕೆರೆ ಜಾಡಿ ಹೈಗುಳಿ ದೇವಸ್ಥಾನದ ಜಾಡಿ ರಸ್ತೆಯ ಬಳಿ ಮಂಗಳವಾರ ನಡೆದ ಕಾರು ಬೈಕ್‌ ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಗುಡ್ಡಮ್ಮಾಡಿಯ ರಾಘವೇಂದ್ರ – ನಾಗರತ್ನ ದಂಪತಿಯ ಪುತ್ರ ದರ್ಶಿತ್ (3) ಮೃತ ಬಾಲಕ. ಈತ ತಂದೆ ತಾಯಿ ಜತೆ ಬೈಕಿನಲ್ಲಿ ಕೊಲ್ಲೂರು ಕಡೆಯಿಂದ ಹೆಮ್ಮಾಡಿ ಕಡೆಗೆ ಬರುತ್ತಿದ್ದಾಗ ಹೆಮ್ಮಾಡಿ ಕಡೆಯಿಂದ ಜೋಶಿ ವಿ. ತೋಮಸ್ ಚಲಾಯಿಸಿಕೊಂಡು ಬಂದ ಕಾರು ಢಿಕ್ಕಿಯಾಗಿತ್ತು. ಪರಿಣಾಮ ಬೈಕ್ ಸವಾರ ರಾಘವೇಂದ್ರ, ನಾಗರತ್ನ ಹಾಗೂ ದರ್ಶಿತ್ ಗಾಯಗೊಂಡಿದ್ದರು. ಮೂವರನ್ನೂ ಆಸ್ಪತ್ರೆಗೆ ಸೇರಿಸಿದ್ದು, ದರ್ಶಿತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರಾಘವೆಂದ್ರ ಹಾಗೂ ನಾಗರತ್ನ ಚೇತರಿಸಿಕೊಳ್ಳುತ್ತಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ಮನೋಹರ ಪೈ ನಿಧನ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%ad%e0%b2%82%e0%b2%a1%e0%b2%be%e0%b2%b0%e0%b3%8d%e0%b2%95%e0%b2%be%e0%b2%b0%e0%b3%8d%e0%b2%b8%e0%b3%8d): ಕನ್ನಡ ಕರಾವಳಿ ಸುದ್ದಿ: ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್ ಕಟೀಲು ಮನೋಹರ ಪೈ (81) ಜ.9 ರಂದು ನಿಧನರಾದರು. ಸಸ್ಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವುಳ್ಳ ಅವರು ಉತ್ತಮ ಕ್ರೀಡಾಪಟುವಾಗಿ, ಕನ್ನಡ, ಇಂಗ್ಲೀಷ್ ಸಾಹಿತ್ಯ ಅಧ್ಯಯನದ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಪರಿಸರ ರಕ್ಷಣೆ ಬಗ್ಗೆ ಬಹಳ ಕಾಳಜಿವುಳ್ಳವರಾಗಿ ಸಮಾನ ಮನಸ್ಕರೊಂದಿಗೆ ಅಭಿಯಾನ ನಡೆಸಿದವರು. ರೋಟರಿ ಕುಂದಾಪುರ ದಕ್ಷಿಣದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದವರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರದ ಪ್ರಸಿದ್ಧ ಕಟೀಲು ಮನೆತನದ ಸದಸ್ಯರಾಗಿದ್ದ ಇವರು ಸ್ನೇಹಪರ ನಡವಳಿಕೆಯಿಂದ ಸಮಾಜದಲ್ಲಿ ಜನಪ್ರಿಯರಾಗಿದ್ದರು. ಇವರು ಪತ್ನಿ ಹಾಗೂ ಓರ್ವ ಪುತ್ರರನ್ನು ಅಗಲಿದ್ದಾರೆ. ಹಲವು ಗಣ್ಯರು ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. - [ನಿಗೂಢವಾಗಿ ನಾಪತ್ತೆಯಾದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನ!](https://kannadakaravali.com/%e0%b2%a8%e0%b2%bf%e0%b2%97%e0%b3%82%e0%b2%a2%e0%b2%b5%e0%b2%be%e0%b2%97%e0%b2%bf-%e0%b2%a8%e0%b2%be%e0%b2%aa%e0%b2%a4%e0%b3%8d%e0%b2%a4%e0%b3%86%e0%b2%af%e0%b2%be%e0%b2%a6-%e0%b2%aa%e0%b2%a4%e0%b2%bf): ಕನ್ನಡ ಕರಾವಳಿ ಸುದ್ದಿ: ಪತ್ನಿ ಮತ್ತು ಪುಟ್ಟ ಮಗು ನಿಗೂಢವಾಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮನನೊಂದ ಪತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ಕಡಬ ತಾಲೂಕಿನ ರಾಮಕುಂಜದಲ್ಲಿ ನಡೆದಿದೆ. ಮೂಲತಃ ಕೊಯಿಲ ನಿವಾಸಿಯಾದ ಮುನೀರ್ ಮತ್ತು ಮೂಡಿಗೆರೆ ಮೂಲದ ನೇಹಾ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮುನೀರ್ ತನ್ನ ಪತ್ನಿ ಮತ್ತು ಸಣ್ಣ ಮಗನೊಂದಿಗೆ ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು. ಹಿರಿಯ ಮಗಳನ್ನು ರಾಮಕುಂಜದಲ್ಲಿರುವ ಅಜ್ಜಿಯ ಮನೆಯಲ್ಲಿ ಬಿಟ್ಟಿದ್ದರು. ಡಿಸೆಂಬರ್ 25 ರಂದು ಮುನೀರ್ ಬೆಂಗಳೂರಿನಿಂದ ಒಬ್ಬನೇ ರಾಮಕುಂಜಕ್ಕೆ ಬಂದಿದ್ದನು. ಪತ್ನಿ ಮತ್ತು ಮಗು ಎಲ್ಲಿ ಎಂದು ಮನೆಯವರು ವಿಚಾರಿಸಿದಾಗ, “ಅವರು ಇನ್ನೆರಡು ದಿನಗಳಲ್ಲಿ ಬರುತ್ತಾರೆ” ಎಂದು ನಂಬಿಸಿದ್ದನು. ಆದರೆ ದಿನಗಳು ಕಳೆದರೂ ಅವರು ಮರಳಲಿಲ್ಲ. ಈ ನಡುವೆ ಮುನೀರ್ ತನ್ನ ಪತ್ನಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದುದನ್ನು ಮನೆಯವರು ಗಮನಿಸಿದ್ದರು. ಪತ್ನಿ ಮತ್ತು ಮಗುವಿನ ನಾಪತ್ತೆಯಿಂದ ತೀವ್ರ ಖಿನ್ನತೆಗೊಳಗಾದಂತೆ … - [ಉಡುಪಿ ಶ್ರೀ ಕೃಷ್ಣನಿಗೆ 18 ಅಧ್ಯಾಯಗಳು ಮತ್ತು 700 ಶ್ಲೋಕಗಳಿರುವ  2 ಕೋಟಿ ರೂಪಾಯಿಯ ಚಿನ್ನದ ಭಗವದ್ಗೀತೆ ಸಮರ್ಪಣೆ  ](https://kannadakaravali.com/%e0%b2%89%e0%b2%a1%e0%b3%81%e0%b2%aa%e0%b2%bf-%e0%b2%b6%e0%b3%8d%e0%b2%b0%e0%b3%80-%e0%b2%95%e0%b3%83%e0%b2%b7%e0%b3%8d%e0%b2%a3%e0%b2%a8%e0%b2%bf%e0%b2%97%e0%b3%86-18-%e0%b2%85%e0%b2%a7%e0%b3%8d): ಕನ್ನಡ ಕರಾವಳಿ ಸುದ್ದಿ: ಪುತ್ತಿಗೆ ಶ್ರೀಗಳ ಪರ್ಯಾಯ ಸಮಾಪನ ಹಂತ ತಲುಪಿದೆ. ತಮ್ಮ ಸಂಪೂರ್ಣ ಪರ್ಯಾಯದ ಅವಧಿಯನ್ನು ಭಗವದ್ಗೀತೆಯ ಪ್ರಚಾರಕ್ಕೆ ಬಳಸಿಕೊಂಡ ಶ್ರೀಗಳು ಇದೀಗ ಮತ್ತೊಂದು ಮಹತ್ವದ ಕೊಡುಗೆ ನೀಡಿದ್ದಾರೆ. ದೆಹಲಿಯ ದಾನಿಯೊಬ್ಬರು ನೀಡಿರುವ 2 ಕೋಟಿ ರೂ ವೆಚ್ಚದ ಚಿನ್ನದ ಭಗವದ್ಗೀತೆಯನ್ನು ಅವರು ಕೃಷ್ಣನಿಗೆ ಸಮರ್ಪಿಸಿದ್ದಾರೆ. ಭಗವದ್ಗೀತೆಯ 18 ಅಧ್ಯಾಯಗಳನ್ನು ಚಿನ್ನದ ಹಾಳೆಗಳಲ್ಲಿ ಬರೆಯಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಎಸ್.ಲಕ್ಷ್ಮಿ ನಾರಾಯಣನ್ ಎಂಬವರು ಈ ಅಪರೂಪದ ಗ್ರಂಥವನ್ನು ಕೃಷ್ಣಮಠಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ವಿಶಿಷ್ಟ ಭಗವದ್ಗೀತೆಯಲ್ಲಿ ಎಲ್ಲ 18 ಅಧ್ಯಾಯಗಳು ಮತ್ತು 700 ಶ್ಲೋಕಗಳಿವೆ.ಉಡುಪಿ ಶ್ರೀ ಕೃಷ್ಣನಿಗೆ ಚಿನ್ನದ ಭಗವದ್ಗೀತೆ ಸಮರ್ಪಣೆ ಕೃಷ್ಣದೇವರಿಗೆ ಸಮರ್ಪಣೆಯ ವೇಳೆ ರಥ ಬೀದಿಯಲ್ಲಿ ಚಿನ್ನದ ಭಗವದ್ಗೀತೆಯ ಮೆರವಣಿಗೆ ನಡೆಯಿತು. ಚಿನ್ನದ ಪಾರ್ಥ ಸಾರಥಿ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಪರ್ಯಾಯ ಪುತ್ತಿಗೆ ಶ್ರೀಗಳು ಮಾತನಾಡಿ, “ಭಗವದ್ಗೀತೆ ಎಲ್ಲರ ಹೃದಯದಲ್ಲಿ ಅವ್ಯಕ್ತವಾಗಿದೆ. ಅದನ್ನು … - [ಕುರ್ಚಿ ಕದನಕ್ಕೆ ತಾತ್ಕಾಲಿಕ ಬ್ರೇಕ್; ಡಿಸಿಎಂ ಡಿಕೆಶಿ ಹೇಳಿದ್ದೇನು?](https://kannadakaravali.com/%e0%b2%95%e0%b3%81%e0%b2%b0%e0%b3%8d%e0%b2%9a%e0%b2%bf-%e0%b2%95%e0%b2%a6%e0%b2%a8%e0%b2%95%e0%b3%8d%e0%b2%95%e0%b3%86-%e0%b2%a4%e0%b2%be%e0%b2%a4%e0%b3%8d%e0%b2%95%e0%b2%be%e0%b2%b2%e0%b2%bf%e0%b2%95): ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಪಟ್ಟಕ್ಕಾಗಿ ಎಲ್ಲಾ ರೀತಿಯ ಕಸರತ್ತು ಮಾಡುತ್ತಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಬಿಗ್ ಶಾಕ್ ನೀಡಿದ್ದು, ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳದಿರಲು ನಿರ್ಧರಿಸಿದೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಜನವರಿ 8ರಂದು ದೆಹಲಿಗೆ ಮರುಲಿದ್ದು ಆವಾಗ ಮತ್ತೆ ಹೈಕಮಾಂಡ್ ಜೊತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಜನವರಿ 8ರಂದು ದೆಹಲಿಗೆ ಮರುಲಿದ್ದು ಆವಾಗ ಮತ್ತೆ ಹೈಕಮಾಂಡ್ ಜೊತೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಈ ಮಧ್ಯೆ ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಹಿರಿಯ ವೀಕ್ಷಕರಾಗಿ ನೇಮಕಗೊಂಡಿರುವ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ಸಿಗನಾಗಿ, ಪಕ್ಷಕ್ಕಾಗಿ ಕೆಲಸ ಮಾಡುವುದಾಗಿ ಗುರುವಾರ ಹೇಳಿದ್ದಾರೆ. ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಮತ್ತು ಜಾರ್ಖಂಡ್‌ ಮಾಜಿ ಶಾಸಕ ಬಂಧು ಟಿರ್ಕಿ ಅವರೊಂದಿಗೆ ಶಿವಕುಮಾರ್ ಅವರನ್ನು ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಪಕ್ಷದ ಹಿರಿಯ … - [ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ](https://kannadakaravali.com/%e0%b2%89%e0%b2%aa%e0%b2%a8%e0%b3%8d%e0%b2%af%e0%b2%be%e0%b2%b8%e0%b2%95%e0%b2%a8-%e0%b2%95%e0%b2%bf%e0%b2%b0%e0%b3%81%e0%b2%95%e0%b3%81%e0%b2%b3%e0%b2%95%e0%b3%8d%e0%b2%95%e0%b3%86-%e0%b2%ac%e0%b3%87): ಕನ್ನಡ ಕರಾವಳಿ ಸುದ್ದಿ: ಡೆಂಟಲ್‌ ಕಾಲೇಜಿನಲ್ಲಿ ಉಪನ್ಯಾಸಕನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದೆ. ಡೆಂಟಲ್ ವಿದ್ಯಾರ್ಥಿನಿ ಯಶಸ್ವಿನಿ (23) ನೇಣಿಗೆ ಶರಣಾಗಿದ್ದಾಳೆ. ಪರಿಮಳ ಹಾಗೂ ಭೂದೇವಯ್ಯ ದಂಪತಿಯ ಏಕೈಕ ಪುತ್ರಿಯಾಗಿರುವ ಯಶಸ್ವಿನಿ ಮೃತ ವಿದ್ಯಾರ್ಥಿನಿ. ಕಾಲೇಜಿನಲ್ಲಿ ಉಪನ್ಯಾಸಕನ ಕಿರುಕುಳದಿಂದ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಬೊಮ್ಮನಹಳ್ಳಿಯ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಯಶಸ್ವಿನಿ, ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ ವಿಭಾಗದಲ್ಲಿ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿ ಓದುತ್ತಿದ್ದಳು. ಕಣ್ಣು ನೋವಾಗಿದ್ದರಿಂದ ಯಶಸ್ವಿನಿ ಬುಧವಾರ ಕಾಲೇಜಿಗೆ ರಜೆ ಹಾಕಿದ್ದಳು. ಗುರುವಾರ ಕಾಲೇಜಿಗೆ ಹೋದಾಗ ವಿದ್ಯಾರ್ಥಿಗಳ ಮುಂದೆ ಆಕೆಗೆ ಅವಮಾನ ಮಾಡಲಾಗಿದೆ. ಕಣ್ಣಿಗೆ ಯಾವ ಡ್ರಾಪ್ಸ್ ಬಳಸಿದೆ, ಎಷ್ಟು ಹನಿ ಹಾಕಿಕೊಂಡೆ ಎಂದು ಪ್ರಶ್ನಿಸಿದ್ದಾರೆ. ಇಡೀ ಬಾಟಲಿ ಸುರಿದುಕೊಂಡ್ರಾ ಎಂದು ಉಪನ್ಯಾಸಕ ಅವಮಾನಿಸಿದ್ದಾರೆ. ಅಲ್ಲದೇ ಸೆಮಿನಾರ್‌ಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು … - [ಆಸ್ಕರ್ ಸ್ಪರ್ಧೆಗೆ ಆಯ್ಕೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಚಾಪ್ಟರ್-1](https://kannadakaravali.com/%e0%b2%86%e0%b2%b8%e0%b3%8d%e0%b2%95%e0%b2%b0%e0%b3%8d-%e0%b2%b8%e0%b3%8d%e0%b2%aa%e0%b2%b0%e0%b3%8d%e0%b2%a7%e0%b3%86%e0%b2%97%e0%b3%86-%e0%b2%86%e0%b2%af%e0%b3%8d%e0%b2%95%e0%b3%86%e0%b2%af%e0%b2%be): ಕನ್ನಡ ಕರಾವಳಿ ಸುದ್ದಿ: ರಿಷಬ್ ಶೆಟ್ಟಿ ನಿರ್ದೇಶಿಸಿ ಅಭಿನಯಿಸಿರುವ ಕಾಂತಾರಾ ಚಾಪ್ಟರ್-1 ಆಸ್ಕರ್ ಪ್ರಶಸ್ತಿ ರೇಸ್ ನ್ನು ಪ್ರವೇಶಿಸಿರುವುದು ಕನ್ನಡಿಗರಿಗೆ ಖುಷಿಯ ವಿಚಾರ. ಬಾಕ್ಸ್ ಆಫೀಸ್ ನಲ್ಲಿ 850 ಕೋಟಿ ರೂಪಾಯಿಗೂ ಹೆಚ್ಚಿನ ಗಳಿಕೆ ಕಂಡಿರುವ ಕಾಂತಾರಾ ಚಾಪ್ಟರ್-1ಸಿನಿಮಾ ಒಟಿಟಿಯಲ್ಲಿಯೂ ಪ್ರಸಾರ ಕಂಡಿದೆ. ಈ ನಡುವೆ ಆಸ್ಕರ್ ರೇಸ್ ನಲ್ಲಿ ಸ್ಥಾನ ಪಡೆದಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಈ ಚಿತ್ರ ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಟನಾಗಿ ಅಬಿನಯಿಸಿದ್ದಾರೆ. ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ಪ್ರತ್ಯೇಕ ಅರ್ಜಿ ಮೂಲಕ ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಕಾಂತಾರಾ ಆಸ್ಕರ್ ರೇಸ್ ನಲ್ಲಿದೆ. ಇನ್ನು ಮಹಾವತಾರ ನರಸಿಂಹ ಚಿತ್ರವೂ ಆಸ್ಕರ್ ರೇಸ್ ನಲ್ಲಿದೆ. ಇದು ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ಕ್ಷಣವಾಗಿದೆ. ಜನವರಿ 22ರಂದು ಆಸ್ಕರ್ ರೇಸ್ ನಲ್ಲಿರುವ ಚಿತ್ರಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಮಾರ್ಚ್ 15ರಂದು ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ನೀಡಲಾಗುತ್ತಿದೆ. - [ಯುವಕನಿಂದ ಪ್ರೀತಿಸುವಂತೆ ನಿರಂತರ ಕಿರುಕುಳ: ಅಪ್ರಾಪ್ತ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ](https://kannadakaravali.com/%e0%b2%af%e0%b3%81%e0%b2%b5%e0%b2%95%e0%b2%a8%e0%b2%bf%e0%b2%82%e0%b2%a6-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%b8%e0%b3%81%e0%b2%b5%e0%b2%82%e0%b2%a4%e0%b3%86-%e0%b2%a8%e0%b2%bf): ಕನ್ನಡ ಕರಾವಳಿ ಸುದ್ದಿ: ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ, ಯುವಕನೊಬ್ಬನ ನಿರಂತರ ಪ್ರೀತಿಯ ಕಿರುಕುಳಕ್ಕೆ ಮನನೊಂದು 17 ವರ್ಷದ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುವಕನಿಗೆ ಎಚ್ಚರಿಕೆ ನೀಡಿದರೂ ಕಿರುಕುಳ ಮುಂದುವರೆದಿದ್ದರಿಂದ ಮನನೊಂದು ಯುವತಿ ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾಳೆ. ದೇಬೂರು ಗ್ರಾಮದ ಆದಿತ್ಯ ಎಂಬ ಯುವಕ, ದಿವ್ಯಳನ್ನು ಪ್ರೀತಿಸುವಂತೆ ನಿರಂತರವಾಗಿ ದುಂಬಾಲು ಬಿದ್ದು ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪವಿದೆ. ಈ ಕಿರುಕುಳದಿಂದ ಮಾನಸಿಕವಾಗಿ ನೊಂದ ದಿವ್ಯ, ತನ್ನ ಮೇಲೆ ನಡೆಯುತ್ತಿದ್ದ ಅಸಹ್ಯ ವರ್ತನೆ ಕುರಿತು ಪೋಷಕರಿಗೆ ಮಾಹಿತಿ ನೀಡಿದ್ದಳು. ಹೀಗಾಗಿ ದಿವ್ಯಳ ತಂದೆ ಗುರುಮೂರ್ತಿ, ಆದಿತ್ಯನನ್ನು ಕರೆದು ಕಿವಿಮಾತು ಹೇಳಿ, ಮಗಳೊಂದಿಗೆ ಇನ್ನು ಮುಂದೆ ಸಂಪರ್ಕಿಸಬಾರದು ಎಂದು ಎಚ್ಚರಿಕೆ ನೀಡಿದ್ದರು. ಆದರೂ ಆದಿತ್ಯ ತನ್ನ ವರ್ತನೆಯನ್ನು ಬದಲಿಸಿಕೊಳ್ಳದೇ, ನಿರಂತರವಾಗಿ ದಿವ್ಯಳಿಗೆ ಕಿರುಕುಳ ನೀಡುತ್ತಿದ್ದಾನೆ. ಮಾನಸಿಕ ಕಿರುಕುಳದಿಂದ ತೀವ್ರವಾಗಿ ಮನನೊಂದ ದಿವ್ಯ ಈ ನಿರಂತರ ಮಾನಸಿಕ ಕಿರುಕುಳದಿಂದ ತೀವ್ರವಾಗಿ ಮನನೊಂದ ದಿವ್ಯ, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. … - [ಭೀಕರ ಅಪಘಾತ:ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ, ನಾಲ್ವರು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ದುರ್ಮರಣ](https://kannadakaravali.com/%e0%b2%ad%e0%b3%80%e0%b2%95%e0%b2%b0-%e0%b2%85%e0%b2%aa%e0%b2%98%e0%b2%be%e0%b2%a4%e0%b2%a8%e0%b2%bf%e0%b2%82%e0%b2%a4%e0%b2%bf%e0%b2%a6%e0%b3%8d%e0%b2%a6-%e0%b2%b2%e0%b2%be%e0%b2%b0%e0%b2%bf): ಕನ್ನಡ ಕರಾವಳಿ ಸುದ್ದಿ: ತುಮಕೂರು ತಾಲೂಕು ಕೋರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ಕು ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ದುರ್ಮರಣ ಹೊಂದಿದ್ದಾರೆ. 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಕ್ಷಿ (7), ಮಾರುತಪ್ಪ, (45), ವೆಂಕಟೇಶ (30), ಗವಿಸಿದ್ದಪ್ಪ (28)ಮೃತರು. ಎಲ್ಲರೂ ಕೊಪ್ಪಳ ಜಿಲ್ಲೆಯ ಕುಕನೂರು ನಿವಾಸಿಗಳು.ಗಾಯಗೊಂಡ ಶ್ರೀನಿವಾಸ್, (32), ಪ್ರವೀಣ್ ಕುಮಾರ್ (28), ರಾಜಪ್ಪ (45), ಹುಲಿಗಪ್ಪ (32), ರಾಕೇಶ್ (24), ತಿರುಪತಿ (33), ಶ್ರೀನಿವಾಸ್, (32) ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4.45ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ನಿಂತಿದ್ದ ಲಾರಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿದ್ದ ಕ್ರೂಸರ್ ವಾಹನ ಡಿಕ್ಕಿ ಹೊಡೆದ ಹಿನ್ನೆಲೆ ಈ ಅಪಘಾತ ಸಂಭವಿಸಿದೆ. ಮೃತರೆಲ್ಲಾ ಕೊಪ್ಪಳ ಮೂಲದವರಾಗಿದ್ದಾರೆ. ಇವರು ಅಯ್ಯಪ್ಪ ಮಾಲೆ ಧರಿಸಿದ್ದು, ಶಬರಿಮಲೆಗೆ ಹೊರಟಿದ್ದರು ಎಂದು ಊಹಿಸಲಾಗಿದೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ … - [ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಶೀತ ಮಾರುತದ ಎಚ್ಚರಿಕೆ! ಯೆಲ್ಲೋ ಅಲರ್ಟ್ ಘೋಷಣೆ](https://kannadakaravali.com/%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%88-%e0%b2%9c%e0%b2%bf%e0%b2%b2%e0%b3%8d%e0%b2%b2%e0%b3%86%e0%b2%97%e0%b2%b3%e0%b2%bf%e0%b2%97-3): ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಾಗಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ. ರಾಜ್ಯದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ ಇನ್ನೆರಡು ದಿನ ರಾಜ್ಯದಲ್ಲಿ ಲಘು ಮಳೆಯಾಗುವ ಸಾಧ್ಯತೆ ಕೂಡ ಇದೆ. ಹಾಗೆಯೇ ದಾವಣಗೆರೆ, ಹಾವೇರಿ, ಬಾಗಲಕೋಟೆ, ಗದಗ, ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಶೀತದಲೆಯ ಪ್ರಮಾಣ ಹೆಚ್ಚಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಮುಂದಿನ 24 ರಿಂದ 48 ಗಂಟೆಯವರೆಗೆ ಇದೇ ತಾಪಮಾನ ಮುಂದುವರೆಯಲಿದ್ದು, ವೃದ್ಧರು, ಮಕ್ಕಳು ಹಾಗೂ ಅನಾರೋಗ್ಯ ಪೀಡಿತರು ಎಚ್ಚರಿಕೆಯಿಂದ ಇರುವಂತೆ ಕಠಿಣ ಸೂಚನೆ ಹೊರಡಿಸಲಾಗಿದೆ. ಜ. 10 ಹಾಗೂ 11 ರಂದು ಬೆಂಗಳೂರು ನಗರ, ಮೈಸೂರು, ಮಂಡ್ಯ ಚಾಮರಾಜನಗರ, ರಾಮನಗರ ಸೇರಿ ಹಲವೆಡೆ ಲಘು ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಚಿತ್ರದುರ್ಗ, ದಾವಣಗೆರೆ, ಕೊಡಗು, … - [ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಆತಂಕಕಾರಿ ಮಟ್ಟದಲ್ಲಿ ಏರಿಕೆ !](https://kannadakaravali.com/46242-2): ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದ್ದು, ಕಳೆದ ವರ್ಷ (ನವೆಂಬರ್ ಅಂತ್ಯಕ್ಕೆ) 3,954 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಮತ್ತೊಂದೆಡೆ ತನಿಖಾ ಹಂತದಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಉಳಿಯುತ್ತಿವೆ. 2025ನೇ ಸಾಲಿನಲ್ಲಿ ಒಟ್ಟು 807 ಪೋಕ್ಸೋ ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಇಷ್ಟು ದೊಡ್ಡ ಸಂಖ್ಯೆಯ ಪ್ರಕರಣಗಳ ಪೈಕಿ ಕೇವಲ 6 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. 2024ರಲ್ಲಿ 62 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, ಕೇವಲ 16 ಪ್ರಕರಣಗಳು ತನಿಖಾ ಹಂತದಲ್ಲಿವೆ. 2023ರಲ್ಲಿ 167 ಪ್ರಕರಣಗಳ ತನಿಖೆ ಪೂರ್ಣ ಗೊಂಡಿದ್ದು, ಕೇವಲ 4 ಪ್ರಕರಣಗಳು ತನಿಖಾ ಹಂತದಲ್ಲಿ ಬಾಕಿ ಉಳಿದಿವೆ. 2025ರಲ್ಲಿ 807 ಪ್ರಕರಣಗಳು ಇನ್ನೂ ಪೋಲೀಸ್ ತನಿಖೆಯ ಹಂತದಲ್ಲೇ ಇರುವುದು ಕಳವಳಕ್ಕೆ ಕಾರಣವಾಗಿದೆ. ಪೋಕ್ಸೋ ಕಾಯಿದೆಯ ಪ್ರಕಾರ, ದೂರು ದಾಖಲಾದ 60 ದಿನಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಆದರೆ 807 ಪ್ರಕರಣಗಳು … - [ಕುಂದಾಪುರ: ಸಬ್ಲಾಡಿಯ ಸ್ಟೀಲ್ ಬ್ರಿಡ್ಜ್ ಸಮೀಪ ರೈಲು ಡಿಕ್ಕಿಯಾಗಿ ಯುವಕ ಸಾವು ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%b8%e0%b2%ac%e0%b3%8d%e0%b2%b2%e0%b2%be%e0%b2%a1%e0%b2%bf%e0%b2%af-%e0%b2%b8%e0%b3%8d%e0%b2%9f%e0%b3%80%e0%b2%b2): ಕನ್ನಡ ಕರಾವಳಿ ಸುದ್ದಿ: ರೈಲು ಹಳಿ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲು ಡಿಕ್ಕಿಯಾಗಿ ಸಾವನಪ್ಪಿದ ಘಟನೆ ನಡೆದಿದೆ. ಹಟ್ಟಿಯಂಗಡಿ ಗ್ರಾಮದ ನಿವಾಸಿ ಜನಾರ್ದನ (39) ಮೃತಪಟ್ಟವರು. ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್ ಪ್ರೆಸ್ ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿಯ ಸ್ಟೀಲ್ ಬ್ರಿಡ್ಜ್ ಸಮೀಪ ಜ.8 ರಂದು ಬೆಳಿಗ 6 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಜನಾರ್ದನ ಅವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು. ಅವರ ದೊಡ್ಡಮ್ಮನ ಪುತ್ರ ಗಣೇಶ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. - [ಕುಂದಾಪುರ: ಗಂಗೊಳ್ಳಿಯ ಗುಜ್ಜಾಡಿ ಬಳಿ ನಾಪತ್ತೆಯಾಗಿದ್ದ ಬಾಲಕ ಕಲ್ಲಿನ ಪೊಟರೆಯಲ್ಲಿ ಪತ್ತೆ ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%97%e0%b2%82%e0%b2%97%e0%b3%8a%e0%b2%b3%e0%b3%8d%e0%b2%b3%e0%b2%bf%e0%b2%af-%e0%b2%97%e0%b3%81%e0%b2%9c%e0%b3%8d): ಕನ್ನಡ ಕರಾವಳಿ ಸುದ್ದಿ: ಶಾಲೆ ಮುಗಿಸಿ ಬಂದು ಸ್ನೇಹಿತರೊಂದಿಗೆ ಮನೆ ಸಮೀಪ ಆಟವಾಡುತ್ತಿದ್ದ ಬಾಲಕನೋರ್ವ ಸಂಜೆ ಬಳಿಕ ನಾಪತ್ತೆಯಾಗಿದ್ದು ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ಗಂಗೊಳ್ಳಿಯ ಗುಜ್ಜಾಡಿ ಬೆಣ್ಗೇರೆ ಎಂಬಲ್ಲಿ ಬುಧವಾರ ನಡೆದಿದೆ. ಬಳಿಕ ಗಂಗೊಳ್ಳಿ ಪೊಲೀಸರು ಹಾಗೂ ಸ್ಥಳೀಯರ ಸತತ 5 ಗಂಟೆಯ ಹುಡುಕಾಟದ ಬಳಿಕ ರಾತ್ರಿ 12:40ರ ಸುಮಾರಿಗೆ ಮನೆ ಸಮೀಪದ ಎತ್ತರ ಪ್ರದೇಶದ ಕಲ್ಲಿನ ಪೊಟರೆಯೊಳಗೆ ಬಾಲಕನನ್ನು ಪೊಲೀಸರು ಪತ್ತೆ ಹಚ್ಚಿ ಮನೆಯವರಿಗೆ ಒಪ್ಪಿಸಿದ್ದಾರೆ. ಘಟನೆ ವಿವರ: ಸ್ಥಳೀಯ ಸರಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕ ಬುಧವಾರ ಸಂಜೆ ಮನೆ ಸಮೀಪ ಬೇರೆ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದ. ಆದರೆ ಸಂಜೆ 7 ಘಂಟೆಯಾದರೂ ಬಾಲಕ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದನು. ಗಾಬರಿಗೊಂಡ ಮನೆಮಂದಿ ಹಾಗೂ ಸ್ಥಳೀಯರು ಬಾಲಕನಿಗಾಗಿ ಎಲ್ಲ ಹುಡುಕಾಡಿದ್ದಾರೆ. ಆದರೆ ಪತ್ತೆಯಾಗಲಿಲ್ಲ. ಬಳಿಕ ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ವಿವಿಧೆಡೆ … - [ಅವಳಿ ಮಕ್ಕಳನ್ನು ಸಂಪಿಗೆ ದೂಡಿ ತಾಯಿ ಆತ್ಮಹತ್ಯೆ](https://kannadakaravali.com/%e0%b2%85%e0%b2%b5%e0%b2%b3%e0%b2%bf-%e0%b2%ae%e0%b2%95%e0%b3%8d%e0%b2%95%e0%b2%b3%e0%b2%a8%e0%b3%8d%e0%b2%a8%e0%b3%81-%e0%b2%b8%e0%b2%82%e0%b2%aa%e0%b2%bf%e0%b2%97%e0%b3%86-%e0%b2%a6%e0%b3%82): ಕನ್ನಡ ಕರಾವಳಿ ಸುದ್ದಿ: ಅವಳಿ ಮಕ್ಕಳನ್ನು ಸಂಪಿಗೆ ತಳ್ಳಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲ್ಲೂಕಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೊನಿಯಲ್ಲಿ ನಡೆದಿದೆ. ವಿಜಯಲಕ್ಷ್ಮಿ ತನ್ನ ಮಕ್ಕಳ ಜೊತೆ ಸಂಪಿಗೆ ಬಿದ್ದು ಆತ್ಮಹತ್ಯೆ ಶರಣಾರದವರು. ಶಿವಗಂಗೆ ಮೂಲದ ಸಂಪತ್ ಕುಮಾರ್‌ಗೆ ನೆಲಮಂಗಲ ಮೂಲದ ವಿಜಯಲಕ್ಷ್ಮಿ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾಗಿ ಕೇವಲ 6 ವರ್ಷ ಆಗಿತ್ತು. ತುಮಕೂರಿನ ಹಿರೇಹಳ್ಳಿಯ ಸಿಂಗನಹಳ್ಳಿ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದರು. ಗಂಡ ಸಂಪತ್ ಕುಮಾರ್, ಇಬ್ಬರು ಮಕ್ಕಳು ಹಾಗೂ ಅತ್ತೆ ಮಾವರೊಂದಿಗೆ ಅನ್ಯೋನ್ಯವಾಗಿ ಸಂಸಾರ ಸಾಗಿತ್ತು. ಗಂಡ ಸಂಪತ್ ಕುಮಾರ್ ಕಂಪನಿಯೊಂದರಲ್ಲಿ ಕೆಲಸ, ಅತ್ತೆಯೂ ಫ್ಯಾಕ್ಟರಿ ಕೆಲಸ. ವಿಜಯಲಕ್ಷ್ಮಿ ಇಬ್ಬರು ಮಕ್ಕಳನ್ನು ನೋಡಿಕೊಂಡು ಮನೆಯಲ್ಲೇ ಇದ್ದಳು.ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಮುಂದೆ ಇದ್ದ ಸಂಪಿನಲ್ಲಿ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಜೆ 6 ಗಂಟೆಗೆ ಗಂಡ ಸಂಪತ್ ಕುಮಾರ್ ಕೆಲಸ ಮುಗಿಸಿ ಬಂದಾಗ ಮನೆ ಬಾಗಿಲು ಕ್ಲೋಸ್ ಆಗಿತ್ತು. ನೀರಿನ ಸಂಪು … - [ತಾಯಿಯೊಂದಿಗೆ ಜಗಳವಾಡಿದ್ದ ವ್ಯಕ್ತಿಯಿಂದ ಮಗು ಬಲಿ](https://kannadakaravali.com/%e0%b2%a4%e0%b2%be%e0%b2%af%e0%b2%bf%e0%b2%af%e0%b3%8a%e0%b2%82%e0%b2%a6%e0%b2%bf%e0%b2%97%e0%b3%86-%e0%b2%9c%e0%b2%97%e0%b2%b3%e0%b2%b5%e0%b2%be%e0%b2%a1%e0%b2%bf%e0%b2%a6%e0%b3%8d%e0%b2%a6-%e0%b2%b5): ಕನ್ನಡ ಕರಾವಳಿ ಸುದ್ದಿ: ಅಕ್ಕ-ಪಕ್ಕದ ಮನೆಯವರ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ರೊಚ್ಚಿಗೆದ್ದ ಪಕ್ಕದ ಮನೆಯ ಕ್ರೂರಿಯೊಬ್ಬ6 ವರ್ಷದ ಮಗುವನ್ನು ಬಲಿ ಪಡೆದಿರುವ ಮನಕಲಕುವ ಘಟನೆ ವೈಟ್‌ಫೀಲ್ಡ್ ಸಮೀಪದ ನಲ್ಲೂರಳ್ಳಿಯಲ್ಲಿ ಸಂಭವಿಸಿದೆ. ನೆರೆಹೊರೆಯವರ ನಡುವಿನ ದ್ವೇಷಕ್ಕೆ ಪಶ್ಚಿಮ ಬಂಗಾಳ ಮೂಲದ ಬಾಲಕಿ ಶಹಜಾನ್ ಕತೂನ್ (6) ಜೀವ ತೆತ್ತಿದ್ದಾಳೆ. ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಕುಟುಂಬವೊಂದು ನಲ್ಲೂರಳ್ಳಿಯಲ್ಲಿ ವಾಸವಾಗಿತ್ತು. ಈ ಕುಟುಂಬಕ್ಕೂ ಹಾಗೂ ಅಕ್ಕಪಕ್ಕದ ಮನೆಯವರಿಗೂ ಸಣ್ಣಪುಟ್ಟ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು . ಇತ್ತೀಚೆಗೆ ನಡೆದ ಕಿತ್ತಾಟದ ನಂತರ, ಮಗುವಿನ ತಾಯಿಗೆ ’ಬುದ್ಧಿ ಕಲಿಸಬೇಕು’ ಎಂದು ಪಣತೊಟ್ಟ ಆರೋಪಿ, ಈ ಅಮಾಯಕ ಮಗುವನ್ನೇ ತನ್ನ ಸೇಡಿಗೆ ದಾಳವನ್ನಾಗಿ ಬಳಸಿಕೊಂಡಿದ್ದಾನೆ. ಕೃತ್ಯ ಎಸಗಲು ಯೋಜಿಸಿದ ಆರೋಪಿ, ಬಾಲಕಿ ಶಹಜಾನ್ ಕತೂನ್ ಒಬ್ಬಳೇ ಇದ್ದ ಸಮಯ ನೋಡಿ ಹೊಂಚು ಹಾಕಿದ್ದನು. ಆಕೆಯನ್ನು ಅಪಹರಿಸಿ ಕುತ್ತಿಗೆ ಹಿಸುಕಿ ಬರ್ಬರವಾಗಿ ಕೊಲೆ ಮಾಡಿ ಮಗುವಿನ ಶವವನ್ನು ಬ್ಯಾಗ್ ಒಂದರಲ್ಲಿ ತುಂಬಿ, ಯಾರಿಗೂ … - [ಹೋಟೆಲ್ ಕೋಣೆಯಲ್ಲಿ ಅಪ್ರಾಪ್ತ ಕ್ರೀಡಾಪಟು ವಿರಾಮ ತೆಗೆದುಕೊಳ್ಳುತ್ತಿದ್ದ ವೇಳೆ ಲೈಂಗಿಕ ದೌರ್ಜನ್ಯ:ಕೋಚ್ ಅಮಾನತು](https://kannadakaravali.com/%e0%b2%b9%e0%b3%8b%e0%b2%9f%e0%b3%86%e0%b2%b2%e0%b3%8d-%e0%b2%95%e0%b3%8b%e0%b2%a3%e0%b3%86%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%85%e0%b2%aa%e0%b3%8d%e0%b2%b0%e0%b2%be%e0%b2%aa%e0%b3%8d): ಕನ್ನಡ ಕರಾವಳಿ ಸುದ್ದಿ: ಬಾಲಕಿಯ (ಶೂಟರ್ ಕ್ರೀಡಾಪಟು) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ವಿರುದ್ಧ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರೀಡಾಪಟುವಿನ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇರೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಂಗಳವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದಾಗ್ಯೂ, ಸಾಕ್ಷಿಗಳಿಂದ ಹೇಳಿಕೆಗಳು ಹಾಗೂ ಅಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರಿನಲ್ಲಿ ಏನಿದೆ? ನವದೆಹಲಿಯ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆದಿದೆ. ಫರಿದಾಬಾದ್‌ನ ಹೋಟೆಲ್ ಕೋಣೆಯಲ್ಲಿ ಕ್ರೀಡಾಪಟು ವಿರಾಮ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೋಚ್ ಲೈಂಗಿಕ ದೌರ್ಜನ್ಯ ಎಸಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಘಟನೆಯನ್ನು ಯಾರಿಗಾದರೂ ಹೇಳಿದ್ದಲ್ಲಿ ಆಕೆಯ ಕ್ರೀಡಾ ಭವಿಷ್ಯವನ್ನೇ ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಘಟನೆ ಬೆಳಕಿಗೆ ಬಂದ ನಂತರ ಫರಿದಾಬಾದ್‌ನ ಪೊಲೀಸರು ಆತನ … - [ಅಣ್ಣ- ತಂಗಿ ಸಂಬಂಧ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಶಷನ್ ಶಿಪ್...! ತಂಗಿ ಸಾವಿನಲ್ಲಿ ಅಂತ್ಯ](https://kannadakaravali.com/%e0%b2%85%e0%b2%a3%e0%b3%8d%e0%b2%a3-%e0%b2%a4%e0%b2%82%e0%b2%97%e0%b2%bf-%e0%b2%b8%e0%b2%82%e0%b2%ac%e0%b2%82%e0%b2%a7-%e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%97%e0%b3%86): ಕನ್ನಡ ಕರಾವಳಿ ಸುದ್ದಿ: ಅಣ್ಣ ತಂಗಿ ಸಂಬಂಧ ಪ್ರೀತಿಗೆ ತಿರುಗಿ ಲಿವಿಂಗ್ ರಿಲೇಶಷನ್ ಶಿಪ್ ತನಕ ಹೋಗಿದ್ದು, ಇದೀಗ ಅಣ್ಣ ತಂಗಿ ಪ್ರೀತಿ ತಂಗಿಯ ಸಾವಿನಲ್ಲಿ ಅಂತ್ಯವಾಗಿದೆ. ಇವರು ಪರಸ್ಪರ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು. ಅವನಿಗೆ 30 ವರ್ಷ, ಅವಳಿಗೆ 21 ವರ್ಷ ವಯಸ್ಸು. ಆದರೂ ಅವರಿಬ್ಬರು ಅಣ್ಣ ತಂಗಿ ಪವಿತ್ರ ಸಂಬಂಧಕ್ಕೆ ವಿರುದ್ಧವಾಗಿ, ಪರಸ್ಪರ ಪ್ರೀತಿಸಿ ಅಕ್ರಮ ಸಂಬಂಧದಲ್ಲಿ ತೇಲಾಡಿದ್ದಾರೆ. ಇದನ್ನು ಕಂಡ, ಬಂಧು ಬಳಗ, ಗ್ರಾಮಸ್ಥರು ಬೈಯ್ದು ಬುದ್ದಿ ಹೇಳಿದರೂ ಕೇಳದೆ ಲಿವ್‌ ಇನ್‌ ರಿಲೇಷನ್ ಶಿಪ್‌ನಲ್ಲಿ ಇದ್ದಾರೆ, ಆದರೆ ಈಗ ಆಕೆ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿ ನಡೆದಿದೆ. ಆಕೆ ಹೆಸರು ರಾಮಲಕ್ಷ್ಮಿ (21), ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ತಂದೆ ಹೆಸರು ಆಂಜನಪ್ಪ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ರಾಮಕೃಷ್ಣಪುರದ ನಿವಾಸಿ. ಯುವಕನ ಹೆಸರು ಕೃಷ್ಣ (30), ತಂದೆ ಹೆಸರು ರವಣಪ್ಪ. ಇಬ್ಬರದ್ದೂ ಒಂದೇ ಊರು, ಒಂದೇ ಮನೆ. ರಾಮಲಕ್ಷ್ಮಿ ತಂದೆ … - [ಒಂದೇ ದಿನ ಇಬ್ಬರು ಪೊಲೀಸ್‌ ಪೇದೆಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ!](https://kannadakaravali.com/%e0%b2%92%e0%b2%82%e0%b2%a6%e0%b3%87-%e0%b2%a6%e0%b2%bf%e0%b2%a8-%e0%b2%87%e0%b2%ac%e0%b3%8d%e0%b2%ac%e0%b2%b0%e0%b3%81-%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%aa): ಕನ್ನಡ ಕರಾವಳಿ ಸುದ್ದಿ: ರಾಜ್ಯದಲ್ಲಿ ಒಂದೇ ದಿನದಲ್ಲಿ ಇಬ್ಬರು ಪೊಲೀಸ್‌ ಕಾನ್‌ಸ್ಟೇಬಲ್‌ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದಲ್ಲಿ ಮೊಹಮ್ಮದ್ ಝಕ್ರಿಯ ಎಂಬ ಸಂಚಾರಿ ಪೊಲೀಸ್‌ ಪೇದೆ ಠಾಣೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮದ್ದೂರಿನಲ್ಲಿರಮೇಶ್‌ ಎಂಬವರು ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಪ್ರಾಣ ತೆಗೆದುಕೊಂಡಿದ್ದಾರೆ. ಶಿವಮೊಗ್ಗದ ಸಂಚಾರಿ ಪೊಲೀಸ್‌ ಠಾಣೆಯಲ್ಲಿಯೇ ಮೊಹಮ್ಮದ್ ಝಕ್ರಿಯ ಎಂಬ ಪೊಲೀಸ್‌ ಕಾನ್‌ಸ್ಟೇಬಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ರಜೆಯಲ್ಲಿ ಇದ್ದರು. ಮೂರು ದಿನದ ಹಿಂದೆಯಷ್ಟೇ ಮೊಹಮ್ಮದ್ ಡ್ಯೂಟಿಗೆ ಹಾಜರಾಗಿದ್ದರು. ಬಸ್ ನಿಲ್ದಾಣದ ಬಳಿ ಡ್ಯೂಟಿ ಮುಗಿಸಿ ಬಂದು ಪೊಲೀಸ್ ಠಾಣೆಯ ಹಿಂಬದಿಯ ಸೆಲ್ ಇರುವ ಜಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದ್ದೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ರಮೇಶ್ (35) ಎಂಬವರು ನಗರದ ಪೊಲೀಸ್ ಠಾಣೆಯ ಹಿಂದೆ ಇರುವ ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ 10 ಘಂಟೆಗೆ ಪೊಲೀಸ್ … - [ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಪೊಲೀಸರ ಸ್ಪಷ್ಟನೆ ಏನು?](https://kannadakaravali.com/%e0%b2%ae%e0%b2%b9%e0%b2%bf%e0%b2%b3%e0%b3%86%e0%b2%af%e0%b2%a8%e0%b3%8d%e0%b2%a8%e0%b3%81-%e0%b2%b5%e0%b2%bf%e0%b2%b5%e0%b2%b8%e0%b3%8d%e0%b2%a4%e0%b3%8d%e0%b2%b0%e0%b2%97%e0%b3%8a%e0%b2%b3%e0%b2%bf): ಕನ್ನಡ ಕರಾವಳಿ ಸುದ್ದಿ: ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಕಾರ್ಯಕರ್ತೆಯನ್ನು ನಗರದ ಕೇಶವಪುರ ಪೊಲೀಸರು ಬಂಧಿಸಿ, ಕರೆದೊಯ್ಯುವ ವೇಳೆ ವಿವಸ್ತ್ರಗೊಳಿಸಿ ಹಲ್ಲೆಗೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಕಾರ್ಪೊರೇಟರ್ ನೀಡಿದ ದೂರಿನ ಮೇಲೆ ಬಿಜೆಪಿ ಮಹಿಳಾ ಕಾರ್ಯಕರ್ತೆಯ ಬಂಧನಕ್ಕೆ ಪೊಲೀಸರು ಮುಂದಾದಾಗ ಘಟನೆ ನಡೆದಿದೆ. ಜನವರಿ 1ರಂದು ಮತಪಟ್ಟಿ ಪರಿಷ್ಕರಣೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಬಿಜೆಪಿಯ ಸುಜಾತಾ ಹಂಡಿ ಎಂಬುವರು ಅಧಿಕಾರಿಗಳ ಜತೆ ಸೇರಿ ಮತಪಟ್ಟಿಯಿಂದ ಮತದಾರರ ಹೆಸರು ಡಿಲೀಟ್‌ ಮಾಡುತ್ತಿದ್ದಾರೆಂದು, ಕಾಂಗ್ರೆಸ್ ಕಾರ್ಪೊರೇಟ‌ರ್ ಸುವರ್ಣ ಕಲ್ವಕುಂಟ್ಲಾ ವಿರುದ್ಧ ಆರೋಪ ಮಾಡಿದ್ದರು. ಈ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿ ಸುಜಾತಾ ವಿರುದ್ಧ ದೂರು ದಾಖಲಾಗಿತ್ತು. ದೂರಿನ ಹಿನ್ನೆಲೆ ಪೊಲೀಸರು ಸುಜಾತಾ ಬಂಧನಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರು ಆಕೆಯನ್ನು ಬಂಧಿಸಿ ಕರೆದೊಯ್ಯುವ ವೇಳೆ ಹೈಡ್ರಾಮಾ ನಡೆದಿದೆ. ಪೊಲೀಸರು ಬಟ್ಟೆ ಬಿಚ್ಚಿ ತನ್ನನ್ನು ಥಳಿಸಿದ್ದಾರೆಂದು ಕಾರ್ಯಕರ್ತೆ ಆರೋಪಿಸಿದ್ದಾರೆ. ಘಟನೆಯ ವಿಡಿಯೋ ವೈರಲ್‌ ಆಗಿವೆ. ಇನ್ನು ಬಂಧನದ … - [ಕುಂದಾಪುರ: ಅರಾಟೆ ಬೋಟು ನಿರ್ಮಾಣ ಘಟಕದಲ್ಲಿ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ.ನಷ್ಟ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%85%e0%b2%b0%e0%b2%be%e0%b2%9f%e0%b3%86-%e0%b2%ac%e0%b3%8b%e0%b2%9f%e0%b3%81-%e0%b2%a8%e0%b2%bf%e0%b2%b0%e0%b3%8d): ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಅರಾಟೆಯ ಸೇತುವೆ ಬಳಿ ಬೋಟುಗಳ ನಿರ್ಮಾಣ ಘಟಕದಲ್ಲಿ ಬುಧವಾರ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಅಂದಾಜು 5 ಲಕ್ಷ ರೂ. ನಷ್ಟ ಉಂಟಾಗಿದೆ. ಪ್ರಕಾಶ್ ಆಚಾರ್ ಅವರ ಮಾಲಕತ್ವದ ಬೋಟುಗಳ ನಿರ್ಮಾಣ ಘಟಕದಲ್ಲಿ ಬುಧವಾರ ಮಧ್ಯಾಹ್ನದ ಸುಮಾರಿಗೆ ಹೊಸದಾಗಿ ನಿರ್ಮಾಣವಾಗುತ್ತಿರುವ ಬೋಟಿನ ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಕಾಣಿಸಿಕೊಂಡ ಬೆಂಕಿಯು ಫೈವುಡ್ ಗೆ ತಗುಲಿ, ಬೋಟಿಗೆ ವ್ಯಾಪಿಸಿತು. ಕೂಡಲೇ ಕುಂದಾಪುರದ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ್ದು, ಅವರು ಕಾರ್ಯಾಚರಣೆ ನಡೆಸಿ, ನಿಯಂತ್ರಣಕ್ಕೆ ತಂದಿದ್ದರಿಂದ ಇನ್ನಷ್ಟು ಬೋಟುಗಳಿಗೆ ಬೆಂಕಿ ತಗುಲುವುದು ತಪ್ಪಿದಂತಾಗಿದೆ.ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿ ಶಾಮಕ ದಳದವರು ಅವರೊಂದಿಗೆ ಸ್ಥಳೀಯರು, ಘಟಕದ ಕೆಲಸಗಾರರು ಸಹಕರಿಸಿದರು. - [ಕುಂದಾಪುರ- ಹೊಸಂಗಡಿ - ತೀರ್ಥಹಳ್ಳಿ ರಾಜ್ಯ ಹೆದ್ದಾರಿ   ಮೇಲ್ದರ್ಜೆಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ](https://kannadakaravali.com/%e0%b2%95%e0%b3%81%e0%b2%82%e0%b2%a6%e0%b2%be%e0%b2%aa%e0%b3%81%e0%b2%b0-%e0%b2%b9%e0%b3%8a%e0%b2%b8%e0%b2%82%e0%b2%97%e0%b2%a1%e0%b2%bf-%e0%b2%a4%e0%b3%80%e0%b2%b0%e0%b3%8d%e0%b2%a5%e0%b2%b9): ಕನ್ನಡ ಕರಾವಳಿ ಸುದ್ದಿ: ಕುಂದಾಪುರದಿಂದ ಹೊಸಂಗಡಿ ಮೂಲಕ ತೀರ್ಥಹಳ್ಳಿಗೆ ಹೋಗುವ ರಾಜ್ಯ ಹೆದ್ದಾರಿ-52ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುಂತೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಬೆಂಗಳೂರು ತಲುಪಲು ಇರುವ ಕುಂದಾಪುರ ಮತ್ತು ತೀರ್ಥಹಳ್ಳಿಯನ್ನು ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿ 52ನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಲು ರಾಜ್ಯ ಸರಕಾರವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆದಿದೆ. ಈ ಯೋಜನೆಯು ಜಾರಿಯಾದಲ್ಲಿ ಕರಾವಳಿ ಮತ್ತು ಮಲೆನಾಡಿನ ನಡುವಿನ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗಲಿದೆ. ಹೊಸಂಗಡಿ- ಸಿದ್ದಾಪುರ -ಕುಂದಾಪುರ ರಸ್ತೆಯ 46.40 ಕಿ.ಮೀ ನಿಂದ 88 ಕಿ.ಮೀ ವರೆಗಿನ ಹಂತ ಹೊಂದಿದ್ದು ರಸ್ತೆಯ ಒಟ್ಟು ಉದ್ದ 93.57 ಕಿ.ಮೀ ಆಗಿದೆ. ಇತರ ರಾಷ್ಟ್ರೀಯ ಹೆದ್ದಾರಿಗಳ ಹಾದು ಹೋಗುವಿಕೆ ಹೊರತುಪಡಿಸಿ 87.97 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ರಸ್ತೆಯು ಕುಂದಾಪುರದಿಂದ ಬಸ್ರೂರು, ಸಿದ್ದಾಪುರ, ಹೊಸಂಗಡಿ, ನಗರ ಮತ್ತು ಹುಲಿಕಲ್ ಘಾಟಿ ಮೂಲಕ ಸಾಗಿ ತೀರ್ಥಹಳ್ಳಿಯನ್ನು ತಲುಪುತ್ತದೆ. ಭಾರಿ ಮಳೆಯ … - [ವರ್ಕ್‌ ಫ್ರಂ ಹೋಮ್‌ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ](https://kannadakaravali.com/%e0%b2%b5%e0%b2%b0%e0%b3%8d%e0%b2%95%e0%b3%8d-%e0%b2%ab%e0%b3%8d%e0%b2%b0%e0%b2%82-%e0%b2%b9%e0%b3%8b%e0%b2%ae%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%95): ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಬಾಗಲಗುಂಟೆಯಲ್ಲಿ 26 ವರ್ಷದ ನಿಕ್ಷೇಪ್ ಬಂಗೇರಾ ಅಪಾರ್ಟ್‌ಮೆಂಟ್‌ನ 16ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರು ಮೂಲದವರಾದ ಇವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಶಂಕಿಸಲಾಗಿದೆ. ಬಾಗಲಗುಂಟೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಿದ್ದ ನಿಕ್ಷೇಪ್‌ ಅಲ್ಲಿಯೇ ತಮ್ಮ ಜೀವ ಕಳೆದುಕೊಂಡಿದ್ದಾರೆ. ವರ್ಕ್‌ ಫ್ರಂ ಹೋಮ್‌ನಲ್ಲಿ ನಿಕ್ಷೇಪ್‌ ಕೆಲಸ ಮಾಡುತ್ತಿದ್ದ. ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಲ್ಲಿ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ 16ನೇ ಮಹಡಿಗೆ ಬಂದು ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಂಗಳೂರು ಮೂಲದ ನಿಕ್ಷೇಪ್‌ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು, ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.   - ["ಸುಣ್ಣಾರಿ ಶಾಲಾ ವಿವೇಕೋತ್ಸವ" ಸಂಸ್ಥಾಪಕ ಕಾಪು ಸಂಜೀವ ಶೆಟ್ಟರ ಜನುಮ ದಿನ, ದಿನಕರ ಶೆಟ್ಟರ ಪುಣ್ಯಸ್ಮರಣೆ](https://kannadakaravali.com/%e0%b2%b8%e0%b3%81%e0%b2%a3%e0%b3%8d%e0%b2%a3%e0%b2%be%e0%b2%b0%e0%b2%bf-%e0%b2%b6%e0%b2%be%e0%b2%b2%e0%b2%be-%e0%b2%b5%e0%b2%bf%e0%b2%b5%e0%b3%87%e0%b2%95%e0%b3%8b%e0%b2%a4%e0%b3%8d%e0%b2%b8): ಕನ್ನಡ ಕರಾವಳಿ ಸುದ್ದಿ: ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹೊಂಬಾಡಿ-ಮಂಡಾಡಿ (ಸುಣ್ಣಾರಿ) ಇದರ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಶಾಲಾ ವಿವೇಕೋತ್ಸವ ಹಾಗೂ ಶಾಲಾ ಸಂಸ್ಥಾಪಕರಾದ ಕಾಪು ಸಂಜೀವ ಶೆಟ್ಟರ 110 ನೇ ಜನುಮ ದಿನದ ಆರದ ನೆನಪು ಹಾಗೂ ಶಾಲಾ ಸಂಚಾಲಕರಾದ ಸುಣ್ಣಾರಿ ದಿನಕರ ಶೆಟ್ಟರ 5 ನೇ ಪುಣ್ಯ ಸ್ಮರಣೆ ಆಚರಣೆಯು ಕುಂದಾಪುರ ವಿಧಾನ ಸಭಾ ಸದಸ್ಯರಾದ ಕಿರಣ ಕುಮಾರ ಕೊಡ್ಗಿ ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಅವರು ಅನುದಾನಿತ ಶಾಲೆಯ ಸಮಸ್ಯೆಯ ಕುರಿತು ಹೇಳಿದರು. ಪ್ರಾರಂಭದಲ್ಲಿ ದಿ. ಕಾಪು ಸಂಜೀವ ಶೆಟ್ಟರ 110 ನೇ ಆರದ ನೆನಪಿನ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಗ ಕಿಶೋರ ಕುಮಾರ ಶೆಟ್ಟಿ ದೀಪ ಬೆಳಗಿಸಿದರು. ಹಾಗೂ ದಿ. ಸುಣ್ಣಾರಿ ದಿನಕರ ಶೆಟ್ರ 5 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಮಡದಿ ಮಂಜುಳ ಡಿ. ಶೆಟ್ಟಿಯವರು ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. … ## Pages - [ಮುಖಪುಟ](https://kannadakaravali.com/) - [Sample Page](https://kannadakaravali.com/sample-page): This is an example page. It’s different from a blog post because it will stay in one place and will show up in your site navigation (in most themes). Most people start with an About page that introduces them to potential site visitors. It might say something like this: Hi there! I’m a bike messenger by day, aspiring actor by night, and this is my website. I live in Los Angeles, have a great dog named Jack, and I like piña coladas. (And gettin’ caught in the rain.) …or something like this: The XYZ Doohickey Company was founded in 1971, … [comment]: # (Generated by Hostinger Tools Plugin)