HSRP:ನಂಬರ್ ಪ್ಲೇಟ್‌ಗಾಗಿ ನಿಗದಿಪಡಿಸಿ ಹಣವಷ್ಟೇ ಪಾವತಿಸಿ: ಮೋಸ ಹೋಗದಿರಿ, ಯಾವ ವಾಹನಗಳಿಗೆ ನಿಗದಿಪಡಿಸಿದ ಹಣವೆಷ್ಟು.?
ವಾಹನ ಮಾಲೀಕರೇ ಗಮನಿಸಿ ನಂಬರ್ ಪ್ಲೇಟ್ ಹೆಸರಲ್ಲಿ ನಿಮ್ಮನ್ನು ವಂಚಿಸುವುದು ಇದ್ದಾರೆ ಹುಷಾರ್!

Views: 203
ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಗೆ ಬಂದಿರುವಂತೆ ಕರ್ನಾಟಕದಲ್ಲೂ ‘ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ (HSRP) ಅಳವಡಿಕೆ ಕಡ್ಡಾಯಗೊಳಿಸಿದೆ. ಇಷ್ಟು ಹಣವನ್ನಷ್ಟೇ ನೀವು ಪಾವತಿಸಬೇಕು. ಹಾಗಾದರೆ ಯಾವ ವಾಹನಗಳಿಗೆ ಎಷ್ಟು ದರ ಇದೆ? ನಂಬರ್ ಪ್ಲೇಟ್ ಹಾಕಿಸಲು ಎಷ್ಟು ಖರ್ಚು ಬರುತ್ತದೆ ಎಂಬ ಅನುಮಾನ, ಗೊಂದಲಗಳು ಹಲವರಲ್ಲಿದೆ. ಇದರ ನಿವಾರಣೆಗಾಗಿ ಇಲ್ಲಿ ನೀಡಿದ ಮಾಹಿತಿ ತಿಳಿಯಿರಿ
ಸದ್ಯ ರಾಜ್ಯದಲ್ಲಿ ಎಲ್ಲಿ ನೋಡಿದರೂ ಈ HSRP ನಂಬರ್ ಪ್ಲೇಟ್ ಸುದ್ದಿ ಹರಿದಾಡುತ್ತಿದೆ. ಸರ್ಕಾರ ಇದರ ಅಳವಡಿಕೆಗೆ ಫೆಬ್ರುವರಿ 17ರವರೆಗೆ ನೀಡಿದ್ದ ಗಡುವನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಣೆ ಮಾಡಿದೆ. ಇದೇ ಅವಕಾಶ ಲಾಭ ಪಡೆಯುವ ಹಲವರು ಹೆಚ್ಚು ಹಣ ಪೀಕಬಹುದು. ಆದ್ದರಿಂದ ವಾಹನ ಸವಾರರು ಎಚ್ಚರ ವಹಿಸುವುದು ಅಗತ್ಯ.
ಮೋಸ ಹೋಗದೇ ನಿಗದಿತ ಹಣವಷ್ಟೇ ನೀಡಿ
‘ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ (HSRP) ಪ್ಲೇಟ್‌ಗೆ ಅಳವಡಿಕೆಗೆ ಇಂತಿಷ್ಟು ಎಂದು ರಾಜ್ಯ ಸರ್ಕಾರ ಸೂಕ್ತ ಬೆಲೆ ಕೂಡಾ ನಿಗದಿ ಮಾಡಿದೆ. ಇದರಿಂದ ಸವಾರರಿಗೆ ಗೊಂದಲವಾಗದಂತೆ ಮುನ್ನೆಚ್ಚರಿಕೆ ವಹಿಸಿದೆ. ಸರ್ಕಾರ ಸೂಚಿಸಿದ ವಾಹನಗಳ ಸವಾರರು ಮುಂಗಿನ ಮೂರು ತಿಂಗಳವರೆಗೆ ಕಾಯದೇ ಈ ಕೂಡಲೇ ನಿಮ್ಮ ಹತ್ತಿರದ ಡಿಜಿಟಲ್ ಸೇವಾ ಕೇಂದ್ರ, ಅಥವಾ ನಿಮ್ಮ ಕಂಪ್ಯೂಟರ್ ಸೆಂಟರ್‌ಗೆ ಭೇಟಿ ನೀಡಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬಹುದು.
ವಿವಿಧ ವಾಹನಗಳಿಗೆ ಹಣ ನಿಗದಿಯ ವಿವರ
HSRP ನಂಬರ್ ಪ್ಲೇಟ್ ಅಳವಡಿಕೆಗಾಗಿ ದ್ವಿಚಕ್ರವಾಹನ ಸವಾರರಿಗೆ (ಬೈಕ್) ಸರ್ಕಾರ 450 ರೂಪಾಯಿ 550 ರೂಪಾಯಿವರೆಗೆ ನಿಗದಿ ಮಾಡಿದೆ. ಇಷ್ಟು ಹಣವನ್ನು ಮಾತ್ರವೇ ಕೊಡಬೇಕು ಎಂದು ತಿಳಿಸಲಾಗಿದೆ.
ಇದರೊಂದಿಗೆ ಆಟೋ ಸೇರಿದಂತೆ ತ್ರಿಚಕ್ರ ವಾಹನಗಳಿಗೆ 450 ರೂಪಾಯಿ 550 ರೂಪಾಯಿಗಳವರೆಗೆ ಹಣ ನಿಗದಿ ಮಾಡಿದ್ದು, ಅವರ ಇಷ್ಟೇ ಹಣ ನೀಡಿ ನಂಬರ್ ಪ್ಲೇಟ್ ಹಾಕಿಸಿಕೊಳ್ಳಬೇಕು. ಕಾರು ಅಥವಾ 4 ಚಕ್ರದ ವಾಹನಗಳಿಗೆ ರೂಪಾಯಿ 650 ರಿಂದ 780 ರೂ.ವರೆಗೆ ಹಣ ಕೊಟ್ಟು HSRP ನಂಬರ್ ಪ್ಲೇಟ್ ಅಳವಡಿಸಬೇಕು. ಇನ್ನೂ ಭಾರೀ ವಾಹನಗಳಾದ ಟ್ರಕ್‌ಗಳು ಬಸ್‌ಗಳು ಸೇರಿದಂತೆ 10 ಚಕ್ರದ ವಾಹನಗಳಿಗೆ ಸರ್ಕಾರ 650 ರೂಪಾಯಿಯಿಂದ 800 ರೂಪಾಯಿ ಹಣ ನಿಗದಿ ಮಾಡಿದೆ.