ಕರಾವಳಿ

BREAKING:ಕೋಟ:ಬನ್ನಾಡಿಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ:ಆರೋಪಿ ಬಂಧನ

Views: 665

ಕೋಟ: ಇಲ್ಲಿಗೆ ಸಮೀಪ ಬನ್ನಾಡಿಯಲ್ಲಿ ಹರೀಶ್ ಪೂಜಾರಿ ಎಂಬಾತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ, ಗರ್ಭಧರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಬನ್ನಾಡಿ ಹರೀಶ್ ಪೂಜಾರಿ ಎಂಬಾತನನ್ನು ಪೊಲೀಸರು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದಾರೆ.

ಆರೋಪಿ ಬನ್ನಾಡಿ ಹರೀಶ್ ಪೂಜಾರಿ  9ನೇ ತರಗತಿಯ ಸಂತ್ರಸ್ಥ ಬಾಲಕಿಯ ಸಂಬಂಧಿಯಾಗಿದ್ದು, ಜುಲೈ 28 ರಂದು ಬಾಲಕಿಯ ಮನೆಗೆ ಬಂದಿದ್ದು. ಯಾರೂ ಇಲ್ಲದ ಸಂದರ್ಭ ನೋಡಿ ಆರೋಪಿ, ಬಾಲಕಿಯನ್ನು ಪುಲಾಯಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ‌

ದಿನೇ  ದಿನ ಬಾಲಕಿಯ ಅರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಬಾಲಕಿಯನ್ನು ಪೋಷಕರು ವಿಚಾರಿಸಿದಾಗ ಬಾಲಕಿ ಗರ್ಭವತಿಯಾದ ಘಟನೆ ಬೆಳಕಿಗೆ ಬಂದಿದೆ.

ಉಡುಪಿ ಮಹಿಳಾ ಠಾಣೆಯಲ್ಲಿ ಆರೋಪಿ ಹರೀಶ್ ಪೂಜಾರಿ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related Articles

Back to top button