ಜನಮನ

6ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗತಿ,ಈ ವಿಚಾರಕ್ಕೆ ಮಾತ್ರ ಭಾರೀ ಹುಡುಕಾಟ!

Views: 86

ಕನ್ನಡ ಕರಾವಳಿ ಸುದ್ದಿ: ಆರು ನಕ್ಸಲರು ಶಸ್ತ್ರಾಸ್ತ್ರಗಳನ್ನು ತಜಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಶರಣಾಗಿದ್ದಾರೆ. ಕರ್ನಾಟಕದ ಶೃಂಗೇರಿ ತಾಲೂಕಿನ ಮುಂಡಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ಬೆಳ್ತಂಗಡಿಯ ಕುಂತಲೂರು ಮೂಲದ ಸುಂದರಿ, ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗಿದ್ದಾರೆ.

ಸದ್ಯ ನಕ್ಸಲರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇದೀಗ ಶರಣಾದ ನಕ್ಸಲರ ಆಯುಧಗಳು ಎಲ್ಲಿ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಅಕ್ರಮ ಆಯುಧಗಳ ಜೊತೆಗೆ ಶರಣಾದರೆ ಕಾನೂನಿನ ಕುಣಿಕೆ ಭೀತಿ ಇದೆ. ಆಧುನಿಕ ಶಸ್ತ್ರಾಸ್ತ್ರಗಳ ಅಕ್ರಮ ಸಂಗ್ರಹ ಬಹುದೊಡ್ಡ ಅಪರಾಧ. ಭವಿಷ್ಯದಲ್ಲಿ ಎದುರಾಗುವ ಕಾನೂನು ಸಂಕಷ್ಟದಿಂದ ಪಾರಾಗಲು ಭೂಮಿಯೊಳಗೆ ಮುಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಪಶ್ಚಿಮಘಟ್ಟ ಶ್ರೇಣಿಯ ವ್ಯಾಪ್ತಿಯ ದಟ್ಟ ಕಾಡಿನಲ್ಲಿ ಆಯುಧಗಳನ್ನು ಬಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ.

ವಿಕ್ರಂಗೌಡ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸರು ದಾಖಲಿಸಿದ್ದ ಎಫ್ಐಆರ್ ನಲ್ಲಿ ಬಳಿ ಇದ್ಧ ಆಧುನಿಕ ಆಯುಧಗಳಿರುವ ಬಗ್ಗೆ ಉಲ್ಲೇಖವಿದೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೊನೆಯ ಕ್ಷಣದಲ್ಲಿ ಆಯುಧಗಳನ್ನು ಬಚ್ಚಿಟ್ಟು ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಆಯುಧಗಳನ್ನು ಹುಡುಕಾಟದಲ್ಲಿ ನಕ್ಸಲ್ ನಿಗ್ರಹ ಪಡೆ ಮುಂದಾಗಿದೆ. ಶೃಂಗೇರಿ, ಕಿಗ್ಗಾ, ಕೆರೆಕಟ್ಟೆ ಸೇರಿದಂತೆ ಪಶ್ಚಿಮ ಘಟ್ಟ ಶ್ರೇಣಿ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸ್ತಿದ್ದಾರೆ.

 

Related Articles

Back to top button