ಇತರೆ

40 ಶಿಶುಗಳ ಶಿರಚ್ಛೇದ ಮಾಡಿದ ಹಮಾಸ್ ಉಗ್ರರು! ಭಯಾನಕ ಚಿತ್ರಗಳನ್ನು ಬಿಡುಗಡೆ ಮಾಡಿದ  ಇಸ್ರೇಲ್ 

ರಾಕ್ಷಸಿ ಕೃತ್ಯ ಎಸಗಿದ ಹಮಾಸ್ ಹತ್ಯೆಗೀಡಾದ ಮತ್ತು ಸುಟ್ಟ ಶಿಶುಗಳ ಭಯಾನಕ ಚಿತ್ರಗಳನ್ನು ಇಸ್ರೇಲ್ ಗುರುವಾರ ಬಿಡುಗಡೆ ಮಾಡಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲ್ ಪ್ರವಾಸದಲ್ಲಿರುವ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರಿಗೆ ಕೆಲವು ಚಿತ್ರಗಳನ್ನು ತೋರಿಸಿದರು.

Views: 0

ಟೆಲ್ ಅವಿವ್: ಇಸ್ರೇಲ್‌ ಮೇಲೆ ಹಮಾಸ್ ಬಂಡುಕೋರರು ನಡೆಸಿದ ಭೀಭತ್ಸ ದಾಳಿಯ ಮತ್ತೊಂದು ಘಟನೆ ಬಹಿರಂಗವಾಗಿದೆ. ಬಂಡುಕೋರರು ಕನಿಷ್ಠ ಮಕ್ಕಳು ಮತ್ತು ಶಿಶುಗಳನ್ನು ಹತ್ಯೆಗೈದಿದ್ದಾರೆ ಈ ಪೈಕಿ ಕೆಲವು ಮಕ್ಕಳ ಶಿರಚ್ಛೇದ ಮಾಡಲಾಗಿದೆ ಎಂದು ಇಸ್ರೇಲ್‌ನ ಐ24 ನ್ಯೂಸ್ ವರದಿ ಮಾಡಿದೆ. ಹಮಾಸ್ ದಾಳಿಯನ್ನು ಎದುರಿಸಲು ರಿಸರ್ವ್ ಸರ್ವೀಸ್‌ ಕರೆಯಿಸಿಕೊಳ್ಳುವಷ್ಟರಲ್ಲಿ ಈ ಹತ್ಯೆ ನಡೆದು ಹೋಗಿತ್ತು. ಆದರೆ, ಹತ್ಯೆಯ ದೃಶ್ಯಗಳು ನಿಮ್ಮ ಕಲ್ಪನೆಗೂ ಮೀರಿದ್ದಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ, ಈ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 3000ಕ್ಕೆ ಏರಿಕೆಯಾಗಿದೆ.

ಶಿರಚ್ಛೇದಗೊಂಡ ಶಿಶುಗಳನ್ನು ಕಂಡಿದ್ದೇವೆ ಎಂದು ಕೆಲವು ಸೈನಿಕರು ಹೇಳಿದ್ದಾರೆ. ಮಲಗಿದ್ದಾಗಲೇ ಇಡೀ ಕುಟುಂಬದ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಗರ್ನಿಗಳಿಂದ ಇದುವರೆಗೆ ಹತ್ಯೆಗೀಡಾದ ಸುಮಾರು 40 ಶಿಶುಗಳು ಮತ್ತು ಮಕ್ಕಳ ಶವಗಳನ್ನು ಹೊರ ತೆಗೆಯಲಾಗಿದೆ. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಭೀಕರ ದಾಳಿಯಲ್ಲಿ ಇದುವರೆಗೆ ಕನಿಷ್ಠ 900 ಇಸ್ರೇಲಿಗಳು ಮೃತಪಟ್ಟು, 2600ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಇದಕ್ಕೂ ಮೊದಲು ಹಮಾಸ್ ಬಂಡುಕೋರರ ಮತ್ತೊಂದು ಭೀಭತ್ಸ ಕೃತ್ಯವನ್ನು ಮಾಧ್ಯಮಗಳು ವರದಿ ಮಾಡಿದ್ದವು. ಕಿಬ್ಬತ್ಜ್‌ ಗಡಿ ಸಮೀಪ ಇರುವ ಕಫಾರ್ ಅಜ್ಜಾ ಪ್ರದೇಶಕ್ಕೆ ಇಸ್ರೇಲ್‌ ಡಿಫೆನ್ಸ್ ಫೋರ್ಸ್(ಐಡಿಎಫ್) ಅಂತಾರಾಷ್ಟ್ರೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಿ ಹಮಾಸ್ ಉಗ್ರರ ಭಯಂಕರ ಕೃತ್ಯವನ್ನು ತೋರಿಸಿತ್ತು. ದಾಳಿಯ ವೇಳೆ 70 ನಿವಾಸಿಗಳನ್ನು ಹಮಾಸ್ ಬಂಡುಕೋರ ಹತ್ಯೆ ಮಾಡಿದ್ದರು.

ಈ ರೀತಿಯ ಕೃತ್ಯವನ್ನು ನಾನು ನನ್ನ ಜೀವಮಾನದಲ್ಲೇ ನೋಡಿಲ್ಲ. ಯುರೋಪಿನ ಹತ್ಯಾಕಾಂಡ ಸಮಯದಲ್ಲಿ ನಮ್ಮ ಅಜ್ಜಿ, ಅಜ್ಜಂದಿರು ಯಾವ ರೀತಿಯ ಹಿಂಸೆಯನ್ನು ಅನುಭವಿಸಿದ್ದಿರಬಹುದು ಎಂದು ಊಹೆ ಮಾಡಿಕೊಳ್ಳುತ್ತಿದ್ದೆವು. ಇತ್ತೀಚಿನ ಇತಿಹಾಸದಲ್ಲಿ ನಾವು ಇಂಥ ಭೀಭತ್ಸ ಭಯೋತ್ಪಾದನೆಯನ್ನು ನೋಡಿಯೇ ಇಲ್ಲ ಎಂದು ಐಡಿಎಫ್ ಜನರಲ್ ಹೇಳಿದ್ದಾರೆ.

ಕೆಲವು ಚಿತ್ರಗಳಲ್ಲಿ ಅಮಾಯಕ ಶಿಶುಗಳ ಕಪ್ಪು ಸುಟ್ಟ ದೇಹಗಳನ್ನು ಕಾಣಬಹುದಾಗಿದೆ.  ಹಠಾತ್ ದಾಳಿ ನಡೆಸಿದ್ದ ಹಮಾಸ್‌ ಭಯೋತ್ಪಾದಕರು ಅಮಾಯಕ ಶಿಶುಗಳನ್ನು ಕ್ರೂರವಾಗಿ ಹತ್ಯೆ ಮಾಡಿ ಪೈಶಾಚಿಕ ಕೃತ್ಯ ಎಸಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.

ಇಸ್ರೇಲ್ ಪ್ರಧಾನಿಯ ಅಧಿಕೃತ ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಮಾಡಲಾಗಿದೆ. ಸುಮಾರು 40 ಶಿಶುಗಳ ಶವಗಳು, ಅವುಗಳಲ್ಲಿ ಕೆಲವು ಶಿರಚ್ಛೇದ ಮಾಡಲ್ಪಟ್ಟಿದ್ದು ಇಸ್ರೇಲ್ ರಕ್ಷಣಾ ಪಡೆಗಳು ಪತ್ತೆಹಚ್ಚಿವೆ ಎಂದು ಓಕಲ್ ಮಾಧ್ಯಮ ವರದಿ ಮಾಡಿದೆ.

Related Articles

Back to top button