ಸಾಮಾಜಿಕ
20 ವರ್ಷದ ವಿದ್ಯಾರ್ಥಿಯನ್ನು ಮದುವೆಯಾದ 40 ವರ್ಷದ ಶಿಕ್ಷಕಿ!

Views: 109
ಬಿಹಾರ:40 ವರ್ಷದ ಶಿಕ್ಷಕಿಯೊಬ್ಬರು 20 ವರ್ಷ ವಿದ್ಯಾರ್ಥಿಯನ್ನು ವಿವಾಹವಾಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಬಿಹಾರದ ಸಮಸ್ತಿಪುರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿ ಮದುವೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
40 ವರ್ಷದ ಶಿಕ್ಷಕಿ ಮಧುಮಗಳಂತೆ ಸಿಂಗಾರಗೊಂಡಿದ್ದಾರೆ. ವಿದ್ಯಾರ್ಥಿ ಸಿಂಪಲ್ಲಾಗಿ ಬಟ್ಟೆ ಧರಿಸಿದ್ದಾನೆ. ಅತ್ತ ವಿದ್ಯಾರ್ಥಿ ಮತ್ತು ಟೀಚರ್ ವಿವಾಹ ಲವ್ ಮ್ಯಾರೇಜ್ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ ಜಾಲತಾಣದಲ್ಲಿ 40 ವರ್ಷದ ಶಿಕ್ಷಕಿ ತನಗಿಂತ 20 ವರ್ಷ ಚಿಕ್ಕ ವಯಸ್ಸಿನ ಹುಡುಗನನ್ನು ವಿವಾಹವಾಗಿದ್ದಕ್ಕೆ ಚರ್ಚೆ ಹುಟ್ಟುಹಾಕಿದೆ.