ಇತರೆ

ಹೋಟೆಲ್‌ ರೂಮಿನಲ್ಲಿ ವಿದೇಶಿ ಮಹಿಳೆ ನಿಗೂಢ ಸಾವು: ಕೊಲೆ ಶಂಕೆ.?

Views: 48

ಬೆಂಗಳೂರು: ನಗರದ ಹೋಟೆಲ್‌ವೊಂದರಲ್ಲಿ 37 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಜರೀನಾ ಎಂಬ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

ಇವರು ನಾಲ್ಕು ದಿನಗಳ ಹಿಂದೆ ಪ್ರವಾಸಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು ಖಾಸಗಿ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ್ದರು. ಆದರೆ ರೂಮಿನಿಂದ ಹೊರಬರದೇ ಇರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಬುಧವಾರ ಸಂಜೆ 4.30 ರ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಜರೀನಾ ಅವರಿದ್ದ ಕೊಠಡಿ ಬಾಗಿಲು ಬಡಿದಿದ್ದರು. ಈ ವೇಳೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದರಿಂದ ಮಾಸ್ಟರ್ ಕೀ ಮೂಲಕ ಡೋರ್‌ ಅನ್ಲಾಕ್ ಮಾಡಲಾಯಿತು. ಈ ವೇಳೆ ಜರೀನಾ ಶವವಾಗಿ ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಶವವಾಗಿ ಪತ್ತೆಯಾಗುತ್ತಿದ್ದಂತೆಯೇ ಕೂಡಲೇ ಹೋಟೆಲ್ ಮ್ಯಾನೇಜರ್ ದೂರು ದಾಖಲಿಸಿದ್ದು, ಪೊಲೀಸರು ನಿಗೂಢ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ. ಪ್ರಾಥಮಿಕ ಸಾಕ್ಷ್ಯವು ಕೊಲೆ ಎಂದು ಸೂಚಿಸುತ್ತದೆ. ಜರೀನಾ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಜರೀನಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡವು ಹೋಟೆಲ್‌ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಯಾರಾದರೂ ಜರೀನಾ ಅವರ ಕೋಣೆಗೆ ಭೇಟಿ ನೀಡಿದ್ದಾರೆಯೇ ಎಂದು ತಿಳಿಯಲು ಹೋಟೆಲ್‌ನಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ

 

Related Articles

Back to top button