ಹೊಸ ವರ್ಷದ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ.. 100ಕ್ಕೂ ಹೆಚ್ಚು ಮಂದಿ ಅರೆಸ್ಟ್

Views: 49
ಹೊಸ ವರ್ಷದ ಪಾರ್ಟಿ ಹಿನ್ನೆಲೆಯಲ್ಲಿ ಆಯೋಜನೆ ಮಾಡಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಪಾರ್ಟಿಯಲ್ಲಿ ಡ್ರಗ್ ಸೇವನೆ ಮಾಡಿದ್ದ ಆರೋಪದ ಮೇಲೆ 100ಕ್ಕೂ ಹೆಚ್ಚು ಜನರನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಥಾಣೆ ನಗರದ ಪೊಲೀಸ್ ಠಾಣೆಯ ಕ್ರೈಂ ಬ್ರಾಂಚ್ ಮಾಹಿತಿ ಆಧಾರದ ಮೇಲೆ ತಡರಾತ್ರಿ ಕಾರ್ಯಾಚರಣೆ ನಡೆಸಿ ರೇವ್ ಪಾರ್ಟಿ ಮೇಲೆ ದಾಳಿ ಮಾಡಿತ್ತು. ಈ ವೇಳೆ ಪಾರ್ಟಿಯಲ್ಲಿ ಭಾಗವಹಿಸಿದ್ದ 100ಕ್ಕೂ ಹೆಚ್ಚಿನ ಜನರು ಎಲ್‌ಎಸ್‌ಡಿ, ಗಾಂಜಾ ಸೇರಿದಂತೆ ವಿವಿಧ ಮಾದಕಗಳನ್ನು ಸೇವನೆ ಮಾಡಿದ್ದರು ಎನ್ನಲಾಗಿದೆ.
ಇನ್ನು ಸದ್ಯ ಬಂಧನವಾಗಿರುವ 100 ಜನರಲ್ಲಿ ಇಬ್ಬರು ಈ ರೇವ್ ಪಾರ್ಟಿಯನ್ನ ಆಯೋಜನೆ ಮಾಡಿದ್ದರು. ಇವರ ಅನುಮತಿ ಮೇರೆಗೆ ಪಾರ್ಟಿಗೆ ಮಾದಕ ವಸ್ತುಗಳು ರವಾನೆ ಆಗಿದ್ದವು ಎಂದು ಹೇಳಲಾಗುತ್ತಿದೆ. ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಈ ದೊಡ್ಡ ಪಾರ್ಟಿಯನ್ನು ಯೋಜಿಸಿದ್ದರು. ಇನ್ನು ಬಂಧಿತರಾಗಿರುವ ಆರೋಪಿಗಳನ್ನು ಮಾದಕವಸ್ತು ಸೇವನೆಯ ಕುರಿತು ತಿಳಿದುಕೊಳ್ಳಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಗುತ್ತದೆ ಎಂದು ಹೇಳಲಾಗಿದೆ.