ಧಾರ್ಮಿಕ

ಹೂವಿನಕೆರೆ ಶ್ರೀವಾದಿರಾಜ ಜನ್ಮಕ್ಷೇತ್ರದಲ್ಲಿ ನೂತನ ಪ್ರಾಸಾದ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವ: ಶ್ರೀ ಕ್ಷೇತ್ರ ಆನೆಗುಡ್ಡೆಯಲ್ಲಿ  ವಿಶೇಷ ಪ್ರಾರ್ಥನೆ ಹಾಗೂ ಪೂಜೆ 

Views: 327

ಕುಂಭಾಸಿ:ಪರಮಪೂಜ್ಯ ಶ್ರೀಶ್ರೀವಿಶ್ವೋತ್ತಮ ತೀರ್ಥರ ಪರಮಾನುಗ್ರಹದಿಂದ ಪರಮಪೂಜ್ಯ ಶ್ರೀ ವಿಶ್ವವಲ್ಲಭ ತೀರ್ಥರ ಮಾರ್ಗದರ್ಶನದಲ್ಲಿ ಗುರುರಾಜರ ಭಕ್ತರ ಸಹಕಾರದಿಂದ ಗರ್ಭಾಲಯಕ್ಕೆ ಸುಂದರವಾದ ಪ್ರಾಸಾದವನ್ನು ನಿರ್ಮಿಸಲಾಗಿದೆ.

ಭಾವಿಸಮೀರ ಶ್ರೀ ವಾದಿರಾಜ ಗುರು ಸಾರ್ವಬೌಮರಿಗೆ ನೂತನ ಪ್ರಾಸಾದ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶೋತ್ಸವ ಇದೇ ಬರುವ ಫೆಬ್ರವರಿ 15ರಿಂದ 21ರವರೆಗೆ ಅಸೋಡು ಗ್ರಾಮದ ಹೂವಿನಕೆರೆಯಲ್ಲಿ ನಡೆಯಲಿದೆ.

ಆ ಪ್ರಯುಕ್ತ ಫೆ.11ರಂದು ಭಾನುವಾರ  ವಿಘ್ನ ನಿವಾರಕ ಆನೆಗುಡ್ಡೆ ಶ್ರೀ ವಿನಾಯಕ ದೇವರಿಗೆ ವೇದ ಮೂರ್ತಿ ಹೂವಿನಕೆ ಶ್ರೀ ವಾದಿರಾಜ ಭಟ್ಟರ ನೇತೃತ್ವದಲ್ಲಿ ಪೂರ್ವಭಾವಿ ವಿಶೇಷ ಪ್ರಾರ್ಥನೆ ಹಾಗೂ ಪೂಜೆ ನೆರವೇರಿತು.

ಶ್ರೀ ಮಠಕ್ಕೂ ಹಾಗೂ ಆನೆಗುಡ್ಡೆ ದೇಗುಲಗಕ್ಕೂ ಅವಿನಾಭಾವ ಸಂಬಂದವಿದ್ದು ಹಾಗೂ ಮುಂದೆ ನಡೆಯುವ ಎಲ್ಲಾ ಕಾರ್ಯಕ್ರಮಗಳೂ ನಿರ್ವಿಘ್ನವಾಗಿ ನಡೆದು ಲೋಕ ಕಲ್ಯಾಣವಾಗಲಿ ಎಂದು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಹೂವಿಕೆರೆ ಮಠದ ಪದಾದಿಕಾರಿಗಳಾದ ಬಡಾಕೆರೆ ರಾಮಚಂದ್ರ ವರ್ಣ, ಗೋಪಾಡಿ ಶ್ರೀನಿವಾಸ ಹತ್ವಾರ, ಕೊರವಡಿ ಕೃಷ್ಣಮೂರ್ತಿ ಹತ್ವಾರ, ಆಡಳಿತ ದರ್ಮದರ್ಶಿ ಕೆ ಶ್ರೀರಮಣ ಉಪಾಧ್ಯಾಯ, ಕೆ ನಿರಂಜನ ಉಪಾಧ್ಯಾಯ, ಕೆ ವಿಠಲ ಉಪಾಧ್ಯಾಯ, ವಿಶ್ರಾಂತ ದರ್ಮದರ್ಶಿ ಕೆ ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ ಶ್ರೀಷ ಉಪಾಧ್ಯಾಯ ಮತ್ತು ಉಪಾಧ್ಯಾಯ ಬಂದುಗಳು ಸರ್ವ ಭಕ್ತ ವೃಂದದವರು ಉಪಸ್ತಿತರಿದ್ದರು

Related Articles

Back to top button