ಯುವಜನ

ಹುಡುಗಿ ನೋಡುವ ಶಾಸ್ತ್ರಕ್ಕೆ ಹೋದಾಗ ಆಕೆ ನಿರಾಕರಿಸಿದ್ದಕ್ಕೆ ಹಣೆಗೆ ಗುಂಡು ಹಾರಿಸಿ ಯುವಕ ಪರಾರಿ

Views: 148

ಕನ್ನಡ ಕರಾವಳಿ ಸುದ್ದಿ: ಹುಡುಗಿ ನೋಡುವ ಶಾಸ್ತ್ರಕ್ಕೆ ಹೋದಾಗ ಆಕೆ  ತನ್ನನ್ನು ನಿರಾಕರಿಸಿದ್ದಕ್ಕೆ ಹಣೆಗೆ ಗುಂಡು ಹಾರಿಸಿ ಯುವಕ ಪರಾರಿಯಾದ  ಘಟನೆ ಉತ್ತರ ಪ್ರದೇಶದ ಮೈನ್‌ಪುರಿನಲ್ಲಿ ನಡೆದಿದೆ.

ಎರಡು ಕುಟುಂಬಸ್ಥರು ಹುಡುಗ – ಹುಡುಗಿ ನೋಡುವ ಶಾಸ್ತ್ರ ಇಟ್ಟುಕೊಂಡಿದ್ದರು. ಇಬ್ಬರಿಗೂ ಒಪ್ಪಿಗೆಯಾದ್ರೆ ಮದುವೆ ನಿಶ್ಚಯ ಮಾಡಿಯೇ ಬಿಡೋಣ ಅಂತ ನಿರ್ಧರಿಸಿದ್ದರು, ಆದ್ರೆ ಅಲ್ಲಿ ನಡೆದಿದ್ದೇ ಬೇರೆ. ಹುಡುಗಿ ತನಗೆ ಹುಡುಗ ಇಷ್ಟವಿಲ್ಲ ಅಂತ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಹುಡುಗ ತಲೆಗೆ ಗುಂಡು ಹಾರಿಸಿದ್ದಾನೆ.

ಹುಡುಗಿಯ ತಲೆಗೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಯುವಕನನ್ನು ಸಗಾಮೈ ಪೊಲೀಸ್‌ ಠಾಣೆಯ ಎಲಾವ್ ಗ್ರಾಮದ ನಿವಾಸಿ ಅಮುಕ್ ಮಗ ರಾಜೇಶ್ ಎಂದು ಗುರುತಿಸಲಾಗಿದೆ.

Related Articles

Back to top button