ಸಾಮಾಜಿಕ

ಹುಡುಗಿ ನೋಡಲು ಬಂದವರು ನಾಲ್ಕೇ ಗಂಟೆಗಳಲ್ಲಿ ಪರಸ್ಪರ ಒಪ್ಪಿ, ಮುಹೂರ್ತ ಫಿಕ್ಸ್ ಮಾಡಿ ಶ್ಯಾದಿ ಮಾಡಿಕೊಂಡ ಹುಡ್ಗ 

Views: 215

ಇಳಕಲ್ : ತಮ್ಮ ಊರಿನಿಂದ ಹೆಣ್ಣು ನೋಡಲು ಎಂದು ಬಂದವರು ಅದೇ ಸಮಯದಲ್ಲಿ ಒಪ್ಪಿಗೆಯಾದ ಕನ್ಯೆಯನ್ನು ಮದುವೆಯಾದ ಅಪರೂಪದ ಘಟನೆ ನಗರದಲ್ಲಿ ನಡೆದಿದೆ.

ಗದಗ ಜಿಲ್ಲೆಯ ರೋಣ ಪಟ್ಟಣದಿಂದ ನಾಗರಾಜ್ ಚಂದ್ರಶೇಖರಸಾ ರಂಗರೇಜ ಎಂಬುವವರು ಇಳಕಲ್ ದ ರಾಮಕೃಷ್ಣಸಾ ರಾಯಬಾಗಿ ಇವರ ಮಗಳು ರಂಜಿತಾಳನ್ನು ನೋಡಲು ಬಂದರು. ಎರಡೂ ಕುಟುಂಬಗಳು ಪರಸ್ಪರ ಒಪ್ಪಿದವು. ಅವರ ಜೊತೆಗೆ ಚರ್ಚಿಸಿದ ಎಸ್ ಎಸ್ ಕೆ ಸಮಾಜದ ಅಧ್ಯಕ್ಷ ರವಿಶಂಕರ್ ಬಸುವಾ ಚಟ ಮಂಗ್ಣಿ ಪಟ ಶ್ಯಾದಿ ಎಂಬಂತೆ ಸಮಾಜದ ಅರ್ಚಕರನ್ನು ಕರೆಸಿ ಮೂಹುರ್ತ ನಿಶ್ಚಯ ಮಾಡಿ ನಾಲ್ಕೇ ಗಂಟೆಗಳ ಅವಧಿಯಲ್ಲಿ ವಧುವರರಿಗೆ ಹೊಸ ಬಟ್ಟೆ ತರಿಸಿ ಅಂಬಾಭವಾನಿ ದೇವಸ್ಥಾನದ ದೇವಿಯ ಸನ್ನಿಧಿಯಲ್ಲಿ ಸರಳ ವಿವಾಹ ಮಾಡಿದರು.

ಮಾತುಕತೆಗೆ ಕೂಡಿದ ಗಣ್ಯರು ಸಮಾಜದ ಬಾಂಧವರನ್ನು ಕರೆಸಿ ಎಲ್ಲರ ಸಮಕ್ಷಮ ಮದುವೆ ನೆರವೇರಿಸಿದಾಗ ಸೇರಿದ ಎಲ್ಲಾ ಜನರಲ್ಲಿ ಸಂತಸ ಮನೆ ಮಾಡಿತ್ತು.

Related Articles

Back to top button