ಹಿಂದಿನ ಚುನಾವಣೆಗಿಂತಲೂ ಜಾಸ್ತಿ ಮತಗಳಿಂದ ಆರಿಸಿ ಬರುತ್ತೇನೆ : ಜಗದೀಶ್ ಶೆಟ್ಟರ್

Views: 0
ಇದೀಗ ಬಿಜೆಪಿಯವರು ನನ್ನನ್ನು ಸೋಲಿಸಲು ಕಾಯ೯ಕತ೯ರ ಮೇಲೆ ಒತ್ತಡ ತರುತ್ತಿದ್ದಾರೆ. ಎಂದು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಹೇಳಿದರು.
ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ನಾನು ಮಾಡಿದ ಸಾಧನೆಗೆ ನನ್ನ ಕ್ಷೇತ್ರದಲ್ಲಿ ವಚ೯ಸ್ಸು ಕಡಿಮೆಯಾಗಿಲ್ಲ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದೇನೆ. ಯಾವುದೇ ತಪ್ಪು ಮಾಡಿದ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಹಿಂದಿನ ಚುನಾವಣೆಗಳಿಗಿಂತ ಹೆಚ್ಚು ಮತ ಪಡೆದು ಆರಿಸಿ ಬರುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.
ನನ್ನ ವಿರುದ್ಧ ಕೇಂದ್ರ ಸಚಿವರು ಭಜ೯ರಿ ಪ್ರಚಾರ ಮಾಡುತ್ತಿದ್ದು, ಆದರೆ ಮುಂದಿನ ಲೋಕಸಭಾ ಚುನಾವಣೆ ಬರುತ್ತದೆ ಆವಾಗ ಮತ್ತೆ ಕಾದು ನೋಡಿ ಎಂದು ಸವಾಲು ಹಾಕಿದರು.
ನಾನು ಅಧಿಕಾರ ಬೇಡವೆಂದು ಸುಮ್ಮನೆ ಮನೆಯಲ್ಲಿ ಕುಳಿತರೆ ಅದನ್ನು ಗುರುತು ಮಾಡಬೇಕಿತ್ತು. ಅದು ಬಿಟ್ಟು ಕ್ಯಾಬಿನೆಟ್ ಸ್ಥಾನ ಬೇಡ ಎಂದಾಗ ಟಿಕೆಟ್ ಕೊಡುವುದಿಲ್ಲ ಎಂದಿದ್ದರೆ ಅಥವಾ ಚುನಾವಣೆಗೆ ಮೂರ್ನಾಲ್ಕು ತಿಂಗಳ ಮುಂಚೆಯೇ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ದರೆ ಆಗಲೇ ಮುಗಿದು ಹೋಗುತ್ತಿತ್ತು.
ಸೋಲಿನ ಭಯದಲ್ಲಿ ಜನರಿಗೆ ಜನರಿಗೆ ಹೆದರಿಕೆ, ದಬ್ಬಾಳಿಕೆ ಮಾಡುವುದಕ್ಕೆ ಪ್ರಾರಂಭಿಸಿರುತ್ತಾರೆ, ನನ್ನ ಜೀವನದಲ್ಲಿ ಇಂತಹ ಪರಿಸ್ಥಿತಿ ನೋಡಿರಲಿಲ್ಲ ಆದರೆ, ಈ ಚುನಾವಣೆ ಶೆಟ್ಟರ್ ವಸ್೯ಸ್ ಮತ್ತು ಬಿಜೆಪಿ ಹೈಕಮಾಂಡ್ ಅಲ್ಲ ಕಾಂಗ್ರೆಸ್ ವಸ್೯ಸ್ ಬಿಜೆಪಿ ಯಾಗಿದೆ ಎಂದರು.