ಇತರೆ

ಹಾಡುಹಗಲಲ್ಲೇ ದಂಪತಿ ಮತ್ತು ಮಗು ಅಪಹರಣ

Views: 147

ಕನ್ನಡ ಕರಾವಳಿ ಸುದ್ದಿ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಸಮೀಪದಲ್ಲಿ ಹಾಡುಹಗಲಲ್ಲೇ ದಂಪತಿ ಮತ್ತು ಮಗುವನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ.

ಬಂಡಿಪುರ ವಲಯದ ಕಂಟ್ರಿ ಕ್ಲಬ್ ರೆಸಾರ್ಟ್ ಬಳಿ ಸೋಮವಾರ ನಡೆದಿದೆ.ಬೆಂಗಳೂರಿನ ಬಿಬಿಎಂಪಿಯಲ್ಲಿ ಎಫ್‌ಡಿಎ ಆಗಿ ಕೆಲಸ ನಿರ್ವಹಿಸುತ್ತಿರುವ ನಿಶಾಂತ್ ಅವರ ಪತ್ನಿ ಚಂದನ ಮತ್ತು ಮಗು ಯಾರೋ ದುಷ್ಕರ್ಮಿಗಳಿಂದ ಅಪಹರಣಕ್ಕೊಳಗಾದವರು.

ಅವರು ಭಾನುವಾರ ರಾತ್ರಿ ಬಂಡೀಪುರ ಸಮೀಪದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ. ಸೋಮವಾರ ದಂಪತಿ ಹಾಗೂ ಮಗು ಕಾರಿನಲ್ಲಿ ಹೊರ ಬಂದ ವೇಳೆ ಎರಡು ಕಾರುಗಳಲ್ಲಿ ಬಂದ ದುಷ್ಕರ್ಮಿಗಳು ಕಾರಿನ ಸಮೇತ ಮೂವರನ್ನು ಅಪಹರಿಸಿದ್ದಾರೆ.

ಈ ಘಟನೆ ತಿಳಿದ ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಟಿ. ಕವಿತಾ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ರೆಸಾರ್ಟ್ ವ್ಯವಸ್ಥಾಪಕರಿಂದ ಮಾಹಿತಿ ಕಲೆ ಹಾಕಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Articles

Back to top button