ಇತರೆ

ಹಮಾಸ್‌ಗೆ ಬೆಂಬಲ ಸೂಚಿಸಿ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ವೈದ್ಯೆ:ಹುದ್ದೆಯಿಂದ ವಜಾಗೊಳಿಸಿದ ಅಮೆರಿಕ

Views: 53

ಕನ್ನಡ ಕರಾವಳಿ ಸುದ್ದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಮಾಸ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಅಮೆರಿಕದಲ್ಲಿ ಯಾರೇ ಹಮಾಸ್‌ಗೆ ಬೆಂಬಲ ಸೂಚಿದರೂ ಅವರನ್ನು ಗಡಿಪಾರು ಮಾಡಲಾಗುತ್ತಿದೆ. ಇದೀಗ ನ್ಯೂಯಾರ್ಕ್‌ನ ವೈದ್ಯರೊಬ್ಬರು ಹಮಾಸ್‌ಗೆ ಬೆಂಬಲ ಸೂಚಿಸಿ ಸಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. “ಲಾಂಗ್ ಲಿವ್ ಹಮಾಸ್ & ಹೆಜ್ಬೊಲ್ಲಾ ಎಂದ ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಮೌಂಟ್ ಸಿನೈನ ಅಪ್ಪರ್ ಈಸ್ಟ್ ಸೈಡ್ ಆಸ್ಪತ್ರೆಯಲ್ಲಿ ಸಹಾಯಕ ವೈದ್ಯಕೀಯ ಪ್ರಾಧ್ಯಾಪಕಿ ಲೀಲಾ ಅಬಾಸ್ಸಿ ಅವರನ್ನು ಈ ತಿಂಗಳ ಆರಂಭದಲ್ಲಿ ಈ ಪೋಸ್ಟ್‌ನ್ನು ಮಾಡಿದ್ದರು.

ಹಮಾಸ್‌ ಹಾಗೂ ಹೆಜ್ಬೊಲ್ಲಾ ಎರಡರ ವಿರುದ್ದವೂ ಅಮೆರಿಕ ಸಿಡಿದು ನಿಂತಿದೆ. ಉಗ್ರರ ವಿರುದ್ಧ ಯುದ್ಧ ಸಾರಿರುವ ಅಮೆರಿಕ ಹಮಾಸ್‌ಗೆ ಎಚ್ಚರಿಕೆ ನೀಡಿತ್ತು. ಈ ಎರಡೂ ಗುಂಪುಗಳನ್ನು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಉಗ್ರ ಸಂಘಟನೆಯೆಂದು ಘೋಷಣೆ ಮಾಡಿವೆ. ಇದೀಗ ವೈದ್ಯೆ ಈ ರೀತಿಯಲ್ಲಿ ಪೋಸ್ಟ್‌ ಮಾಡಿದ್ದು, ಸಂಚಲನ ಮೂಡಿಸಿದೆ.46 ವರ್ಷದ ಅಬಾಸ್ಸಿ, ಹಮಾಸ್ ಅನ್ನು “ಉದಾತ್ತ ಪ್ರತಿರೋಧ ಮತ್ತು ಸ್ವಾತಂತ್ರ್ಯ ಹೋರಾಟಗಾರರು” ಎಂದು ಹೊಗಳಿದ್ದಾರೆ, ಇಸ್ರೇಲಿ ಸೈನ್ಯವನ್ನು “ಪ್ಲೇಗ್” ಎಂದು ಕರೆದಿದ್ದಾರೆ, ಇಸ್ರೇಲ್ “ಶಿಶುಗಳನ್ನು ಕೊಲ್ಲುತ್ತಿದೆ ಎಂದು ಬರೆದುಕೊಂಡಿದ್ದಾರೆ. ಅಕ್ಟೋಬರ್ 7, 2023 ರ ಸಮಯದಲ್ಲಿ ಲೈಂಗಿಕ ಹಿಂಸಾಚಾರದ ವರದಿಗಳನ್ನು ಅವರು ತಳ್ಳಿಹಾಕಿದ್ದಾರೆ.

ದಯವಿಟ್ಟು ನನಗೆ ನಿಜವಾದ ಅತ್ಯಾಚಾರದ ವೀಡಿಯೊವನ್ನು ತೋರಿಸಿ” ಎಂದು ಅವರು ಫೇಸ್‌ಬುಕ್ ವೈದ್ಯರ ಗುಂಪಿನಲ್ಲಿ “ಕ್ಲುವರ್ ಬ್ಯುಸಿ” ಎಂಬ ಗುಪ್ತನಾಮವನ್ನು ಬಳಸಿ ಬರೆದಿದ್ದಾರೆ. ಅಬಾಸ್ಸಿ 2011 ರಲ್ಲಿ ಸೇಂಟ್ ಜಾರ್ಜ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಪದವೀಧರೆಯಾಗಿದ್ದು, ನಂತರ SUNY ಡೌನ್‌ಸ್ಟೇಟ್‌ನಲ್ಲಿ ತನ್ನ ರೆಸಿಡೆನ್ಸಿಯನ್ನು ಪೂರ್ಣಗೊಳಿಸಿದರು. ನ್ಯೂಯಾರ್ಕ್ ನಗರ ಕೌನ್ಸಿಲ್‌ವುಮನ್ ಇನ್ನಾ ವರ್ನಿಕೋವ್ (ಆರ್-ಬ್ರೂಕ್ಲಿನ್) ಅವರ ವಾರಗಳ ಒತ್ತಡದ ನಂತರ ಅವರನ್ನು ವಜಾಗೊಳಿಸಲಾಯಿತು ಎಂದು ತಿಳಿದು ಬಂದಿದೆ. ಇತ್ತೀಚೆಗೆ ಹಮಾಸ್‌ಗೆ ಬೆಂಬಲ ಸೂಚಿಸಿ ಪೋಸ್ಟ್‌ ಹಾಕಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕ ಸರ್ಕಾರ ಗಡಿಪಾರು ಮಾಡಿತ್ತು.

Related Articles

Back to top button