ಹದಿಹರೆಯದ ಸಮಸ್ಯೆಗಳು ಮತ್ತು ನಿರ್ವಹಣಾ ಉಪಾಯಗಳು

Views: 14
ಉಡುಪಿ: ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹದಿಹರೆಯದ ಹೆಣ್ಣು ಮಕ್ಕಳ ಸಮಸ್ಯೆಗಳ ಹಾಗೂ ಅದರ ನಿರ್ವಹಣಾ ಉಪಾಯಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ, ಮನೀಷ್ ಆಸ್ಪತ್ರೆ, ಕುಂದಾಪುರ ಇಲ್ಲಿನ ಪ್ರಸಿದ್ಧ ಹೆರಿಗೆ ಮತ್ತು ಸ್ತೀ ರೋಗ ತಜ್ಞೆ ಡಾ| ಪ್ರಮೀಳಾ ನಾಯಕ್ ಇವರು ಆಗಮಿಸಿ, ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಪ್ರೌಢಾವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳಾದ ಭಯ, ಅತಿಯಾದ ಆತಂಕ, ಖಿನ್ನತೆ, ಋತು ಚಕ್ರದ ಸಮಯದಲ್ಲಿ ಆಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳ ಬಗ್ಗೆ ವಿವರಿಸಿ, ಸರಿಯಾದ ಅರಿವು ಅಗತ್ಯ ಎಂದರು. ಸಮಾಜದಲ್ಲಿ ಎಷ್ಟೋ ಹೆಣ್ಣು ಮಕ್ಕಳಿಗೆ ಸರಿಯಾದ ತಿಳುವಳಿಕೆ ಇಲ್ಲದೇ ದುಡುಕುವ ಸಾಧ್ಯತೆ ಇದೆ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಂಡು ಶಿಕ್ಷಣ ಮತ್ತು ಉತ್ತಮ ಆರೋಗ್ಯದಿಂದ ಹೆಣ್ಣು ಮಕ್ಕಳು ಕೂಡಾ ಮಹತ್ ಸಾಧನೆಯನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ಶ್ರೀಮತಿ ಶೋಭಾ ಅವಭೃತ ಕಾರ್ಯಕ್ರಮ ನಿರ್ವಹಿಸಿ, ಶ್ರೀಮತಿ ಯಶವಂತಿ ವಂದಿಸಿದರು.