ರಾಜಕೀಯ

ಸ್ಪಷ್ಟ ಬಹುಮತದಿಂದ ಸಕಾ೯ರ ಮಾಡಲಿದ್ದೇವೆ : ಬಿ. ಎಸ್ ಯಡಿಯೂರಪ್ಪ 

Views: 0

ಬೈಂದೂರು :ಸ್ಪಷ್ಟ ಬಹುಮತ ಇಲ್ಲದೆ ಸಕಾ೯ರ ಮಾಡಿ ಅನುಭವಿಸಿದ್ದೇವೆ. ಈ ಭಾರಿ ನೂರಕ್ಕೆ ನೂರರಷ್ಟು ಸ್ಪಷ್ಟ ಬಹುಮತದಿಂದ ಸರಕಾರ ಮಾಡಲಿದ್ದೇವೆ. ಎಂದು ಮಾಜಿ ಮುಖ್ಯಮಂತ್ರಿ   ಬಿ. ಎಸ್ ಯಡಿಯೂರಪ್ಪ ಹೇಳಿದರು.

ಅವರು ಶನಿವಾರ ವಂಡ್ಸೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಬೈಂದೂರು ಕ್ಷೇತ್ರದ ಅಭ್ಯಥಿ೯ ಗುರುರಾಜ್ ಗಂಟಿಹೊಳೆ ಪರ ಮತಯಾಚಿಸಿ ಮಾತನಾಡಿದರು.

ಮೋದೀಜಿ, ಅಮಿತ್ ಶಾ, ನಡ್ದಾ ಅವರು ಶಕ್ತಿ ತುಂಬಿದ್ದಾರೆ. ಅವರ ಆಶೀವಾ೯ದದಿಂದ ನೂತನ ಸಕಾ೯ರ ಮಾಡಲಿದ್ದೇವೆ. ರಾಜ್ಯಾದ್ಯಂತ ಸಂಚರಿಸಿ, ಜನರ ನಾಡಿ ಮಿಡಿತ ಅಥ೯ಮಾಡಿಕೊಂಡಿದ್ದೇನೆ.ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಗುರುರಾಜ್ ಗಂಟಿಹೊಳೆ ಅವರನ್ನು ಪ್ರಚಂಡ ಬಹುಮತದಿಂದ ಆರಿಸಿ ಎಂದರು.

ಜಿಲ್ಲಾ ಪ್ರಧಾನ ಕಾಯ೯ದಶಿ೯ ಸದಾನಂದ ಉಪ್ಪಿನ ಕುದ್ರು, ಪ್ರಣಯ ಕುಮಾರ್ ಶೆಟ್ಟಿ, ಶ್ಯಾಮಲ ಕುಂದರ್, ಶೋಭಾ ಪುತ್ರನ್, ಹಕೂ೯ರು ಮಂಜಯ್ಯ ಶೆಟ್ಟಿ, ಸುರೇಶ್ ಬಟ್ವಾಡಿ, ಕ್ಯಾ| ಬ್ರಿಜೇಶ್ ಚೌಟ, ಪ್ರಿಯದಶಿ೯ನಿ ಮುಂತಾದವರು ಇದ್ದರು.

Related Articles

Back to top button