ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದ ರೀಲ್ಸ್ ಟೀಚರ್ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್ !

Views: 106
ಮಂಡ್ಯ: ಖುಷ್, ಖುಷಿಯಾಗಿ ರೀಲ್ಸ್ ಮಾಡುತ್ತಿದ್ದ ಮೇಲುಕೋಟೆ ಟೀಚರ್ ದೀಪಿಕಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದ ದೀಪಿಕಾ ಮೇಡಂ ಕೊಲೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ಕೊಲೆಗೆ ಕಾರಣ ಗೊತ್ತಾಗಿಲ್ಲ. ಇಬ್ಬರು ಕಿಡಿಗೇಡಿಗಳು ದೀಪಿಕಾ ಮೇಲೆ ಹಲ್ಲೆ ಮಾಡಿದ್ದ ದೃಶ್ಯವನ್ನು ಪ್ರವಾಸಿಗರೊಬ್ಬರು ಚಿತ್ರೀಕರಿಸಿ ಕಳುಹಿಸಿದ್ದಾರೆ. ಶೀಘ್ರವೇ ಕೊಲೆಗಾರರನ್ನು ಬಂಧಿಸಲಾಗುವುದು” ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲುಕೋಟೆ ಖಾಸಗಿ ಶಾಲಾ ಶಿಕ್ಷಕಿ ದೀಪಿಕಾ ಕೊಲೆ ಕೇಸ್ ತನಿಖೆ ಚುರುಕುಗೊಂಡಿದೆ. ಕೊಲೆಗಾರರ ಪತ್ತೆಗೆ ಎರಡು ವಿಶೇಷ ತಂಡ ರಚನೆ ಮಾಡಿರುವ ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರ ಹದ್ದಿನ ಕಣ್ಣಿಟ್ಟಿದ್ದಾರೆ. ಪ್ರಮುಖವಾಗಿ ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ರೀಲ್ಸ್ ಟೀಚರ್ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊನೇ ಕಾಲ್ ಮಾಡಿ ನಾಪತ್ತೆಯಾಗಿರುವ ನಿತೀಶ್ಗೂ, ದೀಪಿಕಾಗೂ ಸಂಬಂಧ ಏನು ಅನ್ನೋದು ಯಕ್ಷಪ್ರಶ್ನೆಯಾಗಿದೆ. ಪರಾರಿಯಾಗಿರುವ ನಿತೀಶ್ ಒಬ್ಬನೇ ದೀಪಿಕಾ ಕೊಲೆಗೈದು ಹೂತು ಹಾಕಲು ಸಾಧ್ಯವಾ ಅನ್ನೋದು ಪೊಲೀಸರನ್ನು ಕಾಡುತ್ತಾ ಇದ್ದು, ದೀಪಿಕಾ ಕುಟುಂಬಸ್ಥರ ವಿಚಾರಣೆ ನಡೆಸೋದಕ್ಕೂ ಪೊಲೀಸರು ತಯಾರಿ ನಡೆಸಿದ್ದಾರೆ.
ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಶಿಕ್ಷಕಿ ದೀಪಿಕಾ ಶವ ಪತ್ತೆಯಾದ ಮೇಲೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ದೀಪಿಕಾ ಕೊಲೆ ಬಳಿಕ ತುಂಬಾ ಸಲುಗೆಯಿಂದ ಇದ್ದ ನಿತೀಶ್ ಪರಾರಿಯಾಗಿರೋದು ಯಾಕೆ? ದೀಪಿಕಾಳನ್ನು ನಿತೀಶ್ ಕೊಲೆ ಮಾಡಿದ್ರೆ ಒಬ್ಬನೇ ಹೂತು ಹಾಕಲು ಸಾಧ್ಯವಾ? ನಾಪತ್ತೆಯಾದ ನಿತೀಶ್ಗೂ, ದೀಪಿಕಾಗೂ ಇದ್ದ ಸಂಬಂಧ ಏನು? ಇಬ್ಬರ ನಡುವಿನ ಬಾಂಧವ್ಯ ತಿಳಿಯಲು ಪೊಲೀಸರು ಮುಂದಾಗಿದ್ದಾರೆ.
ಇನ್ನು ಮುಖ್ಯವಾದ ಪ್ರಶ್ನೆಯೊಂದು ಮಂಡ್ಯ ಪೊಲೀಸರನ್ನು ಕಾಡತೊಡಗಿದೆ. ಮಗಳು ನಾಪತ್ತೆಯಾಗಿದ್ದಾಳೆ ಎಂದು ದೂರು ಕೊಟ್ಟ ಕುಟುಂಬಸ್ಥರು ಪೊಲೀಸರಿಗೂ ಮುನ್ನ ಶವ ಪತ್ತೆ ಹಚ್ಚಿದ್ದಾರೆ. ಹೀಗಾಗಿ ದೀಪಿಕಾ ಕುಟುಂಬಸ್ಥರನ್ನು ವಿಚಾರಣೆ ನಡೆಸಲು ಪೊಲೀಸರ ಪ್ಲಾನ್ ಮಾಡಿದ್ದಾರೆ. ದೀಪಿಕಾ ಕೊಲೆ ಕೇಸ್‌ಗೆ ಎಸ್ಪಿ ಎನ್.ಯತೀಶ್ ನೇತೃತ್ವದಲ್ಲಿ 2 ವಿಶೇಷ ತಂಡ ರಚನೆ ಮಾಡಲಾಗಿದ್ದು, ಹಲವು ಆಯಾಮಾಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.