ಶಿಕ್ಷಣ

ಸಿಇಟಿ ಪರೀಕ್ಷೆಯ ದಿನಾಂಕ ಪ್ರಕಟ

Views: 50

ಕನ್ನಡ ಕರಾವಳಿ ಸುದ್ದಿ:ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025ರ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕಗಳನ್ನು ಪ್ರಕಟಿಸಿದೆ. ಏಪ್ರಿಲ್ 15ರಿಂದ 17ವರೆಗೆ ಸಿಇಟಿ ಪರೀಕ್ಷೆ ನಡೆಯಲಿದೆ.

ಸಿಇಟಿ ಕನ್ನಡ ಭಾಷೆ ಪರೀಕ್ಷೆ ಏಪ್ರಿಲ್ 15ಕ್ಕೆ ಹಿಂದೂಡಿಕೆಯಾಗಿದೆ. ಈ ಹಿಂದೆ ಏಪ್ರಿಲ್ 18ಕ್ಕೆ ಪರೀಕ್ಷೆಯನ್ನು ನಿಗದಿಪಡಿಸಲಾಗಿತ್ತು. ಆದರೆ ಏಪ್ರಿಲ್ 18ರಂದು ಗುಡ್ ಪ್ರೈಡೇ ಇರುವುದರಿಂದ ಸರ್ಕಾರ ಪರೀಕ್ಷೆ ದಿನಾಂಕವನ್ನು ಬದಲಾಯಿಸಿದೆ.

ಏಪ್ರಿಲ್ 15ರಂದು ಕನ್ನಡ ಪರೀಕ್ಷೆ ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ ಕೇಂದ್ರಗಳಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. 10ನೇ ತರಗತಿಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿತವರು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮತ್ತು ಕೆಇಎ ನಡೆಸಿದ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೂ ವಿನಾಯಿತಿ ಇರುತ್ತದೆ.

ಏಪ್ರಿಲ್ 16 ರಂದು 10:30ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2:30 ರಿಂದ ರಾಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿದ್ದು, ಮರುದಿನ ಅಂದರೆ ಏಪ್ರಿಲ್ 17ರಂದು ಬೆಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.

ಜ.23ರಿಂದಲೇ ಸಿಇಟಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಈ ವರ್ಷ 3.30 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ನೀರಿಕ್ಷೆಯಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

Related Articles

Back to top button