ಸಿಂಹಿಣಿಗೆ ‘ಸೀತಾ’ ಸಿಂಹಕ್ಕೆ ‘ಅಕ್ಬರ್’ ಹೆಸರು.. ಕೋರ್ಟ್ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು!

Views: 40
ಪಶ್ಚಿಮ ಬಂಗಾಳದಲ್ಲಿ ಮೃಗಾಲಯವೊಂದು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ 2 ಸಿಂಹಗಳಿಗೆ ಇಟ್ಟಿರುವ ಹೆಸರು ಸದ್ಯ ಆಕ್ರೋಶಕ್ಕೆ ಕಾರಣವಾಗಿದೆ. ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು ಕೋರ್ಟ್ ಮೊರೆ ಹೋಗಿವೆ.
ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿ ಅಕ್ಬರ್ ಎಂಬ ಸಿಂಹ ಮತ್ತು ಸೀತಾ ಎಂಬ ಸಿಂಹಿಣಿಯನ್ನು ಒಂದೇ ಆವರಣದಲ್ಲಿ ಇರಿಸಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ಫೆಬ್ರವರಿ 13 ರಂದು ಅರಣ್ಯ ಅಧಿಕಾರಿಗಳು 7 ವರ್ಷದ ಅಕ್ಬರ್ ಹೆಸರಿನ ಸಿಂಹ ಮತ್ತು 5 ವರ್ಷದ ಸೀತಾ ಹೆಸರಿನ ಸಿಂಹಿಣಿಯನ್ನು ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್‌ಗೆ ಕರೆತಂದಿದ್ರು. ಆದ್ರೆ ಇದಕ್ಕೆ ವಿಶ್ವ ಹಿಂದೂ ಪರಿಷತ್ ತಗಾದೆ ತೆಗೆದಿದ್ದು ಸೀತೆ ಎಂಬ ಸಿಂಹಿಣಿಯನ್ನು ಅಕ್ಬರ್ ಎಂಬ ಸಿಂಹದ ಜೊತೆ ಇಡುವುದು ಹಿಂದೂ ಧರ್ಮಕ್ಕೆ ಮಾಡಿದ ಅವಮಾನ ಎಂದಿದೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ?. ಹಾಗಾಗಿ ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ಹೇಳಿದ್ರೂ ಸರ್ಕಾರ ಕೇಳಿಲ್ಲ. ಹೀಗಾಗಿ ಕೋರ್ಟ್ ಮೊರೆ ಹೋಗಿದ್ದೇವೆ ಅಂತ ವಿಶ್ವ ಹಿಂದೂ ಪರಿಷತ್ ಹೇಳಿದೆ. ಫೆಬ್ರವರಿ 16 ರಂದು ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದ್ದು, ಫೆಬ್ರವರಿ 20 ರಂದು ವಿಚಾರಣೆ ನಡೆಯಲಿದೆ.