ಯುವಜನ

ಸರಕಾರಿ ಬಸ್ ಹಾಗೂ ಸ್ಕೂಟಿ ನಡುವೆ ಅಪಘಾತ: ವಿದ್ಯಾರ್ಥಿನಿ ಸಾವು

Views: 145

ಕನ್ನಡ ಕರಾವಳಿ ಸುದ್ದಿ: ಉಬರಡ್ಕ ರಸ್ತೆಯ ಸೂಂತೋಡು ಸಮೀಪ KSRTC ಬಸ್ ಡಿಪೊ ಬಳಿ ಸರಕಾರಿ ಬಸ್ಸು ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಪುತ್ತೂರಿನ ವಿವೇಕಾನಂದ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿನಿ ರಚನಾ (20) ಮೃತಪಟ್ಟವರು.

ನಾರಾಯಣ ಕಾಡುತೋಟ ಮತ್ತು ರಾಜೇಶ್ವರಿ ದಂಪತಿಯ ಪುತ್ರಿಯಾಗಿರುವ ರಚನಾ ಜೂನಿಯ‌ರ್ ಕಾಲೇಜ್ ವಿದ್ಯಾರ್ಥಿನಿಯಾಗಿರುವ ತಂಗಿ ಅನನ್ಯ ಅವರನ್ನು ಕರೆದೊಯ್ಯಲು ಸುಳ್ಯಕ್ಕೆ ಬಂದಿದ್ದರು. ಅನನ್ಯ ಸಂಜೆ ತರಗತಿ ಮುಗಿದ ಬಳಿಕ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಅಭ್ಯಾಸಕ್ಕೆಂದು ನಿಂತಿದ್ದಳು.ಆಕೆಯನ್ನು ಕರೆದೊಯ್ಯಲು ಹೋಗಿದ್ದ ರಚನಾ ತಂಗಿಯೊಂದಿಗೆ ವಾಪಾಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಸಹೋದರಿ 10ನೇ ತರಗತಿ ವಿದ್ಯಾರ್ಥಿನಿ ಅನನ್ಯ (16)ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ತಂದೆ ತಾಯಿ ಸಹೋದರಿಯನ್ನು ಅಗಲಿದ್ದಾರೆ

ರಚನಾ  ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು, ಶೈಕ್ಷಣಿಕವಾಗಿ ಉನ್ನತ ಶ್ರೇಣಿ ಪಡೆದುಕೊಂಡಿದ್ದರು. ಕ್ರೀಡೆಯಲ್ಲೂ ಮುಂದಿದ್ದ ಈಕೆ ಯಕ್ಷಗಾನ ಕಲಾವಿದೆಯೂ ಕೂಡ ಹೌದು.ಗ್ರಾಮ ಆಡಳಿತಾಧಿಕಾರಿ ಪರೀಕ್ಷೆ ಬರೆದು ಉತೀರ್ಣರಾಗಿದ್ದ ರಚನಾ ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು.

 

Related Articles

Back to top button