ಕರಾವಳಿ
ಸಮುದ್ರದಲ್ಲಿ ಭಾರೀ ಗಾಳಿ : ಮೀನುಗಾರಿಕೆ ಸ್ಥಗಿತ

Views: 0
ಕುಂದಾಪುರ : ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು, ಆಳ ಸಮುದ್ರ ಸಹಿತ ಎಲ್ಲ ವಿಧದ ಮೀನುಗಾರಿಕೆಗೆ ಅಡ್ಡಿಯಾಗಿ, ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ.
ಭಾರೀ ಗಾಳಿಯಿಂದಾಗಿ ಗಂಗೊಳ್ಳಿ, ಮಲ್ಪೆ, ಮಂಗಳೂರು, ಭಟ್ಕಳ ಮೀನುಗಾರರು ಕಡಲಿಗಿಳಿಯಲು ಹಿಂದೇಟು ಹಾಕಿದ್ದಾರೆ.
ಮೇ ಪ್ರಥಮ ವಾರದಿಂದ ಪಸಿ೯ನ್, ಟ್ರಾಲ್ ಬೋಟ್, ಸಣ್ಣ ಟ್ರಾಲ್ ಬೋಟ್ ಗಳು ಮತ್ತು ನಾಡಾ ದೋಣಿಗಳು ಕೂಡ ಅಪಾಯ ಅರಿತು ಕಡಲಿಗಿಳಿಯುವಲ್ಲಿ ಹಿಂದೇಟು ಹಾಕಿ ದಡ ಸೇರಿದ್ದಾರೆ.
ಸಮುದ್ರದಲ್ಲಿ ಗಂಟೆಗೆ 28 ರಿಂದ 32 ಕಿ. ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗಂಟೆಗೆ ಗಾಳಿಯ ವೇಗ 40-45 ಕಿ. ಮೀ ಹೆಚ್ಚಳ ಇರುವುದರಿಂದ ಮೀನುಗಾರಿಕೆಗೆ ಅಪಾಯ ತಂದಿದೆ.
ಈ ಕಾರಣದಿಂದ ಅಂಜಲ್, ಪಾಂಪ್ಲೇಟ್, ಬಂಗಡೆ, ಬೂತಾಯಿ, ಕೊಡ್ಡಾಯಿ ಮೀನಿನ ಬೆಲೆ ಏರಿಕೆ ಕಂಡಿದೆ.
ಶನಿವಾರ ಬೆಳಗ್ಗಿನವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಕರಾವಳಿಯ ದಕ್ಷಿಣ, ಉತ್ತರ ಒಳನಾಡಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಪ್ರಕಟಣೆ ತಿಳಿಸಿದೆ.