ಧಾರ್ಮಿಕ

ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನ ಕುಂಭಾಸಿ,  ಶ್ರೀಮನ್ಮಹಾರಥೋತ್ಸವ- 2024

Views: 71

ಕುಂದಾಪುರ: ಪರಶುರಾಮ ಸೃಷ್ಟಿಯಲ್ಲಿ ಅನೇಕ ಪುಣ್ಯಕ್ಷೇತ್ರಗಳಿವೆಯಾದರೂ ಅವುಗಳಲ್ಲಿ ಕರಾವಳಿ ಭಾಗದ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಕೋಟೇಶ್ವರ, ಶಂಕರ ನಾರಾಯಣ, ಕೊಲ್ಲೂರು ಎಂಬ ಈ ಸಪ್ತ ಕ್ಷೇತ್ರಗಳು ಮುಕ್ತಿದಾಯಕಗಳೆಂದು ಪ್ರಸಿದ್ಧವಾಗಿದೆ.

ಇವುಗಳಲ್ಲಿ ಒಂದಾದ ಈ ಕುಂಭಾಸಿ ಕ್ಷೇತ್ರವು ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಬಸ್ ಮಾರ್ಗದಲ್ಲಿ ಕುಂಭಾಸಿಯಲ್ಲಿ ಶ್ರೀ ಹರಿಹರನು ಏಕ ಸ್ಥಾನದಲ್ಲಿ ಸನ್ನಿಹಿತವಾಗಿರುವ ಈ ಪ್ರಾಚೀನ ಕ್ಷೇತ್ರದಲ್ಲಿ ತೀರ್ಥ ಸ್ನಾನ ಈಶ್ವರ ಸೇವೆಯಿಂದ ಭಕ್ತರು ತಮ್ಮ ತಮ್ಮ ಅದೃಷ್ಟಗಳನ್ನು ಸರ್ವದಾ ಪಡೆಯುತ್ತಿದ್ದಾರೆ.

ಕೃತಯುಗದಲ್ಲಿ ಹರಿಹರ ಕ್ಷೇತ್ರ ತ್ರೇತಾಯುಗದಲ್ಲಿ’ ಮಧುವನ’ ದ್ವಾಪರ ಯುಗದಲ್ಲಿ ‘ಗೌತಮ ಕ್ಷೇತ್ರ’ ಕಲಿಯುಗದಲ್ಲಿ ‘ಕುಂಭಾಸಿ’ ಎಂಬುದಾಗಿ ಪ್ರಸಿದ್ಧವಾದ ಈ ಕ್ಷೇತ್ರದ ಪೂರ್ವ ದಿಕ್ಕಿನಲ್ಲಿ ‘ನಾಗಚಲ’ ಅಥವಾ ‘ಗಜಗಿರಿ’ ಆನೆಗುಡ್ಡೆಯಲ್ಲಿದೆ ಶ್ರೀ ಮಹಾಗಣಪತಿಯು ಅಭೀಷ್ಟದಾಯಕನಾಗಿ ಅಭಿವೃದ್ಧಿ ಹೊಂದುತ್ತಿದ್ದಾನೆ. ದಕ್ಷಿಣದಲ್ಲಿ ಸೂರ್ಯನಾರಾಯಣ ಕೋಮಲ ವಿಗ್ರಹದಲ್ಲಿ ವಿರಾಜಮಾನನಾಗಿದ್ದಾನೆ. ಪಶ್ಚಿಮ ದಿಕ್ಕಿನಲ್ಲಿ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯ ಕಂಗೊಳಿಸುತ್ತಿದೆ.

ಮುಂದುಗಡೆ ಸೂರ್ಯ ಪುಷ್ಕರಣಿ ಚಂದ್ರ ಪುಷ್ಕರಣಿ ಎಂಬ ತೀರ್ಥ ಧ್ವಯವು ಎರಡು ಕಣ್ಣುಗಳಂತೆ ವಿರಾಜಿಸುತ್ತಿದೆ. ಗೌತಮರ ಕಮಂಡಲವಿನಲ್ಲಿ ಹರಿ ಮತ್ತು ಈಶ್ವರನು ಜಲ ರೂಪದಲ್ಲಿದ್ದು ಸಜ್ಜನರಿಗೆ ಬೇಕಾದ ವರವನ್ನು ನೀಡುತ್ತಿದ್ದಾನೆ.

ಈ ಕ್ಷೇತ್ರಕ್ಕೆ ಕಲಿಯುಗದಲ್ಲಿ ಸುವರ್ಣ ನಿರ್ಮಿತ ಗರ್ಭಗುಡಿಯಲ್ಲಿ ಪರಶುರಾಮರು ಹರಿಹರರನ್ನು ಪ್ರತಿಷ್ಠೆ ಮಾಡಿದ ಪ್ರಯುಕ್ತ’ ಹರಿಹರ ಕ್ಷೇತ್ರ’ವೆಂದು ಹೆಸರು ಬಂತು ತ್ರೇತಾಯುಗದಲ್ಲಿ ಹನುಮಂತನು ಸಂಜೀವಿನಿ ಪರ್ವತವನ್ನು ಒಯ್ಯುವಾಗ ತುಂಡೊಂದು ಬಿದ್ದು ದೇವಾಲಯ ಆಚ್ಛಾದಿತವಾಯಿತು. ಇಲ್ಲಿ ‘ಮಧು’ ಎಂದರೆ ವಸಂತ ಋತುವಿನ ಅಭಿಮಾನಿ ದೇವತೆ ಮಧುವು ತಪಸ್ಸನ್ನು ಮಾಡಿದ ಪ್ರಯುಕ್ತ ಶ್ರೀಹರಿಯ ವರದಿಂದ ಋತುರಾಜ ನೆನೆಸಿದನು.

ಮಾತ್ರವಲ್ಲ ಈ ಕ್ಷೇತ್ರಕ್ಕೆ ‘ಮಧುವನ’ ಎಂಬ ಹೆಸರೂ ಬಂತು ಮುಂದೆ ದ್ವಾಪರಯುಗದಲ್ಲಿ ಗೌತಮರ ಶಾಪದಿಂದ ನಷ್ಟ ಜ್ಞಾನರಾದ ವಿಪ್ರರು ಈ ಕ್ಷೇತ್ರದಲ್ಲಿ ಸುಜ್ಞಾನ ಪ್ರಾಪ್ತಿಗಾಗಿ ಕಠೋರವಾದ ತಪಸ್ಸನ್ನು ಮಾಡಿದರು.

ಅಗಸ್ತ್ಯರು ಗೌತಮರು ಮೊದಲಾದ ಋಷಿಗಳು ಕೂಡ ಈ ಕ್ಷೇತ್ರದಲ್ಲಿ ಅತ್ಯುಘ್ರವಾದ ತಪಸ್ಸನ್ನು ಮಾಡಲು ಹರಿಹರರು ಅವರನ್ನು ಅನುಗ್ರಹಿಸಿದರು. ಹರಿಯ ಅನತಿಯಂತೆ ರುದ್ರದೇವರು ತಮ್ಮ ಜಟೆಯಿಂದ ಗಂಗೆಯನ್ನು ಗೌತಮರ ಕಮಂಡಲವಿನಲ್ಲಿ ಬಿಟ್ಟಾಗ ಆ ಕುಂಭಾಕೃತಿಯ ಕಮಂಡಲುವಿನ ಗಂಗಾಜಲದ ಬಲಭಾಗದಲ್ಲಿ ‘ಹರಿ’ಯು ಎಡಭಾಗದಲ್ಲಿ ‘ಹರ’ನು ಸನ್ನಿಹಿತರಾದರು.

ಆ ಗಂಗಾಜಲದಿಂದ ಕೂಡಿದ ಕಮಂಡಲು ‘ಕುಂಭಕಾಶಿ’ ಎಂದು ಪ್ರಸಿದ್ಧವಾಯಿತು. ಮುಂದೆ ಕಲಿಯುಗದಲ್ಲಿ ವರಬಲದಿಂದ ಮದೋನ್ಮತ್ತನಾದ ಕುಂಭಾಸುರನನ್ನು ಭೀಮನು ವಿಶ್ವಂಭರ ರೂಪಿಯಾದ ಶ್ರೀ ಹರಿಯನ್ನು ಧ್ಯಾನಿಸಿ ಸಂಹರಿಸಿದ

ಹರಿಹರರ ಸನ್ನಿಧಾನವಿರುವ ಗೌತಮರ ಕಮಂಡಲುವಿನ ಮುಂಭಾಗದಲ್ಲಿ ಪುಷ್ಕರಣಿ ಇದೆ ಇದನ್ನು ಭಾರ್ಗವ ರಾಮರು ಪಾಪ ನಾಶಕ ತೀರ್ಥಗಳ ಸಾನಿಧ್ಯದೊಂದಿಗೆ ಕೃತಯುಗದಲ್ಲಿ ರಚಿಸಿದರು.

ಹಾಗೆಯೇ ರುದ್ರದೇವರ ಜಟೆಯಿಂದ ಧುಮುಕಿ ಬಂದ ಗಂಗೆ ಮುಂದೆ ಹರಿದು ಈ ತೀರ್ಥದಲ್ಲಿ ಸನ್ನಿಹಿತಳಾದಳು. ಈ ತೀರ್ಥವನ್ನು ತೇತ್ರಾಯುಗದಲ್ಲಿ ವಿಭಾಗ ಮಾಡಿ ಸೂರ್ಯ ಚಂದ್ರರು ಸ್ನಾನ ಮಾಡಿದ ಪ್ರಯುಕ್ತ ರುದ್ರದೇವರ ವರದಂತೆ ಆ ಪುಷ್ಕರಣಿಗಳು ‘ಸೂರ್ಯ ಪುಷ್ಕರಣಿ’ ಹಾಗೂ ‘ಚಂದ್ರ ಪುಷ್ಕರಣಿ’ ಎಂದು ಪ್ರಸಿದ್ಧವಾದವು. ಋಜು ಮುನಿಗಳಾದ ಶ್ರೀ ವಾದಿರಾಜರು’ ತೀರ್ಥಪ್ರಬಂಧ’ದಲ್ಲಿ ಈ ತೀರ್ಥಗಳನ್ನು ತೀರ್ಥಂ ನೇತ್ರಂ ಕ್ಷೇತ್ರದ ನೇತ್ರ ಗೌತಮರ ನೇತ್ರ ಎಂದು ಸ್ತುತಿಸುತ್ತಾರೆ. ದೇವರ ಬಲ ಭಾಗದ ಪುಷ್ಕರಣಿ ಸೂರ್ಯ ಪುಷ್ಕರಣಿ ಎಡಬಾಗದ ಚಂದ್ರ ಪುಷ್ಕರಣಿ ಇಲ್ಲಿಯೇ ಸಂಕ್ರಾಂತಿ, ಗ್ರಹಣ, ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ ಮೊದಲಾದ ಪರ್ವ ದಿನಗಳು ಹಾಗೂ ಪುಣ್ಯ ದಿನಗಳ ಸ್ನಾನ ಅಕ್ಷಯವಾದ ಫಲವನ್ನು ನೀಡುತ್ತದೆ.

ಹರಿಹರ ಹಾಗೂ ಆನೆಗುಡ್ಡೆ ದೇವಾಲಯದ ರಥೋತ್ಸವದ ಅವೃತಗಳು ಕೂಡ ಈ ಪುಷ್ಕರಣಿಯಲ್ಲಿ ಇಂದಿಗೂ ನಡೆಯುತ್ತದೆ ಈ ಕ್ಷೇತ್ರದಲ್ಲಿಯೇ ತ್ರಿಕಾಲದಲ್ಲಿ ಮಿಂದು ಇಲ್ಲಿನ ತೀರ್ಥ ಬಾವಿಯ ಜಲವನ್ನೇ ತೆಗೆದುಕೊಂಡು ಹೋಗಿ ಆನೆಗುಡ್ಡೆ ಗಣಪತಿಯನ್ನು ಅರ್ಚಿಸುವ ಪದ್ಧತಿ ಅನೂಚಾನವಾಗಿ ನಡೆದು ಬಂದಿದೆ.

ಬ್ಯಾಂಕ್ ಖಾತೆ ವಿವರ

SB A/C NO:4152500100142101

IFSC Code KARB00004979

Mob 9449943865

ವಿಳಾಸ: ಶ್ರೀ ಮಹಾಲಿಂಗೇಶ್ವರ (ಹರಿಹರ) ದೇವಸ್ಥಾನ ಕುಂಭಾಸಿ 576257 ಕುಂದಾಪುರ ತಾಲೂಕು ಉಡುಪಿ ಜಿಲ್ಲೆ

ಜನವರಿ 16 ರಂದು ಶ್ರೀಮನ್ಮಹಾರಥೋತ್ಸವ -2024

ದಿನಾಂಕ 13.01.2024ನೇ ಶನಿವಾರ ಪ್ರಾತ:ಕಾಲ :ದೇವತಾ ಪ್ರಾರ್ಥನೆ, ಮುಹೂರ್ತ ಬಲಿ,

ದಿನಾಂಕ 14.01.2024ನೇ ಭಾನುವಾರ: ಬಲಿ ಧ್ವಜಾರೋಹಣ, ಕಟ್ಟೆ ಪೂಜೆ, ವಾಸ್ತು ಪೂಜೆ ರಾಕ್ಷೋಘ್ನ ಹೋಮ, ರಂಗ ಪೂಜೆ, ಓಲಗ ಮಂಟಪ ಪೂಜೆ, ಪ್ರಸಾದ ವಿತರಣೆ.

ಬೆಳಿಗ್ಗೆ 10ಕ್ಕೆ ಮಹಿಳಾ ಯಕ್ಷ ಬಳಗ ಕೋಟೇಶ್ವರ ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6ಕ್ಕೆ ಭಜನೆ

ದಿನಾಂಕ 15.01.2024ನೇ ಸೋಮವಾರ: ಬಲಿ ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಕಟ್ಟೆ ಪೂಜೆ, ರಂಗ ಪೂಜೆ, ಬಲಿ ಓಲಗ ಮಂಟಪ ಪೂಜೆ

ಸಂಜೆ 6,30 ಕ್ಕೆ ಶ್ರೀ ಕಾಂತೇಶ್ವರ ಕಲಾಸಂಘ ಗೋಪಾಡಿ ಇವರಿಂದ ‘ಕಲಾ ಸಂಭ್ರಮ’

ದಿನಾಂಕ 16-1.2024ನೇ ಮಂಗಳವಾರ:  ಪ್ರಧಾನ ಹೋಮ, ರಥ ಹೋಮ, ಮಹಾಪೂಜೆ,ಮೃತ್ಯುಂಜಯ ಹೋಮ

12:30ಕ್ಕೆ ‘ಶ್ರೀ ಮನ್ಮಹಾರಥೋತ್ಸವ’

ಮದ್ಯಾಹ್ನ ಗಂಟೆ 1ಕ್ಕೆ ಅನ್ನಸಂತರ್ಪಣೆ

ಸಂಜೆ 7 ಕ್ಕೆ ರಥೋತ್ಸವ, ಓಲಗ ಮಂಟಪ ಪೂಜೆ

ರಾತ್ರಿ ಭೂತ ಬಲಿ ಶಯಮೋತ್ಸವ

ರಾತ್ರಿ 10 ಕ್ಕೆ ಕಲಾ ಸ್ಫೂರ್ತಿ ತಂಡದವರಿಂದ ನಾಟಕ

” ಆ ದಿನ.. ನಡೆದದಿಷ್ಠೆ…! ”

ದಿನಾಂಕ 17 ಮತ್ತು 18ರಂದು ದೇವೋತ್ಥಾಪನಾಹೋಮ, ಪ್ರಧಾನ ಹೋಮ, ಮಹಾಪೂಜೆ,ರಾತ್ರಿ: ಸುವರ್ಣೋತ್ಸವ ಅರುಣೋದಯೇ, ಅವಭ್ರತಸ್ನಾನ, ಯಜ್ಞ ಪೂರ್ಣಾಹುತಿ, ಧ್ವಜಾರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷಣೆ, ಗಣ ಹೋಮ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

ಕುಂಭಾಸಿ” ಶ್ರೀ ಮನ್ಮಹಾರಥೋತ್ಸವ “ಕ್ಕೆ ಶುಭ ಕೋರುವವರು;

Related Articles

Back to top button