ಕರಾವಳಿ

ಶೀಘ್ರದಲ್ಲೇ ಮಂಗಳೂರಿನಲ್ಲಿ ಓಡಾಟ ಆರಂಭಿಸಲಿದೆ ಇಲೆಕ್ಟ್ರಿಕ್‌ ಬಸ್‌ !

Views: 46

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೆಎಸ್‌ಆರ್‌ಟಿಸಿ ಇಲೆಕ್ಟ್ರಿಕ್‌ ಬಸ್‌ಗಳ (KSRTC EV Bus) ಓಡಾಟ ಆರಂಭಗೊಳ್ಳಲಿದೆ. ಈಗಾಗಲೇ ಕೆಎಸ್‌ಆರ್‌ಟಿಸಿಯಿಂದ ಕಡಲ ನಗರಿಯ ಜಿಲ್ಲೆಗೆ 45 ಬಸ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕುಂಟಿಕಾನದ ಮೂರನೇ ವಿಭಾಗ ಕಚೇರಿ ಬಸ್ ಶೆಡ್ ನಲ್ಲಿ ಇ-ಬಸ್ ಚಾರ್ಜಿಂಗ್ ವ್ಯವಸ್ಥೆಗೆ ಯೋಜನೆ ಹಾಕಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಧರ್ಮಸ್ಥಳ ರಸ್ತೆ, ಕಾಸರಗೋಡು ರಸ್ತೆ ಹಾಗೂ ಉಡುಪಿ ರಸ್ತೆಯಲ್ಲಿ ಇ-ಬಸ್ ಸಂಚಾರಕ್ಕೆ ಬೇಡಿಕೆ ಹೆಚ್ಚಿದೆ ಎಂದು ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಕೇಂದ್ರ ಸರ್ಕಾರದ ಇ-ಬಸ್ ಯೋಜನೆಗೂ ದಕ್ಷಿಣ ಕನ್ನಡ ಜಿಲ್ಲೆ ಆಯ್ಕೆಯಾಗಿದ್ದು, ಆ ಯೋಜನೆಯ ಮೂಲಕ ಜಿಲ್ಲೆಗೆ 100 ಇಲೆಕ್ಟ್ರಿಕ್ ಬಸ್‌ಗಳನ್ನು ನಿರೀಕ್ಷಿಸಲಾಗಿದೆ. ಸದ್ಯ ನಗರದಲ್ಲಿ ಎರಡು ಚಾರ್ಜಿಂಗ್ ಸ್ಟೇಷನ್ ವ್ಯವಸ್ಥೆಯ ಯೋಜನೆಯಿದ್ದು, ಇಲ್ಲಿ ಏಕಕಾಲದಲ್ಲಿ ಐದು ಬಸ್‌ಗಳನ್ನು ಚಾರ್ಜಿಂಗ್ ಮಾಡಬಹುದಾಗಿದೆ.

ಮಂಗಳೂರು ನಗರದಲ್ಲಿ ಕೆಎಸ್ಆರ್‌ಟಿಸಿ ಯೋಜನೆ ಪ್ರಕಾರ 45 ಬಸ್ ಗಳು ಶೀಘ್ರದಲ್ಲೇ ನಗರಕ್ಕೆ ಬರಲಿದೆ. ಮೇ ಕೊನೆಯ ವಾರ ಅಥವಾ ಜೂನ್ ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಬಸ್ ಗಳು ಸಂಚರಿಸಲಿದೆ ಎನ್ನಲಾಗಿದೆ. ಖಾಸಗಿ, ಸರಕಾರಿ ಬಸ್ ಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಮಂಗಳೂರಿನಲ್ಲಿ ಇನ್ನು ಮುಂದೆ ಇ-ಬಸ್ ಗಳು ಸಂಚಾರ ನಡೆಸಲಿದೆ.

Related Articles

Back to top button