ಶಾಲೆಯ 3ನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಸಾವು

Views: 69
ಬೆಂಗಳೂರು ಫ್ರಿಸ್ಕೂಲ್ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ನಾಲ್ಕು ವರ್ಷದ ಹೆಣ್ಣು ಮಗು ಮೂರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಹೆಣ್ಣೂರಿನ ಚೆಳ್ಳೆಕೆರೆಯಲ್ಲಿ ನಡೆದಿದೆ.
ಚೆಳ್ಳೆಕೆರೆಯ ಖಾಸಗಿ ಡೆಲ್ಲಿ ಪ್ರಿ ಸ್ಕೂಲ್‌ನ ಶಾಖೆ ಪ್ರಿ ಸ್ಕೂಲ್ ನಲ್ಲಿ ಕಲಿಯುತ್ತಿದ್ದ ಕೇರಳ ಮೂಲದ ಸಾಫ್ಟ್‌ವೇರ್ ವೃತ್ತಿಪರ ದಂಪತಿ ಜಿಟೋ ಟಾಮಿ ಜೋಸೆಫ್, ಬಿನಿಟೋ ಥಾಮಸ್ ಪುತ್ರಿ ಗಿಯಾನ್ನಾ ಮೃತಪಟ್ಟ ದುರ್ದೈವಿ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಷಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ.ಕಳೆದ ಜ.22ರ ಮಧ್ಯಾಹ್ನ ಮಹಡಿ ಮೇಲೆ ಆಡುತ್ತಿದ್ದಾಗ ಮೂರನೇ ಮಹಡಿಯಿಂದ ಬಿದ್ದು ತಲೆಗೆ ತೀವ್ರ ಗಾಯವಾಗಿದ್ದ ಗಿಯಾನ್ನಾಳನ್ನು ಕೂಡಲೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯು ಚಿಕಿತ್ಸೆ ಫಲಸದೇ ಪ್ರಾಣ ಕಳೆದುಕೊಂಡಿದ್ದಾಳೆ.ಪುಟ್ಟ ಮಕ್ಕಳ ಶಾಲೆಯನ್ನು ಮೂರನೇ ಮಹಡಿಯಲ್ಲಿ ನಡೆಸಿದ್ದು, ಮಕ್ಕಳು ಮಹಡಿಯಿಂದ ತಡೆ ಗೋಡೆ ಹತ್ತಿ ಹೊರಗೆ ಬಿದ್ದರೂ ಗಮನಿಸದೆ ಇರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.ಈ ನಡುವೆ ಮಗು ಬಿದ್ದು ಗಾಯಗೊಂಡ ನಿಜವಾದ ಕಾರಣವನ್ನು ಕೂಡಾ ಶಾಲೆ ಮುಚ್ಚಿಟ್ಟಿದ್ದು,ಬಾಲಕಿ ಗೋಡೆ ಹತ್ತಿ ಕೆಳಗೆ ಬಿದ್ದ ನಂತರವೂ ಶಾಲೆಯ ಅಧಿಕಾರಿಗಳು ಗಮನಕ್ಕೆ ಬಂದಿಲ್ಲ,ಘಟನೆಗೆ ನಿಜವಾದ ಕಾರಣವನ್ನು ಅಧಿಕಾರಿಗಳು ಮುಚ್ಚಿಡಲು ಪ್ರಯತ್ನಿಸಿದ್ದಾರೆ.
ಬಾಲಕಿ ಡೇಕೇರ್‌ನಲ್ಲಿ ಗೋಡೆಗೆ ಡಿಕ್ಕಿ ಹೊಡೆದು ಬಾಲಕಿ ಕೆಳಗೆ ಬಿದ್ದಾಗ ಶಾಲೆಯ ಮಹಿಳಾ ಸಹಾಯಕರು ಇತರ ಮಕ್ಕಳಿಗೆ ಆಹಾರ ಮತ್ತು ಆರೈಕೆಯಲ್ಲಿ ನಿರತರಾಗಿದ್ದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ತಪಾಸಣೆ ನಡೆಸಿ ಮಗುವಿಗೆ ಉಂಟಾಗ ಗಾಯದ ಮಾಹಿತಿ ನೀಡಿದಾಗ ಶಾಲೆಯವರು ಮೂರನೇ ಮಹಡಿಯಿಂದ ಬಿದ್ದಿದ್ದಾಳೆ ಎಂದು ಒಪ್ಪಿಕೊಳ್ಳಲು ಮುಂದೆ ಬಂದರು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಗಿಯಾನಾ ಪ್ರತಿಭಾನ್ವಿತ ಬಾಲಕಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಸಂಯೋಜನೆ, ಗಾಯನದಲ್ಲಿ ತುಂಬಾ ಆಸಕ್ತಿ ಹೊಂದಿದ್ದಳು. ಆಕೆ ಎತ್ತರ ಪ್ರದೇಶ ಹೋಗಲು ಹೆದರುತ್ತಿದ್ದಳು. ಟೆರೇಸ್‌ಗೆ ಹೋಗಿರುವ ಸಾಧ್ಯತೆಯಿಲ್ಲ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ.
ಈ ಸಂಬಂಧ ಶಾಲೆ ಹಾಗೂ ಪ್ರಾಂಶುಪಾಲರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.