ಶಿಕ್ಷಣ

ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪೌಡರ್ ಪ್ಯಾಕೆಟ್ ಕದ್ದ ಮುಖ್ಯ ಶಿಕ್ಷಕ ಸಸ್ಪೆಂಡ್

Views: 211

ಮೈಸೂರು: ಇಲ್ಲೋರ್ವ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಹಾಲಿನ ಪೌಡರ್ ಪ್ಯಾಕೇಟ್ ಗಳನ್ನು ಮನೆಗೆ ಕದ್ದೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಶಾಲೆಯಲ್ಲಿದ್ದ ಹತ್ತು ಹಾಲಿನ ಪೌಡರ್ ಪ್ಯಾಕೇಟ್ ಗಳನ್ನು ಕದ್ದೊಯ್ದಿದ್ದು, ರೆಡ್ ಹ್ಯಾಂಡ್ ಆಗಿ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾನೆ.

ಮುಖ್ಯ ಶಿಕ್ಷಕನನ್ನು ಹಿಡಿದು ಬಿಇಒಗೆ ಸರ್ವಜನಿಕರು ಮಾಹಿತಿ ನೀಡಿದರೂ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಬಂದಿಲ್ಲ.

ಪಟ್ಟಣದಲ್ಲೇ ಈ ಪರಿಸ್ಥಿತಿ ಆದರೆ, ಗ್ರಾಮೀಣ ಭಾಗದ ಶಾಲೆಗಳ ಗತಿ ಏನು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಬಳಿಕ ತಡವಾಗಿ ಬಿಇಒ ಕೃಷ್ಣಯ್ಯ ಸ್ಥಳಕ್ಕಾಗಮಿಸಿದ್ದಾರೆ. ಕೃತ್ಯವೆಸಗಿದ ಶಿಕ್ಷಕನ‌ ಮೇಲೆ ಶಿಸ್ತು ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯ ಶಿಕ್ಷಕನನ್ನು ಡಿಡಿಪಿಐ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಗಣೇಶ್ ಅಮಾನತುಗೊಂಡವರು. ಸೋಮವಾರ ಹಾಲಿನ ಪ್ಯಾಕೇಟ್ ಸಮೇತ ಗಣೇಶ್ ಸಿಕ್ಕಿಬಿದ್ದಿದ್ದರು. ಇಂದು ಸಸ್ಪೆಂಡ್ ಆಗಿದ್ದಾರೆ.

 

Related Articles

Back to top button