ಜನಮನ
ಶಂಕರನಾರಾಯಣಕ್ಕೂ ಬಂತೂ ಶವ ಶೀತಲೀಕರಣ ಪೆಟ್ಟಿಗೆ

Views: 75
ಕುಂದಾಪುರ: ಗ್ರಾಮೀಣ ಪ್ರದೇಶದ ಜನರಿಗೆ ಅಗತ್ಯವಾಗಿ ಶವ ಶೀತಲೀಕರಣ ಪೆಟ್ಟಿಗೆ ಅಗತ್ಯತೆ, ಇಲ್ಲಿನ ಜನರ ಅನುಕೂಲಕ್ಕಾಗಿ ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘ 1.38 ಲಕ್ಷ ಮೊತ್ತದ ಶವ ಶೀತಲೀಕರಣ ಪೆಟ್ಟಿಗೆಯನ್ನು ಶಂಕರನಾರಾಯಣ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಅಪಘಾತ,ಅನಾಹುತ, ಆಕಸ್ಮಿಕ ಮರಣ, ಅನಾಥ ವ್ಯಕ್ತಿ ಅಥವಾ ಯಾವುದೇ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಸಂಬಂಧಿಗಳು ದೂರ ದೂರದಲ್ಲಿರುವುದರಿಂದ ಶವ ಸಂಸ್ಕಾರವನ್ನು ಮುಂದೂಡುವ ಸ್ಥಿತಿಯನ್ನು ಮನಗಂಡು ಸಹಕಾರಿ ಸಂಘವು ನೀಡಿದ ಶವ ಪೆಟ್ಟಿಗೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲು ವ್ಯವಸ್ಥೆ ಮಾಡಲಾಗಿದೆ. ಇದು ಬಾಡಿಗೆ ರಹಿತವಾಗಿದೆ.
ಈ ಭಾಗದ ಜನರ ಹಲವಾರು ವರ್ಷದ ಬೇಡಿಕೆಯಾಗಿದ್ದು, ಯಾವುದೇ ರೀತಿಯ ಬಾಡಿಗೆ ಇಲ್ಲದೆ ಇದರ ಸಂಪೂರ್ಣ ನಿರ್ವಹಣೆಯನ್ನು ಸಂಘವೇ ಭರಿಸುತ್ತದೆ ಎಂದು ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.