ಇತರೆ
ವಿಮಾನ ತುರ್ತು ಭೂ ಸ್ಪರ್ಶ: ತಪ್ಪಿದ ಭಾರೀ ಅನಾಹುತ

Views: 0
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಭೂಸ್ಪರ್ಶ ಮಾಡಿದ್ದು , ಭಾರೀ ಅನಾಹುತದಿಂದ ಪಾರಾಗಿದೆ.
ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಹಿಂದೂಸ್ತಾನ್ ಅರೋನಾಟಿಕ್ಸ್ ಲಿಮಿಟೆಡ್ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಯಾವುದೇ ಅನಾಹುತವಿಲ್ಲದೆ ಪಾರಾದ ಘಟನೆ ನಡೆದಿದೆ.
ನಿಲ್ದಾಣದಲ್ಲಿ ಟೇಕ್ ಅಪ್ ಆದ ಕಾರಣ ಅದು ವಾಪಸ್ ಆಗಿದೆ. ವಿಮಾನ ನೋಸ್ ಗೇರ್ ಕಾರ್ಯನಿರ್ವಹಿಸದ ಕಾರಣ ವಿಮಾನದ ಮುಂಭಾಗ ರನ್ವೇಗೆ ಉಜ್ಜಿಕೊಂಡು ಹೋಗಿದೆ. ಅದೃಷ್ಟವಶಾತ್ ಅದರಲ್ಲಿ ಇಬ್ಬರು ಪೈಲೆಟ್ ಗಳಿದ್ದು ಯಾವುದೇ ಪ್ರಯಾಣಿಕರು ಇಲ್ಲದೆ ಇರುವುದರಿಂದ ದೊಡ್ಡ ಅನಾಹುತದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.