ವಾಯುಪಡೆ ಸಮವಸ್ತ್ರ ಧರಿಸಿ ರೊಮ್ಯಾಂಟಿಕ್ ಸೀನ್ ಮಾಡಿದ ದೀಪಿಕಾ-ಹೃತಿಕ್, ವಾಯುಪಡೆಗೆ ಅವಮಾನ

Views: 28
ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾ ರಿಲೀಸ್ ಆಗಿ ಭಾರತದ ಅತಿದೊಡ್ಡ ಆ್ಯಕ್ಷನ್ ಸಿನಿಮಾ ಎಂದೆನಿಸಿಕೊಂಡಿತ್ತು. ಇದೀಗ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.
ಬಾಲಿವುಡ್ ನಟ ಹೃತಿಕ್ ರೋಷನ್ ಅಭಿನಯದ ‘ಫೈಟರ್’ ಸಿನಿಮಾ ಕಳೆದ ಜನವರಿ 25, 2024ರಂದು ರಿಲೀಸ್ ಆಗಿತ್ತು.
ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಅನಿಲ್ ಕಪೂರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಫೈಟರ್’ ಸಿನಿಮಾದಲ್ಲಿ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ವಾಯುಪಡೆ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಇಬ್ಬರೂ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ವಾಯುಪಡೆ ಅಧಿಕಾರಿಗಳಾಗಿರುತ್ತಾರೆ. ಇಬ್ಬರ ರೊಮ್ಯಾಂಟಿಕ್ ದೃಶ್ಯಗಳೂ ಇವೆ. ಆದರೆ ವಾಯುಪಡೆ ದಿರಿಸಿನಲ್ಲಿ ಚುಂಬನ, ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿದ್ದಕ್ಕೆ ವಾಯುಪಡೆ ದೀಪಿಕಾ ಮತ್ತು ಹೃತಿಕ್ ಇಬ್ಬರಿಗೂ ವಾಯುಪಡೆ ಲೀಗಲ್ ನೋಟಿಸ್ ನೀಡಿದೆ.
ವಾಯುಪಡೆಗೆ ಅದರದ್ದೇ ಆದ ಗೌರವವಿದೆ. ಅದರ ಸಮವಸ್ತ್ರ ತ್ಯಾಗ, ಶಿಸ್ತು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಬದ್ಧತೆಯ ಪ್ರತೀಕವಾಗಿದೆ. ಆದರೆ ಸಿನಿಮಾದಲ್ಲಿ ಈ ಸಮವಸ್ತ್ರ ಧರಿಸಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಭಾಗಿಯಾಗಿದ್ದು ವಾಯುಪಡೆಯ ಘನತೆಗೆ ಧಕ್ಕೆ ತಂದಂತೆ. ಇಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಿ ವಾಯುಪಡೆಗೆ ಅವಮಾನ ಮಾಡಲಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಅಸಂಖ್ಯಾತ ಅಧಿಕಾರಿಗಳಿಗೆ ಇದು ಅವಮಾನ. ವಾಯುಪಡೆ ಸಮವಸ್ತ್ರ ಧರಿಸಿ ಕೆಲವು ಅಹಿತಕಾರಿ ಸನ್ನಿವೇಶಗಳನ್ನು ತೋರಿಸುವ ಮೂಲಕ ವಾಯುಪಡೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ.