ಲೋಕಸಭಾ ಚುನಾವಣೆ ಟಾರ್ಗೆಟ್: ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನಮಾನ

Views: 0
ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ನಿಗಮ ಮಂಡಳಿಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದಲ್ಲಿ ಕಾರ್ಯಕರ್ತರಿಗೆ ನೀಡುವ ಲೆಕ್ಕಚಾರದಲ್ಲಿದೆ.
ಈಗಾಗಲೇ ಕ್ಷೇತ್ರವಾರು ಅರ್ಜಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಹ್ವಾನಿಸಿದ್ದು, ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಂದು ಹಂತದ ಚರ್ಚೆ ನಡೆಸಿದ್ದಾರೆ.
ನೇಮಕಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿದ್ದಾರೆ. ಆಗಸ್ಟ್ ವೇಳೆ ಹಂತ ಹಂತವಾಗಿ ನೇಮಕ ಶುರುವಾಗಲಿದೆ ಎಂದು ತಿಳಿದುಬಂದಿದೆ.
ಅಧ್ಯಕ್ಷ ಸ್ಥಾನದ ಶೇಕಡ 30 ರಷ್ಟು ಕಾಂಗ್ರೆಸ್ ನಾಯಕರಿಗೆ ಮೀಸಲಿಟ್ಟು, ಬಾಕಿ ಶೇಕಡ 70 ರಷ್ಟು ಪಕ್ಷದ ಕಾರ್ಯಕರ್ತನಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಯಲಾಗಿದೆ.
115ಕ್ಕೂ ಹೆಚ್ಚು ನಿಗಮ ಮಂಡಳಿಗಳಿದ್ದು, ಜಿಲ್ಲಾ ಪ್ರಾದೇಶಿಕವಾರುಗಳನ್ನು ಲೆಕ್ಕಾಚಾರ ಹಾಕಿದರೆ 200ಕ್ಕಿಂತಲೂ ಜಾಸ್ತಿ ಇರಲಿದೆ.ಇದರಲ್ಲಿ 20 ರಿಂದ 30 ನಿಗಮ ಮಂಡಳಿಗಳು ಆರ್ಥಿಕವಾಗಿ ಹಾಗೂ ಸರಕಾರದ ಮಟ್ಟದಲ್ಲಿ ಪ್ರಭಾವಿ ನಿಗಮ ಮಂಡಳಿಗಳು ಎನಿಸಿವೆ.
ಪ್ರತಿ ಕ್ಷತ್ರಕ್ಕೆ 57 ಜನರನ್ನು ಆರಿಸಲು ಸರ್ಕಾರಕ್ಕೆ ಅವಕಾಶವಿದೆ. ಒಟ್ಟು 12 ಸಾವಿರಕ್ಕೂ ಹೆಚ್ಚು ನಾಮ ನಿರ್ದೇಶನ ಆಗಬೇಕಿದೆ.