ಲಕ್ಷ್ಮಣ್ ಸವದಿಗೆ ಬಿಜಿಪಿ ಬಿಗ್ ಆಫರ್ ಕೊಟ್ಟು ಪಕ್ಷಕ್ಕೆ ಕರೆತರುವ ಮಾಸ್ಟರ್ ಪ್ಲಾನ್ !

Views: 63
,ಲೋಕಸಭಾ ಚುನಾವಣೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ನಾಯಕರು, ಮೂಲ ಬಿಜೆಪಿಗೆ ರನ್ನು ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನ ಬಿಜೆಪಿಗೆ ಮರಳಿ ಕರೆದಂದ ಬಳಿಕ ಲಕ್ಷ್ಮಣ್ ಸವದಿ ಅವರನ್ನ ಪಕ್ಷಕ್ಕೆ ಕರೆತರುವ ನಿಟ್ಟಿನಲ್ಲಿ ಹೈಕಮಾಂಡ್ ಹಲವು ಬಿಜೆಪಿ ನಾಯಕರಿಗೆ ಜವಾಬ್ದಾರಿಯನ್ನು ನೀಡಿದೆ.
ಬಿಜೆಪಿ ಟಿಕೆಟ್ ಸಿಗದೇ ಕಾಂಗ್ರೆಸ್ ಸೇರಿ ಅಥಣಿ ಕ್ಷೇತ್ರದಿಂದ ಶಾಸಕರಾಗಿಯೂ ಲಕ್ಷ್ಮಣ ಸವದಿ ಗೆದ್ದು ಬಂದರು. ಆದರೆ ಸವದಿಯವರು ಬಿಜೆಪಿಗೆ ವಾಪಸ್ ಬರ್ತಾರೆ ಅನ್ನೋ ಮಾತಿದೆ. ಆದರೆ ನಾನು ಬಿಜೆಪಿಗೆ ಹೋಗಲ್ಲ ಎಂದು ಲಕ್ಷ್ಮಣ್ ಸವದಿ ಅವರು ಹೇಳಿದ್ದಾರೆ. ಬೆಳಗಾವಿ ಭಾಗದ ಹಲವು ಬಿಜೆಪಿ ನಾಯಕರಿಗೆ ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿಗೆ ಕರೆತರುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮಹತ್ವದ ಜವಾಬ್ದಾರಿಯನ್ನು ನೀಡಿದೆ.
ಈಗಾಗಲೇ ಬೆಳಗಾವಿಯ ಸ್ಥಳೀಯ ಬಿಜೆಪಿ ನಾಯಕರು ಶಾಸಕರಾದ ಲಕ್ಷ್ಮಣ್ ಸವದಿ ಅವರನ್ನು ಸಂಪರ್ಕಿಸಿದ್ದು, ಸವದಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಹೈಕಮಾಂಡ್ ಕೊಟ್ಟಿರುವ ಬಿಗ್ ಆಫರ್ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆಯನ್ನು ಬಿಜೆಪಿ ಹೈಕಮಾಂಡ್ ನೀಡಿರುವ ಬಗ್ಗೆ ಲಕ್ಷ್ಮಣ್ ಸವದಿ ಜೊತೆಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಸ್ಥಾನಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ.
ಇನ್ನೂ ಲಕ್ಷ್ಮಣ್ ಸವದಿ ಅವರನ್ನು ಪಕಕ್ಷ ಕರೆತರುವ ಕುರಿತು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ, ನಾವು ಪಕ್ಷಕ್ಕೆ ಬರಲಿ ಅಂತೇವಿ ಕೇಂದ್ರದ ಮತ್ತು ರಾಜ್ಯದ ನಾಯಕರು ಎನೂ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು. ಲಕ್ಷ್ಮಣ ಸವದಿಯನ್ನು ಕರೆದುಕೊಂಡು ಬರುವ ಜವಾಬ್ದಾರಿ ಎಲ್ಲರ ಹೆಗಲಿಗಿದೆ. ನಾನಿರಬಹುದು, ಈರಣ್ಣಾ ಕಡಾಡಿ, ಮಹಾಂತೇಶ್ ದೊಡ್ಡಗೌಡರ, ರಮೇಶ್ ಕತ್ತಿ ಸೇರಿ ಜಿಲ್ಲೆಯ ಎಲ್ಲ ನಾಯಕರ ಮೇಲಿದೆ.ಕೇಂದ್ರದ ಮತ್ತು ರಾಜ್ಯದ ನಾಯಕರು ಮುಂದೆ ಅದನ್ನು ನೋಡ್ಕೊತೇವಿ ಎಂದು ಹೇಳಿದ್ದಾರೆ.
ಲಕ್ಷ್ಮಣ್ ಸವದಿ ನಿವಾಸದಲ್ಲಿ ಲಂಚ್ ಮೀಟಿಂಗ್ ವಿಚಾರವಾಗಿ ಮಾತನಾಡಿ, ಯಾವಾಗಲೂ ನಾವು ಕೂಡುತ್ತಿರುತ್ತೇವೆ, ಡಿಸಿಸಿ ಬ್ಯಾಂಕ್ ವಿಚಾರದಲ್ಲಿ ಪಕ್ಷಾತೀತವಾಗಿ ಸೇರ್ತೆವಿ. ಬಿಜೆಪಿಗೆ ಸವದಿಯವರು ಯಾವಾಗ ಬರ್ತಾರೆ ಎಂಬುದನ್ನ ನೋಡಬೇಕು ಅವರು ಒಪ್ಪಿಗೆ ಕೊಡಬೇಕು. ಕೇಂದ್ರದ ಮುಖಂಡರ ಜತೆಗೆ ಚರ್ಚೆ ಆಗಬೇಕು. ಲಕ್ಷ್ಮಣ್ ಸವದಿಯವರು ಬರಲಿ ಅನ್ನೋದು ನಮ್ಮ ಆಶಯ. ಬಂದರೆ ಪಕ್ಷಕ್ಕೆ, ಬೆಳಗಾವಿ ಜಿಲ್ಲೆಗೆ ಒಳ್ಳೆಯದಾಗುತ್ತೆ. ನಮ್ಮ ಪಕ್ಷದಿಂದ ಹೊರ ಹೋದವರಿಗೆ ನಾವು ಆಹ್ವಾನ ಕೊಟ್ಟಿದ್ದೇವೆ. ಸವದಿಯರಿಗೆ ನಾವು ಕೂಡ ಆಹ್ವಾನ ಕೊಟ್ಟಿದ್ದೇವೆ. ನಮ್ಮ ರಾಜ್ಯಾಧ್ಯಕ್ಷರು, ಎಲ್ಲರೂ ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಎಷ್ಟು ಜನ ಬಿಜೆಪಿಗೆ ಬರ್ತಾರೆ ಅಂತಾ ಹೇಳಲು ಆಗಲ್ಲ.ಬಿಟ್ಟು ಹೋದವರು ಎಲ್ಲರೂ ಬರಬಹುದು. ಬಿಜೆಪಿಯಲ್ಲಿದ್ದವರು ಹೊರಗೆ ಇರುವುದೇ ಕಷ್ಟ ಹೀಗಾಗಿ ನಮ್ಮ ಪಕ್ಷಕ್ಕೆ ಬರ್ತಾರೆ. ಚುನಾವಣೆ ಮೊದಲು ಸವದಿಯವರು ಪಕ್ಷಕ್ಕೆ ಬಂದ್ರೆ ಒಳ್ಳೆಯದಾಗುತ್ತದೆ. ಸವದಿಯವರು ಪಕ್ಷಕ್ಕೆ ಬರಲು ಒಲವು ತೋರಿಸಬಹುದು ಅನಿಸುತ್ತದೆ ಎಂದು ಹೇಳಿದರು.
ಲಕ್ಷ್ಮಣ ಸವದಿ ಬಿಜೆಪಿ ಸೇರ್ತಾರೆ ಎಂಬ ವಿಚಾರವಾಗಿ ಮಾಜಿ ಸಂಸದ ರಮೇಶ್ ಕತ್ತಿ ಮಾತನಾಡಿ, ಜಗದೀಶ್ ಶೆಟ್ಟರ್ ಅವರು ಎಂಟು ತಿಂಗಳಿಂದ ಅಲ್ಲಿದ್ರೂ. ಅವರ ಮನಸ್ಸು ಬಿಜೆಪಿಯಲ್ಲಿತ್ತು ದೈಹಿಕವಾಗಿ ಅಲ್ಲಿದ್ದರು. ಅವರು ಬಂದ್ರೂ ಒಳ್ಳೆಯದಾಯಿತು ಶಕ್ತಿ ತುಂಬಿದರು. ರಾಷ್ಟ್ರೀಯ ಮತ್ತು ರಾಜ್ಯಾಧ್ಯಕ್ಷರಿಗೆ ಅಭಿನಂದನೆ ಹೇಳುತ್ತೇನೆ. ಲಕ್ಷ್ಮಣ ಸವದಿಯವರು ಬಿಜೆಪಿಗೆ ಬರುವ ಕುರಿತು ಈಗಾಗಲೇ ಚರ್ಚೆ ಶುರುವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭ ಆಗಿದೆ. ನಮ್ಮನ್ನೂ ಕೂಡ ವರಿಷ್ಠರು ಕರೆದು ಮಾತನಾಡಿಸಿ ಅಭಿಪ್ರಾಯ ಕೇಳಿದ್ದಾರೆ. ಅವರು ಪಕ್ಷಕ್ಕೆ ಬಂದ್ರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ, ಲಕ್ಷ್ಮಣ್ ಸವದಿಯವರನ್ನು ಕರೆತರುವ ಚರ್ಚೆಯಲ್ಲಿ ನಾನು ಕೂಡ ಒಬ್ಬ ಎಂದು ಹೇಳಿದರು.