ಕ್ರೀಡೆ
ರಾಷ್ಟ್ರೀಯ ಚೆಸ್ ಕ್ರೀಡಾ ಕೂಟದಲ್ಲಿ 4ನೇ ಸ್ಥಾನ ಪಡೆದ ಕೋಟ ವಿವೇಕ ಪಪೂ ಕಾಲೇಜಿನ ಕಾರ್ತಿಕ್

Views: 58
ಉಡುಪಿ:ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ 67ನೇ ರಾಷ್ಟಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ವಿವೇಕ ಪ.ಪೂ.ಕಾಲೇಜಿನ ಕಾರ್ತಿಕ್ ಪೂಜಾರಿ ಇವರು ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ನಾಲ್ಕನೆಯ ಸ್ಥಾನ ಪಡೆದಿರುತ್ತಾರೆ. ಈತ ಗುಂಡ್ಮಿ ಗ್ರಾಮದ ಶ್ರೀ ರವಿ ಹಾಗೂ ಶ್ರೀಮತಿ ಜಲಜಾರವರ ಪುತ್ರ. ವಿವೇಕ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ, ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗ ಸಾಧನೆಗೈದ ವಿದ್ಯಾರ್ಥಿಗೆ ಶುಭ ಹಾರೈಸಿದ್ದಾರೆ.