ಆರೋಗ್ಯ

ರಾಜ್ಯಾದ್ಯಂತ ಕಾಟನ್‌ ಕ್ಯಾಂಡಿ ನಿಷೇಧ; ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಕೂಡ ನಿಷೇಧ..!

Views: 102

ಬೆಂಗಳೂರು : ಕರ್ನಾಟಕದಲ್ಲಿ ಕಲರ್‌ ಕಾಟನ್‌ ಕ್ಯಾಂಡಿ ಬಳಕೆಯನ್ನು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್‌ ಕಾಟನ್‌ ಕ್ಯಾಂಡಿಯನ್ನು ನಿಷೇಧಿಸಲಾಗಿದೆ. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಿ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ವಿಕಾಸಸೌಧದಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಕಲರ್‌ ಕಾಟನ್‌ ಕ್ಯಾಂಡಿಯಲ್ಲಿ ಅಪಾಯಕಾರಿ ಅಂಶಗಳಿವೆ. ಹಾಗಾಗಿ ಕಲರ್‌ ಕಾಟನ್‌ ಕ್ಯಾಂಡಿಯನ್ನು ನಿಷೇಧಿಸಿದ್ದೇವೆ. ಕಲರ್‌ ಕಾಟನ್‌ ಕ್ಯಾಂಡಿ ತಯಾರಿಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಕಲರ್‌ ಬಳಸದೇ ಮಾಡುವ ಕಾಟನ್‌ ಕ್ಯಾಂಡಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಗೋಬಿ ಮಂಚೂರಿಯಲ್ಲಿ ಕೃತಕ ಬಣ್ಣಕ್ಕೆ ನಿಷೇಧ

ಗೋಬಿ ಮಂಚೂರಿ ಸಸ್ಯಹಾರ ಪದಾರ್ಥ, ಅದನ್ನು ಬ್ಯಾನ್‌ ಮಾಡಲು ಆಗುವುದಿಲ್ಲ. ಆದರೆ, ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವಂತಿಲ್ಲ. ಕೃತಕ ಬಣ್ಣ ಬಳಸಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ರಾಜ್ಯದಾದ್ಯಂತ 171 ಗೋಬಿ ಮಂಚೂರಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು. ಅವುಗಳ ಪೈಕಿ 107 ಗೋಬಿ ಮಂಚೂರಿಗಳಲ್ಲಿ ಹಾನಿಕಾರಕ ಕೃತಕ ಬಣ್ಣಗಳನ್ನು ಬಳಸಲಾಗಿದೆ ಎಂದು ಹೇಳಿದರು.

ಟಾರ್‌ ಟ್ರಾಸೈನ್‌, ಸನ್‌ ಸೆಟ್‌ ಯೆಲ್ಲೋ, ಕಾರ್ಮೊಸಿನ್‌ ರಾಸಾಯನಿಕಗಳನ್ನು ಬಳಸಿ ಗೋಬಿ ಮಂಚೂರಿ ತಯಾರಿಸಿರುವುದು ಕಂಡು ಬಂದಿದೆ. ಆದ್ದರಿಂದ ಇನ್ಮೇಲೆ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವಂತಿಲ್ಲ. ಕೃತಕ ಬಣ್ಣ ಬಳಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯ 59ರಂತೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.

 

.

Related Articles

Back to top button