ರಂಗನಟ,ನಿರ್ದೇಶಕ ಕೋಟೇಶ್ವರ ಗಣೇಶ್ ಐತಾಳ್ ನಿಧನ

Views: 0
ಕೋಟೇಶ್ವರ: ಕೋಟೇಶ್ವರ ರಥಬೀದಿ ನಿವಾಸಿ ರಂಗನಟ, ನಿರ್ದೇಶಕ,ಸಮಾಜ ಸೇವಕ ಕೋಟೇಶ್ವರ ಗಣೇಶ್ ಐತಾಳ್ (73) ಅವರು ಜುಲೈ 4ರಂದು ಬೆಳಗಿನ ಜಾವ ನಿಧನರಾದರು.
ಕೋಟೇಶ್ವರದ ಪ್ರತಿಷ್ಠಿತ ಚೇತನ ಕಲಾ ರಂಗ ( ರಿ), ಇದರ ಕಾರ್ಯದರ್ಶಿಯಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ, ರಂಗ ಕಲಾವಿದರಾಗಿ 50 ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ, ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ.
ಇವರು ಶೇಕ್ಸ್ ಪಿಯರ್ ದುರಂತ ನಾಟಕ ‘ಅಥೆಲೋ’ ದಲ್ಲಿ ಈಯಾಗ್ ವಿಲನ್ ಪಾತ್ರದಲ್ಲಿ ಅಭಿನಯಿಸಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ.
ಕೋಟೇಶ್ವರ ಜಿ.ಕೆ.ಐತಾಳ್ ನಿರ್ದೇಶನದ ‘ಕತ್ತಲೆ ದಾರಿ ದೂರ’ ನಾಟಕದಲ್ಲಿಯೂ ಮನೋಜ್ಞವಾಗಿ ವಾಗಿ ಅಭಿನಯಿಸಿದ್ದಾರೆ., ಹಂಗಳೂರಿನ ಗೆಳೆಯರ ಬಳಗದಲ್ಲಿಯೂ ರಂಗ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಕೋಟೇಶ್ವರ ಚೇತನ ಕಲಾರಂಗದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯದರ್ಶಿಯಾಗಿ ಕೋಟೇಶ್ವರದ ಸುತ್ತಮುತ್ತಲಿನ ಅಂಗನವಾಡಿ ಮತ್ತು ಶಾಲೆಗಳಿಗೆ ಪಾಠೋಪಕರಣ ಮತ್ತು ಪೀಠೋಪಕರಣಗಳನ್ನು ನೀಡಿದ್ದಲ್ಲದೆ 30 ವರ್ಷಗಳ ಹಿಂದೆ ಕೋಟೇಶ್ವರದ ಪೇಟೆಯ ರಸ್ತೆಯ ಎರಡು ಬದಿಯಲ್ಲಿ ದೇವದಾರಿ ಗಿಡಗಳನ್ನು ನೆಟ್ಟು ಇದೀಗ ಹೆಮ್ಮರವಾಗಿ ಬೆಳೆದು ನಿಂತಿದೆ.
ರಸ್ತೆಯ ಬದಿಯಲ್ಲಿ ಸಾಲುಮರಗಳ ಗಿಡಗಳನ್ನು ನೆಟ್ಟ ಕೆ ಎಲ್ ಕಾರಂತ್ ಅವರಿಗೂ ಇವರು ಸಾಥ್ ನೀಡಿದ್ದರು.