ಕರಾವಳಿ

ಯಕ್ಷಗಾನದ ಭಾಗವತ ತೊನ್ಸೆ ಜಯಂತ್ ಕುಮಾರ್ ನಿಧನ

Views: 0

ಯಕ್ಷಗಾನದ ಗುರು, ಭಾಗವತ,  ವೇಷದಾರಿ, ತೊನ್ಸೆ ಜಯಂತ್ ಕುಮಾರ್ (78 )ಅವರು ಸೋಮವಾರ ನಿಧನರಾದರು.

ಯಕ್ಷಗಾನ ಕ್ಷೇತ್ರದಲ್ಲಿ  ಸಕ್ರೀಯರಾಗಿದ್ದು, ಅವರು ಬ್ರಹ್ಮಾವರದ ಚೇತನ ಪ್ರೌಢಶಾಲೆಯಲ್ಲಿ ಕಚೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.ಅವರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ.

ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಶ್ರೀರಾಮ ವಿಠಲ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ,2017ರಲ್ಲಿ ಕಾಳಿಂಗನಾವಡ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗೆ ಹಾಜರಾಗಿದ್ದಾರೆ. ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಅವರಿಂದಲೂ ಗೌರವ ಸ್ವೀಕರಿಸಿದ್ದರು.

ಬಾಲ್ಯದಲ್ಲಿ ಯಕ್ಷಗಾನ ವೇಷಗಳನ್ನು ಮಾಡುತ್ತಿದ್ದ ಅವರು  ಬಡಗಿನ ಪರಂಪರೆಯ ಸ್ತ್ರೀವೇಷ, ಪುರುಷ ವೇಷ ಪಾತ್ರಗಳನ್ನ ನಿರ್ವಹಿಸುತ್ತಿದ್ದರು.

ಉಪ್ಪೂರವರ ಭಾಗವತಿಗೆ ಹಿಮ್ಮೇಳನ ವಾದಕರಾಗಿ ಭಾಗವಹಿಸಿದ್ದು, ನಂತರ ಭಾಗವತರಾಗಿ ದಿಲ್ಲಿ, ಸಿಂಗಾಪುರ ನಾಡಿನ ನಾನಾ ಪ್ರದೇಶದಲ್ಲಿ  ಯಕ್ಷಗಾನ ಪ್ರದರ್ಶನ ನೀಡಿದ್ದರು.

ನಾಳೆ ಸಂತೆಕಟ್ಟೆ ಗೋಪಾಲಪುರದಲ್ಲಿರುವ ಮನೆಯಲ್ಲಿ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ, ಸಕಲ ಗೌರಾರ್ಪಣೆಯೊಂದಿಗೆ ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Related Articles

Back to top button