ಸಾಂಸ್ಕೃತಿಕ

ಮೋದಿ ಸಾಂಗ್ಸ್​ನ ಓವರ್​ಟೇಕ್ ಮಾಡಿ “ಓ ನಲ್ಲಾ..ನೀ ನಲ್ಲಾ. ಕರಿಮಣಿ ಮಾಲೀಕ ನೀನಲ್ಲ..”ಸಾಂಗ್​​ ವೈರಲ್​​..

Views: 153

video
play-sharp-fill
ಈಗಿನ ಟ್ರೆಂಡಿಂಗ್​ ಜಮಾನದಲ್ಲಿ ಯಾವುದಾದರೂ ಒಂದು ಸಾಂಗ್, ಡೈಲಾಗ್ ಅಥವಾ ವಿಡಿಯೋ ಏನಾದರೂ ಕ್ಲಿಕ್ ಆಯ್ತು ಅಂದ್ರೆ ಮುಗಿದೇ ಹೋಯ್ತು. ಬೆಳಗಿನಿಂದ ರಾತ್ರಿ ಮಲಗೋವರೆಗೂ ಅದೇ ಸೌಂಡು ಗುಂಯ್​ಗುಟ್ತಾ ಇರುತ್ತೆ. ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿ ಗುರುತಿಸಿ ಕೊಳ್ಳುತ್ತಾರೆ.ಅದೇ ಸಾಲಿಗೆ ಈ ಹಾಡು ಸೇರಲಿದೆ. ಅದುವೇ ಓ ನಲ್ಲಾ.. ನೀ ನಲ್ಲಾ.. ಕರಿಮಣಿ ಮಾಲೀಕ ನೀನಲ್ಲ.. ಕರಿಮಣಿ ಮಾಲೀಕ ನೀ-ನಲ್ಲ.

ಇತ್ತೀಚೆಗೆ​  ಮೋದಿ ಸಾಂಗ್ಸ್​ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮೋದಿ ಧ್ವನಿಯಲ್ಲಿ ಇರೋ ಬರೋ ಹಾಡುಗಳನ್ನು ಹಾಡಿಸಿಬಿಟ್ಟಿದ್ರು. ಲವ್ ಸಾಂಗ್ಸ್, ಪ್ಯಾಥೋ ಸಾಂಗ್ಸ್​, ಎಮೋಷನಲ್ ಸಾಂಗ್ಸ್​ ಹೀಗೆ ಎಲ್ಲ ತರಹದ ಹಾಡುಗಳನ್ನು ಮೋದಿ ವಾಯ್ಸ್​ನಲ್ಲಿ ಕೇಳಿ ಖುಷಿ ಪಟ್ಟಿದ್ದರು. ಸದ್ಯದವರೆಗೂ ಎಲ್ಲ ಕಡೆ ಮೋದಿ ಸಾಂಗ್ಸೇ ಟ್ರೆಂಡ್​ನಲ್ಲಿತ್ತು. ಆದ್ರೀಗ ಮೋದಿ ಸಾಂಗ್ಸ್​ನ ಓವರ್​ಟೇಕ್ ಮಾಡಿ ಸೋಶಿಯಲ್ ಮೀಡಿಯಾ ರೂಲ್ ಮಾಡ್ತಿರೋ ಹೊಸ ಸಾಂಗ್ ಬಂದಿದೆ. ಅದೇ​ ಓ ನಲ್ಲ.. ನೀ ನಲ್ಲ.. ಕರಿಮಣಿ ಮಾಲೀಕ ನಿನಲ್ಲ. ಈ ಸಾಂಗ್ ಯಾಕೆ ವೈರಲ್ ಆಯ್ತು ಅನ್ನೋದಕ್ಕೆ ಸದ್ಯಕ್ಕೆ ನಮ್ ಹತ್ರಾ​ ಉತ್ತರ ಇಲ್ಲ. ಯಾಕಂದ್ರೆ ಸೋಶಿಯಲ್ ಮೀಡಿಯಾ ಅನ್ನೋದೇ ಹೀಗೆ. ಯಾವಾಗ, ಹೇಗೆ, ಯಾಕೆ ವೈರಲ್ ಆಗುತ್ತೆ ಅನ್ನೋದೇ ಗೊತ್ತಾಗಲ್ಲ. ಆದರೆ ಒಂದ್ ಸಲ ಕ್ಲಿಕ್ ಆಯ್ತು ಅಂದ್ರೆ ಮತ್ತೆ ಅದನ್ನು ನಿಲ್ಲಿಸೋಕೆ ಇನ್ನೊಂದು ವೈರಲ್ ಕಂಟೆಂಟ್ಟೇ ಬರಬೇಕು.

ಆ ವೈರಲ್ ಕಂಟೆಂಟ್​ ಬರೋವರೆಗೂ ಈ ಕರಿಮಣಿ ಮಾಲೀಕನ ಮ್ಯಾಜಿಕ್ ನಿಲ್ಲೋದಿಲ್ಲ ಅನಿಸುತ್ತೆ. ಕನ್ನಡ ಸಿನಿಮಾಗಳನ್ನು ನೋಡೋರಿಗೆ, ಫಾಲೋ ಮಾಡೋರಿಗೆ ಇದು ಯಾವ ಚಿತ್ರದ ಸಾಂಗ್ ಅಂತ ಗೊತ್ತಿದೆ. ಇನ್ನು ಕೆಲವರಿಗೆ ಈ ಸಾಲುಗಳನ್ನು ಎಲ್ಲೋ ಕೇಳಿದಾಗೆ ಇದ್ಯಾಲ್ವ ಅಂತ ಅನಿಸಿದರೂ ಯಾವ ಸಿನಿಮಾದ ಅಂತ ಗೊತ್ತಾಗಿರಲಿಲ್ಲ. ಹಾಗಾಗಿ ಈ ಹಾಡು ಯಾವ ಚಿತ್ರದ್ದೂ ಅಂತ ಹುಡುಕಿ ಹುಡುಕಿ ಸರ್ಚ್ ಇಂಜಿನ್​ನಲ್ಲಿ ಕರಿಮಣಿ ಮಾಲೀಕ ಇನ್ನಷ್ಟು ಟ್ರೆಂಡ್​ ಗಟ್ಟಿಯಾಗಿ ಕೂತುಬಿಟ್ಟಿದ್ದಾನೆ. ಕೇಳುಗರ ಮನಸ್ಸಿನಲ್ಲಿ ಮನೆ ಮಾಡಿಬಿಟ್ಟಿದ್ದಾನೆ.

Related Articles

Back to top button