ಮೈಸೂರು ರಾಜವಂಶಕ್ಕೆ ಟಿಕೆಟ್ ?:ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಪ್ರತಾಪ್ ಸಿಂಹ.!

Views: 105
ಕರ್ನಾಟಕದ 28 ಕ್ಕೆ 28 ಲೋಕಸಭೆ ಕ್ಷೇತ್ರಗಳಿಗೂ ಅಭ್ಯರ್ಥಿ ಆಯ್ಕೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಸಲಹೆ ಇಲ್ಲದೆಯೆ ಒಂದೆ ಒಂದು ಹೆಜ್ಜೆಯನ್ನೂ ಬಿಜೆಪಿ ನಾಯಕರು ಮುಂದಿಡುತ್ತಿಲ್ಲ. ಈ ಸಮಯದಲ್ಲೇ ಮೈಸೂರು & ಕೊಡಗು ಹಾಲಿ ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದ್ದು.
ಪ್ರತಾಪ್ ಸಿಂಹ ಜಾಗಕ್ಕೆ ಈಗ ಮೈಸೂರಿನ ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂಟ್ರಿ ಪಕ್ಕಾ ಎನ್ನಲಾಗುತ್ತಿದೆ. ಯದುವೀರ್ ಅವರಿಗೆ, ಮೈಸೂರು & ಕೊಡುಗು ಕ್ಷೇತ್ರದ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಮಾತು ಬಲವಾಗಿ ಓಡಾಡಿದೆ. ಯಾಕಂದ್ರೆ ಯದುವೀರ್ ಅವರ ಆಯ್ಕೆಯಿಂದ ಬಿಜೆಪಿ ನಾಯಕರಿಗೆ ರಾಷ್ಟ್ರ ಮಟ್ಟದಲ್ಲಿ ಕೂಡ ಲಾಭವಾಗುವ ನಿರೀಕ್ಷೆ ಇದೆ. ಹಾಗಾದರೆ ಪ್ರತಾಪ್ ಸಿಂಹ ಮುಂದಿನ ಹೆಜ್ಜೆ ಏನು?
2014ರಲ್ಲಿ ಬರೋಬ್ಬರಿ 5,03,908 ಮತ ಪಡೆದಿದ್ದ ಪ್ರತಾಪ್ ಸಿಂಹ ಅವರು, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಇವರ ಎದುರು ನಿಂತಿದ್ದ ಎಚ್. ವಿಶ್ವನಾಥ್ ಅವರು 4,72,300 ಮತಗಳನ್ನು ಪಡೆದಿದ್ದರು. ನಂತರ 2019 ರಲ್ಲಿ 6,88,974 ಮತಗಳನ್ನು ಪಡೆದಿದ್ದರು ಪ್ರತಾಪ್ ಸಿಂಹ. ಎದುರಾಳಿ ಸಿ.ಎಚ್. ವಿಜಯಶಂಕರ್ 5,50,327 ಮತಗಳನ್ನು ಪಡೆದಿದ್ದರು. ಇದೀಗ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ ಹೀಗಾಗಿ ಪ್ರತಾಪ್ ಸಿಂಹ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? ಎಂಬ ಪ್ರಶ್ನೆ ಕೂಡ ಬಲವಾಗಿದೆ.
ಒಟ್ನಲ್ಲಿ ಹೀಗೆ ಪ್ರತಾಪ್ ಸಿಂಹ ಅವರ ಸ್ಪರ್ಧೆ ಹಾಗೂ ಮೈಸೂರು & ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗಲು ಇನ್ನೂ ಒಂದೆರಡು ದಿನ ಕಾಯಬೇಕಿದೆ. ಯಾಕಂದ್ರೆ ಬಿಜೆಪಿ ಈಗ ತನ್ನ 2ನೇ ಪಟ್ಟಿ ಪ್ರಕಟಿಸಲಿದ್ದು, ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳನ್ನು ಘೋಷಿಸಲಿದೆ ಎನ್ನಲಾಗುತ್ತಿದೆ.