ಧಾರ್ಮಿಕ

ಮೈಸೂರಿನ ಹೆಚ್‌.ಡಿ.ಕೋಟೆ,ರಾಜಸ್ಥಾನದ ಬಿಳಿ ಅಮೃತಶಿಲೆಯ ವಿಗ್ರಹವು ರಾಮ ಮಂದಿರದಲ್ಲಿ ಪೂಜ್ಯ ಸ್ಥಾನ

Views: 93

ರಾಮಮಂದಿರ ಗರ್ಭಗುಡಿ ಸೇರಲು ಸ್ಪರ್ಧೆಯಲ್ಲಿದ್ದ 3ನೇ ರಾಮಲಲ್ಲಾ ವಿಗ್ರಹದ ಫೋಟೋ ವೈರಲ್

ಅಯೋಧ್ಯೆಯ ರಾಮಮಂದಿರದ ಭವ್ಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲು ಸ್ಪರ್ಧೆಯಲ್ಲಿದ್ದ ಮೂರನೇ ರಾಮಲಲ್ಲಾ ವಿಗ್ರಹದ ಫೋಟೋ ಕೂಡ ರಿವೀಲ್‌ ಆಗಿದೆ. ಶಿಲ್ಪಿ ಗಣೇಶ್ ಭಟ್ ಅವರು ಕಪ್ಪು ಕಲ್ಲಿನಿಂದ ಈ ವಿಗ್ರಹ ಕೆತ್ತಿದ್ದಾರೆ.

ಕರ್ನಾಟಕದ ಮೈಸೂರಿನ ಹೆಚ್‌.ಡಿ.ಕೋಟೆ ಪ್ರದೇಶದ ಕೃಷಿ ಭೂಮಿಯಲ್ಲಿ ದೊರೆತ ಕಪ್ಪು ಕಲ್ಲಿನಿಂದ ಕೆತ್ತಲಾದ ವಿಗ್ರಹದ ಛಾಯಾಚಿತ್ರಗಳು ವೈರಲ್‌ ಆಗಿವೆ.

ಕೃಷ್ಣ ಶಿಲೆ ಎಂದು ಕರೆಯಲ್ಪಡುವ ಕಲ್ಲಿನಿಂದ ಈ ವಿಗ್ರಹವನ್ನು ಕೆತ್ತಲಾಗಿದೆ.

ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ವಿಗ್ರಹವು ಈಗಾಗಲೇ ರಾಮಮಂದಿರದ ಗರ್ಭಗುಡಿಯನ್ನು ಅಲಂಕರಿಸಿದೆ. ಇತರೆ ಇಬ್ಬರು ಸ್ಪರ್ಧಿಗಳು ದೇವಾಲಯದ ಪವಿತ್ರ ಆವರಣದಲ್ಲಿ ಗೌರವ ಸ್ಥಾನಕ್ಕಾಗಿ ಸ್ಪರ್ಧಿಸಿದ್ದರು. ಅವುಗಳಲ್ಲಿ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೆತ್ತಿಸಿದ ಬಿಳಿ ಅಮೃತಶಿಲೆಯ ವಿಗ್ರಹವೂ ಇತ್ತು. ಈ ವಿಗ್ರಹಗಳು ದೇವಾಲಯದ ‘ಗರ್ಭಗೃಹ’ದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದಿದ್ದರೂ, ರಾಮಮಂದಿರದಲ್ಲಿ ಬೇರೆಡೆ ಪೂಜ್ಯ ಸ್ಥಾನವನ್ನು ಪಡೆಯಲಿವೆ.

 

ಬಿಳಿ ಅಮೃತಶಿಲೆಯ ವಿಗ್ರಹ, ಅಮೃತಶಿಲೆಯ ಆಭರಣಗಳು ಮತ್ತು ಬಟ್ಟೆಗಳನ್ನು ಧರಿಸಿದೆ. ರಾಮಲಲ್ಲಾ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿದ್ದಾನೆ. ಮುಖ್ಯ ಆಕೃತಿಯ ಹಿಂದೆ ವಿಷ್ಣುವಿನ ವಿವಿಧ ಅವತಾರಗಳನ್ನು ಕಮಾನಿನಂತಹ ಭಾಗದಲ್ಲಿ ಕೆತ್ತಲಾಗಿದೆ.

ಅಯೋಧ್ಯೆಯ ಭವ್ಯ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ನೂರಾರು ಧಾರ್ಮಿಕ ವ್ಯಕ್ತಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.

Related Articles

Back to top button