ರಾಜಕೀಯ

ಮೈತ್ರಿ ಧರ್ಮ ಪಾಲನೆಯ ಅಡಕತ್ತರಿಯಲ್ಲಿ ಬಿಜೆಪಿ :ಎಲ್ಲರ ಚಿತ್ತ ಸುಮಲತಾ ನಿರ್ಧಾರದತ್ತ..?

Views: 76

ಬೆಂಗಳೂರು, ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ವರಿಷ್ಠರು ತೀರ್ಮಾನಿಸಿರುವುದರಿಂದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಅವರ ರಾಜಕೀಯ ನಡೆ ಏನೆಂಬುದು ಕುತೂಹಲ ಮೂಡಿಸಿದೆ.

ಮಂಡ್ಯದ ಹಾಲಿ ಸಂಸದೆ ಸುಮಲತಾ ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದು ನಂತರ ಬಿಜೆಪಿಗೆ ಬೆಂಬಲ ನೀಡಿದ್ದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಸುಮಲತಾ ಅಂಬರೀಷ್ ಅವರ ರಾಜಕೀಯ ಭವಿಷ್ಯ ಡೋಲಾಯಮಾನ ಸ್ಥಿತಿಗೆ ಬಂದಿದೆ.

ಮಂಡ್ಯ ಬದಲು ಬೆಂಗಳೂರು ಉತ್ತರದಿಂದ ಟಿಕೆಟ್ ಕೊಡುವುದಾಗಿ ಬಿಜೆಪಿ ವರಿಷ್ಠರು ಸುಮಲತಾ ಅಂಬರೀಷ್ ಅವರಿಗೆ ಹೇಳಿದ್ದರಾರದೂ ಅದಕ್ಕೆ ಸುಮಲತಾ ಒಪ್ಪಿರಲಿಲ್ಲ. ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರವನ್ನು ನಮಗೆ ನೀಡಬೇಕು. ಇಲ್ಲದಿದ್ದರೆ ಮೈತ್ರಿಗೆ ಅರ್ಥ ಇರುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ಖಡಕ್ಕಾಗಿ ಹೇಳಿದ್ದರು.ಮೈತ್ರಿ ಧರ್ಮ ಪಾಲನೆಯ ಅಡಕತ್ತರಿಗೆ ಬಿಜೆಪಿ ವರಿಷ್ಠರು ಜೆಡಿಎಸ್‌ಗೆ ಮಂಡ್ಯವನ್ನು ಬಿಟ್ಟುಕೊಡುವ ತೀರ್ಮಾನ ಮಾಡಿದ್ದಾರೆ. ಹಾಗಾಗಿ ಸುಮಲತಾ ಅಂಬರೀಷ್ ಅವರ ರಾಜಕೀಯ ನಡೆ ಏನೆಂಬುದು ಕುತೂಹಲಕ್ಕೆ ಕಾರಣವಾಗಿದೆ.

ಸಂಸದೆ ಸುಮಲತಾ ಅಂಬರೀಷ್ ಮಂಡ್ಯದಿಂದ ಮತ್ತೆ ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆಯೇ ಇಲ್ಲವೆ, ಚುನಾವಣಾ ಸ್ಪರ್ಧೆಯಿಂದ ದೂರ ಉಳಿಯುತ್ತಾರೆಯೇ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.

ಮಂಡ್ಯದಿಂದ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯುತ್ತಿರುವುದರಿಂದ ಹಾಗೆಯೇ ಕಾಂಗ್ರೆಸ್ ಪಕ್ಷ ಸಹ ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ವೆಂಕಟರಮಣೆಗೌಡ (ಸ್ಟಾರ್ ಚಂದ್ರು) ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಹಾಗಾಗಿ ಸುಮಲತಾ ಅಂಬರೀಷ್ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ಅನಿವಾರ್ಯತೆ ಇದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್ ಅವರ ನಿರ್ಧಾರ ಏನೆಂಬುದು ಸದ್ಯಕ್ಕೆ ಇನ್ನೂ ಗೊತ್ತಾಗಿಲ್ಲ. ಅವರ ನಿರ್ಧಾರದತ್ತ ಎಲ್ಲರ ಚಿತ್ತ ನೆಟ್ಟಿದೆ.

ಸುಮಲತಾ ಮುಂದೇನು?

—-ಮತ್ತೊಮ್ಮೆ ಪಕ್ಷೇತರವಾಗಿ ಕಣಕ್ಕಿಳಿಯೋದು

—ಬಿಜೆಪಿ ಸೇರಿರೋದ್ರಿಂದ ಮೈತ್ರಿ ಧರ್ಮ ಪಾಲನೆ

—–ಬಿಜೆಪಿ ಬೆಂಬಲಿಸಿ ಬೇರೆ ಸ್ಥಾನ ಪಡೆಯೋದು

—ರಾಜಕೀಯದಿಂದ ದೂರ ಸರಿಯೋ ಸಾಧ್ಯತೆ
—- ಶಾಸಕಿ ಅಥವಾ ರಾಜ್ಯಸಭೆಗೆ ಆಯ್ಕೆ ಸಾಧ್ಯತೆ

ಇಕ್ಕಟ್ಟಿಗೆ ಸಿಲುಕಿದ್ರಾ ಸುಮಲತಾ?            ಒಂದು ವೇಳೆ ಮಂಡ್ಯದಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ರೆ ಗೆಲುವು ಅಷ್ಟು ಸುಲಭವಲ್ಲ. ಯಾಕಂದರೆ ಕಳೆದ ಬಾರಿ ಇದ್ದ ವಾತಾವರಣ ಈ ಬಾರಿ ಸುಮಲತಾ ಪರ ಇಲ್ಲ. ಕೆಲ ಅಂಬಿ ಬೆಂಬಲಿಗರು ಬಿಟ್ಟರೆ ಬಹುತೇಕರು ಸಂಸದೆ ಜೊತೆ ಇಲ್ಲ. ಬಿಜೆಪಿ, ರೈತ‌ಸಂಘದ ಬೆಂಬಲ ಹಾಲಿ ಸಂಸದೆ ಸುಮಲತಾಗೆ ಅವರಿಗೆ ಸಿಗಲ್ಲ. ಕಳೆದ ಬಾರಿ ಇದ್ದ ಕೈ ನಾಯಕರು, ಕಾರ್ಯಕರ್ತರ ಸಪೋರ್ಟ್ ಕೂಡ ಸುಮಲತಾ ಅವರಿಗೆ ಇಲ್ಲ. ಹೀಗಾಗಿ ಬಿಜೆಪಿ ಬೆಂಬಲಿಸಿ ಅಡಕತ್ತರಿಯಲ್ಲಿ ಸಿಲುಕಿದ್ರಾ ಎಂಬ ಪ್ರಶ್ನೆ ಶುರುವಾಗಿದೆ.

 

Related Articles

Back to top button