ಮೂಡುಗೋಪಾಡಿ :ಬಲತ್ಕಾರವಾಗಿ ಮದುವೆ ಮಾಡಿಕೊಳ್ಳುವಂತೆ ಯುವತಿ ಅಪಹರಣ

Views: 161
ಕುಂದಾಪುರ: ಇಲ್ಲಿನ ಮೂಡುಗೋಪಾಡಿ ಎಂಬಲ್ಲಿ ಯುವತಿಯನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಯುವತಿಯ ತಂದೆ ಸಾಧಿಕ್ ಆಲಿ ದೂರು ನೀಡಿದ್ದಾರೆ.
12 ಮಂದಿ ಆರೋಪಿಗಳು ರಾತ್ರಿ ಸಾಧಿಕ್ ಅವರ ಮನೆಗೆ ಬಂದು ಯುವತಿಯನ್ನು ಹೊರಗೆ ಬರಲು ಹೇಳಿ ಬಾರದಿದ್ದರೆ ಮೊಬೈಲ್ನಲ್ಲಿದ್ದ ಅಶ್ಲೀಲ ಫೋಟೋವನ್ನು ಡಿಲೀಟ್ ಮಾಡುವುದಿಲ್ಲ ಎಂಬ ಬೆದರಿಕೆ ಹಾಕಿ ಬಲವಂತದಿಂದ ಕಾರಿನಲ್ಲಿ ಅಪಹರಿಸಿ ಸುಮಾರು ಎರಡು ತಿಂಗಳಿಗಿಂತ ಹೆಚ್ಚು ಕಾಲ ಸ್ವಾಧೀನದಲ್ಲಿಟ್ಟುಕೊಂಡಿದ್ದರು. ಆಕೆಗೆ ಮಾನಸಿಕ ಹಿಂಸೆ ನೀಡಿ ಬಲತ್ಕಾರವಾಗಿ ಮದುವೆ ಮಾಡಿಕೊಳ್ಳುವಂತೆ ಹೇಳಿದ್ದಲ್ಲದೆ ಈ ಬಗ್ಗೆ ಯುವತಿಯ ತಂದೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಯಾವುದೇ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆಯಿಂದ ಬೇಸತ್ತು ನ್ಯಾಯಾಲಯದಲ್ಲಿ ಆರೋಪಿಗಳೆಲ್ಲರ ವಿರುದ್ಧ ಖಾಸಗಿ ದೂರು ಸಲ್ಲಿಸಿದರು.
ನ್ಯಾಯಾಲಯ ಪ್ರಕರಣವನ್ನು ತನಿಖೆಗಾಗಿ ಡಿವೈಎಸ್ಪಿ ಅವರಿಗೆ ಆದೇಶಿಸಿದೆ.ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ನ್ಯಾಯಾಲಯದಲ್ಲಿ ನ್ಯಾಯವಾದಿ ರವಿಕುಮಾರ್ ಗಂಗೊಳ್ಳಿ ಮತ್ತು ಸ್ಟೀವನ್ ಡಿಸೋಜ ಮೂಲಕ ಖಾಸಗಿ ದೂರು ಸಲ್ಲಿಸಲಾಗಿದೆ.