ಮುಸ್ಲಿಂ ಮೀಸಲಾತಿ ಕೋಟವನ್ನು ಹಿಂಪಡೆಯುವ ಅಗತ್ಯ ಏನಿತ್ತು? : ಕೆ.ಜಯಪ್ರಕಾಶ್ ಹೆಗ್ಡೆ

Views: 0
ಹಿಂದುಳಿದ ವರ್ಗಗಳ ಕೋಟದಲ್ಲಿ ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿ ಶೇಕಡಾ 4 ರಷ್ಟು ಮೀಸಲಾತಿಯನ್ನು ಕರ್ನಾಟಕದಲ್ಲಿ ಬಹಳ ವರ್ಷಗಳ ಹಿಂದೆಯೇ ನೀಡಲಾಗಿತ್ತು .ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಈ ಹಿಂದಿನ ಸರ್ಕಾರ ಚುನಾವಣೆ ಘೋಷಣೆ ಯಾಗುವ ಕೆಲವೇ ದಿನಗಳ ಮೊದಲು ಮೀಸಲಾತಿಯನ್ನು ರದ್ದುಪಡಿಸಿತ್ತು.. ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಮುಸ್ಲಿಂ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಯಾವುದೇ ವರದಿ ಅಥವಾ ಹಿಂದಿನ ಸರ್ಕಾರ ರದ್ದು ಮಾಡಿರೋದು ಬಹಿರಂಗವಾಗಿದೆ.
ಮುಸ್ಲಿಮರನ್ನು ಒಬಿಸಿ ಪಟ್ಟಿಯಿಂದ ಕೈ ಬಿಟ್ಟಿರುವುದು ಕಾನೂನು ಬಾಹಿರ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರ ಪಟ್ಟಿಗೆ ಸೇರಿಸಿರುವುದು ಕಾನೂನಿಗೆ ವಿರುದ್ಧ ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಪಾದಿಸಿದ್ದಾರೆ.
ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಂತಿಮ ವರದಿಗೆ ಮೀಸಲಾತಿ ಕೋಟವನ್ನು ಹಿಂಪಡೆಯುವ ಅಗತ್ಯ ಏನಿತ್ತು?
ಸುದ್ದಿಗಾರರೊಂದಿಗೆ ಮಾತಾಡಿದ ಹೆಗ್ಡೆ, ಮುಸ್ಲಿಂ ಮೀಸಲಾತಿ ರದ್ದು ಪಡಿಸುವ ಮೊದಲು ಈ ಹಿಂದಿನ ಸರ್ಕಾರ ನಮ್ಮ ಅಭಿಪ್ರಾಯ ಕೇಳಿಲ್ಲ ಮೀಸಲಾತಿ ರದ್ಧತಿ ಪಡಿಸಲು ನಾವು ಹೇಳಿಯೂ ಇಲ್ಲ .ನಮ್ಮ ಬಗ್ಗೆ ಸರ್ಕಾರ ಯಾವುದೇ ಸಲಹೆಯನ್ನು ಪಡೆದಿಲ್ಲ ಅದು ಸರ್ಕಾರದೆ ತೀರ್ಮಾನವಾಗಿದೆ ಎಂದರು.
ಮುಸ್ಲಿಂ ಮೀಸಲಾತಿ ರದ್ದು ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲಲ್ಲಿದೆ ಸುಪ್ರೀಂ ಕೋರ್ಟನ್ನು ನಾವು ಪ್ರತಿಪಾದಿಗಳು ಹೀಗಾಗಿ ನಮ್ಮ ಅಭಿಪ್ರಾಯವನ್ನು ತಿಳಿಸಲಿದ್ದೇವೆ ಎಂದು ಹೆಗ್ಡೆ ಹೇಳಿದರು.