ರಾಜಕೀಯ
ಮಾ.14 ಅಥವಾ 15ರಂದು ಲೋಕ ಚುನಾವಣಾ ದಿನಾಂಕ ಘೋಷಣೆ :ಮಾರ್ಚ್ 14ರಿಂದಲೇ ನೀತಿ ಸಂಹಿತೆ ಜಾರಿ?

Views: 256
ನವದೆಹಲಿ: ಚುನಾವಣಾ ಆಯೋಗವೂ ಮಾರ್ಚ್ ಮಧ್ಯದಲ್ಲಿ ಅಂದರೆ ಮಾರ್ಚ್ 14 ಅಥವಾ 15 ರಂದು ಲೋಕಸಭಾ ಚುನಾವಣಾ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. 7 ಹಂತಗಳಲ್ಲಿ ದೇಶಾದ್ಯಂತ ಸಂಸತ್ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲ ಮೂಲಗಳ ಮಾಹಿತಿ ಪ್ರಕಾರ, ಮಾರ್ಚ್ 14 ಅಥವಾ 15 ರಂದು ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. 2019ರ ಲೋಕಸಭಾ ಚುನಾವಣೆಯಂತೆಯೇ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಏಪ್ರಿಲ್ 2ನೇ ವಾರದಲ್ಲಿ ನಡೆಯುವ ಸಾಧ್ಯತೆ ಇದೆ.
ನೀತಿ ಸಂಹಿತೆ ಘೋಷಣೆ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ತ್ವರಿತ ಕ್ರಮಗಳ ಬಗ್ಗೆ ಕರ್ನಾಟಕದಲ್ಲಿ ಚರ್ಚೆ ನಡೆಸಲಾಗಿದೆ.
ನೀತಿ ಸಹಿತ ಜಾರಿಯಾದರೆ ಆಡಳಿತಾತ್ಮಕವಾಗಿ ಕೆಲ ಅಡಚಣೆಗಳು ಉಂಟಾಗುತ್ತದೆ ಈ ಹಿನ್ನೆಲೆಯಲ್ಲಿ ಕೆಲವು ನಿರ್ಧಾರಗಳನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ