ಕ್ರೀಡೆ
ಮಾ.ಸಾಯಿ ದಿಶಾನ್ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ

Views: 7
ಕುಂದಾಪುರ : ಇತ್ತೀಚೆಗೆ ಉಡುಪಿ ರಾಜಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಹೈ ಫೈವ್ ಚಾಂಪಿಯನ್ ಶಿಪ್- 2023 ರ ಬಾಲಕರ ಹತ್ತು ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಕುಂದಾಪುರ ಎಚ್ಎಂಎಂ ಆಂಗ್ಲ ಮಾಧ್ಯಮ ಶಾಲೆಯ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಾರ್ಥಿ ಮಾ.ಸಾಯಿ ದಿಶಾನ್.ಎಂ ಕುಮಿಟೆಯಲ್ಲಿ ಚಿನ್ನದ ಪದಕ ಪಡೆದು ಕೀರ್ತಿ ತಂದಿದ್ದಾನೆ.
ಈತ ಕರಾಟೆ ಮಾಸ್ಟರ್ ಶಿಹಾನ್ ಸಂದೀಪ್ ವಿಕೆ ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಸಾಧಕ ವಿದ್ಯಾರ್ಥಿ ಕೋಟೇಶ್ವರ ಕಿನಾರೆ ಬೀಚ್ ರಸ್ತೆಯ ಹಳವಳ್ಳಿ- ಕುಂಬ್ರಿ ನಿವಾಸಿ ಶ್ರೀಮತಿ ರೇಖಾ ಸಾಯಿ ಮತ್ತು ಶ್ರೀ ಮಹೇಶ್ ಕುಮಾರ್ ಅವರ ಸುಪುತ್ರ