ಜನಮನ
ಮಾಲಾಡಿ, ವಕ್ವಾಡಿ, ಕಟ್ಕೆರೆ,ಉಳ್ತೂರು, ಪರಿಸರದಲ್ಲಿ ಕಪ್ಪು ಚಿರತೆ ಓಡಾಟ: ಭಯಭೀತರಾದ ಜನರು

Views: 21
ಕುಂದಾಪುರ: ತಾಲೂಕಿನ ಮಾಲಾಡಿ, ವಕ್ವಾಡಿ, ಕಟ್ಕೆರೆ ಉಳ್ತೂರು, ಪರಿಸರದಲ್ಲಿ ಕಪ್ಪು ಚಿರತೆ ಪ್ರತ್ಯಕ್ಷವಾಗಿದ್ದು, ಸಂಜೆಯ ನಂತರ ಈ ಪರಿಸರದಲ್ಲಿರುವ ಜನರು ತಿರುಗಾಡಲು ಭಯಭೀತರಾಗಿದ್ದಾರೆ.
ಇಲ್ಲಿನ ಜನರ ದನ, ಕರು,ಸಾಕು ನಾಯಿಯನ್ನು ಚಿರತೆ ದಾಳಿ ಮಾಡಿ ಹೊತ್ತೊಯ್ದಿದ್ದು, 2018 ರಿಂದ ಇಲ್ಲಿವರೆಗೆ ಮಾಲಾಡಿ ಎಂಬಲ್ಲಿ ಒಂದೇ ಸ್ಥಳದಲ್ಲಿ ಎಂಟು ಚಿರತೆಯನ್ನು ಬೋನಿನಲ್ಲಿ ಸೆರೆಯಾಗಿಸುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ.
ಇದೀಗ ಕಪ್ಪು ಚಿರತೆಯೊಂದು ಕಳೆದ ಮೂರು ವರ್ಷಗಳಿಂದ ಇದೇ ಪರಿಸರದಲ್ಲಿ ಓಡಾಡುತ್ತಿದ್ದು, ರಾತ್ರಿ ವೇಳೆಯಲ್ಲಿ ಅಲ್ಲಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಕಪ್ಪು ಚಿರತೆಯನ್ನು ನೋಡಿದ ಜನರು ಭಯಭೀತರಾಗಿದ್ದಾರೆ. ಸಂಜೆಯ ನಂತರ ತಿರುಗಾಟ ಮತ್ತು ಬೆಳಿಗ್ಗೆ ವಾಕಿಂಗ್ ಮಾಡುವುದನ್ನು ಜನರು ನಿಲ್ಲಿಸಿದ್ದಾರೆ.
(ಕಪ್ಪು ಚಿರತೆ: ಸಾಂದರ್ಭಿಕ ಚಿತ್ರ)