ಮಾಬುಕಳ ಶ್ರೀ ರಾಮ್ ಕ್ರಿಕೆಟರ್ಸ್ ಅರ್ಜುನ ಟ್ರೋಫಿ-2024 ಪಂದ್ಯಾಕೂಟ

Views: 39
ಕೋಟ: ಶ್ರೀ ರಾಮ್ ಕ್ರಿಕೆಟರ್ಸ್ ಮಾಬುಕಳ ಇವರ ಆಶ್ರಯದಲ್ಲಿ ಅರ್ಜುನ ಟ್ರೋಫಿ-2024 ಪಂದ್ಯಾಕೂಟ ಸ ಹಿ.ಪ್ರಾ ಶಾಲೆ ಹಂಗಾರಕಟ್ಟೆ ಶಾಲಾ ಮೈದಾನದಲ್ಲಿ ಇತ್ತೀಚಿಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ಉದ್ಘಾಟಿಸಿದರು.
ಮುಖ್ಯ ಅಭ್ಯಾಗತರಾಗಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಐರೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್,ಉದ್ಯಮಿ ಸುನಿಲ್ ಅತ್ರಾಡಿ, ಮಾಬುಕಳ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಗಾಣಿಗ, ಸಾಸ್ತಾನ ಸಿ ಎ ಬ್ಯಾಂಕ್ ಅಧ್ಯಕ್ಷ ಸುರೇಶ ಅಡಿಗ ಹಾಗೂ ಶ್ರೀ ರಾಮ್ ಕ್ರಿಕೆಟರ್ಸ್ ಅಧ್ಯಕ್ಷ ಪ್ರಜ್ವಲ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ:ಧನ್ಯ ಅಜೇಯ ಕ್ರಿಕೆಟರ್ಸ್ ಕುಂಜಿಗುಡಿ ಸಾಲಿಗ್ರಾಮ ಪ್ರಥಮ ಸ್ಥಾನ, ಅಪುö್ಪ ಇಲೆವೆನ್ ಕೋಟ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಉದ್ಯಮಿಗಳಾದ ಸುರೇಶ ರಾವ್ ಹಾಗೂ ಪ್ರಶಾಂತ್ ಮಂದಾರ್ತಿ ಹಾಗೂ ಗಣೇಶೋತ್ಸವ ಸಮಿತಿ ಅಧ್ಯಕ್ಷ ಆನಂದ ಗಾಣಿಗ ಉಪಸ್ಥಿತರಿದ್ದರು.
ಶ್ರೀ ರಾಮ್ ಕ್ರಿಕೆಟರ್ಸ್ ಮಾಬುಕಳ ಇವರ ಆಶ್ರಯದಲ್ಲಿ ಅರ್ಜುನ ಟ್ರೋಫಿ-2024 ಪಂದ್ಯಾಕೂಟವನ್ನು ಬ್ರಹ್ಮಾವರ ತಾ.ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಪೂಜಾರಿ ಉದ್ಘಾಟಿಸಿದರು. ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ, ಐರೋಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್ ಇನ್ನಿತರರು ಇದ್ದರು.