ಕರಾವಳಿ

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಸ್ಕೂಟರ್ ಸಮೇತ ನೀರಿಗೆ ಬಿದ್ದ ಸವಾರ ನಾಪತ್ತೆ 

Views: 88

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ   ಆಕಸ್ಮಿಕವಾಗಿ ಓರ್ವ ಸ್ಕೂಟಿ ಸಮೇತನಾಗಿ ದಕ್ಕೆ ಬಳಿಯ ನೀರಿಗೆ ಬಿದ್ದು ಮುಳುಗಡೆಗೊಂಡು ಕಣ್ಮರೆಯಾಗಿದ್ದಾರೆ. ಆತ ತಮಿಳುನಾಡು ಮೂಲದ ಮೀನುಗಾರನಾಗಿದ್ದು ಮಲ್ಪೆಯ ಬೋಟು ಒಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ.

ನೀರಿಗೆ ಬಿದ್ದ ಮಾಹಿತಿ ತಿಳಿದು ತತ್‌ಕ್ಷಣ ಈಶ್ವರ್‌ ಮಲ್ಪೆ ಅವರು ಧಾವಿಸಿ ಬಂದು ನೀರಿಗೆ ಧುಮುಕಿ ಎಲ್ಲ ಕಡೆ ಜಾಲಾಡಿದರೂ ಆತನ ದೇಹ ಸಿಗಲಿಲ್ಲ. ಅದರೆ ಅತನ ಸ್ಕೂಟರ್‌ನ್ನು ಮಾತ್ರ ಪತ್ತೆಯಾಗಿದ್ದು ಹಗ್ಗದ ಸಹಾಯದಿಂದ ಮೇಲಕ್ಕೆ ತಂದಿದ್ದಾರೆ.

 

 

Related Articles

Back to top button