ಇತರೆ
ಮನೆಯ ಸಂಪ್‌ನಲ್ಲಿ ಬರೋಬ್ಬರಿ 69 ಹಾವಿನ ಮರಿಗಳು ಪತ್ತೆ!

Views: 95
ಕನ್ನಡ ಕರಾವಳಿ ಸುದ್ದಿ: ಶಿವಮೊಗ್ಗದ ವಿನೋಬನಗರ ನಿವಾಸಿಯೊಬ್ಬರ ಮನೆಯ ಸಂಪ್‌ನಲ್ಲಿ ಬರೋಬ್ಬರಿ 69 ಹಾವಿನ ಮರಿಗಳು ಪತ್ತೆಯಾಗಿವೆ.
ಸಂಪ್‌ನ ಬಳಿ ಮೊದಲು ಒಂದು ಹಾವಿನ ಮರಿ ಕಂಡುಬಂದಿತ್ತು. ಈಶ್ವರಯ್ಯನವರು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದು ಕಿರಣ್ ಪರಿಶೀಲಿಸಿದ್ದಾರೆ. ಸಂಪ್‌ನ ಮುಚ್ಚಳ ತೆಗೆದು ನೋಡಿದಾಗ ಅಲ್ಲಿ ಒಂದೇ ಕಡೆ ಹಲವು ಮರಿಗಳು ಪತ್ತೆಯಾಗಿವೆ.ಬಳಿಕ ಸಂಪ್‌ನಿಂದ ಸುಮಾರು 63 ಹಾವಿನ ಮರಿಗಳನ್ನು ಮೇಲಕ್ಕೆ ತೆಗೆಯಲಾಯಿತು. ಇದಾದ ಮರುದಿನವೂ 6 ಹಾವಿನ ಮರಿಗಳನ್ನು ತೆಗೆಯಲಾಗಿದೆ. ಇವು ನೀರು ಹಾವುಗಳಾಗಿದ್ದು, ವಿಷ ರಹಿತವಾಗಿವೆ. ತಾಯಿ ಹಾವು ಸ್ಥಳದಲ್ಲಿ ಪತ್ತೆಯಾಗಿಲ್ಲ
ಸಂಪ್‌ನಿಂದ ತೆಗೆದ ಹಾವಿನ ಮರಿಗಳಲ್ಲಿ ವಿಶೇಷವಾಗಿ ಒಂದು ಹಳದಿ ಬಣ್ಣದ ಹಾವಿನ ಮರಿಯೂ ಸಿಕ್ಕಿದೆ. ಇದಕ್ಕೆ ನೈಸರ್ಗಿಕ ಬಣ್ಣ ಬಾರದ ಕಾರಣ ಹಳದಿ ಬಣ್ಣದಲ್ಲಿದೆ. ಅಲ್ಟಿನೋ ಕೋಬ್ರಾ ಎಂದು ಇದನ್ನು ಕರೆಯುತ್ತಾರೆ. ತನ್ನ ಚರ್ಮದ ಸಮಸ್ಯೆಯಿಂದಾಗಿ ಈ ಬಣ್ಣದಲ್ಲಿರುತ್ತದೆ.