ಮನೆಯಲ್ಲಿ ಗಂಡು,ಹೊರಗೆ ಹೆಣ್ಣು?!

Views: 1
‘ಮನೆಯಲ್ಲಿ ಗಂಡು ಹೊರಗೆ ಹೆಣ್ಣು’ ಎನ್ನುವ ಹಾಗೆ ಬಾಗಲಗುಂಟೆ ಕೆರೆ ಸಮೀಪದ ಮನೆಯಲ್ಲಿ ಚೇತನ್ ದಂಪತಿ ಹಾಗೂ ಇಬ್ಬರು ಮಕ್ಕಳು ಇದ್ದುಕೊಂಡು ಮನೆಯಲ್ಲಿ ಗಂಡಿನ ವೇಷದಲ್ಲಿದ್ದು, ಹೊರಗೆ ಬಂದ ನಂತರ ಸೀರೆಯನ್ನ ಉಟ್ಟು ಹೆಣ್ಣಿನ ವೇಷದಲ್ಲಿ ಮಂಗಳಮುಖಿಯರ ಜೊತೆ ಸೇರಿ ಭಿಕ್ಷಾಟನೆ ಮಾಡುತ್ತಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತನ್ನ ಕುಟುಂಬದ ಬಗ್ಗೆ ಯಾರಿಗೂ ಗೊತ್ತಾಗಬಾರದು ಎಂದು ಮಂಜುನಾಥ್ ನಗರದ ಕೊಠಡಿಯ ಒಂದರಲ್ಲಿ ಬಾಡಿಗೆ ಪಡೆದಿದ್ದ, ಚೇತನ್ ಸುತ್ತಮುತ್ತಲಿನ ಮಂಗಳಮುಖಿಯರ ಜೊತೆ ಸ್ನೇಹ ಬೆಳೆಸಿದ್ದ,ಅವರ ರೀತಿಯಲ್ಲಿ ಮಾತನಾಡುತ್ತಿದ್ದ, ಅವರಿಗೂ ಆತ ಗಂಡು ಎಂಬುದು ಗೊತ್ತಾಗಿರಲಿಲ್ಲ ಎಂದು ತಿಳಿದಿದೆ.
ತುಮಕೂರು ರಸ್ತೆಯ ಬಸ್ ತಂಗುದಾಣ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಓಡಾಡಿಕೊಂಡಿದ್ದ ಈತ ಸ್ಥಳೀಯರನ್ನು ಅಡ್ಡ ಕಟ್ಟಿ ಒತ್ತಾಯ ಪೂರ್ವಕವಾಗಿ ಹಣ ಕೇಳುತ್ತಿದ್ದ, ಹಣ ಕೊಡದಿದ್ದರೆ ಅವರೊಂದಿಗೆ ಜಗಳವಾಡಿ ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೃತ್ಯವನ್ನು ಯಾರಾದರೂ ಪ್ರಶ್ನಿಸಿದರೆ ಇತರೆ ಮಂಗಳ ಮುಖಿಯರನ್ನು ಕರೆತಂದು ಗಲಾಟೆ ಮಾಡುವುದಾಗಿ ಚೇತನ್ ಬಿದರಿಕೆ ಹಾಕುತ್ತಿದ್ದ, ಈತನ ವರ್ತನೆಯಿಂದ ಬೇಸತ್ತು ಸ್ಥಳೀಯರು ಚೇತನನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ.
ಆರೋಪಿ ಚೇತನ್ ಅವರ ಆಧಾರ್ ಕಾರ್ಡ್ ಇತರೆ ಗುರುತಿನ ಚೀಟಿಗಳನ್ನ ಪರಿಶೀಲಿಸಿದಾಗ ಎಲ್ಲಾ ಕಡೆಯಲ್ಲೂ ಗಂಡು ಎಂಬುದನ್ನು ಸಾಬೀತಾಗಿದೆ. ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಆತನ ಮೇಲೆ ಎಫ್ ಐ ಆರ್ ದಾಖರಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.